Bhagavad Gita: ಮಕ್ಕಳಿಗೆ ದಯೆ, ಕರುಣೆ, ಪ್ರಾಮಾಣಿಕತೆ ಕಲಿಸುವುದು ಹೇಗೆ? ಭಗವದ್ಗೀತೆಯಲ್ಲಿದೆ ಪೋಷಕರಿಗೆ ಮಹತ್ವದ ಸಂದೇಶ
Parenting Tips: ಮಕ್ಕಳನ್ನು ಲಾಲನೆ ಪಾಲನೆ ಮಾಡುವಾಗ ಪೋಷಕರಿಗೆ ಕೆಲವು ಕರ್ತವ್ಯಗಳಿರುತ್ತವೆ. ಮಕ್ಕಳಲ್ಲಿ ಸದಾಚಾರ, ಬುದ್ಧಿವಂತಿಕೆ, ನೈತಿಕ ಮೌಲ್ಯಗಳನ್ನು ಬೆಳೆಸುವುದು ಬಹಳ ಮುಖ್ಯ. ಭಗವದ್ಗೀತೆಯು ಆದರ್ಶ ಪೋಷಕರಾಗಲು ಇರಬೇಕಾದ ಅಗತ್ಯ ಗುಣಗಳನ್ನು ಹೇಳುತ್ತದೆ. ಭಗವದ್ಗೀತೆ ಪೋಷಕರಿಗೆ ನೀಡುವ ಸಂದೇಶಗಳು ಹೀಗಿವೆ.
ಭಗವದ್ಗೀತೆ ಹಿಂದೂಗಳ ಮಹಾನ್ ಧರ್ಮಗ್ರಂಥ. ಜೀವನ ನಡೆಸಲು ಅಗತ್ಯವಾಗಿ ಬೇಕಾಗುವ ಎಲ್ಲಾ ವಿಷಯ ಜ್ಞಾನಗಳನ್ನು ಅದು ತಿಳಿಸಿಕೊಡುತ್ತದೆ. ಅದರಲ್ಲಿ ಮಕ್ಕಳನ್ನು ಹೇಗೆ ಪೋಷಿಸಿ ಬೆಳೆಸಬೇಕು, ನೈತಿಕ ಮೌಲ್ಯಗಳನ್ನು ತಿಳಿಸಬೇಕು ಎಂಬ ಇತ್ಯಾದಿ ವಿಷಯಗಳನ್ನು ವಿವರವಾಗಿ ಹೇಳಲಾಗಿದೆ. ಅದು ಪೋಷಕರಿಗೆ ಮಾರ್ಗದರ್ಶನವನ್ನು ನೀಡುತ್ತದೆ. ಮಕ್ಕಳು ಕಲಿಯಬೇಕಾದ ದಯೆ, ಪ್ರಾಮಾಣಿಕತೆ, ಶೌರ್ಯ, ಸಹಾನುಭೂತಿ ಮುಂತಾದ ಒಳ್ಳೆಯ ಗುಣಗಳನ್ನು ಕಲಿಸುವುದರ ಜೊತೆಗೆ ಕಲಿಕೆಗೆ ಪ್ರೋತ್ಸಾಹ ನೀಡುವುದನ್ನು ತಿಳಿಯಪಡಿಸುತ್ತದೆ. ಭಗವದ್ಗೀತೆಯಿಂದ ಪೋಷಕರು ತಮ್ಮ ಮಕ್ಕಳಿಗೆ ವಿಶ್ವಾಸ, ಗೌರವ, ಮುಕ್ತವಾದ ಸಂವಹನ ಮತ್ತು ಒಳ್ಳೆಯ ಸಂಬಂಧವನ್ನು ಬೆಳೆಸಿಕೊಳ್ಳುವುದನ್ನು ತಿಳಿಸಿಕೊಡಬಹುದಾಗಿದೆ. ಭಗವದ್ಗೀತೆಯ ಈ ತ್ವತ್ವಗಳು ಪೋಷಕರಿಗೆ ಅವರ ಮಕ್ಕಳನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ.
ತದ್ ವಿದ್ಧಿ ಪ್ರಣಿಪತೇನಾ ಪರಿಪ್ರಶ್ನೇನ ಸೇವಯಾ
ಉಪದೇಕ್ಷಯಂತಿ ತೇ ಜ್ಞಾನಮ್ ಜ್ಞಾನಿನಾಸ್ ತತ್ವದರ್ಶಿನಃ
ಜೀವನದ ಉದ್ದೇಶವನ್ನು ಅರಿತುಕೊಂಡವರಿಂದ ನಯ, ವಿನಯ, ಪ್ರಾಮಾಣಿಕತೆ ಮತ್ತು ಗೌರವ ಕಲಿಯಿರಿ. ನಿಜವಾದ ಜ್ಞಾನವನ್ನು ಹೊಂದಿರುವವರು ನಿಮಗೆ ಜ್ಞಾನವನ್ನು ನೀಡುತ್ತಾರೆ. ನಿಜವಾದ ಜ್ಞಾನಿಗಳು ಅಥವಾ ನಿಜವಾದ ಜ್ಞಾನವನ್ನು ಪಡೆದ ಪ್ರಬುದ್ಧ ವ್ಯಕ್ತಿಗಳ ಸಂಪರ್ಕದಲ್ಲಿರುವಂತೆ ಶ್ರೀಕೃಷ್ಣನು ಸಲಹೆ ನೀಡುತ್ತಾನೆ. ವಿನಮ್ರತೆ, ಪ್ರಾಮಾಣಿಕವಾಗಿ ಪ್ರಶ್ನೆ ಕೇಳುವುದು ಮತ್ತು ಸೇವೆಗಳ ಮೂಲಕ ಬುದ್ಧಿವಂತರಿಂದ ಸಾಕಷ್ಟು ಕಲಿಯಬಹುದಾಗಿದೆ. ಅವರು ವಾಸ್ತವದ ಅರಿವಿರುವವರು ಮತ್ತು ವಿಷಯದಲ್ಲಿ ಆಳವಾದ ಜ್ಞಾನ ಹೊಂದಿರುವವರಾದ್ದರಿಂದ ಆಧ್ಯಾತ್ಮಿಕವಾಗಿಯೂ ಭರವಸೆಯನ್ನು ನೀಡುತ್ತಾರೆ. ಈ ಶ್ಲೋಕವು ಸರಿಯಾದ ಮಾರ್ಗದರ್ಶಕರ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಈ ಶ್ಲೋಕವು ಪೋಷಕರು ತಮ್ಮ ಮಕ್ಕಳಿಗೆ ಹೇಗೆ ಆದರ್ಶವಾಗಿರಬಹುದು ಎಂದು ಹೇಳುತ್ತದೆ. ಪೋಷಕರು ತಮ್ಮ ಕ್ರಿಯೆ ಅಥವಾ ಕೆಲಸದಲ್ಲಿ ಸಕಾರಾತ್ಮಕವಾಗಿರಬೇಕು. ಆ ಗುಣಗಳನ್ನು ತಾವು ಮೈಗೂಡಿಸಿಕೊಳ್ಳುವುದರ ಜೊತೆಗೆ ಮಕ್ಕಳಲ್ಲಿ ದಯೆ, ಪ್ರಾಮಾಣಿಕತೆಯನ್ನು ತಿಳಿಸಿಕೊಡಬೇಕು. ಶ್ರೀಕೃಷ್ಣನು ಅರ್ಜುನನಿಗೆ ನೀನು ಎಲ್ಲರಿಗೂ ಮಾದರಿಯಾಗಿ ಕಾರ್ಯವನ್ನು ನಿರ್ವಹಿಸು ಎಂದು ಹೇಳುವ ಮೂಲಕ ಪೋಷಕರು ತಮ್ಮ ಮಕ್ಕಳಿಗೆ ಹೇಗೆ ಸ್ಪೂರ್ತಿ ತುಂಬಬಹುದು ಎಂದು ಹೇಳಿದ್ದಾನೆ.
ಕರ್ಮಣೈವ ಹಿ ಸಂಸಿದ್ಧಿಮಸ್ಥಿತ ಜನಕಾದಯಃ
ಲೋಕಸಂಗ್ರಹಮೇವಾಪಿ ಸಮ್ಪಶ್ಯನ್ ಕರ್ತುಮರ್ಹಸಿ
ಭಗವದ್ಗೀತೆಯ ಈ ಶ್ಲೋಕವನ್ನು ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ. ಬುದ್ಧಿವಂತ ಮನುಷ್ಯ ಕೂಡಾ ತನ್ನ ಸ್ವಭಾವಕ್ಕೆ ಅನುಗುಣವಾಗಿ ವರ್ತಿಸುತ್ತಾನೆ. ಎಲ್ಲಾ ಜೀವಿಗಳು ತಮ್ಮ ಮೂಲ ಸ್ವಭಾವವನ್ನೇ ಅನುಸರಿಸುತ್ತವೆ. ಹಾಗಾದರೆ ಸಂಯಮ ಏನು ಮಾಡುತ್ತದೆ?
ಈ ಶ್ಲೋಕವು ಕರ್ಮ ಅಥವಾ ವ್ಯಕ್ತಿಯ ಸಹಜ ಸ್ವಭಾವದ ಬಗ್ಗೆ ಹೇಳುತ್ತದೆ. ಮನುಷ್ಯನು ಸ್ವಾಭಾವಿಕವಾಗಿಯೇ ಅವನೊಳಗಿರುವ ಗುಣ ಮತ್ತು ಪ್ರವೃತ್ತಿಗಳಿಗೆ ಅನುಗುಣವಾಗಿಯೇ ವರ್ತಿಸಲು ಇಚ್ಛಿಸುತ್ತಾನೆ. ಯಾರೊಬ್ಬರ ಸ್ವಭಾವವನ್ನು ನಿಗ್ರಹಿಸಲು ಅಥವಾ ನಿಗ್ರಹಿಸಲು ಪ್ರಯತ್ನಿಸುವುದು ನಿಷ್ಪ್ರಯೋಜಕವಾಗಿದೆ. ಏಕೆಂದರೆ ಪ್ರತಿಯೊಬ್ಬನೂ ಅವನೊಳಗಿರುವ ಸ್ವಭಾವದಂತೆಯೇ ಕಾರ್ಯನಿರ್ವಹಿಸುತ್ತಾನೆ. ಹಾಗಾಗಿ ಆ ಸಹಜ ಸ್ವಭಾವವನ್ನು ವಿರೋಧಿಸಲು ಪ್ರಯತ್ನಿಸುವ ಬದಲು ಅದಕ್ಕೆ ಹೊಂದಿಕೆಯಾಗುವಂತಹ ಕ್ರಿಯೆಗಳನ್ನು ಮಾಡುವುದು ಉತ್ತಮ ಎಂದು ಶ್ರೀಕೃಷ್ಣನ ಅರ್ಜುನನಿಗೆ ಹೇಳುತ್ತಾನೆ. ಭಗವದ್ಗೀತೆಯ ಮೂಲಾಧಾರವೇ ನೈತಿಕ ತತ್ವಗಳು. ಎಲ್ಲಾ ಸಂದರ್ಭಗಳಲ್ಲಿಯೂ ಪ್ರಾಮಾಣಿಕತೆ ಮತ್ತು ದೃಢತೆಯಿಂದ ವರ್ತಿಸುವುದನ್ನು ಕಲಿಸುತ್ತದೆ. ಇದು ಪೋಷಕರು ತಮ್ಮ ಮಕ್ಕಳೊಳಗಿರುವ ನೈತಿಕತೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ಅನಾದ್ಯವಿದ್ಯಾ ಯುಕ್ತಸ್ಯ ಪುರುಷಸ್ಯಾತ್ಮಾ ವೇದನಮ್
ಸ್ವತೋ ನ ಸಂಭವದ್ ಅನ್ಯಸ್ ತತ್ತ್ವ-ಜ್ಞೋ ಜ್ಞಾನ-ದೋ ಭವೇತ್
ಯಾವ ಮನುಷ್ಯನು ಮೂಲತಃ ಅಜ್ಞಾನಿಯಾಗಿರುತ್ತಾನೋ ಆ ವ್ಯಕ್ತಿಗೆ ಸ್ವಯಂ ಸಾಕ್ಷಾತ್ಕಾರವು ಅವನ ಸ್ವಂತ ಪ್ರಯತ್ನದಿಂದ ಸಾಧ್ಯವಿಲ್ಲ. ಜ್ಞಾನಿಯ ಸಹಾಯದ ಹೊರತಾಗಿ ಅವನು ಏನನ್ನೂ ಸಾಧಿಸಲಾಗುವುದಿಲ್ಲ. ಈ ಶ್ಲೋಕದಲ್ಲಿ ಅಜ್ಞಾನವೇ ಆಳವಾಗಿ ಬೇರೂರಿರುವ ವ್ಯಕ್ತಿಗೆ ಸ್ವಯಂ ಸಾಕ್ಷಾತ್ಕಾರ ಅಥವಾ ಸ್ವಪ್ರಯತ್ನದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಶ್ರೀಕೃಷ್ಣನು ವಿವರಿಸುತ್ತಾನೆ. ಅಜ್ಞಾನಕ್ಕೆ ಆರಂಭವೇ ಇಲ್ಲ. ಅಂದರೆ ಅಜ್ಞಾನವು ನಮ್ಮೊಳಗೆ ಅನಿರ್ದಿಷ್ಟ ಅವಧಿಯಿಂದ ಅಸ್ತಿತ್ವದಲ್ಲಿದೆ ಎಂಬುದನ್ನು ಹೇಳುತ್ತದೆ. ನಿಜವಾದ ಜ್ಞಾನಿಗಳ ಮಾರ್ಗದರ್ಶನದಿಂದ ಮಾತ್ರ ಅಜ್ಞಾನವು ದೂರವಾಗುತ್ತದೆ ಎಂದು ಶ್ರೀಕೃಷ್ಣನು ಹೇಳುತ್ತಾನೆ. ಪೋಷಕರು ತಮ್ಮ ಮಕ್ಕಳಿಗೆ ನೈತಿಕ ತತ್ವಗಳನ್ನು, ಧರ್ಮ ಮತ್ತು ಸದಾಚಾರಗಳನ್ನು ಹೇಗೆ ಕಲಿಸಬೇಕು ಎಂಬುದನ್ನು ಹೇಳುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಅವರ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳಸಲು ಸಹಾಯ ಮಾಡುತ್ತದೆ.