Bhagavad Gita: ಭಗವಂತನಿಗೆ ನಿರಂತರ ಭಕ್ತಿಸೇವೆ ಮಾಡಿದರೆ ಅರ್ಹತೆಗಳನ್ನ ಬೆಳೆಸಿಕೊಳ್ಳಲು ನೆರವಾಗುತ್ತೆ; ಗೀತೆಯ ಸಾರಾಂಶ ತಿಳಿಯಿರಿ-spiritual news bhagavad gita updesh continuous devotional service to lord krishna bhagavad gita quotes in kannada ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನಿಗೆ ನಿರಂತರ ಭಕ್ತಿಸೇವೆ ಮಾಡಿದರೆ ಅರ್ಹತೆಗಳನ್ನ ಬೆಳೆಸಿಕೊಳ್ಳಲು ನೆರವಾಗುತ್ತೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita: ಭಗವಂತನಿಗೆ ನಿರಂತರ ಭಕ್ತಿಸೇವೆ ಮಾಡಿದರೆ ಅರ್ಹತೆಗಳನ್ನ ಬೆಳೆಸಿಕೊಳ್ಳಲು ನೆರವಾಗುತ್ತೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita Updesh: ಭಗವಂತನಿಗೆ ನಿರಂತರ ಭಕ್ತಿಸೇವೆ ಮಾಡಿದರೆ ಅರ್ಹತೆಗಳನ್ನ ಬೆಳೆಸಿಕೊಳ್ಳಲು ನೆರವಾಗುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 12 ನೇ ಅಧ್ಯಾಯದ 18 ಮತ್ತು 19ನೇ ಶ್ಲೋಕದಲ್ಲಿ ಹೀಗೆ ಬರೆಯಲಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 18-19

ಸಮಃ ಶತ್ರೌಚ ಮಿತ್ರೇ ಚ ತಥಾ ಮಾನಾಪಮಾನಯೋಃ |

ಶೀತೋಷ್ಣಸುಖದುಃಖೇಷು ಸಮಃ ಸನ್ಗ ವಿವರ್ಜಿತಃ ||18|

ತುಲ್ಯನಿನ್ದಾಸ್ತುತಿರ್ಮೌನೀ ಸನ್ತುಷ್ಟೋ ಯೇನ ಕೇನಚಿತ್ |

ಅನಿಕೇತಃ ಸ್ಥಿರಮತಿರ್ಭಕ್ತಿಮಾನ್ಮೇ ಪ್ರಿಯೋ ನರಃ ||19||

ಅನುವಾದ: ಮಿತ್ರರು ಶತ್ರುಗಳ ವಿಷಯದಲ್ಲಿ ಒಂದೇ ರೀತಿ ಇರುವವನೂ, ಮಾನಾಪಮಾನಗಳಲ್ಲಿ, ಶೀತೋಷ್ಣಗಳಲ್ಲಿ, ಕೀರ್ತಿ ಅಪಕೀರ್ತಿಗಳಲ್ಲಿ ಸಮಚಿತ್ತನಾಗಿರುವವನೂ, ಕಲ್ಮಷವನ್ನುಂಟುಮಾಡುವ ಎಲ್ಲ ಸಹವಾಸಗಳಿಂದ ಮುಕ್ತನೂ, ಸದಾ ಮೌನಿಯಾಗಿದ್ದು ಅಲ್ಪ ತೃಪ್ತನೂ, ವಾಸಸ್ಥಳದಲ್ಲಿ ಆಸಕ್ತಿ ಇಲ್ಲದವನೂ, ಸ್ಥಿರಮತಿಯೂ, ಭಕ್ತಿಸೇವೆಯಲ್ಲಿ ನಿರತನೂ ಆದವನು ನನಗೆ ಬಹು ಪ್ರಿಯನಾದವನು.

ಭಾವಾರ್ಥ: ಭಕ್ತನು ಯಾವಾಗಲೂ ಕೆಟ್ಟ ಸಹಸವಾದಿಂದ ದೂರ ಇರುತ್ತಾನೆ. ಒಮ್ಮೊಮ್ಮೆ ಜನ ಹೊಗಳುತ್ತಾರೆ. ಒಮ್ಮೊಮ್ಮೆ ತೆಗಳುತ್ತಾರೆ. ಮನುಷ್ಯ ಸವಜದ ಸ್ವಭಾವವೇ ಹಾಗೆ. ಆದರೆ ಭಕ್ತನು ಯಾವಾಗಲೂ ಕೃತಕವಾದ ಕೀರ್ತಿ ಅಪಕೀರ್ತಿ, ಸುಖದುಃಖಗಳನ್ನು ಮೀರಿರುತ್ತಾನೆ. ಅವನಿಗೆ ಬಹು ತಾಳ್ಮೆ. ಆತನು ಕೃಷ್ಣನಿಗೆ ಸಂಬಂಧಿಸಿದ ವಿಷಯಗಳನ್ನು ಬಿಟ್ಟು ಬೇರೇನೂ ಮಾತನಾಡುವುದಿಲ್ಲ. ಆದುದರಿಂದ ಅವನನ್ನು ಮೌನಿ ಎಂದು ಕರೆದಿದೆ. ಮೌನಿ ಎಂದರೆ ಮನುಷ್ಯ ಮಾತನಾಡಲೇಬಾರದು ಎಂದು ಅರ್ಥವಲ್ಲ. ಮೌನಿ ಎಂದರೆ ಮನುಷ್ಯ ಅಸಂಬದ್ಧವಾಗಿ ಮಾತನಾಡಬಾರದು ಎಂದು ಅರ್ಥ (Bhagavad Gita Updesh in Kannada).

ಮುಖ್ಯವಾದ ಸಂಗತಿಗಳನ್ನು ಕುರಿತು ಮಾತ್ರ ಮಾತನಾಡಬೇಕು. ಭಕ್ತನ ಬಹು ಮುಖ್ಯ ಮಾತೆಂದರೆ ಪರಮ ಪ್ರಭುವಿಗಾಗಿ. ಎಲ್ಲ ಸ್ಥಿತಿಗಳಲ್ಲಿಯೂ ಭಕ್ತನು ಸಂತೋಷವಾಗಿರುತ್ತಾನೆ. ಒಮ್ಮೆ ಬಹು ರುಚಿಯಾದ ಭಕ್ಷ್ಯಗಳು ದೊರೆಯಬಹುದು. ಒಮ್ಮೊಮ್ಮೆ ದೊರೆಯದೆ ಹೋಗಬಹುದು. ಆದರೆ ಅವನು ತೃಪ್ತನೇ. ವಾಸಸ್ಥಳದ ವಿಷಯಕ್ಕೆ ಆತ ಗಮನ ಕೊಡುವುದಿಲ್ಲ. ಕೆಲವೊಮ್ಮೆ ಆತ ಒಂದು ಮರದ ಕೆಳಗೆ ವಾಸಿಸಬಹುದು. ಕೆಲವೊಮ್ಮೆ ಅರಮನೆಯಂತಹ ಕಟ್ಟಡದಲ್ಲಿ ವಾಸಿಸಬಹುದು. ಅವನಿಗೆ ಎರಡರಲ್ಲಿಯೂ ಆಕರ್ಷಣೆ ಇಲ್ಲ. ಆತನನ್ನು ಸ್ಥಿರ ಎಂದು ಕರೆದಿದೆ. ಏಕೆಂದರೆ ಆತನು ಸಂಕಲ್ಪದಲ್ಲಿ ಮತ್ತು ಜ್ಞಾನದಲ್ಲಿ ನಿಶ್ಚಲ.

ಭಕ್ತನ ಅರ್ಹತೆಗಳ ವರ್ಣನೆಯಲ್ಲಿ ಸ್ವಲ್ಪಮಟ್ಟಿನ ಪುನರಾವೃತ್ತಿಯನ್ನು ನಾವು ಕಾಣಬಹುದು. ಆದರೆ ಇದರ ಉದ್ದೇಶ ಭಕ್ತನು ಈ ಎಲ್ಲ ಅರ್ಹತೆಗಳನ್ನು ಪಡೆದುಕೊಳ್ಳಬೇಕೆಂದು ಒತ್ತಿ ಹೇಳುವುದು. ಸರಿಯಾದ ಅರ್ಹತೆಗಳಿಲ್ಲದ ಮನುಷ್ಯನು ಪರಿಶುದ್ಧ ಭಕ್ತನಾಗಲಾರ. ಹರಾವಭಕ್ತಸ್ಯ ಕುತೋ ಮಹದ್‌ಗುಣಾಃ ಭಕ್ತನಲ್ಲದವನಿಗೆ ಒಳ್ಳೆಯ ಅರ್ಹತೆ ಇರುವುದಿಲ್ಲ. ಭಕ್ತನೆಂದು ಗುರುತಿಸಲ್ಪಡಬೇಕೆಂದು ಬಯಸುವವನು ಒಳ್ಳೆಯ ಅರ್ಹತೆಗಳನ್ನು ಬೆಳೆಸಿಕೊಳ್ಳಬೇಕು. ಈ ಅರ್ಹತೆಗಳನ್ನು ಗಳಿಸಿಕೊಳ್ಳಲು ಅವನು ಪ್ರತ್ಯೇಕವಾಗಿ ಶ್ರಮಿಸುವುದಿಲ್ಲ. ಆದರೆ ಕೃಷ್ಣಪ್ರಜ್ಞೆಯಲ್ಲಿ ನಿರತನಾಗಿರುವುದು ಮತ್ತು ಭಕ್ತಿಸೇವೆ ಇವು ಸಹಜವಾಗಿ ಅವನು ಆ ಅರ್ಹತೆಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತವೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.