ಭಗವದ್ಗೀತೆ: ನನ್ನೊಡನೆ ಅತ್ಯಂತ ನಿಕಟವಾಗಿರುವವನೇ ಎಲ್ಲರಿಗಿಂತಲೂ ಶ್ರೇಷ್ಠನು; ಶ್ರೀಕೃಷ್ಣನ ಮಾತಿನ ಅರ್ಥ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ದೇವರ ಗೀತೆ ಎಂಬ ಅರ್ಥ ಬರುವ ಭಗವದ್ಗೀತೆ ವಿಶ್ವದಲ್ಲಿರುವ ಧರ್ಮಗ್ರಂಥಗಳಲ್ಲಿ ಒಂದಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.
ಯೋಗಿನಾಮಪಿ ಸರ್ವೇಷಾಂ ಮದ್ಗತೇನಾನ್ತರಾತ್ಮನಾ|
ಶ್ರದ್ಧಾವಾನ್ ಭಜತೇ ಯೋ ಮಾಂ ಸ ಮೇ ಯುಕ್ತತಮೋ ಮತಃ ||
"ಎಲ್ಲಾ ಯೋಗಿಗಳಲ್ಲಿ, ಸದಾ ಯಾರು ನನ್ನಲ್ಲೇ ಸ್ಥಿರವಾಗಿದ್ದು, ತನ್ನೆಲ್ಲೇ ನನ್ನನ್ನು ಕುರಿತು ಚಿಂತಿಸುತ್ತ ನನಗೆ ಆಧ್ಯಾತ್ಮಿಕ ಪ್ರೇಮಪೂರ್ವಕ ಸೇವೆಯನ್ನು ಬಹು ಶ್ರದ್ಧೆಯಿಂದ ಸಲ್ಲಿಸುತ್ತಾನೋ ಆತನೇ ಯೋಗದಲ್ಲಿ ನನ್ನೊಡನೆ ಅತ್ಯಂತ ನಿಕಟವಾಗಿ ಒಂದಾಗಿರುವವನು ಮತ್ತು ಆತನೇ ಎಲ್ಲರಿಗಿಂತಲೂ ಶ್ರೇಷ್ಠನು. ಇದೇ ನನ್ನ ಅಭಿಪ್ರಾಯ." (ಗೀತಾ 6.47).
ಯಾರು ಸದಾ ಭಗವಂತನನ್ನೇ ಕುರಿತು ಚಿಂಸುವರೋ ಅವನೇ ಅತ್ಯಂತ ಶ್ರೇಷ್ಠ ಯೋಗಿ, ಪರಮ ಜ್ಞಾನಿ ಮತ್ತು ಅತ್ಯಂತ ಶ್ರೇಷ್ಠ ಭಕ್ತ. ಭಗವಂತನು ಅರ್ಜುನನಿಗೆ, ನೀನು ಕ್ಷತ್ರಿಯನಾದ್ದರಿಂದ ಯುದ್ಧಮಾಡುವುದನ್ನು ಬಿಡುವಂತಿಲ್ಲ, ಆಜರರೆ ನನ್ನನ್ನು ಸ್ಮರಿಸುತ್ತಾ ನೀನು ಯುದ್ಧ ಮಾಡಿದರೆ ನಿನ್ನ ಮರಣಕಾಲದಲ್ಲಿ ನನ್ನನ್ನು ಸ್ಮರಿಸುವುದು ಸಾಧ್ಯವಾಗುತ್ತದೆ ಎಂದೂ ಹೇಳುತ್ತಾನೆ. ಆದರೆ ಮನುಷ್ಯನು ಭಗವಂತನ ಆಧ್ಯಾತ್ಮಿಕ ಪ್ರೇಮಪೂರ್ವಕ ಸೇವೆಯಲ್ಲಿ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಬೇಕು.
ವಾಸ್ತವವಾಗಿ ನಾವು ಕೆಲಸ ಮಾಡುವುದು ನಮ್ಮ ದೇಹದಿಂದಲ್ಲ, ನಮ್ಮ ಮನಸ್ಸು ಮತ್ತು ಬುದ್ಧಿಗಳಿಂದ. ಆದುದರಿಂದ ಬುದ್ಧಿಶಕ್ತಿಯೂ ಮನಸ್ಸೂ ಸದಾ ಭಗವಂತನ ಚಿಂತೆಯಲ್ಲಿ ತೊಡಗಿದ್ದರೆ ಸಹಜವಾಗಿ ಇಂದ್ರಿಯಗಳು ಅವನ ಸೇವೆಯಲ್ಲಿ ನಿರತವಾಗಿರುತ್ತವೆ. ಕಡೆಯ ಪಕ್ಷ ಮೇಲ್ನೋಟಕ್ಕೆ ಇಂದ್ರಿಯಗಳ ಚಟುವಟಿಕೆಗಳು ಹಿಂದಿನಂತೆಯೇ ಇರುತ್ತವೆ. ಆದರೆ ಪ್ರಜ್ಞೆಯು ಬದಲಾಗುತ್ತದೆ.
ಮನಸ್ಸನ್ನೂ ಬುದ್ಧಿಶಕ್ತಿಯನ್ನೂ ಭಗವಂತನ ಚಿಂತನೆಯಲ್ಲಿ ತಲ್ಲೀನಗೊಳಿಸುವುದು ಹೇಗೆ ಎನ್ನುವುದನ್ನು ಭಗವದ್ಗೀತೆಯು ಹೇಳಿಕೊಡುತ್ತದೆ. ಇಂತಹ ತಲ್ಲೀನತೆಯಿಂದ ಮನುಷ್ಯನು ಭಗವಂತನ ಸಾಮ್ರಾಜ್ಯಕ್ಕೆ ಏರುವುದು ಸಾಧ್ಯವಾಗತ್ತದೆ. ಮನಸ್ಸು ಕೃಷ್ಣಸೇವೆಯಲ್ಲಿ ತೊಡಗಿದ್ದರೆ ಇಂದ್ರಿಯಗಳು ತಾವಾಗಿಯೇ ಅವನ ಸೇವೆಯಲ್ಲಿ ತೊಡಗುತ್ತವೆ. ಭಗವದ್ಗೀತೆಯ ಕಲೆಯೂ ರಹಸ್ಯವೂ ಇದೇ-ಕೃಷ್ಣ ಚಿಂತನೆಯಲ್ಲಿ ಸಂಪೂರ್ಣ ತಲ್ಲೀನತೆ.
ಆಧುನಿಕ ಮನುಷ್ಯನು ಚಂದ್ರನನ್ನು ತಲುಪಲು ಬಹಳ ಶ್ರಮಪಟ್ಟಿದ್ದಾನೆನ. ಆದರೆ ಆಧ್ಯಾತ್ಮಿಕವಾಗಿ ತಾನು ಮೇಲಕ್ಕೆ ಏರಲು ಬಹಳ ಪ್ರಯತ್ನವೇನೂ ಮಾಡಿಲ್ಲ. ಒಬ್ಬ ಮನುಷ್ಯನಿಗೆ ಐವತ್ತು ವರ್ಷಗಳ ಆಯಸ್ಸು ಉಳಿದಿದ್ದರೆ ಅವನು ಆ ಅಲ್ಫಾವಧಿಯನ್ನು ದೇವೋತ್ತಮ ಪರಮ ಪುರುಷನನ್ನು ಸ್ಮರಿಸಿಕೊಳ್ಳುವ ಅಭ್ಯಾಸವನ್ನು ಬೆಳಸಿಕೊಳ್ಳಲು ಉಪಯೋಗಿಸಿಕೊಳ್ಳಬೇಕು. ಈ ಸಾಧನೆಯೇ ಭಕ್ತಿಮಾರ್ಗ -
ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್ |
ಅರ್ಚನಂ ಅನ್ದನಂ ದಾಸ್ಯಂ ಸುಖ್ಯಮಾತ್ಮನಿವೇದನಮ್ || (ಭಾಗವತ 7.5.23)
ಈ ಒಂಬತ್ತು ವಿಧಗಳಲ್ಲಿ ಶ್ರವಣವು ಅಥವಾ ಸಾಕ್ಷಾತ್ಕಾರ ಪಡೆದವರಿಂದ ಭಗವದ್ಗೀತೆಯನ್ನು ಕೇಳುವುದು ಅತ್ಯಂತ ಸುಲಭವಾಗದ್ದು. ಇದು ಶ್ರೋತೃವಿನ ಚಿಂತನೆಯನ್ನು ಪರಮ ಪ್ರಭವಿನ ಕಡೆಗೆ ತಿರುಗಿಸುತ್ತದೆ. ಇದು ಭಗವಂತನ ಸ್ಮರಣೆಗೆ ದಾರಿಮಾಡುತ್ತದೆ. ದೇಹವನ್ನು ತ್ಯಾಗಮಾಡಿದಾಗ ಭಗವಂತನ ಸಹವಾಸಕ್ಕೆ ಆಧ್ಯಾತ್ಮಿಕ ಶರೀರವನ್ನು ಪಡೆಯಲು ಇದರಿಂದ ಸಾಧ್ಯವಾಗುತ್ತದೆ.
ಭಗವಂತನು ಇನ್ನೂ ಹೇಳುತ್ತಾನೆ -
ಅಭ್ಯಾಸಯೋಗಮುಕ್ತೇನ ಚೇತಸಾ ನಾನ್ಯಗಾಮಿನಾ |
ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನುಚಿನ್ತಯನ್ ||
ಅರ್ಜುನ, ಯಾವ ಮನುಷ್ಯನು ವಿಚಲಿತನಾಗದೆ ಸದಾ ನನ್ನ ಸ್ಮರಣೆಯಲ್ಲಿ ತನ್ಮಯವಾಗಿದ್ದು ಸದಾ ನನ್ನನ್ನು ದೇವೋತ್ತಮ ಪರಮ ಪುರುಷನೆಂದು ಧ್ಯಾನಿಸುತ್ತಾನೊ ಆತನ, ಖಂಡಿತವಾಗಿ ನನ್ನ ಬಳಿಗೆ ಬರುತ್ತಾನೆ (ಗೀತಾ 8.8).