ಭಗವದ್ಗೀತೆ: ವಿಜಯ ತಮ್ಮದೇ ಎಂದು ದುರ್ಯೋಧನ ವಿಶ್ವಾಸ ಹೊಂದಲು ಅದೊಂದು ಕಾರಣವಿತ್ತು; ಗೀತೆಯಲ್ಲಿನ ಸಾರಾಂಶ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಗೆಲುವು ತಮ್ಮದೇ ಎಂದು ದುರ್ಯೋಧನ ವಿಶ್ವಾಸ ಹೊಂದಲು ಅದೊಂದು ಕಾರಣವಿತ್ತು. ಗೀತೆಯಲ್ಲಿನ ಸಾರಾಂಶವನ್ನು ತಿಳಿಯಿರಿ.
ಭಗವದ್ದೀತೆಯ (BhagavadGita) ಶ್ಲೋಕ - 4ರಲ್ಲಿ ಹೀಗೆ ಹೇಳಲಾಗಿದೆ
ಅತ್ರ ಶೂರಾ ಮಹೇಷ್ವಾಸಾ ಭೀಮಾರ್ಜುನಸಮಾ ಯುಧಿ |
ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ ||4||
ಅತ್ರ - ಇಲ್ಲ; ಶೂರಾಃ-ವೀರಾರದ; ಮಹಾ ಇಷ್ಟು ಆಸಾಃ-ಮಹಾ ಬಿಲ್ಗಾರರು; ಭೀಮ ಅರ್ಜುನ-ಭೀಮ, ಅರ್ಜುನರಿಗೆ; ಸಮಾಃ-ಸಮಾನರಾದ; ಯುಧಿ-ಯುದ್ಧದಲ್ಲಿ; ಯುಯುಧಾನಃ-ಯುಯುಧಾನನು; ವಿರಾಟಃ-ವಿರಾಟನು; ಚ-ಕೂಡ; ದ್ರುಪದಃ-ದ್ರುಪದನು; ಚ-ಸಹಾ; ಮಹಾ ರಥಃ-ಮಹಾಯೋಧನಾ.
ಅನುವಾದ
ಹೋರಾಟದಲ್ಲಿ ಭೀಮಾರ್ಜನರಿಗೆ ಸಮಾನರಾದ ಅನೇಕ ವೀರ ಬಿಲ್ಲಾಳುಗಳು ಈ ಸೈನ್ಯದಲ್ಲಿದ್ದಾರೆ. ಯುಯುಧಾನ, ವಿರಾಟ ಮತ್ತು ದ್ರುಪದರಂತಹ ಮಹಾರಥರಿದ್ದಾರೆ.
ಭಾವಾರ್ಥ
ದ್ರೋಣಾಚಾರ್ಯರಿಗೆ ಯದ್ಧಕಲೆಯಲ್ಲಿದ್ದ ಮಹಾಶಕ್ತಿಯ ಎದುರಿನಲ್ಲಿ ಧೃಷ್ಟದ್ಯುಮ್ನನು ಬಹು ದೊಡ್ಡ ತಡೆಯೇನೂ ಆಗಿರಲಿಲ್ಲ. ಆದರೆ ಆತಂಕವನ್ನುಂಟುಮಾಡಬಲ್ಲ ಇತರರು ಅನೇಕರಿದ್ದರು. ಅವರಲ್ಲಿ ಪ್ರತಿಯೊಬ್ಬರೂ ಭೀಮಾರ್ಜನರಷ್ಟೇ ದುರ್ಜಯರಾದದ್ದರಿಂದ ಕೌರವರ ಜಯಕ್ಕೆ ಅಡ್ಡಿಯಾಗಬಲ್ಲರೆಂದು ದುರ್ಯೋಧನನು ಅವರನ್ನು ಹೆಸರಿಸುತ್ತಾನೆ. ಅವನಿಗೆ ಭೀರ್ಮಾಜುನರ ಶಕ್ತಿಯ ಅರಿವತ್ತು. ಆದ್ದರಿಂದ ಅವನು ಇತರರನ್ನು ಅವರೊಂದಿಗೆ ಹೋಲಿಸುತ್ತಾನೆ.
ಶ್ಲೋಕ - 8
ಭವಾನ್ ಭೀಷ್ಮಶ್ಚ ಕರ್ಣಶ್ಚ ಕೃಪಶ್ಚ ಸಮಿತಿಂಜಯ |
ಅಶ್ವತ್ಥಾಮಾ ವಿಕರ್ಣಶ್ಚ ಸೌಮದತ್ತಿಸ್ತಥೈವ ಚ ||8||
ಭವಾನ್ - ತಾವು; ಭೀಷ್ಮಃ - ಪಿತಾಮಹರಾದ ಭೀಷ್ಮಾಚಾರ್ಯರು; ಚ - ಕೂಡ; ಕರ್ಣಃ - ಕರ್ಣನು; ಚ - ಮತ್ತು; ಕೃಪಃ - ಕೃಪರು; ಚ - ಮತ್ತು; ಸಮಿತಿಮ್‌ಜಯಃ - ಯುದ್ಧದಲ್ಲಿ ಸದಾ ಜಯಶಾಲಿಯಾದ; ಅಶ್ವತ್ಥಾಮಾ - ಅಶ್ವತ್ಥಾಮನು; ವಿಕರ್ಣಃ - ವಿಕರ್ಣನು; ಚ - ಹಾಗೆಯೇ ಸೌಮದತ್ತಿಃ - ಸೋಮದತ್ತನು ಪುತ್ರನು; ತಥಾ - ಹಾಗೆಯೇ; ಏವ - ಖಂಡಿತವಾಗಿಯೂ; ಚ - ಕೂಡ.
ಅನುವಾದ
ತಾವು ಭೀಷ್ಮರು, ಕರ್ಣ, ಕೃಪ, ಅಶ್ವತ್ಥಾಮ, ವಿಕರ್ಣ, ಸೋಮದತ್ತನ ಮಗನಾದ ಭೂರಿಶ್ರವ,ಇವರೆಲ್ಲ ಯಾವಾಗಲೂ ಯುದ್ಧದಲ್ಲಿ ವಿಜಯಿಗಳಾಗುವವರು.
ಭಾವಾರ್ಥ
ದುರ್ಯೋಧನನು ಸದಾ ವಿಜಯಿಗಳಾಗುವ ಅಸಾಧಾರಣ ವೀರರನ್ನು ಹೆಸರಿಸುತ್ತಾನೆ. ವಿಕರ್ಣನು ದುರ್ಯೋಧನನ ತಮ್ಮ. ಅಶ್ವತ್ಥಾಮನು ದ್ರೋಣಾಚಾರ್ಯರ ಮಗ. ಸೌಮದತ್ತಿ ಅಥವಾ ಭೂರಿಶ್ರವನು ಬಾಹ್ಲೀಕರ ಅರಸನ ಮಗ. ಕರ್ಣನು ಅರ್ಜನನ ಮಲ ಅಣ್ಣ; ಪಾಂಡುರಾಜನನ್ನು ಕುಂತಿಯು ಮದುವೆಯಾಗುವ ಮೊದಲು ಅವಳು ಹೆತ್ತ ಮಗ. ಕೃಪಾಚಾರ್ಯರ ಅವಳಿ ಸೋದರಿ ದ್ರೋಣಾಕಾರ್ಯರನ್ನು ಮದುವೆಯಾದಳು.
ಶ್ಲೋಕ - 9
ಅನ್ಯೇ ಚ ಬಹವಃ ಶೂರಾ ಮದರ್ಥೇ ತ್ಯಕ್ತಜೀವಿತಾಃ |
ನಾನಾಶಸ್ತ್ರಪ್ರಹರಣಾಃ ಸರ್ವೇ ಯುದ್ಧವಿಶಾರದಾಃ ||9||
ಅನ್ಯೇ - ಇತರರು; ಚ - ಕೂಡ; ಬಹವಃ - ಬಹು ಸಂಖ್ಯೆಯಲ್ಲಿ; ಶೂರಾಃ - ಶೂರರು; ಮತ್ ಅರ್ಥೇ - ನನ್ನ ಸಲುವಾಗಿ; ತ್ಯಕ್ತ ಜೀವಿತಾಃ - ಪ್ರಾಣಾರ್ಪಣೆಗೆ ಸಿದ್ಧರಾದವರು; ನಾನ - ಅನೇಕ; ಶಸ್ತ್ರ - ಆಯುದ್ಧಗಳಿಂದ; ಪ್ರಹರಣಾಃ - ಸಜ್ಜಿತರಾದವರು; ಸರ್ವೇ - ಎಲ್ಲರೂ; ಯು್ಧ ವಿಶಾರಾದಃ - ಯುದ್ಧವಿಜ್ಞಾನದಲ್ಲಿ ಅನುಭವಪಡೆದವರು.
ಅನುವಾದ
ನಮಗಾಗಿ ಪ್ರಾಣವನ್ನೇ ಕೊಡಲು ಸಿದ್ಧರಾಗಿರುವ ಇನ್ನೂ ಅನೇಕ ಮಂದಿ ವೀರರಿದ್ದಾರೆ. ಅವರೆಲ್ಲ ವಿವಿಧ ಅಸ್ತ್ರ ಶಸ್ತ್ರಗಳನ್ನು ಹೊಂದಿರುವವರು. ಎಲ್ಲರೂ ಯುದ್ಧ ವಿಶಾರದರು.
ಭಾವಾರ್ಥ
ಜಯದ್ರಥ, ಕೃತವರ್ಮ ಮತ್ತು ಶಲ್ಯರಂತಹವರ ವಿಷಯ ಹೇಳವುದಾದರೆ ಅವರೆಲ್ಲ ದುರ್ಯೋಧನನಿಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಲು ಸಂಕಲ್ಪ ಮಾಡಿದ್ದಾರೆ. ಇದನ್ನೇ ಬೇರೆ ಮಾತುಗಳಲ್ಲಿ ಹೇಳವುದಾದರೆ, ಪಾಪಮಾಡಿರುವ ದುರ್ಯೋಧನನ ಪಕ್ಷವನ್ನು ಸೇರಿರುವುದರಿಂದ ಅವರೆಲ್ಲ ಕುರುಕ್ಷೇತ್ರ ಯುದ್ಧದಲ್ಲಿ ಸಾಯಬೇಕೆಂದು ಆಗಲೇ ನಿರ್ಧಾರವಾಗಿಹೋಗಿದೆ. ದುರ್ಯೋಧನನು ಮಾತ್ರ ಈ ಎಲ್ಲಾ ಸ್ನೇಹಿತರ ಬಲವು ಒಂದುಗೂಡಿರುವುದರಿಂದ ವಿಜಯ ತನ್ನದೇ ಎಂದು ವಿಶ್ವಾಸ ಹೊಂದಿದ್ದಾನೆ.