ಭಗವದ್ಗೀತೆ: ಸ್ನೇಹವೆಂಬುದು ಸಮಾನರಲ್ಲಿ ಮಾತ್ರ ಸಾಧ್ಯ; ಗೀತೆಯಲ್ಲಿನ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಸ್ನೇಹವೆಂಬುದು ಸಮಾನರಲ್ಲಿ ಮಾತ್ರ ಸಾಧ್ಯ; ಗೀತೆಯಲ್ಲಿನ ಅರ್ಥ ತಿಳಿಯಿರಿ

ಭಗವದ್ಗೀತೆ: ಸ್ನೇಹವೆಂಬುದು ಸಮಾನರಲ್ಲಿ ಮಾತ್ರ ಸಾಧ್ಯ; ಗೀತೆಯಲ್ಲಿನ ಅರ್ಥ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಸ್ನೇಹವೆಂಬುದು ಸಮಾನರಲ್ಲಿ ಮಾತ್ರ ಸಾಧ್ಯ ಎಂಬ ಗೀತೆಯಲ್ಲಿನ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಧೃತರಾಷ್ಟ್ರನಿಗೆ ದುರ್ಯೋಧನನೆಂದರೆ ಬಹಳ ಪ್ರೀತಿ. ಈ ವಿಷಯವನ್ನು ತಿಳಿದಿದ್ದಂತಹ ಸಂಜಯನು ಧೃತರಾಷ್ಟ್ರನಲ್ಲಿ, ಮೊದಲು ದುರ್ಯೋಧನನ ಚಟುವಟಿಕೆಗಳ ಕುರಿತಾಗಿ ತಿಳಿಸುತ್ತಾನೆ.

ದೃಷ್ಟ್ವಾ ತು ಪಾಂಡವಾನೀಕಂ ವ್ಯೂಢಂ ದುರ್ಯೋಧನಸ್ತದಾ।

ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್ ॥1.2॥

ಸಂಜಯನು ನುಡಿದನು, ರಾಜನೇ ಪಾಂಡವರ ಸೇನಾ ವ್ಯೂಹವನ್ನು ವೀಕ್ಷಿಸಿ, ರಾಜಾ ದುರ್ಯೋಧನನು ತನ್ನ ಗುರುಗಳ ಬಳಿಗೆ ಹೋ ಗಿ ಹೀಗೆಂದನು.

ಪಶ್ಯೈತಾಂ ಪಾಂಡುಪುತ್ರಾಣಾಮಾಚಾರ್ಯ ಮಹತೀಂ ಚಮೂಮ್।

ವ್ಯೂಢಾಂ ದ್ರುಪದಪುತ್ರೇಣ ತವ ಶಿಷ್ಯೇಣ ಧೀಮತಾ ॥1.3॥

ಆಚಾರ್ಯರೇ, ನಿಮ್ಮ ಚತುರ ಶಿಷ್ಯನಾದ ದ್ರುಪದನ ಮಗನು ಕೌಶಲದಿಂದ ವ್ಯೂಹ ರೂಪವಾಗಿ ರಚಿಸಿರುವ ಈ ಪಾಂಡವ ಸೈನ್ಯವನ್ನು ನೋಡಿ. ದ್ರೋಣಾಚಾರ್ಯರು ಧನುರ್ವಿದ್ಯೆಯನ್ನು ಕಲಿಸಿಕೊಟ್ಟಂತಹ ಗುರುಗಳಾಗಿದ್ದಾರೆ. ಅಂತಹ ಗುರುಗಳ ಬಳಿಗೆ ಹೋದಾಗ ಶಿಷ್ಯನಾದವನು ಮೊದಲು ಗುರುಗಳಿಗೆ ಪ್ರಣಾಮಗಳನ್ನು ಸಲ್ಲಿಸಬೇಕು. ಆದರೆ ಇಲ್ಲಿ ದುರ್ಯೋಧನನ ವ್ಯವಹಾರವನ್ನು ನೋಡುವಾಗ, ಆತನು ದ್ರೋಣಾಚಾರ್ಯರಿಗೆ ಯಾವುದೇ ಗೌರವವನ್ನು ತೋರಿಸಿದ್ದನ್ನು ನಾವು ಕಾಣುವುದಿಲ್ಲ. ಅಷ್ಟು ಮಾತ್ರವಲ್ಲದೆ ದ್ರೋಣಾಚಾರ್ಯರನ್ನು ಆತನು ಟೀಕಿಸಿ ಮಾತನಾಡುತ್ತಾನೆ. ಒಬ್ಬ ದುಷ್ಟನಾದಂತಹ ವ್ಯಕ್ತಿತನ್ನ ಕಾರ್ಯ ಸಾಧನೆಯನ್ನು ಮಾಡಿಕೊಳ್ಳಲು ಯಾರಿಗೆ ಬೇಕಾದರೂ ಅವಮಾನವನ್ನು ಮಾಡಲು ಸಿದ್ಧನಾಗಿರುತ್ತಾನೆ.

ದ್ರೋಣಾಚಾರ್ಯರಿಗೆ ಅರ್ಜುನನ ಮೇಲೆ ವಿಶೇಷ ಪ್ರೀತಿ. ಈ ವಿಷಯವನ್ನು ತಿಳಿದಿದ್ದಂತಹ ದುರ್ಯೋಧನನು ದ್ರೋಣಾಚಾರ್ಯರು ಯುದ್ಧದಲ್ಲಿ ಪಾಂಡವರಿಗೆ ಸಹಾಯವಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂಬಂತಹ ಉದ್ದೇಶದಿಂದ ದ್ರೋಣಾಚಾರ್ಯರಿಗೆ ರೋಷ ಬರುವಂತಹ ಒಂದು ಘಟನೆಯನ್ನು ನೆನಪಿಸಲು ಪ್ರಯತ್ನಿಸುತ್ತಿದ್ದಾನೆ.

ನನ್ನ ರಾಜ್ಯದಲ್ಲಿ ಅರ್ಧ ಭಾಗವನ್ನು ನಿನಗೆ ಕೊಡುತ್ತೇನೆ

ದ್ರೋಣ ಮತ್ತು ದ್ರುಪದ ಇಬ್ಬರು ಒಂದೇ ಗುರುಕುಲದಲ್ಲಿ ವಿದ್ಯಾಭ್ಯಾಸವನ್ನು ಪಡೆದರು. ಇಬ್ಬರೂ ಬಾಲ್ಯ ಸ್ನೇಹಿತರು. ಬಾಲ್ಯದಲ್ಲಿ ಜೊತೆಯಾಗಿ ಆಟವಾಡುತ್ತಿದ್ದಾಗ ದ್ರುಪದನು ದ್ರೋಣರಲ್ಲಿ ಒಂದು ಮಾತನ್ನು ಹೇಳುತ್ತಾನೆ. "ನಾನು ದೊಡ್ಡವನಾದ ಮೇಲೆ ರಾಜನಾಗುತ್ತೇನೆ. ಆಗ ನನ್ನ ರಾಜ್ಯದಲ್ಲಿ ಅರ್ಧ ಭಾಗವನ್ನು ನಿನಗೆ ಕೊಡುತ್ತೇನೆ". ಮುಂದೆ ದ್ರಪದನು ಪಾಂಚಾಲ ದೇಶದ ರಾಜನಾಗುತ್ತಾನೆ. ದ್ರೋಣಾಚಾರ್ಯರು ಕೃಪಾಚಾರ್ಯರ ತಂಗಿ ಆದಂತಹ ಕೃಪಿಯನ್ನು ವಿವಾಹವಾಗುತ್ತಾರೆ. ಅವರ ಮಗನೇ ಅಶ್ವತ್ಥಾಮ.

ಸಣ್ಣ ಮಗುವಾಗಿದ್ದಂತಹ ಅಶ್ವತ್ಥಾಮನಿಗೆ ಕುಡಿಯಲು ಬೇಕಾದಷ್ಟು ಹಾಲನ್ನು ಒದಗಿಸಲು ದ್ರೋಣಾಚಾರ್ಯರಿಗೆ ಸಾಧ್ಯವಾಗುತ್ತಿರಲಿಲ್ಲ. ಮನೆಯಲ್ಲಿ ಬಹಳಷ್ಟು ಬಡತನ ಇದ್ದುದ್ದರಿಂದ ದ್ರೋಣಾಚಾರ್ಯರಿಗೆ ತಮ್ಮ ಬಾಲ್ಯ ಸ್ನೇಹಿತನಾದ ದ್ರುಪದನ ನೆನಪಾಗುತ್ತದೆ. ಒಂದು ಹಸುವನ್ನು ದಾನವಾಗಿ ಪಡೆಯುವ ಉದ್ದೇಶದಿಂದ ದ್ರೋಣಾಚಾರ್ಯರು ದ್ರುಪದನ ಬಳಿಗೆ ಹೋಗುತ್ತಾರೆ. ದ್ರೋಣಾಚಾರ್ಯರು ರಾಜ ದ್ರಪದನಿಗೆ ಸ್ನೇಹ ಹಸ್ತವನ್ನು ಚಾಚಿದಾಗ ದ್ರುಪದನು ದ್ರೋಣಾಚಾರ್ಯರಿಗೆ ಅವಮಾನವನ್ನು ಮಾಡುತ್ತಾನೆ.

ದ್ರುಪದ ರಾಜನಿಂದ ದ್ರೋಣಾಚಾರ್ಯರಿಗೆ ಅವಮಾನ ಆಗಿದ್ದು ಯಾಕೆ?

"ಸ್ನೇಹವೆಂಬುದು ಸಮಾನರಲ್ಲಿ ಮಾತ್ರ ಸಾಧ್ಯ. ನಾವಿಬ್ಬರು ಯಾವ ರೀತಿಯಲ್ಲಿಯೂ ಸಮಾನರಲ್ಲ. ನಾನು ಒಬ್ಬ ರಾಜ. ನಿನ್ನಂತಹ ಬಡವನು ನನ್ನ ಸ್ನೇಹಿತನಾಗಲು ಸಾಧ್ಯವಿಲ್ಲ". ದ್ರುಪದ ರಾಜನಿಂದ ಅವಮಾನಿತರಾದ ದ್ರೋಣಾಚಾರ್ಯರು ಪರಶುರಾಮರ ಬಳಿಗೆ ಹೋಗಿ ಧನು ವಿದ್ಯೆಯನ್ನು ಅಭ್ಯಾಸ ಮಾಡುತ್ತಾರೆ. ಮುಂದೆ ಅವರು ಹಸ್ತಿನಾಪುರದ ರಾಜಕುಮಾರರಿಗೆ ಧನುರ್ ವಿದ್ಯೆಯನ್ನು ಕಲಿಸಿಕೊಡುವ ಕೆಲಸಕ್ಕೆ ನೇಮಕಗೊಳ್ಳುತ್ತಾರೆ. ವಿದ್ಯಾಭ್ಯಾಸವನ್ನು ಪೂರ್ಣವಾಗಿ ರಾಜಕುಮಾರರಿಗೆ ಕರೆಸಿಕೊಟ್ಟ ನಂತರ ಗುರುದಕ್ಷಿಣೆಯಾಗಿ ದ್ರುಪದನನ್ನು ಯುದ್ಧದಲ್ಲಿ ಸೋಲಿಸಿ ಬಂಧಿಸಬೇಕೆಂದು ಶಿಷ್ಯರಿಗೆ ಆಜ್ಞಾಪಿಸುತ್ತಾರೆ.

ಭೀಮಾರ್ಜುನರು ತಮ್ಮ ಪರಾಕ್ರಮದಿಂದ ದ್ರುಪದನನ್ನು ಯುದ್ಧದಲ್ಲಿ ಸೋಲಿಸಿ ದ್ರೋಣಾಚಾರ್ಯರ ಬಳಿ ಹಾಜರುಪಡಿಸುತ್ತಾರೆ. ದ್ರುಪದನು ತನಗೆ ಮಾಡಿದ ಅವಮಾನಕ್ಕೆ ಪ್ರತಿಕಾರವಾಗಿ ದ್ರೋಣಾಚಾರ್ಯರು ಆತನ ಪಾಂಚಾಲ ದೇಶದ ಅರ್ಧಭಾಗವನ್ನು ತಾವು ಪಡೆದುಕೊಂಡು ಉಳಿದರ್ಧ ಭಾಗವನ್ನು ದ್ರುಪದನಿಗೆ ದಾನವಾಗಿ ನೀಡುತ್ತಾರೆ. ದ್ರೋಣಾಚಾರ್ಯರಿಂದ ಅವಮಾನಕ್ಕೆ ಒಳಗಾದ ರಾಜದ್ರುಪದನು ದ್ರೋಣಾಚಾರ್ಯರನ್ನು ಕೊಲ್ಲುವಂತಹ ಒಬ್ಬ ಮಗನನ್ನು ಯಜ್ಞದ ಮೂಲಕ ಪಡೆಯುತ್ತಾರೆ. ಆತನ ಹೆಸರೇ ದೃಷ್ಟದ್ಯುಮ್ನ. ದ್ರೋಣಾಚಾರ್ಯರನ್ನು ಸಾಯಿಸುವ ಉದ್ದೇಶದಿಂದಲೇ ಹುಟ್ಟಿರುವ ದೃಷ್ಟ ದ್ಯಾಮನು ಯುದ್ಧಕಲೆಯನ್ನು ಕಲಿಯಲು ದ್ರೋಣಾಚಾರ್ಯರ ಬಳಿಗೆ ಬಂದಾಗ

ದುರ್ಯೋಧನನಿಗೆ ದ್ರೋಣಾಚಾರ್ಯರ ಮೇಲೆ ಅಸಮಾಧಾನ

ದ್ರೋಣಾಚಾರ್ಯರು ಉದಾರ ಮನಸ್ಸಿನಿಂದ ಆತನಿಗೆ ಧನುವಿದ್ಯೆಯನ್ನು ಕಳಿಸಿಕೊಟ್ಟರು. ಈ ವಿಷಯದ ಕುರಿತಾಗಿ ದುರ್ಯೋಧನನಿಗೆ ದ್ರೋಣಾಚಾರ್ಯರ ಮೇಲೆ ಅಸಮಾಧಾನವಿತ್ತು. ದೃಷ್ಟ ದಿನಾನೂ ಪಾಂಡವರ ಪಕ್ಷವನ್ನು ಸೇರಿ ಸೇನಾ ವ್ಯೂಹವನ್ನು ರಚಿಸಿದ್ದನು. ಇದೆಲ್ಲದಕ್ಕೂ ದ್ರೋಣಾಚಾರ್ಯರು ದೃಷ್ಟಿಯಿಂದನ ವಿಷಯದಲ್ಲಿ ತೋರಿದ ಉದಾರತೆಯೇ ಕಾರಣ ಎಂಬುದು ದುರ್ಯೋಧನನ ವಾದ. ಇದೇ ರೀತಿಯ ಉದಾರತೆಯನ್ನು ಈ ಕುರುಕ್ಷೇತ್ರ ಯುದ್ಧದಲ್ಲೂ ಪಾಂಡವರ ಕುರಿತಾಗಿ ತೋರಿದರೆ ದುರ್ಯೋಧನನು ಯುದ್ಧವನ್ನು ಗೆಲ್ಲುವುದು ಅಸಾಧ್ಯವಾಗುತ್ತದೆ.

ದ್ರೋಣಾಚಾರ್ಯರು ತಮ್ಮ ಹಿಂದಿನ ದ್ವೇಷವನ್ನು ಮತ್ತೆ ನೆನಪಿಸಿಕೊಂಡು ಪಾಂಡವರ ವಿರುದ್ಧ ತಮ್ಮ ಸಂಪೂರ್ಣ ಶಕ್ತಿಯನ್ನು ಪ್ರಯೋಗಿಸಿ ಯುದ್ಧಮಾಡುವಂತಾಗಲಿ ಎಂಬುದು ದುರ್ಯೋಧನನ ಅಪೇಕ್ಷೆ.

ಆಧಾರ: ಭಗವದ್ಗೀತಾ ಯಥಾರೂಪ, ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತುಆಚಾರ್ಯರ

ಭಗವದ್ಗೀತಾ ಯಥಾರೂಪದ ನಿರೂಪಕರು - ಭಕ್ತಿ ಶಾಸ್ತ್ರೀ ಸುಬುದ್ಧಿ ದಾಮೋದರ ದಾಸ್, ಇಸ್ಕಾನ್ ಮಂಗಳೂರು ( ಇವರು ಡಾ.ಸುಜೇಶ್‌ ಕುಮಾರ್. ಮೂಡಬಿದ್ರಿಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್‌ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.