ಭಗವದ್ಗೀತೆ: ಒಂದು ಧರ್ಮಶಾಸ್ತ್ರ, ಒಬ್ಬ ದೇವರು, ಒಂದು ಧರ್ಮ, ಒಂದು ಕಾರ್ಯ ಬೇಕೆಂದು ಜನ ಹಂಬಲಿಸುತ್ತಾರೆ; ಗೀತೆಯ ಸಾರಾಂಶ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಒಂದು ಧರ್ಮಶಾಸ್ತ್ರ, ಒಬ್ಬ ದೇವರು, ಒಂದು ಧರ್ಮ, ಒಂದು ಕಾರ್ಯ ಬೇಕೆಂದು ಜನ ಹಂಬಲಿಸುತ್ತಾರೆಂಬ ಗೀತೆಯ ಸಾರಾಂಶವನ್ನು ತಿಳಿಯಿರಿ.
ಭಾರತಾಮೃತಸರ್ವಸ್ವಂ ವಿಷ್ಣುವಸ್ತ್ರಾದ್ವಿನಿಃಸೃತಮ್ |
ಗೀತಾಗನ್ಗೋದಕಂ ಪೀತ್ವಾ ಪುನರ್ಜನ್ಮ ನ ವಿದ್ಯತೇ ||
"ಗಂಗಾಜಲವನ್ನು ಕುದಿದವನಿಗೇ ಮುಕ್ತಿಯು ದೊರಕುತ್ತದೆ ಎಂದ ಮೇಲೆ ಭಗವದ್ಗೀತೆಯ ಅಮೃತವನ್ನು ಕುಡಿದವನ ವಿಷಯ ಹೇಳುವುದೇನಿದೆ? ಭಗವದ್ಗೀತೆಯು ಮಹಾಭಾರತದ ಅಮೃತಸರ್ವಸ್ವ. ಅದನ್ನು ಮೂಲ ವಿಷ್ಣುವಾದ ಶ್ರೀಕೃಷ್ಣನೇ ಹೇಳಿದ್ದಾನೆ" (ಗೀತಾಮಹಾತ್ಮ್ಯ 5).
ಭಗವದ್ಗೀತೆಯು ದೇವೋತ್ತಮ ಪರಮ ಪುರುಷನ ಬಾಯಿಂದ ಬಂದಿದೆ; ಗಂಗೆಯು ಭಗವಂತನ ಪಾದಕಮಲಗಳಿಂದ ಹರಿದಿದೆ ಎಂದು ಹೇಳಲಾಗಿದೆ. ಭಗವಂತನ ಬಾಯಿಗೂ ಪಾದಗಳಿಗೂ ವ್ಯವತ್ಯಾಸವಿಲ್ಲ. ಆದರೆ ನಿಷ್ಪಕ್ಷಪಾತ ದೃಷ್ಟಿಯಿಂದ ನೋಡಿದಾಗ ಭಗವದ್ಗೀತೆಯು ಗಂಗಾಜಲಕ್ಕಿಂತ ಹೆಚ್ಚಿನ ಮಹತ್ವದ್ದು ಎಂದು ಅರ್ಥಮಾಡಿಕೊಳ್ಳಬಹುದು.
ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನನ್ದನಃ |
ಪಾರ್ಥೋವತ್ಸಃಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ ||
"ಭಗವದ್ಗೀತೆಯು ಗೀತೋಪನಿತ್ತು. ಎಲ್ಲ ಉಪನಿಷತ್ತುಗಳ ಸಾರ. ಅದು ಗೋವಿನಂತಿದೆ. ಗೋಪಾಲ ನಂದನನೆಂದು ಪ್ರಸಿದ್ಧವಾಗಿರುವ ಶ್ರೀಕೃಷ್ಣನು ಈ ಹಸುವಿನಿನ ಹಾಲವನ್ನು ಕರೆಯುತ್ತಿದ್ದಾನೆ. ಅರ್ಜನನು ಕರುವಿನಂತಿದ್ದಾನೆ. ಎಲ್ಲ ವಿದ್ವಾಂಸರೂ ಪರಿಶುದ್ಧ ಭಕ್ತರೂ ಭಗವದ್ಗೀತೆಯ ಹಾಲಿನ ಅಮೃತವನ್ನು ಕುಡಿಯುತ್ತಾರೆ". (ಗೀತಾಮಹಾತ್ಮ್ಯ 6)
ಏಕಂ ಶಾಸ್ತ್ರಂ ದೇವಕೀಪುತ್ರಗೀತಮ್ ಏಕೋ ದೇವೋ ದೇವಕೀಪುತ್ರ ಏನ |
ಏಕೋ ಮನ್ತ್ರಸ್ತಸ್ಯ ನಾಮಾನಿ ಯಾನಿ ಕರ್ಮಾಪ್ಯೇಕಂ ತಸ್ಯ ದೇವಸ್ಯ ಸೇವಾ ||
ಇಂದಿನ ದಿನದಲ್ಲಿ ಜನರು ಒಂದು ಧರ್ಮಶಾಸ್ತ್ರ, ಒಬ್ಬ ದೇವರು, ಒಂದು ಧರ್ಮ, ಒಂದು ಕಾರ್ಯ ಇವು ಬೇಕೆಂದು ಹಂಬಲಿಸುತ್ತಾರೆ. ಆದುದರಿಂದ, ಏಕಂ ಶಾಸ್ತ್ರಂ ದೇವಕೀಪುತ್ರಗೀತಮ್ - ಇಡೀ-ಜಗತ್ತಿಗೆ ಒಂದೇ ಒಂದು ಧರ್ಮಗ್ರಂಥ - ಭಗವದ್ಗೀತಾ ಇರಲಿ. ಏಕೋ ದೇವೋ ದೇವಕೀ ಪುತ್ರ ಏನ - ಇಡೀ ಜಗತ್ತಿಗೆ ಒಬ್ಬನೇ ದೇವರು - ಶ್ರೀಕೃಷ್ಣ-ಇರಲಿ - ಅವನ ನಾಮ - ಸಂಕೀರ್ತನೆ - ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ - ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ. ಕರ್ಮಾಪಿ ಏಕಂ ತಸ್ಯ ದೇವಸ್ಯ ಸೇವಾ - ಒಂದೇ ಕೆಲಸವಿರಲಿ, ಅದು ದೇವೋತ್ತಮ ಪರಮ ಪುರುಷನ ಸೇವೆ.
ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಶ್ರೀಕೃಷ್ಣನ ಉಪದೇಶ
ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ.
ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಮೇಲಿನಂತೆ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಡುತ್ತಾನೆ ಎನ್ನುವುದು ಶ್ರೀಕೃಷ್ಣನ ಮಾತು.
ಭಗವದ್ಗೀತೆಯಲ್ಲಿ 18 ಅಧ್ಯಾಯಗಳು, 720 ಶ್ಲೋಕಗಳನ್ನು ಹೇಳಲಾಗಿದೆ. ಇದರಲ್ಲಿನ ಧರ್ಮೋಪದೇಶಗಳು ಮನುಷ್ಯರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕಾರಿಯಾಗಿದೆ. ಇದರಲ್ಲಿನ ಅಂಶಗಳನ್ನು ಜೀವನದಲ್ಲಿ ಅವಳಡಿಸಿಕೊಂಡಾಗ ಶಾಂತಿ, ನೆಮ್ಮದಿ ಹಾಗೂ ಅನ್ಯೋನ್ಯವಾಗಿ ಬಾಳಿ ಬದುಕಬಹುದಾಗಿದೆ.