ಭಗವದ್ಗೀತೆ: ಭಗವಂತನಲ್ಲಿ ಬಲವಾದ ಪ್ರೇಮ ಪ್ರಜ್ಞೆ ಹೊಂದಿದ್ದರೆ ನಾವು ಮಾಡುವ ಪ್ರತಿ ಕೆಲಸದಲ್ಲಿ ಜಯ; ಗೀತೆಯ ಈ ಅರ್ಥ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಭಗವಂತನಲ್ಲಿ ಬಲವಾದ ಪ್ರೇಮ ಪ್ರಜ್ಞೆ ಹೊಂದಿದ್ದರೆ ನಾವು ಮಾಡುವ ಪ್ರತಿ ಕೆಲಸದಲ್ಲಿ ಜಯ ಪಡೆಯುತ್ತೇವೆ ಎಂಬ ಗೀತೆಯಲ್ಲಿ ಅರ್ಥವನ್ನು ತಿಳಿಯಿರಿ.
ತಸ್ಮಾತ್ಸವೇಷು ಕಾಲೇಷು ಮಾಮ್ ಅನಸ್ವರ ಯುಧ್ಯ ಚ |
ಮರ್ಪಿತಮನೋಬುದ್ಧಿರ್ಮಾವೇವೈಷ್ಯಸ್ಯಸಂಶಯಃ ||
"ಅರ್ಜುನ, ಆದುದರಿಂದ ನೀವು ಯಾವಾಗಲೂ ನನ್ನ ಕೃಷ್ಣರೂಪವನ್ನು ನೆನೆಯಬೇಕು, ಅದೇ ಕಾಲದಲ್ಲಿ ಯುದ್ಧ ಮಾಡುವ ನಿನ್ನ ನಿಯತ ಕರ್ತವ್ಯವನ್ನು ಮುಂದುರಿಸಬೇಕು. ನಿನ್ನೆ ಕರ್ಮಗಳನ್ನು ನನಗೆ ಸಮರ್ಪಿಸಿ, ನಿನ್ನ ಮನಸ್ಸು ಮತ್ತು ಬುದ್ಧಿಗಳನ್ನು ನನ್ನಲ್ಲಿ ಸ್ಥಿರಗೊಳಿಸಿದ್ದರೆ ನಿಸ್ಸಂಶಯವಾಗಿಯೂ ನನ್ನನ್ನು ಹೊಂದುವೆ." (ಗೀತಾ 8.7)
ನನ್ನನ್ನು ಸ್ಮರಿಸಬೇಕು, ನಿನ್ನ (ಅರ್ಜುನನ) ಸಹಜ ಧರ್ಮವನ್ನು ಬಿಟ್ಟುಬಿಡಬೇಕು ಎಂದೇನೂ ಕೃಷ್ಣನು ಅರ್ಜುನನಿಗೆ ಉಪದೇಶಮಾಡುವುದಿಲ್ಲ. ಇಲ್ಲವೇ ಇಲ್ಲ, ಕಾರ್ಯಸಾಧ್ಯವಲ್ಲದಿರುವುದನ್ನು ಭಗವಂತನು ಸೂಚಿಸುವುದೇ ಇಲ್ಲ. ಈ ಐಹಿಕ ಜಗತ್ತಿನಲ್ಲಿ ದೇಹಪಾಲನೆಗಾಗಿ ಮನುಷ್ಯನು ಕೆಲಸ ಮಾಡಲೇಬೇಕು. ಮಾಡುವ ಕೆಲಸಕ್ಕೆ ಮನುಗುಣವಾಗಿ ಮಾನವ ಸಮಾಜವನ್ನು ನಾಲ್ಕು ವರ್ಗಗಳಾಗಿ ವಿಭಾಗಿಸಿದೆ.
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ಬ್ರಾಹ್ಮಣ ವರ್ಗವು ಎಂದರೆ ಬುದ್ಧಿವರ್ಗವು ಒಂದು ರೀತಿಯಲ್ಲಿ ಕೆಲಸ ಮಾಡುತ್ತದೆ. ಕ್ಷತ್ರಿಯ ವರ್ಗವು ಎಂದರೆ ಆಡಳಿತ ವರ್ಗವು ಮತ್ತೊಂದು ರೀತಿಯ ಕೆಲಸ ಮಾಡುತ್ತದೆ. ವ್ಯಾಪಾರಿಗಳು ಮತ್ತು ಕಾರ್ಮಿಕರು ಎಲ್ಲರೂ ತಮ್ಮ ತಮ್ಮ ನಿರ್ದಿಷ್ಟ ಕರ್ತವ್ಯಗಳಲ್ಲಿ ತೊಡಗಿರುತ್ತಾರೆ. ಮನುಷ್ಯ ಸಮಾಜದಲ್ಲಿ ಬಬ್ಬಾತ ಕಾರ್ಮಿಕನಾಗಿರಬಹುದು, ವ್ಯಾಪಾರಿಯಾಗಿರಬಹುದು, ಆಡಳಿತಗಾರನಾಗಿರಬಹುದು, ರೈತನಾಗಿರಬಹುದು; ಇಲ್ಲವೇ ಅತ್ಯುಚ್ಛವರ್ಗಕ್ಕೆ ಸೇರಿ ಸಾಹಿತಿಯಾಗಿರಬಹುದು, ವಿಜ್ಞಾನಿಯಾಗಿರಬಹುದು, ಧರ್ಮಶಾಸ್ತ್ರತಜ್ಞನಾಗಿರಬಹುದು.
ಜೀವನ ನಿರ್ವಹಣೆಗಾಗಿ ಪ್ರತಿಯೊಬ್ಬರು ತಮ್ಮ ಕೆಲಸ ಮಾಡಲೇಬೇಕು
ಆದರೆ ತನ್ನ ಜೀವನ ನಿರ್ವಹಣೆಗಾಗಿ ಆತನು ಕೆಲಸ ಮಾಡಲೇಬೇಕು. ಆದುದರಿಂದ ಅರ್ಜುನನಿಗೆ ಅವನು ತನ್ನ ಸಹಜ ಧರ್ಮವನ್ನು ಬಿಡಬೇಕಾಗಿಲ್ಲ ಎಂದು ಭಗವಂತನು ಹೇಳುತ್ತಾನೆ. ಆದರೆ ತನ್ನ ಧರ್ಮದಲ್ಲಿ ಉದ್ಯುಕ್ತನಾಗಿರುವಾಗ ಅವನು ಕೃಷ್ಣನನ್ನು ಸ್ಮರಿಸುತ್ತಿರಬೇಕು (ಮಾಮ್ ಅನುಸ್ಮರ). ಆತನು ಜೀವನ ನಿರ್ವಹಣೆಗಾಗಿ ಶ್ರಮಿಸುತ್ತಿರುವಾಗ ಕೃಷ್ಣಸ್ಮರಣೆಯನ್ನು ಅಭ್ಯಾಸ ಮಾಡದಿದ್ದರೆ ಮರಣಕಾಲದಲ್ಲಿ ಕೃಷ್ಣನನ್ನು ಸ್ಮರಿಸುವುದು ಅವನಿಗೆ ಸಾಧ್ಯವಾಗುವುದಿಲ್ಲ.
ಚೈತನ್ಯ ಮಹಾಪ್ರಭುಗಳು ಇದೇ ಉಪದೇಶ ಮಾಡುತ್ತಾರೆ. ಅವರು, ಕೀರ್ತನೀಯಃ ಸದಾ ಹರಿಃ ಎಂದರೆ ಮನುಷ್ಯನು ಸದಾ ಭಗವಂತನ ನಾಮ ಸಂಕೀರ್ತನೆಯನ್ನು ಅಭ್ಯಾಸ ಮಾಡುತ್ತಿರಬೇಕು ಎಂದು ಹೇಳಿದ್ದಾರೆ. ಭಗವಂತನೂ, ಭಗವಂತನ ಹೆಸರುಗಳೂ ಅಭಿನ್ನ. ಆದುದರಿಂದ ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ನನ್ನನ್ನು ಸ್ಮರಿಸುತ್ತಿರು ಎನ್ನುವ ಆದೇಶವೂ, ಚೈತನ್ಯ ಮಹಾಪ್ರಭುಗಳು ಸದಾ ಶ್ರೀಕೃಷ್ಣನ ಹೆಸರುಗಳನ್ನು ಸಂಕೀರ್ತನೆ ಮಾಡುತ್ತಿರು ಎನ್ನುವ ಆದೇಶವೂ ಬೇರೆ ಬೇರೆಯಲ್ಲ. ಕೃಷ್ಣನ ನಾಮವೂ ಕೃಷ್ಣನೂ ಬೇರೆಯಲ್ಲವಾದ್ದರಿಂದ ಈ ಆದೇಶವೂ ಬೇರೆಯಲ್ಲ.
ಭಗವಂತನ ಸಂಕೀರ್ತನೆ ಮೂಲಕ ಬದುಕಿನ ಕರ್ಮಗಳನ್ನ ಸೂಪಿಸಿಕೊಳ್ಳಬೇಕು
ಕೃಷ್ಣನ ನಾಮವೂ ಕೃಷ್ಣನೂ ಬೇರೆಯಲ್ಲವಾದ್ದರಿಂದ ಈ ಆದೇಶಗಳೂ ಬೇರೆಯಲ್ಲ. ಪರಿಪೂರ್ಣ ನೆಲೆಯಲ್ಲಿ ಉಲ್ಲೇಖ ಮತ್ತು ಉಲ್ಲೇಖಿತಗಳಲ್ಲಿ ವ್ಯತ್ಯಾಸವಿಲ್ಲ. ಆದುದರಿಂದ ನಾವು ಸದಾ ಭಗವಂತನನ್ನು ಸ್ಮರಿಸುವುದು ಸಾಧ್ಯವಾಗುವಂತೆ ಅವನ ನಾಮಗಳ ಸಂಕೀರ್ತನೆಯನ್ನು ಮಾಡುತ್ತಾ ನಮ್ಮ ಬದುಕಿನ ಕರ್ಮಗಳನ್ನು ರೂಪಿಸಿಕೊಳ್ಳಬೇಕು. ಭಗವಂತನನ್ನು ದಿನದಲ್ಲಿ ಇಪ್ಪತ್ತುನಾಲ್ಕು ಗಂಟೆಗಳ ಕಾಲವೂ ಸ್ಮರಿಸವುದನ್ನು ಅಭ್ಯಾಸಮಾಡಬೇಕು.
ಇದು ಹೇಗೆ ಸಾಧ್ಯ? ಆಚಾರ್ಯರು ಈ ಉದಾಹರಣೆಯನ್ನು ಕೊಡುತ್ತಾರೆ. ಮದುವೆಯಾದ ಹೆಂಗಸೊಬ್ಬಳು ಬೇರೊಬ್ಬ ಮನುಷ್ಯನನ್ನು ಪ್ರೀತಿಸುತ್ತಿದ್ದರೆ ಅಥವಾ ಒಬ್ಬ ಮನುಷ್ಯನು ತನ್ನ ಹೆಂಡತಿಯಲ್ಲದಳವನ್ನು ಪ್ರೀತಿಸುತ್ತಿದ್ದರೆ ಆ ಪ್ರೀತಿಯು ಬಹಳ ಬಲವಾದದ್ದು ಎಂದು ಭಾವಿಸಲ್ಪಡುತ್ತದೆ. ಹೀಗೆ ಅನುರಕ್ತರಾದವರು ಸದಾ ತಮ್ಮ ಪ್ರೀತಿಪಾತ್ರರಾದವರನ್ನೇ ಕುರಿತು ಯೋಚಿಸುತ್ತಿರುತ್ತಾರೆ. ತನ್ನ ಪ್ರೀಯನನ್ನು ಕುರಿತು ಯೋಚಿಸುತ್ತಿರುವ ಪತ್ನಿಯು ತನ್ನ ಮನೆಗೆಲಸದಲ್ಲಿ ತೊಡಗಿದ್ದಾಗಲೂ ಸದಾ ಅವನನ್ನು ಭೇಟಿ ಮಾಡುವ ವಿಷಯವನ್ನೇ ಯೋಚಿಸುತ್ತಿರುತ್ತಾಳೆ.
ಪ್ರಬಲವಾದ ಪ್ರೇಮಪ್ರಜ್ಞೆ ಅಗತ್ಯ
ಅಷ್ಟೇ ಅಲ್ಲ, ತನ್ನ ಗಂಡನಿಗೆ ಅನುಮಾನ ಬರದಿರಲೆಂದು ತನ್ನ ಮನೆಗೆಲಸವನ್ನು ಇನ್ನೂ ಎಚ್ಚರಿಕೆಯಿಂದ ಮಾಡುತ್ತಾಳೆ. ಇದೇ ರೀತಿಯಲ್ಲಿ ನಾವು ಸದಾ ಪರಮ ಪ್ರಿಯನಾದ ಶ್ರೀಕೃಷ್ಣನನ್ನು ಸ್ಮರಿಸುತ್ತಿರಬೇಕು. ಅದೇ ಕಾಲದಲ್ಲಿ ನಮ್ಮ ಐಹಿಕ ಕರ್ತವ್ಯಗಳನ್ನು ಚೆನ್ನಾಗಿ ನಿರ್ವಹಿಸಬೇಕು. ಹೀಗೆ ಮಾಡಲು ಪ್ರಬಲವಾದ ಪ್ರೇಮಪ್ರಜ್ಞೆ ಅಗತ್ಯ. ನಮಗೆ ಭಗವಂತನಲ್ಲಿ ಬಲವಾದ ಪ್ರೇಮ ಪ್ರಜ್ಞೆ ಇದ್ದರೆ ನಾವು ನಮ್ಮ ಕರ್ತವ್ಯವನ್ನೂ ಮಾಡಬಹುದು, ಅದೇ ಕಾಲದಲ್ಲಿ ಭಗವಂತನನ್ನೂ ಸ್ಮರಿಸಬಹುದು.
ಆದರೆ ನಾವು ಈ ಪ್ರೇಮಪ್ರಜ್ಞೆಯನ್ನು ಬೆಳಸಿಕೊಳ್ಳಬೇಕು. ಉದಾಹರಣೆಗೆ ಅರ್ಜುನನು ಸದಾ ಕೃಷ್ಣನನ್ನು ಕುರಿತು ಯೋಚಿಸುತ್ತಿದ್ದ. ಅವನು ಸದಾ ಕೃಷ್ಣನ ಸುಖನಾಗಿದ್ದ, ಅದೇ ಕಾಲದಲ್ಲಿ ಯೋಧನಾಗಿದ್ದ. ಅವನು ಯುದ್ಧಮಾಡುವುದನ್ನು ಬಿಟ್ಟು ಧ್ಯಾನ ಮಾಡಲು ಕಾಡಿಗೆ ಹೋಗಬೇಕೆಂದು ಕೃಷ್ಣನು ಉಪದೇಶ ಮಾಡಲಿಲ್ಲ. ಶ್ರೀಕೃಷ್ಣನು ಯೋಗ ವಿಧಾನವನ್ನು ಅರ್ಜುನನಿಗೆ ವಿವರಿಸಿದಾಗ ಅರ್ಜುನನು ಅದನ್ನು ಆಚರಿಸುವುದು ತನಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.