Bhagavad Gita: ಕಷ್ಟದಲ್ಲಿರುವವರು ಸೇರಿ ಈ 4 ವರ್ಗದವರು ಭಗವಂತನನ್ನು ಪೂಜಿಸುತ್ತಾರೆ; ಗೀತೆಯ ಸಾರಾಂಶ ತಿಳಿಯಿರಿ-spiritual news bhagavad gita updesh lord krishna 4 types of people will worship god bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಕಷ್ಟದಲ್ಲಿರುವವರು ಸೇರಿ ಈ 4 ವರ್ಗದವರು ಭಗವಂತನನ್ನು ಪೂಜಿಸುತ್ತಾರೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita: ಕಷ್ಟದಲ್ಲಿರುವವರು ಸೇರಿ ಈ 4 ವರ್ಗದವರು ಭಗವಂತನನ್ನು ಪೂಜಿಸುತ್ತಾರೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita Updesh: ಕಷ್ಟದಲ್ಲಿರುವವರು ಸೇರಿ ಈ ನಾಲ್ಕು ವರ್ಗದವರು ಭಗವಂತನನ್ನು ಪೂಜಿಸುತ್ತಾರೆ. ಯಾಕೆ ಅವರನ್ನು ಈ ರೀತಿ ವರ್ಗೀಕರಿಸಲಾಗಿದೆ ಎಂಬುರ ಅಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ ಶ್ಲೋಕ 15 ಮತ್ತು 16 ರಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 15

ಜ್ಞಾನಯಜ್ಞೇನ ಚಾಪ್ಯನೇ ಯಜನ್ತೋ ಮಾಮುಪಾಸತೇ |

ಏಕತ್ವೇನ ಪೃಥಕ್ತ್ವೇನ ಬಹುಧಾ ವಿಶ್ವತೋಮುಖಮ್ ||15||

ಅನುವಾದ: ಜ್ಞಾನದ ಬೆಳವಣಿಗೆಯಿಂದ ಯಜ್ಞದಲ್ಲಿ ನಿರತರಾದ ಇತರರು ಭಗವಂತನನ್ನು ಅದ್ವಿತೀಯನೆಂದೂ ಹಲವು ರೂಪಗಳಲ್ಲಿ ಇರುವವನೆಂದೂ ಮತ್ತು ವಿಶ್ವರೂಪದಲ್ಲಿಯೂ ಪೂಜಿಸುತ್ತಾರೆ.

ಭಾವಾರ್ಥ: ಈ ಶ್ಲೋಕವು ಹಿಂದಿನ ಶ್ಲೋಕಗಳ ಸಾರಾಂಶ. ಕೃಷ್ಣಪ್ರಜ್ಞೆಯಲ್ಲಿ ಪರಿಶುದ್ಧರಾಗಿ ಕೃಷ್ಣನನ್ನು ಬಿಟ್ಟು ಬೇರೆ ಏನನ್ನೂ ತಿಳಿಯದವರಿಗೆ ಮಹಾತ್ಮರೆಂದು ಹೆಸರು ಎಂದು ಪ್ರಭುವು ಅರ್ಜುನನಿಗೆ ಹೇಳುತ್ತಾನೆ. ಆದರೂ ನಿಖರವಾಗಿ ಮಹಾತ್ಮರ ಸ್ಥಾನದಲ್ಲಿಯೇ ಇಲ್ಲದಿದ್ದರೂ ವಿವಿಧ ರೀತಿಗಳಲ್ಲಿ ಕೃಷ್ಣನನ್ನು ಪೂಜಿಸುವ ಇತರರು ಇದ್ದಾರೆ. ಅವರಲ್ಲಿ ಕೆಲವರನ್ನು ಸಂಕಟದಲ್ಲಿರುವವರು, ಆರ್ಥಿಕವಾಗಿ ಶಕ್ತರಾದವರು, ಕುತೂಹಲವುಳ್ಳವರು ಮತ್ತು ಜ್ಞಾನವನ್ನು ಬೆಳೆಸಿಕೊಳ್ಳುವುದರಲ್ಲಿ ನಿರತರಾದವರು ಎಂದು ಈಗಾಗಲೇ ವರ್ಣಿಸಲಾಗಿದೆ. ಆದರೆ ಇದಕ್ಕಿಂತ ಕೆಳಗಿನ ಮ್ಟಟದಲ್ಲಿರುವ ಇತರರೂ ಇದ್ದಾರೆ (Bhagavad Gita Updesh in Kannada).

ಇವರು ಮೂರು ವರ್ಗಗಳವರು - 1. ತಾನು ಪರಮ ಪ್ರಭುವಿನೊಂದಿಗೆ ಒಂದು ಎಂದು ಪೂಜಿಸುವವರು. 2. ಪರಮ ಪ್ರಭುವಿನ ಯಾವುದಾದರೂ ರೂಪವನ್ನು ಸೃಷ್ಟಿಸಿಕೊಂಡು ಅದನ್ನು ಪೂಜಿಸುವವರು ಮತ್ತು 3. ದೇವೋತ್ತಮ ಪರಮ ಪುರುಷನ ವಿಶ್ವರೂಪವನ್ನು ಒಪ್ಪಿಕೊಂಡು ಅದನ್ನು ಪೂಜಿಸುವವರು. ಈ ಮೂರಲ್ಲಿ ಅತ್ಯಂತ ಕೆಳಗಿನ ಹಂತದಲ್ಲಿರುವ, ತಾವು ಅದ್ವೈತಿಗಳೆಂದು ಭಾವಿಸಿಕೊಂಡು ತಮ್ಮನ್ನೇ ಪರಮ ಪ್ರಭು ಎಂದು ಪೂಜಿಸಿಕೊಳ್ಳುವವರು ಬಹು ಹೆಚ್ಚಿನ ಸಂಖ್ಯೆಯವರು. ಈ ಜನರು ತಾವೇ ಪರಮ ಪ್ರಭುವ ಎಂದು ಯೋಚಿಸುತ್ತಾರೆ ಮತ್ತು ಈ ಮನಸ್ಥಿತಿಯಲ್ಲಿ ತಮ್ಮನ್ನೇ ಪೂಜಿಸಿಕೊಳ್ಳುತ್ತಾರೆ. ಇದೂ ಒಂದು ರೀತಿಯ ದೇವರಪೂಜೆಯೇ. ಏಕೆಂದರೆ ಅವರು ತಾವವು ಐಹಿಕ ದೇಹವಲ್ಲ, ಆದರೆ ವಾಸ್ತವವಾಗಿ ಚೇತನಾತ್ಮರು ಎನ್ನುವುದನ್ನು ಅರ್ಥಮಾಡಿಕೊಳ್ಳುತ್ತಾರೆ.

ಕಡೆಯಪಕ್ಷ ಈ ಅರ್ಥವು ಪ್ರಧಾನವಾಗಿದೆ. ಸಾಮಾನ್ಯವಾಗಿ ನಿರಾಕಾರವಾದಿಗಳು ಪರಮ ಪ್ರಭುವನ್ನು ಈ ರೀತಿ ಪೂಜಿಸುತ್ತಾರೆ. ದೇವತೆಗಳನ್ನು ಪೂಜಿಸುವವರು, ಕಲ್ಪನಾಶಕ್ತಿಯಿಂದ ಯಾವುದೇ ರೂಪವನ್ನಾದರೂ ಪರಮ ಪ್ರಭುವಿನ ಸ್ವರೂಪವೆಂದು ಭಾವಿಸುವವರು ಎರಡನೆಯ ವರ್ಗದವರು. ಐಹಿಕ ವಿಶ್ವದ ಅಭಿವ್ಯಕ್ತಿಯಾಚೆ ಬೇರೇನನ್ನೂ ಕಲ್ಪಿಸಿಕೊಳ್ಳಬಾರದವರು ಮೂರನೆಯ ವರ್ಗದವರು. ಅವರು ವಿಶ್ವವನ್ನೇ ಪರಮ ಜೀವಿಯೆಂದು ಅಥವಾ ಅಸ್ತಿತ್ವದಲ್ಲಿರುವ ವಸ್ತುವೆಂದು ಭಾವಿಸಿ ಅದನ್ನೇ ಪೂಜಿಸುತ್ತಾರೆ. ವಿಶ್ವವೂ ಪರಮ ಪ್ರಭುವಿನ ಒಂದು ರೂಪ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 16

ಅಹಂ ಕ್ರತುರಹಂ ಯಜ್ಞಃ ಸ್ವಧಾಹಮಹಮೌಷಧಮ್ |

ಅನ್ತ್ರೋಹ ಮಹಮೇವಾಜ್ಯಮಹಮಗ್ನಿರಹಂ ಹುತಮ್ ||16||

ಅನುವಾದ: ನಾನು ವೈದಿಕವಿಧಿ, ನಾನೇ ಯಜ್ಞ, ನಾನೇ ಪಿತೃಗಳಿಗೆ ಅರ್ಪಿಸುವ ಆಹುತಿ, ನಾನೇ ಔಷಧ ಮೂಲಿಕೆ, ನಾನೇ ಮಂತ್ರ. ನಾನೇ ಆಜ್ಯ, ನಾನೇ ಅಗ್ನಿ, ನಾನೇ ಹುತ.

ಭಾವಾರ್ಥ: ಜ್ಯೋತಿಷ್ಟೋಮ ಎಂಬ ವೈದಿಕಯಜ್ಞವು ಕೃಷ್ಣನೇ. ಅವನೇ ಸ್ಮೃತಿಯಲ್ಲಿ ಹೇಳಿರುವ ಮಹಾಯಜ್ಞ. ಪಿತೃಲೋಕಕ್ಕೆ ಅಥವಾ ಪಿತೃಗಳನ್ನು ಪ್ರಸನ್ನಗೊಳಿಸಲು ಅರ್ಪಿಸುವ ತುಪ್ಪದ ರೂಪದ ಔಷಧ ಎಂದು ಭಾವಿಸುವ ಆಹುತಿಯೂ ಕೃಷ್ಣನೇ. ಈ ಸಂದರ್ಭದಲ್ಲಿ ಉಚ್ಚರಿಸುವ ಮಂತ್ರಗಳೂ ಕೃಷ್ಣ. ಯಜ್ಞಗಳಲ್ಲಿ ಅರ್ಪಿಸಲು ಮಾಡುವ ಹಲವು ಹಾಲಿನ ಪದಾರ್ಥಗಳೂ ಕೃಷ್ಣ. ಅಗ್ನಿಯೂ ಕೃಷ್ಣ. ಏಕೆಂದರೆ ಅಗ್ನಿಯು ಪಂಚಭೂತಗಳಲ್ಲಿ ಒಂದು. ಈ ಕಾರಣದಿಂದ ಅಗ್ನಿಯನ್ನು ಕೃಷ್ಣನಿಂದ ಬೇರ್ಪಟ್ಟ ಶಕ್ತಿ ಎಂದು ಹೇಳಲಾಗಿದೆ. ಎಂದರೆ, ವೇದಗಳ ಕರ್ಮಕಾಂಡ ಭಾಗದಲ್ಲಿ ಹೇಳಿರುವ ವೈದಿಕ ಯಜ್ಞಗಳು ಒಟ್ಟಿನಲ್ಲಿ ಕೃಷ್ಣನೇ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕೃಷ್ಣನ ಭಕ್ತಿಸೇವೆಯಲ್ಲಿ ನಿರತರಾದವರು ವೇದಗಳು ಮಾಡಬೇಕೆಂದು ಹೇಳಿರುವ ಎಲ್ಲ ಯಜ್ಞಗಳನ್ನೂ ಮಾಡಿದ್ದಾರೆ ಎಂದೇ ಅರ್ಥ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.