ಭಗವದ್ಗೀತೆ: ಅಲ್ಪಜ್ಞಾನಿಗಳು ಅಲಂಕಾರದ ಮಾತುಗಳಿಗೆ ಮೋಹಗೊಳ್ಳುತ್ತಾರೆ; ಗೀತೆಯ ಸಾರಾಂಶ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಅಲ್ಪಜ್ಞಾನಿಗಳು ಅಲಂಕಾರದ ಮಾತುಗಳಿಗೆ ಮೋಹಗೊಳ್ಳುತ್ತಾರೆ ಎಂಬ ಗೀತೆಯಲ್ಲಿನ ಸಾರಾಂಶ ತಿಳಿಯಿರಿ.
ಯಾಮಿಮಾಂ ಪುಷ್ಪಿತಾಂ ವಾಚಂ ಪ್ರವದನ್ತ್ಯ ವಿಪಶ್ಚಿತಃ |
ವೇದವಾದರತಾಃ ಪರ್ಥಾ ನಾನ್ಯದಸ್ತೀತಿ ವಾದಿನಃ ||42||
ಕಾಮಾತ್ಮಾನಃ ಸ್ವರ್ಗಪರಾ ಜನ್ಮ ಕರ್ಮಫಲಪ್ರದಾಮ್ |
ಕ್ರಿಯಾವಿಶೇಷಬಹುಲಾಂ ಭೋಗೈಶ್ವರ್ಯಗತಿಂ ಪ್ರತಿ ||43||
ಅಲ್ಪಜ್ಞಾನಿಗಳಾದವರು ವೇದಗಳಲ್ಲಿನ ಅಲಂಕಾರದ ಮಾತುಗಳಿಗೆ ಮೋಹಗೊಳ್ಳುತ್ತಾರೆ. ಈ ಮಾತುಗಳು ಸ್ವರ್ಗಲೋಕಗಳ ಪ್ರಾಪ್ತಿ, ಒಳ್ಳೆಯ ಜನ್ಮ, ಅಧಿಕಾರ ಮೊದಲಾದವುಗಳಿಗಾಗಿ ಹಲವಾರು ಕಾಮ್ಯಕರ್ಮಗಳನ್ನು ಪ್ರಶಂಸಿಸಿ ಹೇಳುತ್ತವೆ. ಇಂದ್ರಿಯ ತೃಪ್ತಿ ಮತ್ತು ಭೋಗಜೀವನಗಳನ್ನು ಬಯಸಿ ಇವಕ್ಕಿಂತ ಉತ್ತಮವಾದದು ಏನೂ ಇಲ್ಲ ಎಂದು ಅವರು ಹೇಳುತ್ತಾರೆ.
ಸಾಮಾನ್ಯವಾಗಿ ಜನರಿಗೆ ಬುದ್ಧಿ ಕಡಿಮೆ. ತಮ್ಮ ಅಜ್ಞಾನದಿಂದಾಗಿ ಅವರು ದೇದಗಳ ಕರ್ಮಕಾಂಡ ಭಾಗಗಳಲ್ಲಿ ಹೊಗಳಿರುವ ಫಲಾಕಾಂಕ್ಷಿ ಕರ್ಮಗಳಲ್ಲಿ ಆಸಕ್ತರಾಗುತ್ತಾರೆ. ಸ್ವರ್ಗದಲ್ಲಿ ಮಧುಪಾನ, ಸ್ತ್ರೀಸುಖಗಳಿಗೆ ಪರಮಾವಕಾಶ, ಪ್ರಾಪಂಚಿಕ ವೈಭವವು ಸರ್ವೇ ಸಮಾನ್ಯವಾಗದ್ದು. ಅಜ್ಞಾನಿಗಳಿಗೆ ಸ್ವರ್ಗದಲ್ಲಿ ಭೋಗಜೀವನದಿಂದ ಇಂದ್ರಿಯ ತೃಪ್ತಿ ಪಡೆಯಲು ಸಲಹೆಗಳಿಂತ ಬೇರೇನೂ ಬೇಡ.
ವೇದಗಳಲ್ಲಿ ಸ್ವರ್ಗಲೋಕಗಳನ್ನು ಸೇರಲು ಹಲವು ಯಾಗಗಳನ್ನು, ಮುಖ್ಯವಾಗಿ ಜ್ಯೋತಿಷ್ಟೋಮ ಯಾಗಗಳನ್ನು ಹೇಳಿದೆ. ಸ್ವರ್ಗಲೋಕಕ್ಕೆ ಏರಬೇಕೆಂದು ಬಯಸುವ ಯಾರೇ ಆಗಲಿ ಈ ಯಾಗಗಳನ್ನು ಮಾಡಬೇಕೆಂದು ಹೇಳಿದೆ. ಅಲ್ಪಜ್ಞಾನಿಗಳು ವೇದಜ್ಞಾನದ ಸಂಪೂರ್ಣ ಗುರಿಯೇ ಇದು ಎಂದು ಭಾವಿಸಿಕೊಂಡುಬಿಡುತ್ತಾರೆ. ಇಂತಹ ಅನನುಭವಿಗಳಿಗೆ ಕೃಷ್ಣ ಪ್ರಜ್ಞೆಯ ದೃಢಕಾರ್ಯದಲ್ಲಿ ನೆಲೆಸುವುದು ಬಹು ಕಷ್ಟ. ಮೂರ್ಖರು ಇಂತಹ ಆಕರ್ಷಣೆಯ ಪರಿಣಾಮವೇನೆಂದು ತಿಳಿಯದೆ ವಿಷವೃಕ್ಷಗಳ ಹೂಗಳಿಂದ ಆಕರ್ಷಿತರಾಗುತ್ತಾರೆ. ಅಜ್ಞಾನಿಗಳೂ ಇದೇ ರೀತಿ ಸ್ವರ್ಗದ ವೈಭವ ಮತ್ತು ಇಂದ್ರಿಯ ಭೋಗಗಳಿಂದ ಅಕರ್ಷಿತರಾಗುತ್ತಾರೆ.
ವೇದಗಳ ಕರ್ಮಕಾಂಡ ಭಾಗದಲ್ಲಿ, ಅಪಾಮ ಸೋಮಮ್ ಅಮೃತಾ ಅಭೂಮ ಎಂದೂ ಅಕ್ಷಯ್ಯಂ ಹ ವೈ ಚಾತುರ್ಮಾಸ್ಯ ಯಾಜಿನಃ ಸುಕೃತಮ್ ಭವತಿ ಎಂದೂ ಹೇಳಿದೆ. ಎಂದರೆ, ಚಾತುರ್ಮಾಸದ ವಿಧಗಳನ್ನು ಆಚರಿಸುವವರು ಅಮರರಾಗಲು, ಎಂದೆಂದೂ ಸುಖವಾಗಿರಲು ಸೋಮರಸ ಪಾನ ಮಾಡಲು ಅರ್ಹತೆಯನ್ನು ಪಡೆಯುತ್ತಾರೆ. ಈ ಭೂಮಿಯ ಮೇಲಿರುವಾಗಲೂ ಬಳಶಾಲಿಗಳಾಗಿ ಇಂದ್ರಿಯ ಭೋಗಗಳನ್ನು ಸವಿಯಲು ಸಮರ್ಥರಾಗಲು ಸೋಮರಸವನ್ನು ಪಾನ ಮಾಡಲು ಕೆಲವರು ತವಕಪಡುತ್ತಾರೆ.
ಇಂತಹ ವ್ಯಕ್ತಿಗಳಿಗೆ ಪ್ರಾಪಂಚಿಕ ಬಂಧನಗಳಿಂದ ಮುಕ್ತಿ ಪಡೆಯುವುದರಲ್ಲಿ ನಂಬಿಕೆ ಇಲ್ಲ. ಅವರಿಗೆ ವೇದದಲ್ಲಿ ಹೇಳಿರುವ ಯಜ್ಞಗಳ ವೈಭವಯುಕ್ತ ವಿಧಿಗಳಲ್ಲಿ ಮೋಹ. ಸಾಮಾನ್ಯವಾಗಿ ಅವರು ಇಂದ್ರಿಯ ಭೋಗಾಸಕ್ತರು. ವೈಭವಯುಕ್ತ ವಿಧಿಗಳಲ್ಲಿ ಮೋಹ. ಸಾಮಾನ್ಯವಾಗಿ ಅವರು ಇಂದ್ರಿಯ ಭೋಗಾಸಕ್ತರು. ಬದುಕಿನಲ್ಲಿ ಸ್ವರ್ಗಸದೃಶ ಭೋಗಗಳಲ್ಲದೆ ಬೇರೇನೂ ಇವರಿಗೆ ಬೇಡ.
ನಂದನಕಾನನವೆನ್ನುವ ಉದ್ಯಾನಗಳಿರುವುವೆಂದೂ, ಅಲ್ಲಿ ದೇವತಾಸದೃಶರಾದ ಲಾವಣ್ಯವತಿಯರ ಸಹವಾಸಕ್ಕೆ ಮತ್ತು ಸೋಮಪಾನಕ್ಕೆ ಸಮೃದ್ಧವಾಗಿ ಅವಕಾಶಗಳುಂಟು ಎಂದು ಹೇಳು್ತಾರೆ. ಇಂತಹ ದೈಹಿಕ ಸುಖಲು ನಿಶ್ಚಯವಾಗಿಯೂ ಭೋಗಾಸಕ್ತಿಯೇ. ಇಹಜಗತ್ತಿನ ಪ್ರಭುಗಳಾಗಿ ಮೆರೆಯುವ ಇಂತಹ ಪ್ರಾಪಂಚಿಕ, ಅಲ್ಪಕಾಲದ ಸುಖಕ್ಕಾಗಿಯೇ ಹಂಬಲಿಸುವ ಜನರೂ ಇದ್ದಾರೆ.