Bhagavad Gita: ತಂದೆ, ಗಂಡ ಸಹಿಸಿಕೊಳ್ಳುವಂತೆ ಭಗವಂತನೂ ಸಹಿಸಿಕೊಳ್ಳುತ್ತಾನೆ; ಗೀತೆಯ ಸಾರಾಂಶ ಹೀಗಿದೆ
Bhagavad Gita in Updesh: ತಂದೆ, ಗಂಡ ಅಥವಾ ಒಡೆಯನು ಸಹಿಸಿಕೊಳ್ಳುವಂತೆ ಕೃಷ್ಣನೂ ಸಹಿಸಿಕೊಳ್ಳುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 44 ಮತ್ತು 46ನೇ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 44
ತಸ್ಮಾತ್ ಪ್ರಣಮ್ಯ ಪ್ರಣಿಧಾಯ ಕಾಯಮ್
ಪ್ರಸಾದಯೇ ತ್ವಾಮಹಮೀಶಮೀಡ್ಯಮ್ |
ಪಿತೇವ ಪುತ್ಯಸ್ಯ ಸಖೇವ ಸುಖ್ಯುಃ
ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಮ್ ||44||
ಅನುವಾದ: ಪ್ರತಿಯೊಂದು ಜೀವಿಯು ಪೂಜಿಸಬೇಕಾದ ಪರಮ ಪ್ರಭುವು ನೀನು. ನಾನು ಸಾಷ್ಟಾಂಗ ನಮಸ್ಕಾರ ಮಾಡಿ ನನ್ನ ಗೌರವಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತೇನೆ. ನಿನ್ನ ದಯೆಯನ್ನು ಬೇಡುತ್ತೇನೆ. ತಂದೆಯು ಮಗನ ಅವಿಧೇಯತೆಯನ್ನು, ಸ್ನೇಹಿತನು ಸ್ನೇಹಿತನ ಅಧಿಕ ಪ್ರಸಂಗವನ್ನು ಮತ್ತು ಹೆಂಡತಿಯು ತನ್ನ ಗಂಡನ ಸಲಿಗೆಯನ್ನು ಕ್ಷಮಿಸುವಂತೆ, ನೀನು ನಾನು ಮಾಡಿರಬಹುದಾದ ತಪ್ಪುಗಳನ್ನು ಕ್ಷಮಿಸು (Bhagavad Gita in Updesh in Kannada).
ಭಾವಾರ್ಥ: ಕೃಷ್ಣನ ಭಕ್ತರು ಕೃಷ್ಣನೊಂದಿಗೆ ಬೇರೆ ಬೇರೆ ಸಂಬಂಧಗಳನ್ನು ಸಾಧಿಸಿಕೊಳ್ಳುತ್ತಾರೆ. ಕೃಷ್ಣನನ್ನು ಮಗನಂತೆ, ಗಂಡಂತೆ, ಸ್ನೇಹಿತನಂತೆ ಅಥವಾ ಒಡೆಯನಂತೆ ಕಾಣಬಹುದು. ಕೃಷ್ಣಾರ್ಜುನರದು ಸಖ್ಯಭಾವ. ತಂದೆ, ಗಂಡ ಅಥವಾ ಒಡೆಯನು ಸಹಿಸಿಕೊಳ್ಳುವಂತೆ ಕೃಷ್ಣನೂ ಸಹಿಸಿಕೊಳ್ಳುತ್ತಾನೆ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 46
ಕಿರೀಟಿನಂ ಗದಿನಂ ಚಕ್ರಹಸ್ತಮ್
ಇಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ |
ತೇನೈವ ರೂಪೇಣ ಚತುರ್ಭುಜೇನ
ಸಹಸ್ರಬಾಹೋ ಭವ ವಿಶ್ವಮೂರ್ತೇ ||46||
ಅನುವಾದ: ಹೇ ವಿಶ್ವಮೂರ್ತಿಯೇ, ಸಹಸ್ರಬಾಹುವೇ, ಕಿರೀಟಧಾರಿಯಾಗಿ ಗದೆ, ಚಕ್ರ, ಶಂಖ ಮತ್ತು ಪದ್ಮಗಳನ್ನು ಕೈಗಳಲ್ಲಿ ಹಿಡಿದಿರುವ ನಿನ್ನ ಚತುರ್ಭಜ ರೂಪವನ್ನು ನಾನು ನೋಡಲು ಬಯಸುತ್ತೇನೆ.
ಭಾವಾರ್ಥ: ಬ್ರಹ್ಮ ಸಂಹಿತೆಯಲ್ಲಿ (5.39) ರಾಮಾದಿ ಮೂರ್ತಿಷು ಕಲಾನಿಯಮೇನ ತಿಷ್ಠನ್ - ಭಗವಂತನು ನಿರಂತರವಾಗಿ ನೂರಾರು ಮತ್ತು ಸಾವಿರಾರು ರೂಪಗಳಲ್ಲಿ ನೆಲೆಸಿರುತ್ತಾನೆ ಮತ್ತು ರಾಮ, ನೃಸಿಂಹ, ನಾರಾಯಣ ಮೊದಲಾದವು ಮುಖ್ಯ ರೂಪಗಳು ಎಂದು ಹೇಳಿದೆ. ಕೃಷ್ಣನೇ ಮೂಲ ದೇವೋತ್ತಮ ಪುರುಷ ಮತ್ತು ಅವನ ತಾತ್ಕಾಲಿಕವಾಗಿ ವಿಶ್ವರೂಪವನ್ನು ಧರಿಸಿದ್ದಾನೆ ಎಂದು ಅರ್ಜುನನಿಗೆ ಗೊತ್ತಿತ್ತು. ಈಗ ಅವನು ದಿವ್ಯರೂಪವಾದ ನಾರಾಯಣ ರೂಪವನ್ನು ಕಾಣಬೇಕೆಂದು ಪ್ರಾರ್ಥಿಸುತ್ತಿದ್ದಾನೆ. ಕೃಷ್ಣನು ಮೂಲ ದೇವೋತ್ತಮ ಪರಮ ಪುರುಷನು ಮತ್ತು ಇತರ ಎಲ್ಲ ರೂಪಗಳಿಗೂ ಅವನೇ ಮೂಲ ಎಂದು ಶ್ರೀಮದ್ಭಾಗವತದಲ್ಲಿ ಹೇಳಿದೆ.
ಈ ಶ್ಲೋಕವು ಸಂದೇಹವಿಲ್ಲದಂತೆ ಈ ಹೇಳಿಕೆಯನ್ನು ಸಿದ್ಧಮಾಡಿ ತೋರಿಸುತ್ತದೆ. ಆತನು ತನ್ನ ಸ್ವಾಂಶ ವಿಸ್ತರಣೆಗಳಿಂದ ಭಿನ್ನನಲ್ಲ ಮತ್ತು ತನ್ನ ಅಸಂಖ್ಯಾತ ರೂಪಗಳಲ್ಲಿ ಯಾವ ರೂಪದಲ್ಲಿಯೇ ಆಗಲಿ ಅವನು ದೇವರು. ಈ ಎಲ್ಲ ರೂಪಗಳಲ್ಲಿಯೂ ಆತನು ಯುವಕನಂತೆ ಹೊಸ ಕಳೆಯಿಂದಿರುತ್ತಾನೆ. ಕೃಷ್ಣನನ್ನು ಬಲ್ಲವನು ಐಹಿಕ ಜಗತ್ತಿನ ಕಲ್ಮಷದ ಸೋಂಕಿನಿಂದ ಕೂಡಲೇ ಬಿಡುಗಡೆಯಾಗುತ್ತಾನೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)