Bhagavad Gita: ಮನುಷ್ಯ ಸದಾ ಭಗವಂತನನ್ನ ಧ್ಯಾನಿಸಬೇಕು, ಆತನೊಂದಿಗೆ ಅಲೌಕಿಕ ಸಂಬಂಧ ಸವಿಯಬೇಕು; ಗೀತೆಯ ಸಾರಾಂಶ ಹೀಗಿದೆ
Bhagavad Gita: ಮನುಷ್ಯ ಸದಾ ಭಗವಂತನನ್ನ ಧ್ಯಾನಿಸಬೇಕು, ಆತನೊಂದಿಗೆ ಅಲೌಕಿಕ ಸಂಬಂಧ ಸವಿಯಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 12 ಮತ್ತು 13ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ತಿಳಿಯಿರಿ.
ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ 12-13
ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್ |
ಪುರುಷಂ ಶಾಶ್ವತಂ ದಿವ್ಯಮಾದಿದೇವಮಜಂ ವಿಭುಮ್ ||12||
ಆಹುಸ್ತ್ವಾಮೃಷಯಃ ಸರ್ವೇ ದೇವರ್ಷಿರ್ನಾರದಸ್ತಥಾ |
ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ ||13||
12 ಮತ್ತು 13ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ಪರಮ ಬ್ರಹ್ಮನೇ ಎಲ್ಲಕ್ಕೂ ವಿಶ್ರಾಂತಿ ತಾಣ ಎಂದು ಕೇನ ಉಪನಿಷತ್ತಿನಲ್ಲಿ ಹೇಳಿದೆ. ಎಲ್ಲವೂ ತನ್ನನ್ನೇ ಆಧರಿಸಿದೆ ಎಂದು ಕೃಷ್ಣನು ಆಗಲೇ ವಿವರಿಸಿದ್ದಾನೆ. ಎಲ್ಲವೂ ಪರಮ ಪ್ರಭುವನ್ನು ಆಧರಿಸಿದೆ ಎಂದು ಕೃಷ್ಣನು ಆಗಲೇ ವಿವರಿಸಿದ್ದಾನೆ. ಎಲ್ಲವೂ ಪರಮ ಪ್ರಭುವನ್ನು ಆಧರಿಸಿದೆ. ಸದಾ ಅವನನ್ನು ಕುರಿತೇ ಯೋಚಿಸುವವರು ಮಾತ್ರ ಅವನ ಸಾಕ್ಷಾತ್ಕಾರವನ್ನು ಪಡೆಯುವರು ಎಂಬುದನ್ನು ಮುಂಡಕ ಉಪನಿಷತ್ತು ದೃಢಪಡಿಸುತ್ತದೆ. ಸದಾ ಕೃಷ್ಣನನ್ನು ಕುರಿತು ಯೋಚಿಸುವುದೇ ಸ್ಮರಣ. ಇದು ಭಕ್ತಿಸೇವೆಯ ವಿಧಾನಗಳಲ್ಲಿ ಒಂದು. ಕೃಷ್ಣನ ಭಕ್ತಿಸೇವೆಯಿಂದ ಮಾತ್ರ ಮನುಷ್ಯನು ತನ್ನಸ್ಥಿತಿಯನ್ನು ಅರ್ಥಮಾಡಿಕೂಳ್ಳಬಲ್ಲ ಮತ್ತು ಈ ಭೌತಿಕ ದೇಹವನ್ನು ತ್ಯಜಿಸಬಲ್ಲ.
ವೇದಗಳಲ್ಲಿ ಪರಮ ಪ್ರಭುವನ್ನು ಪರಿಶುದ್ಧರಲ್ಲಿ ಅತ್ಯಂತ ಪರಿಶುದ್ಧ ಎಂದು ಒಪ್ಪಿದೆ. ಕೃಷ್ಣನು ಪರಿಶುದ್ಧರಲ್ಲಿ ಪರಿಶುದ್ಧ ಎಂಬುದನ್ನು ಅರ್ಥಮಾಡಿಕೊಂಡವನು ಎಲ್ಲ ಪಾಪಕರ್ಮಗಳಿಂದ ಪರಿಶುದ್ಧನಾಗಬಲ್ಲ. ಪರಮ ಪ್ರಭುವಿಗೆ ಶರಣಾಗದಿದ್ದರೆ ಪಾಪಕ್ರಿಯೆಗಳ ಸೋಂಕಿನಿಂದ ಮನುಷ್ಯನು ಮನುಷ್ಯನು ಬಿಡುಗಡೆ ಹೊಂದಲಾರ. ಕೃಷ್ಣನನ್ನು ಪರಮ ಪರಿಶುದ್ಧನೆಂದು ಅರ್ಜುನನು ಒಪ್ಪಿಕೊಳ್ಳುವುದು ವೇದ ಸಾಹಿತ್ಯದ ಅನುಜ್ಞೆಗಳಿಗೆ ಅನುಗುಣವಾಗಿಯೇ ಇದೆ. ಇದನ್ನು ಮಹಾತ್ಮರು ದೃಢಪಡಿಸಿದ್ದಾರೆ. ಅವರಲ್ಲಿ ನಾರದನು ಮುಖ್ಯನು.
ಕೃಷ್ಣನು ದೇವೋತ್ತಮ ಪರಮ ಪುರುಷ, ಮನುಷ್ಯನು ಸದಾ ಅವನ್ನು ಧ್ಯಾನಿಸಬೇಕು ಮತ್ತು ಅವನೊಡನೆ ಅಲೌಕಿಕ ಸಂಬಂಧವನ್ನು ಸವಿಯಬೇಕು. ಆತನೇ ಪರಮ ಅಸ್ತಿತ್ವ. ಅವನು ದೈಹಿಕ ಅಗತ್ಯಗಳಿಂದಲೂ ಜನನ ಮರಣಗಳಿಂದಲೂ ಮುಕ್ತನು. ಇದನ್ನು ಅರ್ಜನನು ಮಾತ್ರವೇ ಅಲ್ಲ, ಎಲ್ಲ ವೇದ ಸಾಹಿತ್ಯವೂ, ಪುರಾಣಗಳೂ, ಇತಿಹಾಸಗಳೂ ದೃಢಪಡಿಸುತ್ತವೆ. ಎಲ್ಲ ವೇದ ಸಾಹಿತ್ಯವೂ ಕೃಷ್ಣನನ್ನು ಹೀಗೆಯೇ ವರ್ಣಿಸುತ್ತದೆ. ಸ್ವಯಂ ಪರಮ ಪ್ರಭುವೇ ನಾಲ್ಕನೆಯ ಅಧ್ಯಾಯದಲ್ಲಿ, ನನಗೆ ಹುಟ್ಟು ಇಲ್ಲವಾದರೂ ನಾನು ಭೂಮಿಯಲ್ಲಿ ಧರ್ಮಸಂಸ್ಥಾಪನೆಗಾಗಿ ಅವತರಿಸುತ್ತೇನೆ ಎಂದು ಹೇಳಿದ್ದಾನೆ. ಅವನೇ ಪರಮ ಮೂಲ. ಅವನಿಗೆ ಕಾರಣವಿಲ್ಲ. ಏಕೆಂದರೆ ಅವನು ಎಲ್ಲ ಕಾರಣಗಳ ಕಾರಣನು. ಎಲ್ಲವೂ ಅವನಿಂದ ಹೊರಹೊಮ್ಮುತ್ತದೆ. ಈ ಪರಿಪೂರ್ಣ ಜ್ಞಾನವನ್ನು ಪರಮ ಪ್ರಭುವಿನ ಕೃಪೆಯಿಂದ ಪಡೆಯಬಹುದು.
ಇಲ್ಲಿ ಅರ್ಜುನನು ಕೃಷ್ಣನ ಕೃಪೆಯಿಂದ ತನ್ನ ಭಾವನೆಗಳನ್ನು ಹೇಳುತ್ತಿದ್ದಾನೆ. ನಾವು ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಈ ಎರಡು ಶ್ಲೋಕಗಳಲ್ಲಿ ಹೇಳಿರುವುದನ್ನು ಒಪ್ಪಿಕೊಳ್ಳಬೇಕು. ಇದನ್ನು ಪರಂಪರಾ ಪದ್ಧತಿ. ಗುರುಶಿಷ್ಯ ಪರಂಪರೆಯ ಸ್ವೀಕಾರ ಎಂದು ಹೆಸರು. ಗುರುಶಿಷ್ಯ ಪರಂಪರೆಯಲ್ಲಿ ಇಲ್ಲದವನು ಭಗವದ್ಗೀತೆಯನ್ನು ಅರ್ಥ ಮಾಡಿಕೊಳ್ಳಲಾರ. ವಿದ್ವತ್ಪೂರ್ಣಶಿಕ್ಷಣ ಎಂದು ಕರೆಸಿಕೊಳ್ಳುವ ಶಿಕ್ಷಣದಿಂದ ಇದು ಸಾಧ್ಯವಾಗುವುದಿಲ್ಲ. ದುರದೃಷ್ಟದಿಂದ, ವೇದಸಾಹಿತ್ಯದಲ್ಲಿ ಇಷ್ಟೊಂದು ಸಾಕ್ಷ್ಯವಿದ್ದರೂ ತಮ್ಮ ವಿದ್ವತ್ಪೂರ್ಣಶಿಕ್ಷಣದ ಒಗ್ಗೆ ಹೆಮ್ಮೆಪಟ್ಟುಕೊಳ್ಳುವವರು, ಕೃಷ್ಣನು ಸಾಮಾನ್ಯ ಮನುಷ್ಯ ಎಂಬ ತಮ್ಮ ದೃಢ ನಂಬಿಕೆಗೇ ಅಂಟಿಕೊಳ್ಳುತ್ತಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)