ಭಗವದ್ಗೀತೆ: ಬೇಡನ ರೂಪದಲ್ಲಿ ಬಂದ ಶಿವನೊಂದಿಗೆ ಹೋರಾಡಿ ಆತನನ್ನೂ ಸೋಲಿಸಿದ್ದ ಅರ್ಜುನ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಬೇಡನ ರೂಪದಲ್ಲಿ ಬಂದ ಶಿವನೊಂದಿಗೆ ಹೋರಾಡಿ ಆತನನ್ನೂ ಸೋಲಿಸಿದ್ದ ಅರ್ಜುನ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ

ಭಗವದ್ಗೀತೆ: ಬೇಡನ ರೂಪದಲ್ಲಿ ಬಂದ ಶಿವನೊಂದಿಗೆ ಹೋರಾಡಿ ಆತನನ್ನೂ ಸೋಲಿಸಿದ್ದ ಅರ್ಜುನ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಬೇಡನ ರೂಪದಲ್ಲಿ ಒಂದ ಶಿವನೊಂದಿಗೆ ಹೋರಾಡಿ ಆತನನ್ನೂ ಸೋಲಿಸಿದ್ದು ಅರ್ಜುನ. ಗೀತೆಯಲ್ಲಿ ಈ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಥ ಚೇತ್ತ್ವಮಿಮಂ ಧರ್ಮ್ಯಂ ಸನ್ಗ್ರಾಮಂ ನ ಕರಿಷ್ಯಸಿ |

ತತಃ ಸ್ವರ್ಧರ್ಮ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ ||33||

ನೀನೇದಾರೂ ಯುದ್ದ ಮಾಡಬೇಕಾದ ನಿನ್ನ ಸ್ವಧರ್ಮವನ್ನು ಪಾಲಿಸದೆ ಇದ್ದರೆ ನಿನ್ನ ಕರ್ತವ್ಯವನ್ನು ಅಲಕ್ಷ್ಯಮಾಡಿದ ಪಾಪಕ್ಕೊಳಗಾಗುತ್ತೀಯೆ. ಯೋಧನಾಗಿ ನಿನ್ನ ಕೀರ್ತಿಯನ್ನು ಕಳೆದುಕೊಳ್ಳುತ್ತೀಯೆ.

ಅರ್ಜುನನು ಪ್ರಸಿದ್ಧ ಯೋಧ. ಶಿವನೊ ಸೇರಿದಂತೆ ಹಲವರು ಮಹಾ ದೇವತೆಗಳೊಂದಿಗೆ ಹೋರಾಡಿ ಕೀರ್ತಿಯನ್ನು ಗಳಿಸಿದ್ದ. ಬೇಡನ ರೂಪದಲ್ಲಿ ಒಂದ ಶಿವನೊಂದಿಗೆ ಹೋರಾಡಿ ಅವನನ್ನು ಸೋಲಿಸಿ ಅರ್ಜುನನು ಅವನನ್ನು ಸಂತೋಷಗೊಳಿಸಿದ. ಅದರ ಫಲವಾಗಿ ಪಾಶುಪತಾಸ್ತ್ರವನ್ನು ಪಡೆದ ಅವನು ಅಸಾಧಾರಣ ಯೋಧನೆಂದು ಎಲ್ಲರಿಗೂ ತಿಳಿದಿತ್ತು. ದ್ರೋಣಾಚಾರ್ಯರು ಸಹ ಅವನನ್ನು ಹರಿಸಿ ಅವನು ತನ್ನ ಗುರುವನ್ನೇ ಕೊಲ್ಲುವಂತಹ ವಿಶಿಷ್ಟವಾದ ಅಸ್ತ್ರವನ್ನು ಕೊಟ್ಟರು.

ಆದುದರಿಂದ ಅವನು ಸಾಕು ತಂದೆಯಾದ ಇಂದ್ರನೂ ಸೇರಿದಂತೆ ಅನೇಕ ಮಹಾ ಅಧಿಕಾರಯುತರಿಂದ ತನ್ನ ಶೌರ್ಯವನ್ನು ಕುರಿತು ಪ್ರಶಂಸೆಯನ್ನು ಪಡೆದಿದ್ದ. ಈಗ ಯುದ್ಧಭೂಮಿಯಿಂದ ಹಿಮ್ಮೆಟ್ಟಿದರೆ ಅವನು ಕ್ಷತ್ರಿಯನಾಗಿ ಸ್ವಧರ್ಮವನ್ನು ಅಲಕ್ಷ್ಯಮಾಡುವುದು ಮಾತ್ರವಲ್ಲ, ತನ್ನ ಕೀರ್ತಿಯನ್ನೆಲ್ಲ ಕಳೆದುಕೊಳ್ಳುವನು ಮತ್ತು ನರಕಕ್ಕೆ ರಾಜಮಾರ್ಗವು ಅವನ ಮುಂದೆ ತೆರೆದುಕೊಳ್ಳುತ್ತದೆ. ಇದನ್ನೇ ಬೇರೆ ಮಾತುಗಳಲ್ಲಿ ಹೇಳವುದಾದರೆ, ಅವನು ಯುದ್ಧಮಾಡಿದರೆ ನರಕಕ್ಕೆ ಹೋಗವುದಿಲ್ಲ. ಯುದ್ಧ ಮಾಡದಿದ್ದರೆ ನರಕಕ್ಕೆ ಹೋಗುತ್ತಾನೆ.

ಅಕೀರ್ತಿಂ ಚಾಪಿ ಭೂತಾನಿ ಕಥಯಿಷ್ಯನ್ತಿ ತೇವ್ಯಯಾಮ್ |

ಸಂಭಾವಿತಸ್ಯ ಚಾಕೀರ್ತಿರ್ಮರಣಾದತಿರಿಚ್ಯತೇ ||34||

ಜನರರು ಎಂದೆಂದಿಗೂ ನಿನ್ನ ಅಪಕೀರ್ತಿಯನ್ನು ಕುರಿತು ಮಾತನಾಡುತ್ತಾರೆ. ಗೌರವಾರ್ಹನಾದವನಿಗೆ ಅಪಕೀರ್ತಿಯು ಸಾವಿಗಿಂತ ಕೇಡು.

ಅರ್ಜುನನಿಗೆ ಕೃಷ್ಣನು ಸ್ನೇಹಿತ ಮತ್ತು ತತ್ವದರ್ಶಿ. ತಾನು ಯುದ್ಧ ಮಾಡುವುದಿಲ್ಲ ಎನ್ನುವ ಅರ್ಜುನನ ವರ್ತನೆಯನ್ನು ಕುರಿತು ಶ್ರೀಕೃಷ್ಣನು ಈಗ ಅಂತಿಮ ತೀರ್ಮಾನವನ್ನು ಕೊಡುತ್ತಾನೆ. ಭಗವಂತನು ಹೀಗೆ ಹೇಳುತ್ತಾನೆ. ಅರ್ಜುನ, ಯುದ್ಧ ಪ್ರಾರಂಭವಾಗುವ ಮೊದಲೇ ನೀನು ಯುದ್ಧಭೂಮಿಯಿಂದ ಹೊರಟುಹೋದರೆ ಜನರು ನಿನ್ನನ್ನು ಹೇಡಿ ಎಂದು ಕರೆಯುವರು.

ಜನರು ನಿನ್ನ ವಿಷಯವಾಗಿ ಕೆಟ್ಟಮಾನ್ನಾಡಬಹುದು. ಯುದ್ಧ ಭೂಮಿಯಿಂದ ಓಡಿಹೋಗಿ ನಿನ್ನ ಜೀವವನ್ನು ಉಳಿಸಿಕೊಳ್ಳುತ್ತೀ ಎಂದು ನೀನು ಭಾವಿಸಿದ್ದರೆ ಅದಕ್ಕಿಂತ ಯುದ್ಧದಲ್ಲಿ ನೀನು ಸಾಯವುದೇ ಉತ್ತಮ ಎಂದು ನನ್ನ ಬುದ್ಧಿವಾದ. ನಿನ್ನಂತೆ ಗೌರವಾನ್ವಿತನಾದ ಮನುಷ್ಯನಿಗೆ ಅಪಕೀರ್ತಿಯು ಸಾವಿಗಿಂತ ಕೇಡು. ಆದುದರಿಂದ ನೀನು ಸಾವಿನ ಭಯದಿಂದ ಓಡಿಹೋಗಬಾರದು. ಯುದ್ಧದಲ್ಲಿ ಸಾಯುವುದೇ ಉತ್ತಮ. ನೀನು ಯುದ್ಧದಲ್ಲಿ ಸತ್ತರೆ ನನ್ನ ಸ್ನೇಹವನ್ನು ದುರುಪಯೋಗ ಮಾಡಿಕೊಂಡ ಅಪಕೀರ್ತಿಯೂ ಬರುವುದಿಲ್ಲ. ಸಮಾಜದಲ್ಲಿ ನಿನ್ನ ಪ್ರತಿಷ್ಠೆಯನ್ನೂ ಕಳೆದುಕೊಳ್ಳುವುದಿಲ್ಲ. ಆದ್ದರಿಂದ ಭಗವಂತನು ಅರ್ಜುನನಿಗೆ ಕೊಡುವ ಕಡೆಯ ತೀರ್ಮಾನವೆಂದರೆ ಅವನು ಹಿಮ್ಮಟ್ಟಬಾರದು. ಆದರೆ ಯುದ್ಧದಲ್ಲಿ ಮಡಿಯಬೇಕು.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.