ಭಗವದ್ಗೀತೆ: ಭಗವಂತನ ದೇಹ ಮತ್ತು ಆತ್ಮ ಒಂದೇ; ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಭಗವಂತನ ದೇಹ ಮತ್ತು ಆತ್ಮ ಒಂದೇ; ಗೀತೆಯ ಅರ್ಥ ತಿಳಿಯಿರಿ

ಭಗವದ್ಗೀತೆ: ಭಗವಂತನ ದೇಹ ಮತ್ತು ಆತ್ಮ ಒಂದೇ; ಗೀತೆಯ ಅರ್ಥ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಭಗವಂತನ ದೇಹ ಮತ್ತು ಆತ್ಮ ಒಂದೇ ಎಂಬ ಗೀತೆಯಲ್ಲಿ ಅರ್ಥ ಹೀಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಶ್ರೀ ಭಗವಾನುವಾಚ

ಬಹೂನಿ ಮೇ ವೃತೀತಾನಿ ಜನ್ಮಾನಿ ತವ ಚಾರ್ಜುನ |

ತಾನ್ಯಹಂ ವೇದ ಸರ್ವಾಣೆ ನ ತ್ವಂ ವೇತ್ಥ ಪರನ್ತಪ ||5||

ದೇವೋತ್ತಮ ಪರಮಪುರುಷನು ಹೀಗೆ ಹೇಳಿದನು - ಶತ್ರುದಮನನಾದ ಅರ್ಜುನನೇ, ನೀನು ನಾನು ಅನೇಕ ಜನ್ಮಗಳನ್ನು ಕಳೆದಿದ್ದೇವೆ. ನನಗೆ ಅವೆಲ್ಲ ಜನ್ಮಗಳ ನೆನಪಿದೆ, ಆದರೆ ನಿನಗಿಲ್ಲ, ಬ್ರಹ್ಮ ಸಂಹಿತೆಯಲ್ಲಿ (5.33) ನಮಗೆ ಭಗವಂತನ ಹಲವು ಅವತಾರಗಳ ವಿಷಯ ತಿಳಿಯುತ್ತದೆ. ಅಲ್ಲಿ ಹೀಗೆ ಹೇಳಿದೆ

ಅದ್ವೈತಮಚ್ಯುತಮನಾದಿಮನನ್ತ ರೂಪಮ್

ಆದ್ಯಂ ಪುರಾಣಪುರುಷಂ ನವಯೌವನಂ ಚ |

ವೇದೇಷು ದುರ್ಲಭಮದುರ್ಲಭಮಾತ್ಮಭಕ್ತೌ

ಗೋವಿನ್ದ ಮಾದಿಪುರುಷಂ ತಮಹಂ ಭಜಾಮಿ ||

"ನಾನು ದೇವೋತ್ತಮ ಪರಮಪುರುಷನಾದ, ಗೋವಿಂದನನ್ನು (ಕೃಷ್ಣನನ್ನು) ಭಜಿಸುತ್ತೇನೆ. ಆತನು ಅನಾದಿಪುರುಷನು, ಪರಾತ್ಪರನು, ಚ್ಯುತಿಯಿಲ್ಲದ ಅತ್ಯುತನು, ಆನಾದಿಪುರುಷನು. ಅನಂತರೂಪವನ್ನು ತಾಳಿದರೂ ಅವನು ಅದಿಪುರುಷನು, ಪುರಾಣಪುರುಷನು, ಸದಾ ನವಯೌವನ ಶೋಭಿತನು, ಭಗವಂತನ ಇಂತಹ ನಿತ್ಯವಾದ, ಆನಂದಮಯವಾದ, ಸರ್ವಜ್ಞ ರೂಪಗಳನ್ನು ವೇದಗಳ ಪಂಡಿತೋತ್ತಮರು ಅರ್ಥಮಾಡಿಕೊಳ್ಳಬಲ್ಲರು. ಆದರೆ ಅವು ಯಾವಾಗಲೂ ಪರಿಶುದ್ಧರಾದ ಭಕ್ತರ ಮುಂದೆ ಸದಾ ಪ್ರಕಟವಾಗಿರುತ್ತವೆ. ಬ್ರಹ್ಮ ಸಂಹಿತೆಯಲ್ಲಿ (5.39) ಹೀಗೆಯೂ ಹೇಳಿದೆ.

ರಾಮಾದಿಮೂರ್ತಿಷು ಕಲಾನಿಯಮೇನ ತಿಷ್ಠನ್

ನಾನಾವತಾರದುಕರೋದ್ ಭುವನೇಷು ಕಿನ್ನು |

ಕೃಷ್ಣಃ ಸ್ವಯಂ ಸಮಭವತ್ಪರಮಃಪುಮಾನ್ ಯೋ

ಗೋವಿನ್ದ ಮಾದಿಪುರುಷಂ ತಮಹಂ ಭಜಾಮಿ ||

"ನಾನು ದೇವೋತ್ತಮ ಪರಮಪುರುಷನನ್ನು, ಗೋವಿಂದನನ್ನು (ಕೃಷ್ಣನನ್ನು) ಪೂಜಿಸುತ್ತೇನೆ. ಆತನು ಯಾವಾಗಲೂ ರಾಮ ನರಸಿಂಹ ಮುಂತಾದ ಅವತಾರಗಳಲ್ಲಿಯೂ ಇತರ ಉಪ ಅವತಾರಗಳಲ್ಲಿಯೂ ನೆಲೆಸಿರುತ್ತಾನೆ. ಆತನು ಪರಮ ದೇವೋತ್ತಮ ಪುರುಷನು. ಆತನಿಗೆ ಕೃಷ್ಣನೆಂದು ಹೆಸರು, ಆತನೇ ಸ್ವಯಂ ಅವತರಿಸುತ್ತಾನೆ."

ಭಗವಂತನು ಅದ್ವಿತೀಯನಾದರೂ ಅಸಂಖ್ಯಾತರೂಪಗಳಲ್ಲಿ ಪ್ರಕಟವಾಗುತ್ತಾನೆ ಎಂದು ವೇದಗಳಲ್ಲಿ ಹೇಳಿದೆ. ಅವನು ವರ್ಣವನ್ನು ಬದಲಾಯಿಸಿದರೂ ತಾನೇ ಆಗಿ ಉಳಿಯುವ ವೈಡೂರ್ಯದಂತೆ, ಪರಿಶುದ್ಧರಾದ ಭಕ್ತರು ಹಲವು ರೂಪಗಳನ್ನು ಅರ್ಥ ಮಾಡಿಕೊಳ್ಳಬಲ್ಲರು. ಆದರೆ ವೇದಗಳ ಸರಳ ಅಧ್ಯಯನದಿಂದ ಅವನು ಅರ್ಥವಾಗುವುದಿಲ್ಲ (ವೇದೇಷು ದುರ್ಲಭಮದುರ್ಲಭ ಮಾತ್ಮಕ್ತೌ). ಅರ್ಜುನನಂತಹ ಭಕ್ತರು ಭಗವಂತನ ನಿತ್ಯ ಸಂಗಾತಿಗಳು.

ಭಗವಂತನು ಅವತರಿಸಿದಾಗಲೆಲ್ಲ ಸಂಗಾತಿಗಳಾದ ಭಕ್ತರು ಭಗವಂತನನ್ನು ಬೇರೆ ಬೇರೆ ಪಾತ್ರಗಳಲ್ಲಿ ಸೇವಿಸಲು ತಾವೂ ಅವತಾರವೆತ್ತುತ್ತಾರೆ. ಅರ್ಜುನನು ಈ ಭಕ್ತರಲ್ಲಿ ಒಬ್ಬ. ಕೋಟ್ಯಂತರ ವರ್ಷಗಳ ಹಿಂದೆ ಶ್ರೀಕೃಷ್ಣನು ಸೂರ್ಯದೇವನಾದ ವಿವಾಸ್ವಾನನಿಗೆ ಭಗವದ್ಗೀತೆಯನ್ನು ಉಪದೇಶಿಸಿದಾಗ ಅರ್ಜುನನು ಬೇರೊಂದು ಪಾತ್ರದಲ್ಲಿ ಅಲ್ಲಿದ್ದ ಎಂದು ಈ ಶ್ಲೋಕದಲ್ಲಿ ಆರ್ಥವಾಗುತ್ತದೆ. ಆದರೆ ಭಗವಂತನಿಗೂ ಅರ್ಜುನನಿಗೂ ವ್ಯತ್ಯಾಸವೇನೆಂದರೆ ಭಗವಂತನಿಗೆ ಆ ಘಟನೆಯ ನೆನಪಿತ್ತು. ಅರ್ಜುನಿಗೆ ಅದನ್ನು ಜ್ಞಾಪಿಸಿಕೊಳ್ಳಲು ಆಗಲಿಲ್ಲ.

ವಿಭಿನ್ನಾಂಶವಾದ ಜೀವಿಗೂ ಭಗವಂತನಿಗೂ ಇದೇ ವ್ಯತ್ಯಾಸ. ಇಲ್ಲಿ ಶತ್ರುಗಳನ್ನು ಗೆಲ್ಲುವ ವೀರನೆಂದು ಅರ್ಜುನನನ್ನು ಸಂಬೋಧಿಸಿದ್ದರೂ ಅವನು ತನ್ನ ಹಿಂದಿನ ಹಲವು ಜನ್ಮಗಳಲ್ಲಿ ಆದದ್ದನ್ನು ಜ್ಞಾಪಿಸಿಕೊಳ್ಳಲಾರ. ಆದುದರಿಂದ ಜೀವಿಯು ಐಹಿಕ ದೃಷ್ಟಿಯಲ್ಲಿ ಎಷ್ಟೇ ದೊಡ್ಡವನಾದರೂ ಭಗವಂತನಿಗೆ ಸಮಾನನಾಗಲಾರ. ಭಗವಂತನ ನಿತ್ಯ ಸಂಗಾತಿಯಾದವನು ನಿಶ್ಚಯವಾಗಿಯೂ ಮುಕ್ತಜೀವಿಯು, ಆದರೆ ಅವನು ಭಗವಂತನಿಗೆ ಸಮಾನನಾಗಲಾರನು.

ಬ್ರಹ್ಮ ಸಂಹಿತೆಯಲ್ಲಿ ಭಗವಂತನನ್ನು ಅಚ್ಯುತನೆಂದು ವರ್ಣಿಸಿದೆ. ಹೀಗೆಂದರೆ ಅವನಿಗೆ ಐಹಿಕ ಸಂಪರ್ಕವಿದ್ದರೂ ತನ್ನನ್ನು ಎಂದೂ ಮರೆಯುವುದಿಲ್ಲ ಎಂದರ್ಥ. ಆದುದರಿಂದ ಜೀವಿಯು ಅರ್ಜುನನಂತೆ ಮುಕ್ತನಾದರೂ ಭಗವಂತನೂ ಮತ್ತು ಜೀವಿಯೂ ಎಲ್ಲ ರೀತಿಗಳಲ್ಲೂ ಸಮರಾಗುವುದು ಸಾಧ್ಯವೇ ಇಲ್ಲ. ಅರ್ಜುನನು ಭಗವಂತನ ಭಕ್ತನಾದರೂ ಹಲವೊಮ್ಮೆ ಭಗವಂತನ ಸ್ವರೂಪವನ್ನು ಮರೆಯುತ್ತಾರೆ. ಆದರೆ ಭಗವಂತನ ಕೃಪೆಯಿಂದ ಭಕ್ತನು ಭಗವಂತನ ಅಚ್ಯುತ ಸ್ಥಿತಿಯನ್ನು ಕೂಡಲೇ ಅರ್ಥಮಾಡಿಕೊಳ್ಳಲಾರ. ಇದರ ಪರಿಣಾಮವಾಗಿ ಗೀತೆಯಲ್ಲಿನ ಈ ವರ್ಣನೆಗಳು ರಾಕ್ಷಸಬುದ್ಧಿಗೆ ಅರ್ಥವಾಗುವುದಿಲ್ಲ.

ತಾನು ಕೋಟ್ಯಂತರ ವರ್ಷಗಳ ಹಿಂದೆ ಮಾಡಿದ ಕಾರ್ಯಗಳು ಕೃಷ್ಣನಿಗೆ ನೆನಪಿದ್ದವು. ಕೃಷ್ಣ ಮತ್ತು ಅರ್ಜುನ ಇಬ್ಬರೂ ನಿತ್ಯರಾದರೂ ಅರ್ಜುನನಿಗೆ ಇವುಗಳ ನೆನಪಿರಲಿಲ್ಲ. ಇಲ್ಲಿ ನಾವು ಇನ್ನೊಂದು ಅಂಶವನ್ನು ಗಮನಿಸಬಹುದು. ಜೀವಿಯು ದೇಹವನ್ನು ಬದಲಾಯಿಸುವುದರಿಂದ ಎಲ್ಲವನ್ನೂ ಮರೆಯುತ್ತಾನೆ. ಆದರೆ ಭಗವಂತನು ಸಚ್ಚಿದಾನಂದ ದೇಹವನ್ನು ಬದಲು ಮಾಡುವುದಿಲ್ಲವಾದ್ದರಿಂದ ಅವನಿಗೆ ನೆನಪಿರುತ್ತದೆ.

ಅವನು ಅದ್ವೈತ, ಎಂದರೆ ಅವನ ದೇಹಕ್ಕೂ ಅವನಿಗೂ ವ್ಯತ್ಯಾಸವಿಲ್ಲ. ಅವನಿಗೆ ಸಂಬಂಧಿಸಿದ್ದೆಲ್ಲ ಆತ್ಮವೇ – ಆದರೆ ಬದ್ಧ ಆತ್ಮನು ತನ್ನ ಶರೀರಕ್ಕಿಂತ ಭಿನ್ನನಾದವನು ಭಗವಂತನ ದೇಹ ಮತ್ತು ಆತ್ಮ ಒಂದೇ. ಆದ್ದರಿಂದ ಆತನ ಸ್ಥಿತಿಯುವ ಯಾವಾಗಲೂ ಸಾಮಾನ್ಯಜೀವಿಯ ಸ್ಥಿತಿಯಿಂದ ಬೇರೆಯಾದದ್ದು. ಆತನು ಭೌತಿಕ ವೇದಿಕೆಗೆ ಇಳಿದು ಬಂದಾಗಲೂ ಜೀವಿಯಿಂದ ಭಿನ್ನನು. ರಾಕ್ಷಸರು ಭಗವಂತನ ಆಧ್ಯಾತ್ಮಿಕ ಸ್ವಭಾವಕ್ಕೆ ಹೊಂದಿಕೊಳ್ಳಲಾರರು. ಇದನ್ನು ಭಗವಂತನೇ ಮುಂದಿನ ಶ್ಲೋಕದಲ್ಲಿ ಹೇಳುತ್ತಾನೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.