Bhagavad Gita: ಮನುಷ್ಯನ ಉತ್ತಮ ಬದುಕಿಗಾಗಿ ದೇಹ, ಆತ್ಮವನ್ನು ಒಟ್ಟಿಗೆ ಇರಿಸಿಕೊಳ್ಳಬೇಕು; ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನುಷ್ಯನ ಉತ್ತಮ ಬದುಕಿಗಾಗಿ ದೇಹ, ಆತ್ಮವನ್ನು ಒಟ್ಟಿಗೆ ಇರಿಸಿಕೊಳ್ಳಬೇಕು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಮನುಷ್ಯನ ಉತ್ತಮ ಬದುಕಿಗಾಗಿ ದೇಹ, ಆತ್ಮವನ್ನು ಒಟ್ಟಿಗೆ ಇರಿಸಿಕೊಳ್ಳಬೇಕು; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಮನುಷ್ಯನ ಉತ್ತಮ ಬದುಕಿಗಾಗಿ ದೇಹ, ಆತ್ಮವನ್ನು ಒಟ್ಟಿಗೆ ಇರಿಸಿಕೊಳ್ಳಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ ಶ್ಲೋಕ 27 ರಲ್ಲಿ ತಿಳಿಯೋಣ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 27

ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್ |

ಯತ್ತಪಸ್ಯಸಿ ಕೌನ್ತೇಯ ತತ್ಕುರುಷ್ವ ಮದರ್ಪಣಮ್ ||27||

ಅನುವಾದ: ಕುಂತಿಯ ಮಗನಾದ ಅರ್ಜನನೇ, ನೀನು ಏನನ್ನೇ ಮಾಡು, ಏನನ್ನೇ ಭುಂಜಿಸು, ಏನನ್ನೇ ಅರ್ಪಿಸು ಅಥವಾ ಕೊಟ್ಟುಬಿಡು ಮತ್ತು ಯಾವುದೇ ತಪಸ್ಸನ್ನು ಮಾಡು - ಅದನ್ನು ಕಾಣಿಕೆಯಾಗಿ ನನಗೆ ಅರ್ಪಿಸು.

ಭಾವಾರ್ಥ: ಹೀಗೆ ಯಾವುದೇ ಸನ್ನಿವಶದಲ್ಲಿಯೂ ಕೃಷ್ಣನನ್ನು ಮರೆಯದಂತೆ ತನ್ನ ಬದುಕನ್ನು ರೂಪಿಸಿಕೊಳ್ಳುವುದು ಪ್ರತಿಯೊಬ್ಬನ ಕರ್ತವ್ಯ. ಪ್ರತಿಯೊಬ್ಬನೂ ತನ್ನ ದೇಹ ಮತ್ತು ಆತ್ಮಗಳನ್ನು ಒಟ್ಟಿಗೆ ಇರಿಸಿಕೊಳ್ಳಲು ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ಕೃಷ್ಣನನು ಮನುಷ್ಯನು ತನಗಾಗಿ (ಕೃಷ್ಣನಿಗಾಗಿ) ಕೆಲಸ ಮಾಡಬೇಕು ಎಂದು ಹೇಳುತ್ತಾನೆ. ಪ್ರತಿಯೊಬ್ಬರೂ ಜೀವಿಸಲು ಏನನ್ನಾದರೂ ತಿನ್ನಲೇಬೇಕು. ಆದುದರಿಂದ ಅವನು ಪ್ರಸಾದವನ್ನು ಸ್ವೀಕರಿಸಬೇಕು. ನಾಗರಿಕನಾದ ಪ್ರತಿಯೊಬ್ಬ ಮನುಷ್ಯನು ಯಾವುದಾದರೂ ಧಾರ್ಮಿಕ ವಿಧಿಗಳನ್ನು ಮಾಡಲೇಬೇಕು. ಆದುದರಿಂದ ಕೃಷ್ಣನು, ಅದನ್ನು ನನಗಾಗಿ ಮಾಡು, ಎಂದು ಹೇಳುತ್ತಾನೆ. ಇದಕ್ಕೆ ಅರ್ಚನೆ ಎಂದು ಹೆಸರು (Bhagavad Gita Updesh in Kannada).

ಪ್ರತಿಯೊಬ್ಬನಿಗೂ ಏನನ್ನಾದರೂ ದಾನಮಾಡುವ ಪ್ರವೃತ್ತಿಯಿರುತ್ತದೆ. ಕೃಷ್ಣನು ಅದನ್ನು ನನಗೆ ಕೊಡು ಎಂದು ಹೇಳುತ್ತಾನೆ. ಶೇಖರವಾದ ಎಲ್ಲ ನಿವ್ವಳ ಹಣವನ್ನು ಕೃಷ್ಣಪ್ರಜ್ಞೆಯ ಆಂದೋಳನವನ್ನು ಮುನ್ನಡೆಸಲು ಉಪಯೋಗಿಸಬೇಕೆಂದು ಇದರ ಅರ್ಥ. ಈಗಿನ ಕಾಲದಲ್ಲಿ ಜನರಿಗೆ ಧ್ಯಾನದ ಪ್ರಕ್ರಿಯೆಯಲ್ಲಿ ಬಹಳ ಒಳವು. ಈ ಯುಗದಲ್ಲಿ ಇದು ಕಾರ್ಯಸಾಧ್ಯವಲ್ಲ. ಆದರೆ ಹರೇಕೃಷ್ಣ ಮಂತ್ರವನ್ನು ತನ್ನ ಜಪಮಣಿಯೊಂದಿಗೆ ಜಪಮಾಡುತ್ತ ದಿನದ ಇಪ್ಪತ್ನಾಲ್ಕು ಗಂಟೆಗಳೂ ಕೃಷ್ಣಧ್ಯಾನದಲ್ಲಿ ಯಾರಾದರೂ ಕಳೆಯುವುದಾದರೆ ಭಗವದ್ಗೀತೆಯ ಆರನೆಯ ಅಧ್ಯಾಯದಲ್ಲಿ ಸಮರ್ಥವಾಗಿ ತೋರಿಸಿದಂತೆ ಆತನೇ ಖಂಡಿತವಾಗಿಯೂ ಅತ್ಯಂತ ಶ್ರೇಷ್ಠ ಧ್ಯಾನಿ ಮತ್ತು ಅತ್ಯಂ ಶ್ರೇಷ್ಠಯೋಗಿ.

ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ. ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಡುತ್ತಾನೆ ಎನ್ನುವುದು ಶ್ರೀಕೃಷ್ಣನ ಮಾತು.

ಭಗವದ್ಗೀತೆಯಲ್ಲಿ 18 ಅಧ್ಯಾಯಗಳು, 720 ಶ್ಲೋಕಗಳನ್ನು ಹೇಳಲಾಗಿದೆ. ಇದರಲ್ಲಿನ ಧರ್ಮೋಪದೇಶಗಳು ಮನುಷ್ಯರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕಾರಿಯಾಗಿದೆ. ಇದರಲ್ಲಿನ ಅಂಶಗಳನ್ನು ಜೀವನದಲ್ಲಿ ಅವಳಡಿಸಿಕೊಂಡಾಗ ಶಾಂತಿ, ನೆಮ್ಮದಿ ಹಾಗೂ ಅನ್ಯೋನ್ಯವಾಗಿ ಬಾಳಿ ಬದುಕಬಹುದಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.