Bhagavad Gita: ಮೂಢರು, ಬುದ್ಧಿಹೀನರಿಗೆ ಭಗವಂತ ಎಂದೂ ಕಾಣಿಸಿಕೊಳ್ಳುವುದಿಲ್ಲ; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮೂಢರು, ಬುದ್ಧಿಹೀನರಿಗೆ ಭಗವಂತ ಎಂದೂ ಕಾಣಿಸಿಕೊಳ್ಳುವುದಿಲ್ಲ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಮೂಢರು, ಬುದ್ಧಿಹೀನರಿಗೆ ಭಗವಂತ ಎಂದೂ ಕಾಣಿಸಿಕೊಳ್ಳುವುದಿಲ್ಲ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಮೂಢರು, ಬುದ್ಧಿಹೀನರಿಗೆ ಭಗವಂತ ಎಂದೂ ಕಾಣಿಸಿಕೊಳ್ಳುವುದಿಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 7ನೇ ಅಧ್ಯಾಯದ ಶ್ಲೋಕ 25ರಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 25

ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವೃತಃ |

ಮೂಢೋಯಂ ನಾಭಿಜಾನಾತಿ ಲೋಕೋ ಮಾಮಜಮವ್ಯಯಮ್ ||25||

ಅನುವಾದ: ಮೂಢರಿಗೆ ಬುದ್ಧಿಹೀನರಿಗೆ ನಾನು ಎಂದೂ ಕಾಣಿಸಿಕೊಳ್ಳುವುದಿಲ್ಲ. ಅವರ ಮಟ್ಟಿಗೆ ನಾನು ಅಂತರಂಗ ಶಕ್ತಿಯಿಂದ ಆವೃತನಾಗಿರುತ್ತೇನೆ. ಆದುದರಿಂದ ನನಗೆ ಹುಟ್ಟು ಇಲ್ಲ, ನಾನು ಅವ್ಯಯನು ಎಂದು ಅವರು ತಿಳಿಯರು.

ಭಾವಾರ್ಥ: ಕೃಷ್ಣನು ಈ ಭೂಮಿಯ ಮೇಲಿದ್ದ ಎಲ್ಲರಿಗೂ ಕಾಣಿಸುತ್ತಿದ್ದ. (Bhagavad Gita Updesh in Kannada) ಹಾಗಿರುವಾಗ ಆತನು ಈಗ ಎಲ್ಲರಿಗೂ ಕಾಣಿಸುವುದಿಲ್ಲವೇಕೆ ಎಂದು ಪ್ರಶ್ನಿಸಬಹುದು. ಆದರೆ ವಾಸ್ತವವಾಗಿ ಕೃಷ್ಣನು ಎಲ್ಲರಿಗೂ ವ್ಯಕ್ತನಾಗಲಿಲ್ಲ. ಕೃಷ್ಣನು ಭೂಮಿಯ ಮೇಲಿದ್ದಾಗ ಅವನು ದೇವೋತ್ತಮ ಪರಮ ಪುರುಷ ಎಂದು ಅರ್ಥಮಾಡಿಕೊಂಡವರು ಕೆಲವರೇ. ಕುರುಸಭೆಯಲ್ಲಿ ಕೃಷ್ಣನಿಗೆ ಅಗ್ರಮರ್ಯಾದೆ ಮಾಡುವುದನ್ನು ಶಿಶುಪಾಲನು ವಿರೋಧಿಸಿದಾಗ, ಭೀಷ್ಮನು ಕೃಷ್ಣನನ್ನು ಬೆಂಬಲಿಸಿ ಅವನು ಪರಮ ಪ್ರಭುವೆಂದು ಸಾರಿದ. ಹಾಗೆಯೇ, ಪಾಂಡವರು ಮತ್ತೆ ಬೇರೆ ಕೆಲವರಿಗೆ ಮಾತ್ರ ಅವನೇ ಪರಮ ಪ್ರಭು ಎಂದು ತಿಳಿದಿತ್ತು. ಎಲ್ಲರಿಗೂ ತಿಳಿದಿರಲಿಲ್ಲ. ಭಕ್ತರಲ್ಲದವರಿಗೂ ಸಾಮಾನ್ಯ ಮನುಷ್ಯರಿಗೂ ಅವನು ವ್ಯಕ್ತನಾಗಲಿಲ್ಲ. ಆದುದರಿಂದ ಭಗವದ್ಗೀತೆಯಲ್ಲಿ ಕೃಷ್ಣನು ಹೀಗೆ ಹೇಳುತ್ತಾನೆ - ಪರಿಶುದ್ಧ ಭಕ್ತರನ್ನು ಬಿಟ್ಟು ಉಳಿದವರು ಕೃಷ್ಣನು ಅವರಂತೆಯೇ ಒಬ್ಬನು ಎಂದು ಭಾವಿಸುತ್ತಾರೆ. ಅವನ ಭಕ್ತರು ಮಾತ್ರ ಅವನನ್ನು ಎಲ್ಲ ಆನಂದದ ಆಗರವಾಗಿ ಕಂಡರು. ಭಕ್ತರಲ್ಲದ ಇತರ ಮಂದಮತಿಗಳಿಗೆ ಅವನು ಯೋಗಮಾಯೆಯಿಂದ ಮುಚ್ಚಿಹೋಗಿದ್ದ.

ಶ್ರೀಮದ್ಭಾಗತವದಲ್ಲಿ (1.8.19) ಕುಂತಿಯ ಪ್ರಾರ್ಥನೆಯಲ್ಲಿ ಯೋಗ ಮಾಯೆಯ ಪರದೆಯ ಕೃಷ್ಣನನ್ನು ಮುಚ್ಚಿದೆ. ಆದುದರಿಂದ ಆತನನ್ನು ಎಲ್ಲರೂ ಕಾಣಲಾರರು ಎಂದು ಹೇಳಿದೆ. ಈ ಯೋಗ ಮಾಯೆಯ ಪರದೆಯನ್ನು ಈಶೋಪನಿಷತ್ತು (ಮಂತ್ರ 15) ಸಹ ದೃಢಪಡಿಸುತ್ತದೆ. ಈ ಮಂತ್ರದಲ್ಲಿ ಭಕ್ತನು ಹೀಗೆ ಪ್ರಾರ್ಥನೆ ಮಾಡುತ್ತಾನೆ -

ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಮ್ |

ತತ್ ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ ||

ಪ್ರಭುವೇ, ವಿಶ್ವಪಾಲಕನು ನೀನೇ, ನಿನ್ನ ಭಕ್ತಿಸೇವೆಯೇ ಅತ್ಯುನ್ನತ ಧಾರ್ಮಿಕ ತತ್ವವು. ಆದುದರಿಂದ ನೀವು ನನ್ನನ್ನು ಕಾಪಾಡು ಎಂದು ಪ್ರಾರ್ಥಿಸುತ್ತೇನೆ. ನಿನ್ನ ದಿವ್ಯ ರೂಪವನ್ನು ಯೋಗ ಮಾಯೆಯು ಮುಚ್ಚಿದೆ. ಯೋಗ ಮಾಯೆಯ ಅಥವಾ ಅಂತರಂಗ ಶಕ್ತಿಯ ತೆರೆಯು ಬ್ರಹ್ಮಜ್ಯೋತಿಯೇ ಆಗಿದೆ. ನಿನ್ನ ಸಚ್ಚಿದಾನಂದ ವಿಗ್ರಹವನ್ನು ನಾನು ಕಾಣದಂತೆ ಅಡ್ಡಿಮಾಡುವ ಈ ಮಹಾಪ್ರಭೆಯನ್ನು ದಯಮಾಡಿ ನಿವಾರಿಸು. ತನ್ನ ದಿವ್ಯ ಜ್ಞಾನಾನಂದ ರೂಪದಲ್ಲಿ ದೇವೋತ್ತಮ ಪರಮ ಪುರುಷನನ್ನು ಬ್ರಹ್ಮಜ್ಯೋತಿಯ ಅಂತರಂಗ ಶಕ್ತಿಯು ಮುಚ್ಚಿರುತ್ತದೆ. ಮಂದ ಬುದ್ಧಿಯ ನಿರಾಕಾರವಾದಿಗಳು ಈ ಕಾರಣದಿಂದ ಪರಮ ಪ್ರಭುವನ್ನು ಕಾಣಲಾರರು.

ಶ್ರೀಮದ್ಭಾಗವತದಲ್ಲಿ (10.14.7) ಬ್ರಹ್ಮನು ಮಾಡುವ ಒಂದು ಪ್ರಾರ್ಥನೆ ಇದೆ. ಹೇ ದೇವೋತ್ತಮ ಪರಮ ಪುರುಷನೇ, ಹೇ ಪರಮಾತ್ಮನೇ, ಎಲ್ಲ ರಹಸ್ಯಗಳ ಪ್ರಭುವೇ, ಈ ಜಗತ್ತಿನಲ್ಲಿ ನಿನ್ನ ಶಕ್ತಿಯನ್ನೂ, ಲೀಲೆಗಳನ್ನೂ ಗಣಿಸಸಬಲ್ಲವರು ಯಾರು? ನೀನು ನಿರಂತರವೂ ನಿನ್ನ ಅಂತರಂಗ ಶಕ್ತಿಯನ್ನು ವಿಸ್ತರಿಸುತ್ತಿರುವೆ. ಆದುದರಿಂದ ಯಾರೂ ನಿನ್ನನ್ನು ತಿಳಿಯಲಾರರು. ವಿಜ್ಞಾನಿಗಳು ಮತ್ತು ವಿದ್ವಾಂಸರಾದವರು ಐಹಿಕ ಜಗತ್ತಿನ ಪರಮಾಣುರಚನೆಯನ್ನು, ಅಂದರೆ ಗ್ರಹಗಳ ಪರಮಾಣು ರಚನೆಯನ್ನು ಸಹ ಪರೀಕ್ಷಿಸಬಹುದು. ಆದರೆ ನೀನೇ ಅವರ ಎದುರಿಗಿದ್ದರೂ ಅವರು ನಿನ್ನ ಚೈತನ್ಯ ಮತ್ತು ಶಕ್ತಿಗಳನ್ನು ಎಣಿಸಲಾರರು. ದೇವೋತ್ತಮ ಪರಮ ಪರುಷನಾದ ಶ್ರೀಕೃಷ್ಣನಿಗೆ ಹುಟ್ಟು ಎನ್ನುವುದು ಇಲ್ಲ. ಮಾತ್ರವಲ್ಲ ಅವನು ಅವ್ಯಯ, ಕೀಣನಾಗದವ ನು. ಅವನ ನಿತ್ಯರೂಪವು ಜ್ಞಾನಾನಂದ ಪೂರ್ಣವಾಗಿದೆ. ಅವನ ಶಕ್ತಿಗಳಿಗೆ ಕೊನೆ ಎನ್ನುವುದಿಲ್ಲ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.