ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಊಹಾಪೋಹಗಳಿಂದ ಶ್ರೀಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಊಹಾಪೋಹಗಳಿಂದ ಶ್ರೀಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ದಡ್ಡ ಊಹಾಪೋಹಗಳಿಂದ ಶ್ರೀಕೃಷ್ಣನನ್ನು ಅರ್ಥಮಾಡಿಕೊಳ್ಳಲು ಮನುಷ್ಯನಿಂದ ಸಾಧ್ಯವಿಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 2ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ - ಶ್ಲೋಕ-2

ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ|

ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ ||2||

ಅನುವಾದ: ದೇವತೆಗಳಾಗಲೀ ಮಹರ್ಷಿಗಳಾಗಲೀ ನನ್ನ ಮೂಲವನ್ನಾಗಲೀ ಸಿರಿಯನ್ನಾಗಲೀ ಅರಿಯರು. ಏಕೆಂದರೆ, ಎಲ್ಲ ರೀತಿಗಳಲ್ಲಿಯೂ ನಾನೇ ದೇವತೆಗಳಿಗೆ ಮತ್ತು ಮಹರ್ಷಿಗಳಿಗೆ ಮೂಲನು.

ಭಾವಾರ್ಥ: ಬ್ರಹ್ಮಸಂಹಿತೆಯಲ್ಲಿ ಹೇಳಿದಂತೆ ಶ್ರೀಕೃಷ್ಣನೇ ಪರಮ ಪ್ರಭು. ಅವನಿಗಿಂತ ಶ್ರೇಷ್ಠರು ಯಾರೂ ಇಲ್ಲ. ಅವನು ಎಲ್ಲ ಕಾರಣಗಳ ಕಾರಣನು. ಇಲ್ಲಿ ಸ್ವಯಂ ಪ್ರಭುವೇ ತಾನು ಎಲ್ಲ ದೇವತೆಗಳ ಮತ್ತು ಋಷಿಗಳ ಮೂಲನು ಎಂದು ಹೇಳಿದ್ದಾನೆ. ಅವರಿಗೆ ಅವನ ನಾಮವಾಗಲೀ ಅವ ವ್ಯಕ್ತಿತ್ವವಾಗಲೀ ಅರ್ಥವಾಗುವುದಿಲ್ಲ. ಅವರಿಗೇ ಹೀಗಾದರೆ ಈ ಸಣ್ಣಲೋಕದಲ್ಲಿ ವಿದ್ವಾಂಸರು ಎನ್ನಿಸಿಕೊಳ್ಳುವವರ ಸ್ಥಿತಿಯೇನು? ಈ ಪರಮ ಪುರುಷನು ಸಾಮಾನ್ಯ ಮನುಷ್ಯನಂತೆ ಭೂಮಿಗೆ ಬಂದು ಇಂತಹ ಆಶ್ಚರ್ಯಕರ, ಅಸಾಧಾರಣ ಕಾರ್ಯಗಳನ್ನು ಏಕೆ ನಡೆಸುತ್ತಾನೆ ಎಂದು ಯಾರಿಗೂ ತಿಳಿಯದು. ಆದುದರಿಂದ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ ಅರ್ಹತೆ ಪಾಂಡಿತ್ಯವಲ್ಲ ಎಂದು ತಿಳಿದುಕೊಳ್ಳಬೇಕು (Bhagavad Gita Updesh in Kannada).

ದೇವತೆಗಳು ಮತ್ತು ಮಹರ್ಷಿಗಳು ಸಹ ತಮ್ಮ ಊಹಾತ್ಮಕ ಚಿಂತನೆಯಿಂದ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ವಿಫಲರಾಗಿದ್ದಾರೆ. ಮಹಾನ್ ದೇವತೆಗಳೂ ಸಹ ದೇವೋತ್ತಮ ಪರಮ ಪುರುಷನನ್ನು ಅರ್ಥಮಾಡಿಕೊಳ್ಳಲು ಸಮರ್ಥರಲ್ಲ ಎಂದು ಶ್ರೀಮದ್ಭಾಗವತದಲ್ಲಿ ಸ್ಪಷ್ಟವಾಗಿ ಹೇಳಿದೆ. ತಮ್ಮ ಅಪರಿಪೂರ್ಣ ಇಂದ್ರಿಯಗಳು ಎಷ್ಟುದೂರ ಓಡಬಲ್ಲವೂ ಅಷ್ಟು ಊಹಿಸಿ ಅವರು ನಿರಾಕಾರದ ವಿರುದ್ಧ ನಿರ್ಣಯಕ್ಕೆ ಬರಬಹುದು ಅಥವಾ ಐಹಿಕ ಪ್ರಕೃತಿಯ ತ್ರಿಗುಣಗಳಿಂದ ಪ್ರಕಟವಾದ ಏನೋ ಒಂದನ್ನು ಕಲ್ಪಿಸಿಕೊಳ್ಳಬಹುದು. ಇಲ್ಲವೇ, ಅವರು ಊಹಾತ್ಮಕ ಚಿಂತನೆಯಿಂದ ಏನನ್ನೋ ಕಲ್ಪಿಸಿಕೊಳ್ಳಬಹುದು. ಆದರೆ ಇಂತಹ ದಡ್ಡ ಊಹಾಪೋಹಗಳಿಂದ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

ಯಾರಿಗಾದರೂ ಪರಿಪೂರ್ಣ ಸತ್ಯವನ್ನು ತಿಳಿದುಕೊಳ್ಳಬೇಕೆಂಬ ಇಚ್ಛೆಯಿದ್ದರೆ, ದೇವೋತ್ತಮ ಪರಮ ಪುರುಷನಾಗಿ ನಾನು ಇಲ್ಲಿದ್ದೇನೆ, ನಾನೇ ಪರಮ ಪುರುಷನು, ಎಂದು ಇಲ್ಲಿ ಪ್ರಭುವು ಪರೋಕ್ಷವಾಗಿ ಹೇಳುತ್ತಾನೆ - ಇದನ್ನು ತಿಳಿದುಕೊಳ್ಳಬೇಕು. ವ್ಯಕ್ತಿಯಾಗಿ ಇರುವ ಊಹಾತೀತ ಪ್ರಭುವನ್ನು ಮನುಷ್ಯನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲದಿದ್ದರೂ ಪ್ರಭುವು ಇದ್ದಾನೆ. ಭಗವದ್ಗೀತೆಯಲ್ಲಿ ಮತ್ತು ಶ್ರೀಮದ್ಭಾಗವತದಲ್ಲಿ ಅವನು ಆಡುವ ಮಾತುಗಳನ್ನು ಅಧ್ಯಯನ ಮಾಡಿದರೆ ಸಾಕು, ನಿತ್ಯನೂ ಜ್ಞಾನಾನಂದಪೂರ್ಣನೂ ಆದ ಕೃಷ್ಣನನ್ನು ನಾನು ಅರ್ಥಮಾಡಿಕೊಳ್ಳಬಹುದು. ದೇವರು ಆಳುವ ಒಂದು ಶಕ್ತಿ ಅಥವಾ ನಿರಾಕಾರ ಬ್ರಹ್ಮನ್ ಎನ್ನುವ ಪರಿಕಲ್ಪನೆಯನ್ನು ಭಗವಂತನ ಕೆಳಮಟ್ಟದ ಶಕ್ತಿಯಲ್ಲಿ ಇರುವವರು ಮುಟ್ಟಬಹುದು. ಆದರೆ ಅಧ್ಯಾತ್ಮಿಕ ಸ್ಥಿತಿಯಲ್ಲಿ ಇಲ್ಲದಿದ್ದರೆ ಮನುಷ್ಯನು ದೇವೋತ್ತಮ ಪುರುಷನನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಬಹುಮಂದಿಗೆ ಅವನ ವಾಸ್ತವಿಕ ಸ್ಥಿತಿಯಲ್ಲಿ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದುದರಿಂದ ತನ್ನ ನಿಷ್ಕಾರಣ ಕರುಣೆಯಿಂದಾಗಿ ಆತನು ಹೀಗೆ ಊಹೆಗಳನ್ನು ಮಾಡುವವರಿಗೆ ಕೃಪೆಮಾಡಲು ಇಳಿದು ಬರುತ್ತಾನೆ. ಪರಮ ಪ್ರಭುವಿನ ಕಾರ್ಯಗಳು ಅಸಾಧಾರಣವಾದವು. ಆದರೂ ಐಹಿಕಶಕ್ತಿಯ ಕಲ್ಮಷ ಸಂಪರ್ಕದಿಂದಾಗಿ ಊಹಾಪೋಹ ಮಾಡುವವರು ನಿರಾಕಾರ ಬ್ರಹ್ಮನ್‌ನೇ ಪರಮನು ಎಂದು ಯೋಚಿಸುತ್ತಾನೆ. ಪರಮ ಪ್ರಭುವಿಗೆ ಸಂಪೂರ್ಣವಾಗಿ ಶರಣಾಗತರಾದ ಭಕ್ತರು ಮಾತ್ರ ಪರಮ ಪುರುಷನ ಕೃಪೆಯಿಂದ ಅವನು ಕೃಷ್ಣ ಎಂದು ಅರ್ಥಮಾಡಿಕೊಳ್ಳಬಲ್ಲರು. ಪ್ರಭುವಿನ ಭಕ್ತರು ದೇವರು ನಿರಾಕಾರಬ್ರಹ್ಮ ಎನ್ನುವ ಪರಿಕಲ್ಪನೆಯನ್ನು ಗಮನಕ್ಕೆ ತಂದುಕೊಳ್ಳುವುದಿಲ್ಲ. ಅವರ ಶ್ರದ್ಧಾಭಕ್ತಿಗಳು ಅವರು ಕೂಡಲೇ ಪರಮ ಪ್ರಭುವಿಗೆ ಶರಣಾಗತರಾಗುವಂತೆ ಮಾಡುತ್ತದೆ. ಕೃಷ್ಣನ ನಿಷ್ಕಾರಣ ದಯೆಯಿಂದಾಗಿ ಅವರು ಕೃಷ್ಣನನ್ನು ಅರ್ಥಮಾಡಿಕೊಳ್ಳಬಲ್ಲರು. ಬೇರೆ ಯಾರೂ ಆತನನ್ನು ಅರಿಯಲಾರರು. ಮಹರ್ಷಿಗಳು ಸಹ ಇದನ್ನು ಒಪ್ಪುತ್ತಾರೆ. ಆತ್ಮ ಯಾವುದು, ಪರಮ ಯಾವುದು? ನಾವು ಪೂಜಿಸಬೇಕಾದದ್ದು ಆತನನ್ನು.