Bhagavad Gita: ಬಾಲ್ಯದಿಂದ ಮುಪ್ಪಿನವರೆಗೆ ತನ್ನ ದೇಹದಲ್ಲಿ ಎಷ್ಟೋ ಬದಲಾವಣೆಗಳಾಗುತ್ತವೆ; ಭಗವದ್ಗೀತೆಯಲ್ಲಿನ ಅರ್ಥ ತಿಳಿಯಿರಿ-spiritual news bhagavad gita updesh lord krishna childhood to old age body changes bhagavad gita quotes in kannada ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಬಾಲ್ಯದಿಂದ ಮುಪ್ಪಿನವರೆಗೆ ತನ್ನ ದೇಹದಲ್ಲಿ ಎಷ್ಟೋ ಬದಲಾವಣೆಗಳಾಗುತ್ತವೆ; ಭಗವದ್ಗೀತೆಯಲ್ಲಿನ ಅರ್ಥ ತಿಳಿಯಿರಿ

Bhagavad Gita: ಬಾಲ್ಯದಿಂದ ಮುಪ್ಪಿನವರೆಗೆ ತನ್ನ ದೇಹದಲ್ಲಿ ಎಷ್ಟೋ ಬದಲಾವಣೆಗಳಾಗುತ್ತವೆ; ಭಗವದ್ಗೀತೆಯಲ್ಲಿನ ಅರ್ಥ ತಿಳಿಯಿರಿ

Bhagavad Gita Updesh: ಬಾಲ್ಯದಿಂದ ಮುಪ್ಪಿನವರೆಗೆ ತನ್ನ ದೇಹದಲ್ಲಿ ಎಷ್ಟೋ ಬದಲಾವಣೆಗಳಾಗುತ್ತವೆ ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 1 ಮತ್ತು 2 ನೇ ಶ್ಲೋಕದಲ್ಲಿ ಓದಿ

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - ಶ್ಲೋಕ 1 ಮತ್ತು 2

ಪ್ರಕೃತಿಂ ಪುರುಷಂ ಚೈವ ಕ್ಷೇತ್ರಂ ಕ್ಷೇತ್ರಜ್ಞಮೇವ ಚ |

ಏತದ್ ವೇದಿತುಮಿಚ್ಛಾಮಿ ಜ್ಞಾನಂ ಜ್ಞೇಯಂ ಚ ಕೇಶವ ||1|

ಇದಂ ಶರೀರಂ ಕೌನ್ತೇಯ ಕ್ಷೇತ್ರಮಿತ್ಯಭಿಧೀಯತೇ |

ಏತದ್ ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ತದ್ವಿದಃ ||2|

ಅನುವಾದ: ಅರ್ಜುನನು ಹೇಳಿದನು - ಪ್ರೀತಿಯ ಕೃಷ್ಣನೆ, ಪ್ರಕೃತಿ, ಪುರುಷ, ಕ್ಷೇತ್ರ, ಕ್ಷೇತ್ರಜ್ಞ, ಜ್ಞಾನ ಮತ್ತು ಜ್ಞಾನದ ಗುರಿ ಇವನ್ನು ತಿಳಿದುಕೊಳ್ಳಲು ಬಯಸುತ್ತೇನೆ. ದೇವೋತ್ತಮ ಪರಮ ಪುರುಷನು ಹೇಳಿದನು - ಕೌಂತೇಯನೇ, ಈ ದೇಹವನ್ನು ಕ್ಷೇತ್ರವೆಂದೂ, ದೇಹವನ್ನು ತಿಳಿದವನನ್ನು ಕ್ಷೇತ್ರಜ್ಞ ಎಂದೂ ಕರೆಯುತ್ತಾರೆ.

ಭಾವಾರ್ಥ: ಪ್ರಕೃತಿ, ಪುರುಷ, ಕ್ಷೇತ್ರ, ಕ್ಷೇತ್ರಜ್ಞ, ಜ್ಞಾನ ಮತ್ತು ಜ್ಞಾನದ ಗುರಿ ಇವುಗಳ ವಿಷಯದಲ್ಲಿ ಅರ್ಜುನನಿಗೆ ಕುತೂಹಲವಿತ್ತು. ಇವನ್ನು ಕುರಿತು ಅವನು ಪ್ರಶ್ನಿಸಿದಾಗ, ಈ ದೇಹಕ್ಕೆ ಕ್ಷೇತ್ರ ಎಂದು ಹೆಸರು, ಈ ದೇಹವನ್ನು ತಿಳಿದವನಿಗೆ ಕ್ಷೇತ್ರಜ್ಞ ಎಂದು ಹೆಸರು ಎಂದು ಕೃಷ್ಣನು ಹೇಳಿದ. ಬದ್ಧ ಆತ್ಮಕ್ಕೆ ಚಟುವಟಿಕೆಗಳ ಕ್ಷೇತ್ರವು ದೇಹ. ಬದ್ಧ ಆತ್ಮನು ಐಹಿಕ ಅಸ್ತಿತ್ವದಲ್ಲಿ ಸಿಕ್ಕಿಬಿದ್ದಿದ್ದಾನೆ. ಆತನು ಐಹಿಕ ಪ್ರಕೃತಿಯ ಮೇಲೆ ಯಜಮಾನಿಕೆ ನಡೆಸಲು ಎಷ್ಟರ ಮಟ್ಟಿಗೆ ಸಾಧ್ಯವಾದರೆ ಅಷ್ಟರಮಟ್ಟಿಗೆ ಚಟುವಟಿಕೆಯ ಕ್ಷೇತ್ರ ಆತನಿಗೆ ಲಭ್ಯವಾಗುತ್ತದೆ. ಈ ಕ್ಷೇತ್ರವು ದೇಹ. ದೇಹ ಎಂದರೇನು? ದೇಹವು ಇಂದ್ರಿಯಗಳಿಂದ ಆಗಿದೆ. ಬದ್ಧ ಆತ್ಮವು ಇಂದ್ರಿಯತೃಪ್ತಿಯನ್ನು ಬಯಸುತ್ತದೆ (Bhagavad Gita Updesh in Kannada).

ಒಂದಿಷ್ಟು ತೃಪ್ತಿಯನ್ನು ಪಡೆಯಲು ಶಕ್ತಿ ಇದ್ದಮಟ್ಟಿಗೆ ಆತನಿಗೆ ದೇಹವನ್ನು ಅಥವಾ ಚಟುವಟಿಕೆಗಳ ಕ್ಷೇತ್ರವನ್ನು ಕೊಡಲಾಗುತ್ತವೆ. ಆದುದರಿಂದ ದೇಹಕ್ಕೆ ಕ್ಷೇತ್ರ, ಅಥವಾ ಬದ್ಧ ಆತ್ಮದ ಚಟುವಟಿಕೆಗಳಿಗೆ ಬಯಲು ಎಂದು ಹೆಸರು. ದೇಹದೊಂದಿಗೆ ತನ್ನನ್ನು ಗುರುತಿಸಿಕೊಳ್ಳುವವನನ್ನು ಕ್ಷೇತ್ರಜ್ಞ - ಕ್ಷೇತ್ರವನ್ನು ಬಲ್ಲವನು - ಎಂದು ಕರೆಯುತ್ತಾರೆ. ಕ್ಷೇತ್ರ ಮತ್ತು ಕ್ಷೇತ್ರಜ್ಞ, ದೇಹ ಮತ್ತು ದೇಹವನ್ನು ಬಲ್ಲವನು ಇವರಲ್ಲಿ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಅಷ್ಟೇನೂ ಕಷ್ಟವಲ್ಲ. ಬಾಲ್ಯದಿಂದ ಮುಪ್ಪಿನವರೆಗೆ ತನ್ನ ದೇಹದಲ್ಲಿ ಎಷ್ಟೋ ಬದಲಾವಣೆಗಳಾಗುತ್ತವೆ.

ಇಷ್ಟಾದರೂ ತಾನು ಅದೇ ವ್ಯಕ್ತಿಯಾಗಿ ಉಳಿಯುತ್ತೇನೆ ಎನ್ನುವುದನ್ನು ಯಾರಾದರೂ ಯೋಚಿಸಬಹುದು. ಹೀಗೆ ಕ್ಷೇತ್ರಜ್ಞನಿಗೂ ವಾಸ್ತವವಾಗಿ ಚಟುವಟಿಕೆಗಳ ಕ್ಷೇತ್ರಕ್ಕೂ ವ್ಯತ್ಯಾಸವಿದೆ. ಜೀವಂತ ಬದ್ಧ ಆತ್ಮನು ತಾನು ದೇಹದಿಂದ ಭಿನ್ನನಾದವನು ಎಂದು ಅರ್ಥ ಮಾಡಿಕೊಳ್ಳಬಲ್ಲ. ಜೀವಿಯು ಪ್ರಾರಂಭದಲ್ಲಿ ದೇಹಿನೋಸ್ಮಿನ್ ಜೀವಿಯು ದೇಹದೊಳಗಿದ್ದಾನೆ ಮತ್ತು ದೇಹವು ಶೈಶವದಿಂದ ಬಾಲ್ಯ, ಯೌವನ, ಮುಪ್ಪು ಹೀಗೆ ಬದಲಾಗುತ್ತಿರುತ್ತದೆ ಎಂದು ವರ್ಣಿಸಿದೆ. ಒಡೆಯನು ಸ್ಪಷ್ಟವಾಗಿ ಕ್ಷೇತ್ರಜ್ಞ, ಒಮ್ಮೊಮ್ಮೆ ನಾವು, ನಾನು ಸುಖವಾಗಿದ್ದೇನೆ, ನಾನೊಬ್ಬ ಗಂಡಸು, ನಾನು ಹೆಂಗಸು, ನಾನು ನಾಯಿ, ನಾನು ಬೆಕ್ಕು, ಎಂದು ಯೋಚಿಸುತ್ತೇವೆ. ಎಂದು ಯೋಚಿಸುತ್ತೇವೆ. ಇವು ಕ್ಷೇತ್ರಜ್ಞರ ದೇಹದ ಹೆಸರುಗಳು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.