Bhagavad Gita: ಮನಸ್ಸಿನ ಒತ್ತಡ ಹತೋಟಿಯಲ್ಲಿಡಬಲ್ಲವನು ನಿಯಂತ್ರಿತ ಜೀವನ ನಡೆಸುತ್ತಾನೆ; ಗೀತೆಯ ಅರ್ಥ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನಸ್ಸಿನ ಒತ್ತಡ ಹತೋಟಿಯಲ್ಲಿಡಬಲ್ಲವನು ನಿಯಂತ್ರಿತ ಜೀವನ ನಡೆಸುತ್ತಾನೆ; ಗೀತೆಯ ಅರ್ಥ ಹೀಗಿದೆ

Bhagavad Gita: ಮನಸ್ಸಿನ ಒತ್ತಡ ಹತೋಟಿಯಲ್ಲಿಡಬಲ್ಲವನು ನಿಯಂತ್ರಿತ ಜೀವನ ನಡೆಸುತ್ತಾನೆ; ಗೀತೆಯ ಅರ್ಥ ಹೀಗಿದೆ

Bhagavad Gita Updesh: ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಮನಸ್ಸಿನ ಒತ್ತಡ ಹತೋಟಿಯಲ್ಲಿಡಬಲ್ಲವನ ಜೀವನ ಹೇಗಿರುತ್ತೆ ಅನ್ನೋದರ ಅರ್ಥ ಹೀಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 5: ಕರ್ಮಯೋಗ - ಕೃಷ್ಣಪ್ರಜ್ಞೆಯಲ್ಲಿ ಕಾರ್ಯ

ಶ್ಲೋಕ - 23

ಶಕ್ನೋತೀಹೈವ ಯಃ ಸೋಢುಂ ಪ್ರಾಕ್ ಶರೀರವಿಮೋಕ್ಷಣಾತ್ |

ಕಾಮಕ್ರೋಧೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ ||23||

Bhagavad Gita Updesh in Kannada: ಈ ದೇಹವನ್ನು ಬಿಡುವುದಕ್ಕೆ ಮೊದಲೇ ಐಹಿಕ ಇಂದ್ರಿಯಗಳ ಬಯಕೆಗಳನ್ನು ಸಹಿಸಿಕೊಂಡು ಕಾಮ ಕ್ರೋಧಗಳ ಆವೇಗವನ್ನು ತಡೆಯಲು ಶಕ್ತನಾದ ಮನುಷ್ಯನು ಈ ಲೋಕದಲ್ಲಿ ಒಳ್ಳೆಯ ಸ್ಥಿತಿಯಲ್ಲಿರುತ್ತಾನೆ ಮತ್ತು ಸುಖಿಯಾಗಿರುತ್ತಾನೆ.

ಆತ್ಮಸಾಕ್ಷಾತ್ಕಾರದ ಮಾರ್ಗದಲ್ಲಿ ತಡೆಯಿಲ್ಲದ ಮುನ್ನಡೆಯನ್ನು ಬಯಸುವವನು ಐಹಿಕ ಇಂದ್ರಿಯಗಳ ಆವೇಗವನ್ನು ಹತೋಟಿಯಲ್ಲಿಡಲು ಪ್ರಯತ್ನಿಸಬೇಕು. ಮಾತು, ಕೋಪ, ಮನಸ್ಸು, ಉದರ, ಜನನೇಂದ್ರಿಯ, ನಾಲಿಗೆ, ಇವುಗಳ ಒತ್ತಡವಿರುತ್ತದೆ. ನಾನಾ ಇಂದ್ರಿಯಗಳ ಮತ್ತು ಮನಸ್ಸಿನ ಒತ್ತಡಗಳನ್ನು ಹತೋಟಿಯಲ್ಲಿಡಬಲ್ಲವನಿಗೆ ಗೋಸ್ವಾಮಿ ಅಥವಾ ಸ್ವಾಮಿ ಎಂದು ಹೆಸರು. ಇಂತಹ ಗೋಸ್ವಾಮಿಗಳು ಕಟ್ಟುನಿಟ್ಟಾಗಿ ನಿಯಂತ್ರಿಸಿದ ಜೀವನವನ್ನು ನಡೆಸುತ್ತಾರೆ ಮತ್ತು ಇಂದ್ರಿಯಗಳ ಒತ್ತಡಕ್ಕೆ ಒಳಗಾಗುವುದಿಲ್ಲ.

ಐಹಿಕ ಬಯಕೆಗಳು ಪೂರ್ಣಗೊಳ್ಳದಿದ್ದರೆ ಅವು ಕ್ರೋಧವನ್ನುಂಟು ಮಾಡುತ್ತವೆ. ಇದರಿಂದ ಮನಸ್ಸು, ಕಣ್ಣು ಮತ್ತು ಹೃದಯಗಳು ಕ್ಷೋಭೆಗೆ ಒಳಗಾಗುತ್ತವೆ. ಆದುದರಿಂದ ಈ ಐಹಿಕ ದೇಹವನ್ನು ಬಿಡುವ ಮೊದಲೇ ಇವನ್ನು ನಿಯಂತ್ರಿಸುವುದನ್ನು ಮನುಷ್ಯನು ಅಭ್ಯಾಸ ಮಾಡಬೇಕು. ಇದನ್ನು ಮಾಡಬಲ್ಲವನು ಆತ್ಮ ಸಾಕ್ಷಾತ್ಕಾರವನ್ನು ಪಡೆದವನು ಎಂದು ತಿಳಿಯಬಹುದು. ಹೀಗೆ ಆತ್ಮಸಾಕ್ಷಾತ್ಕಾರದ ಸ್ಥಿತಿಯಲ್ಲಿ ಆತನು ಸುಖವಾಗಿರುತ್ತಾನೆ. ಕಾಮಕ್ರೋಧಗಳನ್ನು ನಿಯಂತ್ರಿಸಲು ಶ್ರಮಿಸುವುದು ಅಧ್ಯಾತ್ಮಿಕವಾದಿಗಳ ಕರ್ತವ್ಯ.

ಶ್ಲೋಕ - 24

ಯೋನ್ತಃಸುಖೋಂತರಾರಾಮಸ್ತಥಾಂತರ್ಜ್ಯೋತಿರೇವ ಯಃ |

ಸ ಯೋಗೀ ಬ್ರಹ್ಮನಿರ್ವಾಣಂ ಬ್ರಹ್ಮಭೂತೋಧಿಗಚ್ಛತಿ ||24||

ಯಾರು ಆಂತರ್ಯದಲ್ಲಿಯೇ ಸುಖಪಡುತ್ತಾನೋ, ಯಾರು ಆಂತರ್ಯದಲ್ಲಿಯೇ ಕ್ರಿಯಾಶೀಲನಾಗಿದ್ದು ಸಂತೋಷಿಸುತ್ತಾನೋ ಮತ್ತು ಯಾರ ಗುರಿಯು ಅಂತರ್ಮುಖಿಯಾಗಿದೆಯೋ ಅಂತಹವನು ವಾಸ್ತವವಾಗಿ ಪರಿಪೂರ್ಣ ಯೋಗಿ. ಆತನು ಬ್ರಹ್ಮನ್‌ನಲ್ಲಿ ಮುಕ್ತನು ಮತ್ತು ಕಟ್ಟಕಡೆಗೆ ಪರಮ ಪ್ರಭುವನ್ನು ಹೊಂದುತ್ತಾನೆ.

ಬಹಿರಂಗದ ಕ್ರಿಯೆಗಳು ಬಾಹ್ಯ ಸುಖವನ್ನು ಪಡೆಯುವುದಕ್ಕಾಗಿಯೇ ಇವೆ. ಮನುಷ್ಯನು ಅಂತರಂಗದಲ್ಲಿ ಸುಖವನ್ನು ಸವಿಯಲು ಅಸಮರ್ಥನಾದರೆ ಬಾಹ್ಯ ಸುಖ ನೀಡುವ ಈ ಕ್ರಿಯೆಗಳನ್ನು ಹೇಗೆ ತಾನೇ ಬಿಡಬಲ್ಲನು? ಮುಕ್ತನಾದ ಮನುಷ್ಯನು ವಾಸ್ತವವಾದ ಮನುಭವದಿಂದ ಸುಖವನ್ನು ಸವಿಯುತ್ತಾನನೆ. ಆದುದದರಿಂದ ಆತನು ಯಾವ ಸ್ಥಳದಲ್ಲಿಯೇ ಆಗಲಿ ಮೌನವಾಗಿ ಕುಳಿತು ತನ್ನೊಳಗೆ ಬದುಕಿನ ಚಟುವಟಿಕೆಗಳನ್ನು ಸವಿಯಬಲ್ಲ. ಇಂತಹ ಮುಕ್ತನಾದ ಮನುಷ್ಯನು ಬಾಹ್ಯ ಐಹಿಕ ಸುಖವನ್ನು ಬಯಸುವುದಿಲ್ಲ. ಈ ಸ್ಥಿತಿಗೆ ಬ್ರಹ್ಮಭೂತ ಎಂದು ಹೆಸರು. ಇದನ್ನು ಸಾಧಿಸಿದರೆ ಭಗವದ್ಧಾಮಕ್ಕೆ ಮರುಳುವುದು ಖಂಡಿತ.

ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ನೀಡುವ ಉಪದೇಶ

ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ.

ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಮೇಲಿನಂತೆ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಡುತ್ತಾನೆ ಎನ್ನುವುದು ಶ್ರೀಕೃಷ್ಣನ ಮಾತು.(This copy first appeared in Hindustan Times Kannada website. To read more like this please logon to kannada.hindustantime.com).

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.