ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ತನ್ನಲ್ಲಿ ಮುನ್ನಡೆಯಲು ಅಪೇಕ್ಷಿಸುವವನಿಗೆ ಭಗಂವತ ಎಲ್ಲ ಗುಣಗಳನ್ನ ಸೃಷ್ಟಿಸುತ್ತಾನೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ತನ್ನಲ್ಲಿ ಮುನ್ನಡೆಯಲು ಅಪೇಕ್ಷಿಸುವವನಿಗೆ ಭಗಂವತ ಎಲ್ಲ ಗುಣಗಳನ್ನ ಸೃಷ್ಟಿಸುತ್ತಾನೆ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ತನ್ನಲ್ಲಿ ಮುನ್ನಡೆಯಲು ಅಪೇಕ್ಷಿಸುವವನಿಗೆ ಭಗಂವತ ಎಲ್ಲ ಗುಣಗಳನ್ನ ಸೃಷ್ಟಿಸುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 4 ಮತ್ತು 5 ನೇ ಶ್ಲೋಕದ ಅಂತಿಮ ಹಾಗೂ ಕೊನೆಯ ಭಾಗದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ - ಶ್ಲೋಕ 4-5

ಬುದ್ಧಿರ್ಜ್ಞಾನಮಸಮ್ಮೋಹಃ ಕ್ಷಮಾ ಸತ್ಯಂ ದಮಃ ಶಮಃ|

ಸುಖಂ ದುಃಖಂ ಭವೋಭಾವೋ ಭಯಂ ಚಾಭಯಮೇ ಚ||4||

ಅಹಿಂಸಾ ಸಮತಾ ತುಷ್ಟಿಸ್ತಪೋ ದಾನಂ ಯಶೋಯಶಃ|

ಭವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್‌ವಿಧಾಃ ||5||

ಭಗವದ್ಗೀತೆಯ 10ನೇ ಅಧ್ಯಾಯದ ಶ್ಲೋಕ 4 ಮತ್ತು 5ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ವೈದಿಕ ಸಾಹಿತ್ಯದಲ್ಲಿ ಬ್ರಾಹ್ಮಣರಿಗೆ ದಾವನ್ನು ಕೊಡಬೇಕೆಂದು ಆದೇಶಿಸಿದೆ. ವೇದಗಳ ಆದೇಶಕ್ಕನುಗುಣವಾಗಿ ಯೋಗ್ಯರೀತಿಯಲ್ಲಿ ಅಲ್ಲದಿದ್ದರೂ ಈ ರೂಢಿಯನ್ನು ಅನುಸರಿಸಲಾಗುತ್ತಿದೆ. ಆದರೂ ಆದೇಶವಿರುವುದು ದಾವನ್ನು ಬ್ರಾಹ್ಮಣರಿಗೆ ಕೊಡಬೇಕು ಎಂದು. ಏಕೆ? ಏಕೆಂದರೆ ಅವರು ಅಧ್ಯಾತ್ಮಿಕ ಜ್ಞಾನದ ಉನ್ನತ ಬೆಳವಣಿಗೆಯಲ್ಲಿ ನಿರತರಾಗಿದ್ದಾರೆ (Bhagavad Gita Updesh in Kannada).

ಬ್ರಾಹ್ಮಣನು ಬ್ರಹ್ಮನ್‌ನನ್ನು ಅರ್ಥಮಾಡಿಕೊಳ್ಳಲು ತನ್ನ ಇಡೀ ಜೀವವನ್ನು ಮುಡುಪಾಗಿಡುವನೆಂದು ನಿರೀಕ್ಷೆ. ಬ್ರಹ್ಮ ಜಾನಾತೀತಿ ಬ್ರಾಹ್ಮಣಃ ಬ್ರಹ್ಮನ್‌ನನ್ನು ತಿಳಿದವನು ಬ್ರಾಹ್ಮಣ. ಹೀಗೆ ಬ್ರಾಹ್ಮಣರು ಸದಾ ಉನ್ನತಮಟ್ಟದ ಅಧ್ಯಾತ್ಮಿಕ ಸೇವೆಯಲ್ಲಿ ತೊಡಗಿರುತ್ತಾರೆ. ಆದುದರಿಂದ ಜೀವನ ನಿರ್ವಹಣೆಗೆ ಸಂಪಾದಿಸಲು ಸಮಯವಿರುವುದಿಲ್ಲ ಎಂದು ಅವರಿಗೆ ದಾನ ಕೊಡಲಾಗುತ್ತದೆ. ವೈದಿಕ ಸಾಹಿತ್ಯದಲ್ಲಿ ಸನ್ಯಾಸಿಗೂ ದಾವನ್ನು ನೀಡಬೇಕು ಎಂದು ಹೇಳಿದೆ. ಸನ್ಯಾಸಿಗಳು ಮನೆಯಿಂದ ಮನೆಗೆ ಹೋಗಿ ಭಿಕ್ಷೆಯನ್ನು ಬೇಡುತ್ತಾರೆ. ಇದು ಹಣಕ್ಕಾಗಿ ಅಲ್ಲ. ಆದರೆ ಧರ್ಮಪ್ರಸಾರದ ಉದ್ದೇಶಗಳಿಗಾಗಿ. ಗೃಹಸ್ಥರನ್ನು ಅಜ್ಞಾನದ ನಿದ್ರೆಯಿಂದ ಎಬ್ಬಿಸಲು ಮನೆಮನೆಗೆ ಹೋಗುವುದಕ್ಕಾಗಿ ಈ ವ್ಯವಸ್ಥೆ ಇದೆ. ಸಂಸಾರಿಗಳು ಸಂಸಾರದ ವ್ಯವಹಾರಗಳಲ್ಲಿ ತೊಡಗಿರುತ್ತಾರೆ.

ತಮ್ಮ ಕೃಷ್ಣಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳುವುದು ಬದುಕಿನ ನಿಜವಾದ ಉದ್ದೇಶ. ಇದನ್ನು ಮರೆತಿದ್ದಾರೆ. ಆದುದರಿಂದ ಭಿಕ್ಷುಕರಿಗಾಗಿ ಗೃಹಸ್ಥರ ಬಳಿಗೆ ಹೋಗಿ ಅವರು ಕೃಷ್ಣಪ್ರಜ್ಞೆಯನ್ನು ಪಡೆಯುವಂತೆ ಪ್ರೋತ್ಸಾಹಿಸುವುದು ಸನ್ಯಾಸಿಗಳ ಕರ್ತವ್ಯ. ವೇದಗಳಲ್ಲಿ ಹೇಳಿರುವಂತೆ ಮನುಷ್ಯನು ಎಚ್ಚತ್ತು ಈ ಮನುಷ್ಯಜನ್ಮದಲ್ಲಿ ತನಗೆ ಸಲ್ಲಬೇಕಾದುದನ್ನು ಪಡೆಯುಕೊಳ್ಳಬೇಕು. ಈ ಜ್ಞಾನವನ್ನೂ ವಿಧಾನವನ್ನೂ ಸನ್ಯಾಸಿಗಳು ಇತರರೊಡನೆ ಹಂಚಿಕೊಳ್ಳುತ್ತಾರೆ. ಆದುದರಿಂದ ದಾನವನ್ನು ಯಾವುದೋ ಹುಚ್ಚು ಅನಿಸಿಕೆಗೆ ಕೊಡಬಾರದು. ಅದನ್ನು ಸನ್ಯಾಸಿಗೆ, ಬ್ರಾಹ್ಮಣರಿಗೆ ಮತ್ತು ಇಂತಹ ಒಳ್ಳೆಯ ಉದ್ದೇಶಗಳಿಗೆ ಕೊಡಬೇಕು.

ಚೈನತ್ಯ ಮಹಾಪ್ರಭುಗಳು ಹೇಳಿದಂತೆ ಯಶಸ್ಸನ್ನು ಗೇಳಿಸಬೇಕು. ಮನುಷ್ಯನಿಗೆ ಮಹಾಭಕ್ತನೆಂದು ಹೆಸರು ಬಂದಾಗ ಅದೇ ಕೀರ್ತಿ ಎಂದು ಅವರು ಹೇಳಿದರು. ಅದು ನಿಜವಾದ ಕೀರ್ತಿ. ಕೃಷ್ಣಪ್ರಜ್ಞೆಯಲ್ಲಿ ಶ್ರೇಷ್ಠಮನುಷ್ಯನಾಗಿ ಅದು ಎಲ್ಲರಿಗೆ ತಿಳಿದಾಗ ಅವನು ನಿಜವಾಗಿ ಕೀರ್ತಿವಂತ. ಇಂತಹ ಕೀರ್ತಿ ಇಲ್ಲದವನದು ಅಪಕೀರ್ತಿ.

ವಿಶ್ವದಲ್ಲೆಲ್ಲ, ಮನುಷ್ಯ ಸಮಾಜದಲ್ಲಿ ಮತ್ತು ದೇವತೆಗಳ ಸಮಾಜದಲ್ಲಿ ಇಂತಹ ಗುಣಗಳು ಕಾಣಬರುತ್ತವೆ. ಇತರ ಲೋಕಗಳಲ್ಲಿಯೂ ವಿವಿಧ ಸ್ವರೂಪಗಳ ಮನುಷ್ಯರಿದ್ದಾರೆ. ಈ ಗುಣಗಳು ಅಲ್ಲಿಯೂ ಇವೆ. ಈಗ ಕೃಷ್ಣಪ್ರಜ್ಞೆಯಲ್ಲಿ ಮುನ್ನಡೆಯಲು ಅಪೇಕ್ಷಿಸುವವನಿಗಾಗಿ ಕೃಷ್ಣನು ಈ ಎಲ್ಲ ಗುಣಗಳನ್ನು ಸೃಷ್ಟಿಸುತ್ತಾನೆ. ಆದರೆ ವ್ಯಕ್ತಿಯು ಅವುಗಳನ್ನು ತನ್ನೊಳಗಿನಿಂದಲೇ ಬೆಳೆಸಿಕೊಳ್ಳುತ್ತಾನೆ. ಪರಮ ಪ್ರಭುವಿನ ಭಕ್ತಿಸೇವೆಯಲ್ಲಿ ತೊಡಗಿರುವವನು, ಪರಮ ಪ್ರಭುವೇ ವ್ಯವಸ್ಥೆ ಮಾಡಿದಂತೆ, ಎಲ್ಲ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುತ್ತಾನೆ.

ನಾವು ಕಾಣುವ ಎಲ್ಲದರ ಮೂಲ ಅವು ಒಳ್ಳೆಯವಾಗಿರಲಿ ಅಥವಾ ಕೆಟ್ಟದ್ದಾಗರಿಲಿ ಕೃಷ್ಣನೇ. ಕೃಷ್ಣನಲ್ಲಿ ಇಲ್ಲದ್ದು ಯಾವುದ ಈ ಐಹಿಕ ಜಗತ್ತಿನಲ್ಲಿ ಪ್ರಕಟವಾಗಲಾರದು. ಇದು ಜ್ಞಾನ. ವಸ್ತುಗಳು ಬೇರೆ ಬೇರೆ ಸ್ಥಿತಿಗಳಲ್ಲಿ ಇವೆ ಎಂದು ನಮಗೆ ತಿಳಿದಿದ್ದರೂ ಎಲ್ಲವೂ ಕೃಷ್ಣನಿಂದ ಬರುತ್ತವೆ ಎನ್ನುವುದನ್ನು ನಾವು ಗುರುತಿಸಬೇಕು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)