Bhagavad Gita: ಭಗವಂತನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವವರು ಸದಾ ದಿವ್ಯಸ್ಥಿತಿಯಲ್ಲಿರುತ್ತಾರೆ; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವವರು ಸದಾ ದಿವ್ಯಸ್ಥಿತಿಯಲ್ಲಿರುತ್ತಾರೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಗವಂತನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವವರು ಸದಾ ದಿವ್ಯಸ್ಥಿತಿಯಲ್ಲಿರುತ್ತಾರೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಗವಂತನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವವರು ಸದಾ ದಿವ್ಯಸ್ಥಿತಿಯಲ್ಲಿರುತ್ತಾರೆ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 42ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 42

ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ |

ವಿಷ್ಟಭ್ಯಾಹಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್ ||42||

ಅನುವಾದ: ಅರ್ಜುನ, ಈ ವಿವರವಾದ ಜ್ಞಾನದ ಅಗತ್ಯವೇನು? ನನ್ನ ಒಂದೇ ಅಂಶದಿಂದ ನಾನು ಇಡೀ ವಿಶ್ವವನ್ನು ವ್ಯಾಪಿಸಿ ಧರಿಸಿದ್ದೇನೆ.

ಭಾವಾರ್ಥ: ಪರಮ ಪ್ರಭುವು ಪರಮಾತ್ಮನಾಗಿ ಎಲ್ಲ ವಸ್ತುಗಳನ್ನು ಪ್ರವೇಶಿಸಿರುವುದರಿಂದ ಇಡೀ ಐಹಿಕ ವಿಶ್ವಗಳಲ್ಲಿ ಅವನ ಪ್ರತಿನಿಧಿಗಳಿದ್ದಾರೆ. ಇಲ್ಲಿ ಪ್ರಭುವು ವಸ್ತುಗಳು ತಮ್ಮ ಪ್ರತ್ಯೇಕ ಶ್ರೀಮಂತಿಕೆ ಮತ್ತು ವೈಭವಗಳಲ್ಲಿ ಹೇಗೆ ಅಸ್ತಿತ್ವದಲ್ಲಿರುತ್ತವೆ ಎಂದು ತಿಳಿದುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಅರ್ಜುನನಿಗೆ ಹೇಳುತ್ತಾನೆ. ಕೃಷ್ಣನು ಪರಮಾತ್ಮನಾಗಿ ಎಲ್ಲ ವಸ್ತುಗಳನ್ನು ಪ್ರವೇಶಿಸುವುದರಿಂದ ಅವು ಅಸ್ತಿತ್ವದಲ್ಲಿವೆ ಎಂದು ತಿಳಿದುಕೊಳ್ಳಬೇಕು. ಅತ್ಯಂತ ಬೃಹತ್ತಾದ ಜೀವಿಯಾದ ಬ್ರಹ್ಮನಿಂದ ಪ್ರಾರಂಭಿಸಿ ಅತ್ಯಂತ ಸಣ್ಣ ಇರುವೆಯವರೆಗೆ ಎಲ್ಲವೂ ಅಸ್ತಿತ್ವದಲ್ಲಿರುವುದಕ್ಕೆ ಕಾರಣ ಪ್ರಭುವು ಪ್ರತಿಯೊಂದನ್ನೂ ಪ್ರವೇಶಿಸಿದ್ದಾನೆ ಮತ್ತು ಪಾಲಿಸುತ್ತಿದ್ದಾನೆ ಎನ್ನುವುದೇ.

ಯಾವ ದೇವತೆಯನ್ನು ಪೂಜಿಸಿದರೂ ಅದು ಮನುಷ್ಯನನ್ನು ದೇವೋತ್ತಮ ಪರಮ ಪುರುಷನ ಬಳಿಗೆ ಅಥವಾ ಪರಮಗುರಿಯೆಡೆಗೆ ಕೊಂಡೊಯ್ಯುತ್ತದೆ ಎಂದು ಒಂದೇ ಸಮನೆ ವಿವರಿಸುವ ಧರ್ಮಸಂಸ್ಥೆಯೊಂದಿದೆ. ಆದರೆ ಇಲ್ಲಿ ದೇವತೆಗಳ ಪೂಜೆಯನ್ನು ಸ್ವಲ್ಪವೂ ಪ್ರೋತ್ಸಾಹಿಸಿಲ್ಲ. ಏಕೆಂದರೆ ಬ್ರಹ್ಮ ಮತ್ತು ಶಿವನಂತಹ ದೇವತೆಗಳೂ ಸಹ ಪರಮ ಪ್ರಭುವಿನ ಸಿರಿಯ ಒಂದು ಭಾಗದ ಪ್ರತಿನಿಧಿಗಳು ಮಾತ್ರ. ಜನ್ಮತಾಳಿದ ಎಲ್ಲರಿಗೂ ಅವನೇ ಮೂಲ. ಅವನಿಗಿಂತ ದೊಡ್ಡವರು ಇಲ್ಲ. ಅವನು ಅಸಮೌರ್ಧ್ವ. ಹೀಗೆಂದರೆ ಅವನಿಗಿಂತ ಶ್ರೇಷ್ಠರು ಅಥವಾ ಅವನಿಗೆ ಸಮನಾದವರು ಯಾರೂ ಇಲ್ಲ.

ಶ್ರೀಕೃಷ್ಣನನ್ನು ದೇವತೆಗಳ ವರ್ಗದಲ್ಲಿ - ಅವರು ಬ್ರಹ್ಮ ಅಥವಾ ಶಿವ ಆದರೂ ಸಹ - ಪರಿಗಣಿಸಿದರೆ ಅಂತಹ ಮನುಷ್ಯನು ಕೂಡಲೇ ನಾಸ್ಕಿಕನಾಗುತ್ತಾನೆ ಎಂದು ಪದ್ಮಪುರಾಣದಲ್ಲಿ ಹೇಳಿದೆ. ಯಾರಾದರೂ ಕೃಷ್ಣನ ಸಾಮರ್ಥ್ಯದ ಸಿರಿಗಳ ಮತ್ತು ವಿಸ್ತರಣಗಳ ಬೇರೆಬೇರೆ ವರ್ಣನೆಗಳನ್ನು ಅಧ್ಯಯನ ಮಾಡಿದರೆ, ನಿಸ್ಸಂದೇಹವಾಗಿಯೂ ಆತನು ಪ್ರಭು ಶ್ರೀಕೃಷ್ಣನ ಸ್ಥಾನವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ತನ್ನ ಮನಸ್ಸನ್ನು ನಿಶ್ಚಲವಾಗಿ ಕೃಷ್ಣಪ್ರಜ್ಞೆಯಲ್ಲಿ ನಿಲ್ಲಿಸಬಹುದು. ಪ್ರಭುವಿನ ಆಂಶಿಕ ಪ್ರತಿನಿದಿಯಾದ ಪರಮಾತ್ಮನು ಅಸ್ತಿತ್ವದಲ್ಲಿರುವ ಪ್ರತಿಯೊಂದು ವಸ್ತುವನ್ನೂ ಪ್ರವೇಶಿಸುತ್ತಾನೆ. ಇದರಿಂದ ಪ್ರಭುವು ಸರ್ವಾಂತರ್ಯಾಮಿ.

ಪರಿಶುದ್ಧ ಭಕ್ತರು ತಮ್ಮ ಮನಸ್ಸುಗಳನ್ನು ಪೂರ್ಣ ಭಕ್ತಿಸೇವೆಯಲ್ಲಿ ಕೃಷ್ಣಪ್ರಜ್ಞೆಯಲ್ಲಿ ಕೇಂದ್ರೀಕರಿಸುತ್ತಾರೆ. ಆದುದರಿಂದ ಅವರು ಸದಾ ದಿವ್ಯಸ್ಥಿತಿಯಲ್ಲಿ ಇರುತ್ತಾರೆ. ಈ ಅಧ್ಯಾಯದ ಎಂಟರಿಂದ ಹನ್ನೊಂದನೆಯ ಶ್ಲೋಕಗಳಲ್ಲಿ ಕೃಷ್ಣನ ಭಕ್ತಿಸೇವೆ ಮತ್ತು ಪೂಜೆಗಳನ್ನು ಬಹುಸ್ಪಷ್ಟವಾಗಿ ಸೂಚಿಸಿದೆ. ಪರಿಶುದ್ಧ ಭಕ್ತಿಸೇವೆಯ ಮಾರಗ್ವೇ ಅದು. ದೇವೋತ್ತಮ ಪರಮ ಪುರುಷನ ಸಹವಾಸದ ಅತ್ಯುನ್ನತ ಭಕ್ತಿಯ ಪರಿಪೂರ್ಣತೆಯನ್ನು ಸಾಧಿಸುವುದು ಹೇಗೆ ಎನ್ನುವುದನ್ನು ವಿವರವಾಗಿ ಈ ಅಧ್ಯಾಯದಲ್ಲಿ ವಿವರಿಸಿದೆ. ಕೃಷ್ಣನಿಂದ ಬಂದ ಗುರುಶಿಷ್ಯ ಪರಂಪರೆಯಲ್ಲಿ ಒಬ್ಬ ಮಹಾನ್ ಆಚಾರ್ಯರಾದ ಶ್ರೀ ಬಲದೇವ ವಿದ್ಯಾಭೂಷಣರು ಈ ಅಧ್ಯಾಯದ ಮೇಲಿನ ತಮ್ಮ ವ್ಯಾಖ್ಯಾನವನ್ನು ಈ ಮಾತುಗಳಿಂದ ಮುಗಿಸುತ್ತಾರೆ.

ಯಚ್ಛಕ್ತಿಲೇಶಾತ್ ಸುರ್ಯಾದ್ಯಾ ಭವನ್ತ್ಯತ್ಯುಗ್ರತೇಜಸಃ |

ಯದಂಶೇನ ಧೃತಂ ವಿಶ್ವಂ ಸ ಕೃಷ್ಣೋ ದಶಮೇರ್ಚ್ಯತೇ ||

ಪ್ರಬಲವಾದ ಸೂರ್ಯನು ಸಹ ತನ್ನ ಶಕ್ತಿಯನ್ನು ಶ್ರೀಕೃಷ್ಣನ ಮಹಾಶಕ್ತಿಯಿಂದ ಪಡೆಯುತ್ತಾನೆ. ಕೃಷ್ಣನ ಆಂಶಿಕ ವಿಸ್ತರಣವು ಇಡೀ ಜಗತ್ತನ್ನು ಪಾಲಿಸುತ್ತದೆ. ಆದುದರಿಂದ ಶ್ರೀಕೃಷ್ಣನು ಪೂಜಾರ್ಹನು. ಇಲ್ಲಿಗೆ ಶ್ರೀಮದ್ಭಗವದ್ಗೀತೆಯ ವಿಭೂತಿ ಯೋಗ ಎಂಬ ಹತ್ತನೆಯ ಅಧ್ಯಾಯದ ಭಕ್ತಿವೇದಾಂತ ಭಾವಾರ್ಥವು ಮುಗಿಯಿತು.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.