Bhagavad Gita: ಭಗವಂತನಿಗೆ ಭಕ್ತಿಸೇವೆ ಸಲ್ಲಿಸಿದರೆ ಅಜ್ಞಾನ ದೂರವಾಗುತ್ತೆ; ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನಿಗೆ ಭಕ್ತಿಸೇವೆ ಸಲ್ಲಿಸಿದರೆ ಅಜ್ಞಾನ ದೂರವಾಗುತ್ತೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತನಿಗೆ ಭಕ್ತಿಸೇವೆ ಸಲ್ಲಿಸಿದರೆ ಅಜ್ಞಾನ ದೂರವಾಗುತ್ತೆ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಭಗವಂತನಿಗೆ ಭಕ್ತಿಸೇವೆ ಸಲ್ಲಿಸಿದರೆ ಅಜ್ಞಾನ ದೂರವಾಗುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 12 ಮತ್ತು 13ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ 12-13

ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್ |

ಪುರುಷಂ ಶಾಶ್ವತಂ ದಿವ್ಯಮಾದಿದೇವಮಜಂ ವಿಭುಮ್ ||12||

ಆಹುಸ್ತ್ವಾಮೃಷಯಃ ಸರ್ವೇ ದೇವರ್ಷಿರ್ನಾರದಸ್ತಥಾ |

ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ ||13||

ಅನುವಾದ: ಅರ್ಜುನನು ಹೇಳಿದನು-ನೀನು ದೇವೋತ್ತಮ ಪರಮ ಪುರುಷ, ಪರಂಧಾಮ, ಪವಿತ್ರ, ಪರಿಪೂರ್ಣ ಸತ್ಯ. ನೀನು ನಿತ್ಯನು, ದಿವ್ಯನು, ಆದಿಪುರುಷನು. ನಿನಗೆ ಹುಟ್ಟಿಲ್ಲ. ನೀನೇ ಅತ್ಯಂತ ಶ್ರೇಷ್ಠನು. ನಾರದ, ಅಸಿತ, ದೇವಲ ಮತ್ತು ವ್ಯಾಸರಂತಹ ಮಹರ್ಷಿಗಳು ನಿನ್ನ ವಿಷಯದಲ್ಲಿ ಈ ಸತ್ಯವನ್ನು ದೃಢಪಡಿಸುತ್ತಾರೆ. ಈ ನೀನೇ ಇದನ್ನು ನನಗೆ ಹೇಳುತ್ತಿದ್ವೀಯೆ.

ಭಾವಾರ್ಥ: ಈ ಎರಡು ಶ್ಲೋಕಗಳಲ್ಲಿ ಪ್ರಭುವು ಆದುನಿಕ ತತ್ವಶಾಸ್ತ್ರಜ್ಞನಿಗೆ ಒಂದು ಅವಕಾಶವನ್ನು ಕೊಡುತ್ತಿದ್ದಾನೆ. ಏಕೆಂದರೆ ಪರಮ ಪ್ರಭುವು ವ್ಯಕ್ತಿಗತ ಆತ್ಮಕ್ಕಿಂತ ಭಿನ್ನನಾದವನು ಎನ್ನುವುದು ಸ್ಪಷ್ಟ. ಅರ್ಜುನನು ಭಗವದ್ಗೀತೆಯ ಈ ಅಧ್ಯಾಯದ ನಾಲ್ಕು ಬಹು ಮುಖ್ಯ ಶ್ಲೋಕಗಳನ್ನು ಕೇಳಿದನಂತರ ಎಲ್ಲ ಸಂದೇಹಗಳಿಂದಲೂ ಮುಕ್ತನಾಗಿ ಶ್ರೀಕೃಷ್ಣನನ್ನು (Lord Krishna) ದೇವೋತ್ತಮ ಪರಮ ಪುರುಷನೆಂದು ಒಪ್ಪಿಕೊಂಡ. ಕೂಡಲೇ ಧೈರ್ಯವಾಗಿ, ನೀನೇ ಪರಬ್ರಹ್ಮ, ದೇವೋತ್ತಮ ಪರಮ ಪುರುಷ ಎಂದು ಸಾರಿದ (Bhagavad Gita Updesh in Kannada).

ಹಿಂದೆ ಕೃಷ್ಣನು ತಾನೇ ಎಲ್ಲದರ ಮತ್ತು ಎಲ್ಲ ಜನರ ಸೃಷ್ಟಿಕರ್ತ ಎಂದು ಹೇಳಿದ. ಪ್ರತಿಯೊಬ್ಬ ದೇವತೆಯೂ ಮಾನವಜೀವಿಯೂ ಅವನನ್ನು ಅವಲಂಬಿಸಿದ್ದಾರೆ. ಅಜ್ಞಾನದಿಂದ ಮನುಷ್ಯರೂ ದೇವತೆಗಳೂ ತಾವು ಪರಿಪೂರ್ಣರು, ದೇವೋತ್ತಮ ಪರಮ ಪುರುಷನಿಂದ ಸ್ವತಂತ್ರರು ಎಂದು ಭಾವಿಸುತ್ತಾರೆ. ಭಕ್ತಿಸೇವೆಯನ್ನು ಸಲ್ಲಿಸುವುದರಿಂದ ಈ ಅಜ್ಞಾನವು ಪರಿಪೂರ್ಣವಾಗಿ ತೊಡೆದು ಹೋಗುತ್ತದೆ. ಇದನ್ನು ಇದರ ಹಿಂದಿನ ಶ್ಲೋಕದಲ್ಲಿ ಪ್ರಭುವು ವಿವರಿಸಿದ್ದಾನೆ.

ಈಗ, ವೇದಗಳ ಆದೇಶಕ್ಕನುಗುಣವಾಗಿ, ಪ್ರಭುವಿನ ಕೃಪೆಯಿಂದ ಅರ್ಜನನು ಅವನನ್ನು ಪರಮಸತ್ಯವೆಂದು ಒಪ್ಪಿಕೊಳ್ಳುತ್ತಿದ್ದಾನೆ. ಕೃಷ್ಣನು ಅರ್ಜುನನ ಆತ್ಮೀಯ ಗೆಳೆಯ ಎಂಬ ಕಾರಣಕ್ಕಾಗಿ ಅರ್ಜುನನು ಅವನನ್ನು ದೇವೋತ್ತಮ ಪರಮ ಪುರುಷ ಎಂದು, ಪರಿಪೂರ್ಣ ಸತ್ಯ ಎಂದು ಕರೆದು ವೃಥಾ ಹೊಗಳುತ್ತಿಲ್ಲ. ಈ ಎರಡು ಶ್ಲೋಕಗಳಲ್ಲಿ ಅರ್ಜುನನು ಹೇಳಿರುವುದೆಲ್ಲವನ್ನೂ ವೇದಗಳ ಸತ್ಯವು ದೃಢಪಡಿಸಿದೆ. ಪರಮ ಪ್ರಭುವಿನ ಸೇವೆಯನ್ನು ಕೈಗೊಂಡವನು ಮಾತ್ರ ಅವನನ್ನು ಅರ್ಥಮಾಡಿಕೊಳ್ಳಬಲ್ಲ. ಇತರರಿಗೆ ಇದು ಸಾಧ್ಯವಿಲ್ಲ ಎಂದು ವೇದಗಳ ಅನುಜ್ಞೆಯು ದೃಢವಾಗಿ ಹೇಳಿದೆ. ಅರ್ಜುನನು ಈ ಶ್ಲೋಕದಲ್ಲಿ ಹೇಳಿದ ಒಂದೊಂದು ಮಾತಿಗೂ ವೇದಗಳ ಅಪ್ಪಣೆಯ ಒಪ್ಪಿಗೆಯಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.