ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನ ಕಾರ್ಯಗಳು ಎಲ್ಲರಿಗೂ ಸಮಾನವಾಗಿ ಒಳಿತನ್ನು ಮಾಡುತ್ತವೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತನ ಕಾರ್ಯಗಳು ಎಲ್ಲರಿಗೂ ಸಮಾನವಾಗಿ ಒಳಿತನ್ನು ಮಾಡುತ್ತವೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತನ ಕಾರ್ಯಗಳು ಎಲ್ಲರಿಗೂ ಸಮಾನವಾಗಿ ಒಳಿತನ್ನು ಮಾಡುತ್ತವೆ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 36 ಮತ್ತು 38ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 36

ಸ್ಥಾನೇ ಹೃಷಿಕೇಶ ತವ ಪ್ರಕೀರ್ತ್ಯಾ

ಜಗತ್ ಪ್ರಹೃಷ್ಯತ್ಯನುರಜ್ಯತೇ ಚ |

ರಕ್ಷಾಂಸಿ ಭೀತಾನಿ ದಿಶೋ ದ್ರವನ್ತಿ

ಸರ್ವೇ ನಮಸ್ಯನ್ತಿ ಚ ಸಿದ್ಧಸಂಘಾಃ ||36||

ಅನುವಾದ: ಅರ್ಜುನನು ಹೇಳಿದನು - ಇಂದ್ರಿಯಗಳ ಪ್ರಭುವಾದ ಹೃಷಿಕೇಶನೆ, ನಿನ್ನ ಹೆಸರನ್ನು ಕೇಳಿಯೇ ಇಡೀ ಜಗತ್ತು ಸಂತೋಷ ಪಡುತ್ತದೆ. ಆದುದರಿಂದ ಎಲ್ಲರೂ ನಿನ್ನಲ್ಲಿ ಅನುರಾಗೊಳ್ಳುತ್ತಾರೆ. ಸಿದ್ಧರು ನಿನಗೆ ತಮ್ಮ ಗೌರವ ಪೂರ್ವಕ ನಮಸ್ಕಾರಗಳನ್ನು ಅರ್ಪಿಸುತ್ತಾರೆ. ರಾಕ್ಷಸರು ಬೆದರಿ ಎಲ್ಲ ದಿನಕ್ಕುಗಳಲ್ಲಿ ಓಡಿ ಹೋಗುತ್ತಾರೆ. ಇದೆಲ್ಲ ಯುಕ್ತವೇ ಸರಿ.

ಭಾವಾರ್ಥ: ಕುರುಕ್ಷೇತ್ರದ ಪರಿಣಾಮವನ್ನು ಕೃಷ್ಣನಿಂದ ಕೇಳಿದಾಗ ಅರ್ಜುನನಿಗೆ ಜ್ಞಾನೋದಯವಾಯಿತು. ದೇವೋತ್ತಮ ಪರಮ ಪುರುಷನ ಮಹಾಭಕ್ತನೂ ಸ್ನೇಹಿತನೂ ಆಗಿ ಅರ್ಜುನನು ಕೃಷ್ಣನು ಮಾಡಿದುದೆಲ್ಲ ಯೋಗ್ಯವೇ ಎಂದು ಹೇಳಿದನು. ಭಕ್ತರನ್ನು ರಕ್ಷಿಸುವವನೂ, ಭಕ್ತರ ಆರಾಧ್ಯ ದೈವವೂ ಕೃಷ್ಣನೇ. ಅನಿಷ್ಟರಾದವರನ್ನು ನಾಶಮಾಡುವವನೂ ಕೃಷ್ಣನೇ ಎಂದು ಅರ್ಜುನನು ದೃಢಪಡಿಸುತ್ತಾನೆ. ಅವನ ಕಾರ್ಯಗಳು ಎಲ್ಲರಿಗೂ ಸಮಾನವಾಗಿ ಒಳಿತನ್ನು ಮಾಡುತ್ತವೆ.

ಕುರುಕ್ಷೇತ್ರ ಯುದ್ಧದ ಮುಕ್ತಾಯದ ಹಂತದಲ್ಲಿ ಹೊರ ಆಕಾಶದಲ್ಲಿ ಅನೇಕರು ದೇವತೆಗಳು, ಸಿದ್ಧರು, ಉನ್ನತ ಲೋಕಗಳ ಧೀಮಂತರು ಎಲ್ಲ ಸೇರಿದ್ದರು. ಕೃಷ್ಣನು ಅಲ್ಲಿದ್ದುದರಿಂದ ಅವರೆಲ್ಲ ಯುದ್ಧವನ್ನು ವೀಕ್ಷಿಸುತ್ತಿದ್ದರು ಎಂದು ಇಲ್ಲಿ ಅರ್ಜುನನಿಗೆ ಅರಿವಾಯಿತು. ಅರ್ಜುನನಿಗೆ ವಿಶ್ವರೂಪದರ್ಶನವಾದಗ ದೇವತೆಗಳು ಆನಂದಪಟ್ಟರು. ಆದರೆ ಇತರರು-ರಾಕ್ಷಸರು ಮತ್ತು ನಾಸ್ತಿಕರು-ಭಗವಂತನ ಸ್ತುತಿಯನ್ನು ಸಹಿಸದಾದರು. ದೇವೋತ್ತಮ ಪರ ಪುರುಷನ ಭಯಂಕರ ರೂಪವನ್ನು ಕಂಡು ಅವರು ಸಹಜವಾಗಿ ಹೆದರಿ ಓಡಿ ಹೋದರು. ಕೃಷ್ಣನು ಭಕ್ತರನ್ನೂ ನಾಸ್ತಿಕರನ್ನೂ ನಡೆಸಿಕೊಂಡ ರೀತಿಯನ್ನು ಅರ್ಜುನನು ಹೊಗಳುತ್ತಾನೆ. ಪ್ರಭುವು ಮಾಡುವುದೆಲ್ಲ ಎಲ್ಲರಿಗೂ ಒಳಿತಾದುದೇ ಎಂದು ಭಕ್ತನಿಗೆ ಗೊತ್ತು. ಆದುದರಿಂದ ಎಲ್ಲ ಸಂದರ್ಭಗಳಲ್ಲಿಯೂ ಅವನು ಪ್ರಭುವಿನ ಮಹಿಮೆಯನ್ನು ಹೊಗಳುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 38

ತ್ವಮಾದಿದೇವಃ ಪುರುಷಃ ಪುರಾಣಸ್

ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ |

ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ

ತ್ವಯಾ ತತಂ ವಿಶ್ವಮನನ್ತರೂಪ ||38||

ಅನುವಾದ: ನೀನು ಆದಿ ದೇವೋತ್ತಮ ಪುರುಷನು. ಪುರಾಣ ಪುರುಷನು, ಈ ಪ್ರಕಟಿತ ವಿಶ್ವದ ಕಟ್ಟಕಡೆಯ ಆಶ್ರಯ ನೀನು. ಎಲ್ಲವನ್ನೂ ತಿಳಿದವನು ನೀನು. ತಿಳಿಯಲು ಸಾಧ್ಯವಿರುವುದೆಲ್ಲ ನೀನೇ. ಭೌತಿಕ ಗುಣಗಳನ್ನು ಮೀರಿದ ಪರಂಧಾಮನು ನೀನು. ಹೇ ಅನಂತರೂಪನೆ, ಈ ವಿಶ್ವವನ್ನೆಲ್ಲ ನೀನು ವ್ಯಾಪಿಸಿರುವೆ.

ಭಾವಾರ್ಥ: ಎಲ್ಲವೂ ದೇವೋತ್ತಮ ಪರಮ ಪುರುಷನನ್ನು ಅವಲಂಬಿಸಿದೆ. ಆದುದರಿಂದ ಅವನೇ ಕಡೆಯ ಶಾಂತಿಯ ತಾಣ. ನಿಧಾನಮ್ ಎಂದರೆ ಎಲ್ಲವೂ, ಬ್ರಹ್ಮಜ್ಯೋತಿಯೂ ಸಹ, ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನೇ ಅವಲಂಬಿಸಿದೆ ಎಂದು ಅರ್ಥ. ಈ ಪ್ರಪಂಚದಲ್ಲಿ ನಡೆಯುವುದೆಲ್ಲವನ್ನೂ ತಿಳಿದವನು ಅವನು. ಜ್ಞಾನಕ್ಕೆ ಕೊನೆ ಏನಾದರೂ ಇದ್ದರೆ ಅದು ಅವನೇ. ಆದುದರಿಂದ ಅವನೇ ಜ್ಞಾನ ಮತ್ತು ಜ್ಞೇಯ. ಅವನೇ ಜ್ಞಾನದ ಗುರಿ. ಏಕೆಂದರೆ ಅವನು ಸರ್ವವ್ಯಾಪಿ. ಅವನೇ ಅಧ್ಯಾತ್ಮಿಕ ಜಗತ್ತಿನಲ್ಲಿ ಕಾರಣನು. ಆದುದರಿಂದ ಅವನು ದಿವ್ಯನು. ಅಲೌಕಿಕ ಜಗತ್ತಿನಲ್ಲಿ ಅವನೇ ಪ್ರಧಾನನು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.