ಭಗವದ್ಗೀತೆ: ಭಗವಂತನಲ್ಲಿ ನಂಬಿಕೆ ಇಟ್ಟವರು ಪ್ರತಿ ಹಂತದಲ್ಲೂ ಯಶಸ್ವಿಯಾಗುತ್ತಾರೆ; ಗೀತೆಯ ಅರ್ಥ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸಂಶಯ ಪಡುವವನಿಗೆ ಈ ಲೋಕದಲ್ಲಿ ಎಂದೂ ಸುಖವಿಲ್ಲ ಎಂಬುದರ ಅರ್ಥ ತಿಳಿಯಿರಿ.
ಅಜ್ಞಶ್ಚಾದ್ಧಧಾನಶ್ಚ ಸಂಶಯಾತ್ಮಾ ವಿನಶ್ಯತಿ |
ನಾಯಂ ಲೋಕಸ್ತಿ ನಪರೋ ನ ಸುಖಂ ಸಂಶಯಾತ್ಮನಃ ||40||
ಅಜ್ಞಾನಿಗಳೂ ಶ್ರದ್ಧೆಯಿಲ್ಲದವರೂ ಅಪೌರುಷೇಯ ಧರ್ಮಗ್ರಂಥಗಳಲ್ಲಿ ಸಂಶಯಪಡುತ್ತಾರೆ. ಇಂತಹವರಿಗೆ ಭಗವಂತನ ಪ್ರಜ್ಞೆ ಲಭ್ಯವಾಗುವುದಿಲ್ಲ. ಅವನು ನಾಶ ಹೊಂದುವರು. ಸಂಶಯಾತ್ಮನಾದವರಿಗೆ ಈ ಲೋಕದಲ್ಲಿ ಸುಖವಿಲ್ಲ.
ಹಲವಾರುರ ಪ್ರಮಾಣ ಮತ್ತು ಅಧಿಕೃತ ಅಪೌರುಷೇಯ ಧರ್ಮಗ್ರಂಥಗಳಲ್ಲಿ ಭಗವದ್ಗೀತೆಯೇ ಶ್ರೇಷ್ಠವಾದದ್ದು. ಸ್ವಲ್ಪ ಹೆಚ್ಚು ಕಡಮೆ ಪ್ರಾಣಿಗಳಂತೆಯೇ ಇರುವವರಿಗೆ ಪ್ರಮಾಣ ಪೂರ್ವಕವಾದ ಅಪೌರುಷೇಯ ಧರ್ಮಗ್ರಂಥಗಳಲ್ಲಿ ಶ್ರದ್ಧೆಯೂ ಇಲ್ಲ, ಅವುಗಳ ತಿಳುವಳಿಕೆಯೂ ಇಲ್ಲ. ಕೆಲವರಿಗೆ ಅಪೌರುಷೇಯ ಧರ್ಮಗ್ರಂಥಗಳ ತಿಳುವಳಿಕೆಯಿದೆ. ಅವರು ಅವುಗಳಿಂದ ಭಾಗಗಳನ್ನು ಉದ್ಧರಿಸಿ ಹೇಳಬಲ್ಲರು. ಆದರೆ ಈ ಮಾತುಗಳಲ್ಲಿ ಅವರಿಗೆ ಶ್ರದ್ಧೆಯಿಲ್ಲ. ಇತರರಿಗೆ ಭಗವದ್ಗೀತೆಯಂತ ಧರ್ಮಗ್ರಂಥಗಳಲ್ಲಿ ಶ್ರದ್ಧೆಯಿರಬಹುದು. ಆದರೆ ಅವರಿಗೆ ಪರಮ ಪುರುಷನಾದ ಶ್ರೀಕೃಷ್ಣನಲ್ಲಿ ನಂಬಿಕೆಯಿಲ್ಲ ಅಥವಾ ಅವನನ್ನು ಪೂಜಿಸುವುದಿಲ್ಲ. ಅಂತಹವರಿಗೆ ಕೃಷ್ಣಪ್ರಜ್ಞೆಯಲ್ಲಿ ಯಾವ ಸ್ಥಾನವೂ ಇಲ್ಲ.
ಅವರು ನಾಶಹೊಂದುತ್ತಾರೆ. ಮೇಲೆ ಹೇಳಿದ ಜನರಲ್ಲಿ ಯಾರಿಗೆ ಶ್ರದ್ಧೆಯಿಲ್ಲವೋ ಮತ್ತು ಸದಾ ಸಂಶಯದಲ್ಲಿರುವರೋ ಅವರು ಮುನ್ನಡೆಯುವುದೇ ಇಲ್ಲ. ಭಗವಂತನಲ್ಲಿ ಮತ್ತು ಅವನು ತಿಳಿಸಿಕೊಟ್ಟ ಮಾತಿನಲ್ಲಿ ನಂಬಿಕೆ ಇಲ್ಲದಿರುವವರಿಗೆ ಈ ಲೋಕದಲ್ಲಾಗಲೀ ಮುಂದಿನ ಲೋಕದಲ್ಲಾಗಲೀ ಒಳ್ಳೆಯಾಗುವುದಿಲ್ಲ. ಅವರಿಗೆ ಸುಖವೆಂಬುದೇ ಇಲ್ಲ. ಆದುದರಿಂದ ಅಪೌರುಷೇಯ ಧರ್ಮಗ್ರಂಥಗಳ ತತ್ವಗಳನ್ನು ಶ್ರದ್ಧೆಯಿಂದ ಅನುಸರಿಸಬೇಕು. ಇದರಿಂದ ಜ್ಞಾನವೇದಿಕೆಗೆ ಏರಬಹುದು. ಆಧ್ಯಾತ್ಮಿಕ ತಿಳುವಳಿಕೆಯ ದಿವ್ಯವೇದಿಕೆಗೆ ಏರಲು ಈ ಜ್ಞಾನವು ಮಾತ್ರ ನೆರವಾಗುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಆಧ್ಯಾತ್ಮಿಕ ಮುಕ್ತಿಯಲ್ಲಿ ಸಂಶಯಾತ್ಮರಿಗೆ ಸ್ಥಾನವೇ ಇಲ್ಲ. ಆದುದರಿಂದ ಗುರುಶಿಷ್ಯ ಪರಂಪರೆಯಲ್ಲಿ ಒಂದ ಹಿರಿಯ ಆಚಾರ್ಯರ ಹೆಜ್ಜೆಗಳನ್ನು ಅನುಸರಿಸಿ ಯಶಸ್ಸನ್ನು ಪಡೆಯಬೇಕು.
ಯೋಗಸನ್ನ್ಯಸ್ತಕರ್ಮಾಣಂ ಜ್ಞಾನಸಞ್ಫನ್ನಸಂಶಯಮ್ |
ಆತ್ಮವನ್ತಂ ನ ಕರ್ಮಾಣಿ ನಿಬದ್ಧಂತಿ ಧನಂಜಯ ||41||
ಯಾರು ತನ್ನ ಕರ್ಮದ ಫಲಗಳನ್ನು ತ್ಯಜಿಸಿ ಭಕ್ತಿಪೂರ್ವಕ ಸೇವೆಯಲ್ಲಿ ಕರ್ಮಮಾಡುವನೋ ಮತ್ತು ಆಧ್ಯಾತ್ಮಿಕ ಜ್ಞಾನದಿಂದ ಸಂಶಯಗಳನ್ನು ನಾಶ ಮಾಡಿರುವನೋ ಅವನು ವಾಸ್ತವವಾಗಿ ಆತ್ಮದಲ್ಲಿ ನೆಲೆಸಿರುತ್ತಾನೆ. ಧನಂಜಯ, ಇಂತಹ ಮನುಷ್ಯನನ್ನು ಕ್ರಮಫಲಗಳು ಬಂಧಿಸಲಾರವು.
ದೇವೋತ್ತಮ ಪರಮ ಪುರುಷನಾದ ಭಗವಂತನೇ ಉಪದೇಶಿಸಿದ ರೀತಿಯಲ್ಲಿ ಭಗವದ್ಗೀತೆಯ ಬೋಧನೆಯನ್ನು ಅನುಸರಿಸುವವನು ಆಧ್ಯಾತ್ಮಿಕ ಜ್ಞಾನದ ಕೃಪೆಯಿಂದ ಎಲ್ಲ ಸಂಶಯಗಳಿಂದ ಮುಕ್ತನಾಗುತ್ತಾನೆ. ಭಗವಂತನ ವಿಭಿನ್ನಾಂಶನಾಗಿ ಆತನು ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿರುತ್ತ ಆಗಲೇ ಆತ್ಮಜ್ಞಾನದಲ್ಲಿ ನೆಲೆಗೊಂಡಿರುತ್ತಾನೆ. ಆದುದರಿಂದ ನಿಸ್ಸಂಶಯವಾಗಿ ಆತನಿಗೆ ಕ್ರಮಬಂಧನವಿಲ್ಲ.