ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿ ಹೋರಾಡಿ ಗೆಲ್ಲಬೇಕು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿ ಹೋರಾಡಿ ಗೆಲ್ಲಬೇಕು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿ ಹೋರಾಡಿ ಗೆಲ್ಲಬೇಕು ಎಂಬುದರ ಅರ್ಥವನ್ನು ಭಗವಗ್ದೀತೆಯ 11ನೇ ಅಧ್ಯಾಯದ 28, 29 ಹಾಗೂ 32ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 28

ಯಥಾ ನದೀನಾಂ ಬಹವೋಮ್ಬುವೇಗಾಃ

ಸಮುದ್ರಮೇವಾಭಿಮುಖಾ ದ್ರವನ್ತಿ |

ತಥಾ ತವಾಮೀ ನರಲೋಕವೀರಾ

ವಿಶನ್ತಿ ವಕ್ತ್ರಾಣ್ಯಭಿವಿಜ್ವಲನ್ತಿ ||28||

ಅನುವಾದ: ನದಿಗಳ ಅಧಿಕ ಸಂಖ್ಯೆ ಅಲೆಗಳು ಸಮುದ್ರದೊಳಕ್ಕೆ ಹರಿಯುವಂತೆ, ಈ ಎಲ್ಲ ಮಹಾ ಯೋಧರು ಪ್ರಜ್ವಲಿಸುತ್ತ ನಿನ್ನ ಬಾಯಿಗಳನ್ನು ಪ್ರವೇಶಿಸುತ್ತಿರುವವರು.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 29

ಯಥಾ ಪ್ರದೀಪ್ತಂ ಜ್ವಲನಂ ಪತನ್ಗಾ

ವಿಶನ್ತಿ ನಾಶಾಯ ಸಮೃದ್ಧವೇಗಾಃ |

ತಥೈವ ನಾಶಾಯ ವಿಶನ್ತಿ ಲೋಕಾಸ್

ತವಾಪಿ ವಕ್ತ್ರಾಣಿ ಸಮೃದ್ಧವೇಗಾಃ ||29||

ಇದನ್ನೂ ಓದಿ: ತನ್ನಲ್ಲಿ ಮುನ್ನಡೆಯಲು ಅಪೇಕ್ಷಿಸುವವನಿಗೆ ಭಗಂವತ ಎಲ್ಲ ಗುಣಗಳನ್ನ ಸೃಷ್ಟಿಸುತ್ತಾನೆ; ಗೀತೆಯ ಅರ್ಥ ತಿಳಿಯಿರಿ

ಅನುವಾದ: ಪತಂಗಗಳು ತಮ್ಮ ನಾಶಕ್ಕಾಗಿ ಉರಿಯುತ್ತಿರುವ ಜ್ವಾಲೆಯನ್ನು ವೇಗವಾಗಿ ಪ್ರವೇಶಿಸುವಂತೆ, ಎಲ್ಲ ಜನರು ನಿನ್ನ ಬಾಯಿಗಳೊಳಕ್ಕೆ ವೇಗವಾಗಿ ಧಾವಿಸುತ್ತಿರುವರು.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 32

ಕಾಲೋಸ್ಮಿ ಲೋಕಕ್ಷಯಕೃತ್ ಪ್ರವೃದ್ಧೋ

ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ |

ಋತೇಪಿ ತ್ವಾಂ ನ ಭವಿಷ್ಯನ್ತಿ ಸರ್ವೇ

ಯೇವಸ್ಥಿತಾಃ ಪ್ರತ್ಯನೀಕೇಷು ಯೋಧಾಃ ||32||

ಅನುವಾದ: ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು - ನಾನು ಕಾಲನು. ಎಲ್ಲ ಲೋಕಗಳ ಮಹಾನ್ ಕ್ಷಯಕಾರಿಯು. ಎಲ್ಲ ಜನರನ್ನೂ ನಾಶಮಾಡಲು ಇಲ್ಲಿಗೆ ಬಂದಿದ್ದೇನೆ. ನಿಮ್ಮನ್ನು (ಪಾಂಡವರನ್ನು) ಬಿಟ್ಟು ಎರಡು ಪಕ್ಷಗಳ ಎಲ್ಲ ಯೋಧರೂ ಕೊಲ್ಲಲ್ಪಡುವರು.

ಭಾವಾರ್ಥ: ಕೃಷ್ಣನು ತನ್ನ ಸ್ನೇಹಿತ ಮತ್ತು ದೇವೋತ್ತಮ ಪರಮ ಪುರುಷ ಎಂದು ಅರ್ಜುನನಿಗೆ ತಿಳಿದಿದ್ದರೂ ಕೃಷ್ಣನು ತೋರಿಸಿದ ಹಲವು ರೂಪಗಳಿಂದ ಅವನಿಗೆ ತೊಡಕಾಯಿತು. ಆದುದರಿಂದ ಈ ವಿನಾಶಕಾರಕ ಶಕ್ತಿಯ ವಾಸ್ತವ ಉದ್ದೇಶವನ್ನು ಕುರಿತು ಇನ್ನಷ್ಟು ಪ್ರಶ್ನೆಮಾಡಿದನು. ಪರಮ ಸತ್ಯವು ಎಲ್ಲವನ್ನೂ, ಬ್ರಾಹ್ಮಣರನ್ನು ಸಹ ನಾಶಮಾಡುತ್ತದೆ ಎಂದು ವೇದಗಳಲ್ಲಿ ಹೇಳಿದೆ. ಕಠ ಉಪನಿಷತ್ತಿನಲ್ಲಿ (1.2.25) ಹೀಗೆ ಹೇಳಿದೆ -

ಯಸ್ಯ ಬ್ರಹ್ಮ ಚ ಕ್ಷತ್ರಂ ಚ ಉಭೇ ಭವತ ಓದನಃ |

ಮೃತ್ಯುರ್ ಯಸ್ಯೋಪರಸೇಚನಂ ಕ ಇತ್ಥಾ ವೇದ ಯತ್ರ ಸಃ ||

ಕಟ್ಟಕಡೆಗೆ ಬ್ರಾಹ್ಮಣರು, ಕ್ಷತ್ರಿಯರು ಮತ್ತು ಉಳಿದೆಲ್ಲರನ್ನೂ ಪರಮನು ಒಂದು ತುತ್ತಿನಂತೆ ನುಂಬಿಬಿಡುವನು. ಪರಮ ಪ್ರಭುವಿನ ಈ ರೂಪವು ಸರ್ವಭಕ್ಷಕವಾದ ಅದ್ಭುತ ರೂಪ. ಇಲ್ಲಿ ಕೃಷ್ಣನು ಸರ್ವಭಕ್ಷಕ ಕಾಲನ ರೂಪದಲ್ಲಿ ಪ್ರಕಟವಾಗಿದ್ದಾನೆ. ಕೆಲವರು ಪಾಂಡವರನ್ನು ಬಿಟ್ಟರೆ ರಣಭೂಮಿಯಲ್ಲಿದ್ದ ಎಲ್ಲರನ್ನೂ ಅವನು ಭಕ್ಷಿಸುತ್ತಾನೆ.

ಅರ್ಜುನನಿಗೆ ಯುದ್ಧವು ಬೇಕಿರಲಿಲ್ಲ. ಯುದ್ಧ ಮಾಡದಿರುವುದೇ ಉತ್ತಮ. ಆಗ ಹತಾಶೆಯಿರುವುದಿಲ್ಲ ಎಂದು ಅವನು ಭಾವಿಸಿದನು. ಇದಕ್ಕೆ ಉತ್ತರವಾಗಿ ಪ್ರಭುವು ಅವನು ಯುದ್ಧಮಾಡದಿದ್ದರೂ ಅವರಲ್ಲಿ ಪ್ರತಿಯೊಬ್ಬರೂ ನಾಶವಾಗುವರು, ಏಕೆಂದರೆ ಅದು ತನ್ನ ಯೋಜನೆ ಎಂದು ಹೇಳುತ್ತಾನೆ. ಅರ್ಜುನನು ಯುದ್ಧವನ್ನು ನಿಲ್ಲಿಸಿದರೆ ಅವರು ಬೇರೊಂದು ರೀತಿಯಲ್ಲಿ ಸಾಯುತ್ತಾರೆ. ಅವನು ಹೋರಾಡದಿದ್ದರೂ ಸಾವನ್ನು ತಪ್ಪಿಸುವಂತಿಲ್ಲ. ವಾಸ್ತವವಾಗಿ ಅವರೆಲ್ಲರೂ ಆಗಲೇ ಸತ್ತು ಹೋಗಿದ್ದಾರೆ. ಕಾಲವೆಂದರೆ ನಾಶ. ಪರಮ ಪ್ರಭುವಿನ ಇಚ್ಛೆಗಳಿಗೆ ಅನುಗುಣವಾಗಿ ಎಲ್ಲ ಅಭಿವ್ಯಕ್ತಿಗಳೂ ನಾಶವಾಗಬೇಕು. ಇದು ಪ್ರಕೃತಿ ನಿಯಮ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.