ಕನ್ನಡ ಸುದ್ದಿ  /  Astrology  /  Spiritual News Bhagavad Gita Updesh Lord Krishna Flawless Man Bhagavad Gita Quotes In Kannada Rmy

Bhagavad Gita: ಭಗವಂತನಲ್ಲಿ ತೊಡಗಿಸಿಕೊಳ್ಳುವ ಮನುಷ್ಯನನ್ನು ದೋಷರಹಿತರನ್ನಾಗಿ ಮಾಡುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita Updesh: ಭಗವಂತನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮನುಷ್ಯನನ್ನು ದೋಷರಹಿತರನ್ನಾಗಿ ಮಾಡುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ಹೀಗೆ ನೀಡಲಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಸರ್ವಭೂತಸ್ಥಿತಂ ಯೋ ಮಾಂ ಭಜತ್ಯೇಕತ್ವಮಾಸ್ಥಿತಃ |

ಸರ್ವಥಾ ವರ್ತಮಾನೋಪಿ ಸ ಯೋಗೀ ಮಯಿ ವರ್ತತೇ ||31||

ಅನುವಾದ: Bhagavad Gita Updesh in Kannada: ನಾನು ಮತ್ತು ಪರಮಾತ್ಮನು ಒಂದೇ ಎಂದು ತಿಳಿದು ಸದಾ ಪರಮಾತ್ಮನ ಭಕ್ತಿಪೂರ್ವಕ ಸೇವೆಯಲ್ಲಿ ತೊಡಗಿರುವ ಯೋಗಿಯು ಎಲ್ಲ ಸನ್ನಿವೇಶಗಳಲ್ಲಿಯೂ ನನ್ನಲ್ಲಿಯೇ ಇರುತ್ತಾನೆ.

ಭಾವಾರ್ಥ: ಪರಮಾತ್ಮನ ಧ್ಯಾನದಲ್ಲಿ ಮಗ್ನನಾದ ಯೋಗಿಯು ಶಂಖ, ಚಕ್ರ, ಗದೆ ಮತ್ತು ಪದ್ಮಗಳನ್ನು ನಾಲ್ಕು ಕೈಗಳಲ್ಲಿ ಹಿಡಿದ ವಿಷ್ಣುವನ್ನು ಕೃಷ್ಣನ ಸ್ವಾಂಶ ಭಾಗವಾಗಿ ತನ್ನಲ್ಲಿ ಕಾಣುತ್ತಾನೆ. ವಿಷ್ಣುವು ಕೃಷ್ಣನಿಂದ ಭಿನ್ನವಲ್ಲ ಎಂದ ಯೋಗಿಗೆ ತಿಳಿದಿರಬೇಕು. ಪರಮಾತ್ಮನ ಸ್ವರೂಪದಲ್ಲಿ ಕೃಷ್ಣನು ಪ್ರತಿಯೊಬ್ಬರ ಹೃದಯದಲ್ಲಿಯೂ ನೆಲೆಸಿದ್ದಾನೆ. ಅಲ್ಲದೆ ಜೀವಿಗಳ ಅಸಂಖ್ಯಾತ ಹೃದಯಗಳಲ್ಲಿ ಇರುವ ಅಸಂಖ್ಯಾತ ಪರಮಾತ್ಮರಲ್ಲಿ ವ್ಯತ್ಯಾಸವಿಲ್ಲ. ಸದಾ ಕೃಷ್ಣನ ದಿವ್ಯಪ್ರೇಮ ಸೇವೆಯಲ್ಲಿ ತೊಡಗಿರುವ ಕೃಷ್ಣಪ್ರಜ್ಞೆ ಇರುವ ಮನುಷ್ಯನಿಗೂ ಪರಮಾತ್ಮನ ಧ್ಯಾನದಲ್ಲಿ ತೊಡಗಿರುವ ಪರಿಪೂರ್ಣ ಯೋಗಿಗೂ ವ್ಯತ್ಯಾಸವಿಲ್ಲ.

ಕೃಷ್ಣಪ್ರಜ್ಞೆ ಇರುವ ಯೋಗಿಯು ಐಹಿಕ ಅಸ್ತಿತ್ವದಲ್ಲಿರುವಾಗ ವಿವಿಧ ಚಟುವಟಿಕೆಗಳಲ್ಲಿ ತೊಡಗಿರಬಹುದು, ಆದರೂ ಅವನು ಸದಾ ಕೃಷ್ಣನಲ್ಲಿ ನೆಲೆಸಿರುತ್ತಾನೆ. ಶ್ರೀ ರೂಪ ಗೋಸ್ವಾಮಿಯವರ ಭಕ್ತಿರಸಾಮೃತಸಿಂಧುವಿನಲ್ಲಿ (1.2.187) ಇದನ್ನು ದೃಢಪಡಿಸಿದೆ. ನಿಖಿಲಾಸ್ವಪ್ಯವಸ್ಥಾಸು ಜೀವನ್ಮುಕ್ತಃಸ ಉಚ್ಯತೇ. ಸದಾ ಕೃಷ್ಣಪ್ರಜ್ಞೆಯಲ್ಲಿ ಕರ್ಮಮಾಡುವ ಭಗವಂತನ ಭಕ್ತನು ಸಹಜವಾಗಿಯೇ ಮುಕ್ತನಾಗಿರುತ್ತಾನೆ. ನಾರದ ಪಂಚರಾತ್ರದಲ್ಲಿ ಇದನ್ನು ಹೀಗೆ ದೃಢಪಡಿಸಿದೆ -

ದಿಕ್ಕಾಲಾದ್ಯನವಚ್ಛಿನ್ನೇ ಕೃಷ್ಣೇ ಚೇತೋ ವಿಧಾಯ ಚ |

ತನ್ಮಯೋ ಭವತಿ ಕ್ಷಿಪ್ರಂ ಜೀವೋ ಬ್ರಹ್ಮಣಿ ಯೋಜಯೇತ್ ||

ಕೃಷ್ಣನು ಸರ್ವಾಂತರ್ಯಾಮಿ ಮತ್ತು ಕಾಲ ದೇಶಗಳನ್ನು ಮೀರಿದವನು. ಅವನ ದಿವ್ಯರೂಪದಲ್ಲಿ ಗಮನವನ್ನು ಕೇಂದ್ರೀಕರಿಸುವುದರಿಂದ ಮನುಷ್ಯನು ಕೃಷ್ಣ ಚಿಂತನೆಯಲ್ಲಿ ಮಗ್ನನಾಗುತ್ತಾನೆ. ಅನಂತರ ಕೃಷ್ಣನ ದಿವ್ಯ ಸಹವಾಸದ ಆನಂದ ಸ್ಥಿತಿಯನ್ನು ಪಡೆಯುತ್ತಾನೆ.

ಯೋಗಾಭ್ಯಾಸದಲ್ಲಿ ಕೃಷ್ಣಪ್ರಜ್ಞೆಯು ಸಮಾಧಿಯ ಅತ್ಯುನ್ನತ ಹಂತ. ಕೃಷ್ಣನು ಪ್ರತಿಯೊಬ್ಬರ ಹೃದಯದಲ್ಲಿಯೂ ಪರಮಾತ್ಮನಾಗಿ ನೆಲೆಸಿದ್ದಾನೆ ಎನ್ನುವ ಅರಿವೇ ಯೋಗಿಯನ್ನು ದೋಷರಹಿತನನ್ನಾಗಿ ಮಾಡುತ್ತದೆ. ಭಗವಂತನ ಈ ಗ್ರಹಿಕೆಗೆ ಮೀರಿದ ಶಕ್ತಿಯನ್ನು ವೇದಗಳು (ಗೋಪಾಲ ತಾಪನೀ ಉಪನಿಷತ್ತು 1.21) ಹೀಗೆ ದೃಢಪಡಿಸುತ್ತವೆ - ಏಕೋಪಿ ಸನ್ ಬಹುಧಾ ಯೋವಭಾತಿ ಭಗವಂತನು ಒಬ್ಬನೇ ಆದರೂ ಅಸಂಖ್ಯಾತ ಹೃದಯಗಳಲ್ಲಿ ಬಹುವಾಗಿ ಅವನು ಇದ್ದಾನೆ. ಹಾಗೆಯೇ ಸ್ಮೃತಿಶಾಸ್ತ್ರದಲ್ಲಿ ಹೀಗೆ ಹೇಳಿದೆ -

ಏಕ ಏವ ಪರೋ ವಿಷ್ಣುಃ ಸರ್ವವ್ಯಾಪೀ ನ ಸಂಶಯಃ |

ಐಶ್ವರ್ಯಾದ್ ರೂಪಮ್ ಏಕಂ ಚ ಸೂರ್ಯವತ್ ಬಹುಧೇಯತೇ ||

ವಿಷ್ಣುವು ಒಬ್ಬನೇ, ಆದರೂ ಅವನು ನಿಶ್ಚಯವಾಗಿಯೂ ಸರ್ವವ್ಯಾಪಿ. ಗ್ರಹಿಕೆಗೆ ಮೀರಿದ ಅವನ ಶಕ್ತಿಯಿಂದ ಸೂರ್ಯನು ಬಹುಸ್ಥಳಗಳಲ್ಲಿ ಒಂದೇ ಕಾಲದಲ್ಲಿ ಕಾಣಿಸುವಂತೆ ತನಗೆ ಒಂದೇ ರೂಪವಿದ್ದರೂ ಎಲೆಲ್ಲೂ ಇದ್ದಾನೆ. ಜೀವನಕ್ಕೆ ಸ್ಫೂರ್ತಿ ತುಂಬುವಂತಹ ಭಗವದ್ಗೀತೆಯ ಸಂದೇಶಗಳಿಗಾಗಿ ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಡಿಜಿಟಲ್ ವೆಬ್‌ಸೈಟ್‌ಗೆ ಭೇಟಿ ನೀಡಿ.

(This copy first appeared in Hindustan Times Kannada website. To read more like this please logon to kannada.hindustantimes.com )