Bhagavad Gita: ಬದುಕಿನ ಅಂತ್ಯದಲ್ಲೂ ಭಗವಂತ ನಮ್ಮನ್ನು ಕೈ ಹಿಡಿಯುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಬದುಕಿನ ಅಂತ್ಯದಲ್ಲೂ ಭಗವಂತ ನಮ್ಮನ್ನು ಕೈ ಹಿಡಿಯುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita: ಬದುಕಿನ ಅಂತ್ಯದಲ್ಲೂ ಭಗವಂತ ನಮ್ಮನ್ನು ಕೈ ಹಿಡಿಯುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita: ಬದುಕಿನ ಅಂತ್ಯದಲ್ಲೂ ಭಗವಂತ ನಮ್ಮನ್ನು ಕೈ ಹಿಡಿಯುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ 19 ಮತ್ತು 20ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 19

ತಪಾಮ್ಯಹ ಮಹಂ ವರ್ಷಂ ನಿಗೃಹ್ಣಾಮ್ಯುತ್ಸೃಜಾಮಿ ಚ|

ಅಮೃತಂ ಚೈವ ಮೃತ್ಯುಶ್ಚ ಸದಸಚ್ಚಾಹಮರ್ಜುನ ||19||

ಅನುವಾದ: ಅರ್ಜುನನೆ, ನಾನೇ ಶಾಖವನ್ನು ಕೊಡುತ್ತೇನೆ, ನಾನೇ ಮಳೆಯನ್ನೂ ತಡೆಯುತ್ತೇನೆ ಮತ್ತು ಕಳುಹಿಸುತ್ತೇನೆ. ನಾನೇ ಅಮೃತ, ನಾನೇ ಮೃತ್ಯು. ಚೇತನ ಮತ್ತು ಜಡವಸ್ತು ಎರಡೂ ನನ್ನಲ್ಲಿದೆ.

ಭಾವಾರ್ಥ: ತನ್ನ ವಿವಿಧ ಶಕ್ತಿಗಳಿಂದಾಗಿ ಕೃಷ್ಣನು ವಿದ್ಯುಚ್ಛಕ್ತಿ ಮತ್ತು ಸೂರ್ಯನ ಮೂಲಕ ಶಾಖವನ್ನೂ ಬೆಳಕನ್ನೂ ಪಸರಿಸುತ್ತಾನೆ. ಬೇಸಗೆಯಲ್ಲಿ ಆಕಾಶದಿಂದ ಮಳೆಯು ಬೀಳದಂತೆ ತಡೆಯುವವನು ಕೃಷ್ಣ ಮತ್ತು ಅನಂತರ ಮಳೆಗಾಲದಲ್ಲಿ ನಿಲ್ಲದ ಧಾರೆಯಾಗಿ ಮಳೆಯನ್ನು ಸುರಿಸುವವನು ಕೃಷ್ಣ. ನಮ್ಮ ಆಯುಸ್ಸನ್ನು ದೀರ್ಘಗೊಳಿಸಿ ನಮ್ಮನ್ನು ಪಾಲಿಸುವ ಶಕ್ತಿಯು ಕೃಷ್ಣನೇ. ಬದುಕಿನ ಅಂತ್ಯದಲ್ಲಿ ಕೃಷ್ಣನು ಸಾವಿನ ರೂಪದಲ್ಲಿ ನಮ್ಮನ್ನು ಸಂಧಿಸುತ್ತಾನೆ (Bhagavad Gita Updesh in Kannada).

ಕೃಷ್ಣನ ಈ ವಿವಿಧ ಶಕ್ತಿಗಳನ್ನು ವಿಶ್ಲೇಷಿಸಿ ಕೃಷ್ಣನಿಗೆ ಜಡವಸ್ತು ಮತ್ತು ಚೈತನ್ಯಗಳ ನಡುವೆ ವ್ಯತ್ಯಾಸವಿಲ್ಲ ಎಂದು ನಾವು ಖಚಿತವಾಗಿ ತಿಳಿದುಕೊಳ್ಳಬಹುದು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅವನೇ ಜಡವಸ್ತು ಮತ್ತು ಅವನೇ ಚೇತನ. ಕೃಷ್ಣಪ್ರಜ್ಞೆಯ ಮುಂದುವರಿದ ಹಂತದಲ್ಲಿ ಮನುಷ್ಯನು ಇಂತಹ ವ್ಯತ್ಯಾಸವನ್ನೇ ಮಾಡುವುದಿಲ್ಲ. ಆತನು ಎಲ್ಲದರಲ್ಲಿಯೂ ಕೃಷ್ಣನನ್ನೇ ಕಾಣುತ್ತಾನೆ.

ಕೃಷ್ಣನೇ ಜಡವಸ್ತು ಮತ್ತು ಚೇತನವಾದದ್ದರಿಂದ ಎಲ್ಲ ಐಹಿಕ ಅಭಿವ್ಯಕ್ತಿಗಳನ್ನು ಒಳಗೊಂಡ ಈ ಬೃಹತ್ತಾದ ವಿಶ್ವರೂಪವೂ ಕೃಷ್ಣನೇ. ಎರಡು ಕೈಗಳ ಶ್ಯಾಮಸುಂದರನಾಗಿ ಕೊಳಲನ್ನು ನುಡಿಸುತ್ತ ವೃಂದಾವನದಲ್ಲಿ ಅವನು ತೋರಿದ ಲೀಲೆಗಳು ದೇವೋತ್ತಮ ಪರಮ ಪುರುಷನ ಲೀಲೆಗಳು.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 20

ತ್ತೈವಿದ್ಯಾ ಮಾಂ ಸೋಮಪಾಃ ಪೂತಪಾಪಾ

ಯಜ್ಞೈರಿಷ್ಟ್ವಾ ಸ್ವರ್ಗತಿಂ ಪ್ರಾರ್ಥಯನ್ತೇ |

ತೇ ಪುಣ್ಯಮಾಸಾದ್ಯ ಸುರೇನ್ದ್ರ ಲೋಕಮ್

ಅಶ್ನನ್ತಿ ದಿವ್ಯಾನ್ ದಿವಿ ದೇವಭೋಗಾನ್ ||20||

ಅನುವಾದ - ವೇದಗಳನ್ನು ಅಭ್ಯಾಸಮಾಡಿ, ಸೋಮರಸವನ್ನು ಪಾನಮಾಡಿ, ಸ್ವರ್ಗಲೋಕಗಳನ್ನು ಅರಸುವವರು ಪಕ್ಷೋವಾಗಿ ನನ್ನನ್ನು ಪೂಜಿಸುತ್ತಾರೆ. ಪಾಪ ಪ್ರತಿಕ್ರಿಯೆಗಳಿಂದ ಬಿಡುಗಡೆಯಾಗಿ ಪರಿಶುದ್ಧರಾಗಿ ಅವರು ಪುಣ್ಯ ಸ್ವರ್ಗಲೋಕದಲ್ಲಿ ಹುಟ್ಟುತ್ತಾರೆ. ಅಲ್ಲಿ ಸ್ವರ್ಗಸುಖಗಳನ್ನು ಸವಿಯುತ್ತಾರೆ.

ಭಾವಾರ್ಥ - ತ್ರೈವಿದ್ಯಾಃ ಎನ್ನುವ ಶಬ್ದವು ಸಾಮ, ಯಜುರ್ ಮತ್ತು ಋಗ್ವೇದಗಳನ್ನು ಸೂಚಿಸುತ್ತದೆ. ಈ ಮೂರು ವೇದಗಳನ್ನು ಅಧ್ಯಾಯನ ಮಾಡಿದ ಬ್ರಾಹ್ಮಣಿಗೆ ತ್ರಿವೇದೀ ಎಂದು ಹೆಸರು. ಈ ಮೂರು ವೇದಗಳ ಜ್ಞಾನದಲ್ಲಿ ಬಹುವಾಗಿ ಆಸಕ್ತಿ ಇರುವವನನ್ನು ಸಮಾಜವು ಗೌರವಿಸುತ್ತದೆ. ದುರದೃಷ್ಟದಿಂದ ವೇದವಿದ್ವಾಂಸರಲ್ಲಿ ಹಲವರಿಗೆ ಅವುಗಳನ್ನು ಅಧ್ಯಯನ ಮಾಡುವುದರ ಪರಮ ಉದ್ದೇಶವು ತಿಳಿದಿರುವುದಿಲ್ಲ. ಆದುದರಿಂದ ಕೃಷ್ಣನು ಇಲ್ಲಿ ತ್ರಿವೇದಿಗಳಿಗೆ ತಾನು ಕಟ್ಟಕಡೆಯ ಗುರಿ ಎಂದು ಘೋಷಿಸುತ್ತಾನೆ. ನಿಜವಾದ ತ್ರಿವೇದಿಗಳು ಕೃಷ್ಣನ ಚರಣಕಮಲಗಳ ಅಡಿಯಲ್ಲಿ ಆಶ್ರಯವನ್ನು ಪಡೆಯುತ್ತಾರೆ ಮತ್ತು ಪ್ರಭುವನ್ನು ಪ್ರಸನ್ನಗೊಳಿಸಲು ಪರಿಶುದ್ಧ ಭಕ್ತಿಸೇವೆಯಲ್ಲಿ ನಿರತರಾಗುತ್ತಾರೆ. ಭಕ್ತಿಸೇವೆಯು ಹರೇಕೃಷ್ಣ ಮಂತ್ರದ ಸಂಕೀರ್ತನೆಯಿಂದ ಮತ್ತು ಅದರರೊಂದಿಗೆ ಕೃಷ್ಣನನ್ನು ಸತ್ಯವಾಗಿ ಅರಿತುಕೊಳ್ಳುವ ಪ್ರಯತ್ನದಿಂದ ಪ್ರಾರಂಭವಾಗುತ್ತದೆ.

ದುರದೃಷ್ಟದಿಂದ ವೇದಗಳ ಔಪಚಾರಿಕ ವಿದ್ಯಾರ್ಥಿಗಳಷ್ಟೇ ಆದವರು ಇಂದ್ರ ಮತ್ತು ಚಂದ್ರನಂತಹ ಬೇರೆ ಬೇರೆ ದೇವತೆಗಳಿಗೆ ಯಜ್ಞಮಾಡುವುದರಲ್ಲಿಯೇ ಹೆಚ್ಚು ಆಸಕ್ತಿಯನ್ನು ತೋರುತ್ತಾರೆ. ಇಂತಹ ಪ್ರಯತ್ನದಿಂದ ಬೇರೆ ಬೇರೆ ದೇವತೆಗಳನ್ನು ಪೂಜಿಸುವವರು ನಿಶ್ಚಯವಾಗಿಯೂ ಪ್ರಕೃತಿಯ ಕೀಳುಗುಣಗಳ ಕಲ್ಮಷದ ಸೋಂಕಿನಿಂದ ಪರಿಶುದ್ಧರಾಗುತ್ತಾರೆ. ಇದರಿಂದ ಮಹರ್‌ಲೋಕ, ಜನಲೋಕ, ತಪೋಲೋಕ ಮುಂತಾದ ಹೆಸರುಗಳ ಉನ್ನತ ಲೋಕಮಂಡಲಗಳಿಗೆ ಅಥವಾ ಸ್ವರ್ಗಲೋಕಗಳಿಗೆ ಏರುತ್ತಾರೆ. ಈ ಉನ್ನತ ಲೋಕವ್ಯೂಹಗಳಲ್ಲಿ ಒಮ್ಮೆ ಸೇರಿದವನು ಭೂಲೋಕದಲ್ಲಿ ಪಡೆಯುವುದಕ್ಕಿಂತ ಲಕ್ಷಾಂತರ ಬಾರಿ ಉತ್ತಮ ರೀತಿಯಲ್ಲಿ ಇಂದ್ರಿಯ ತೃಪ್ತಿಯನ್ನು ಪಡೆಯಬಹುದು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.