Bhagavad Gita: ತೆಗಳುವವರಿಗೆ ಶ್ರೀಕೃಷ್ಣನ ದೇವ ಸ್ವಭಾವ ತಿಳಿಯದು; ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ತೆಗಳುವವರಿಗೆ ಶ್ರೀಕೃಷ್ಣನ ದೇವ ಸ್ವಭಾವ ತಿಳಿಯದು; ಗೀತೆಯ ಅರ್ಥ ತಿಳಿಯಿರಿ

Bhagavad Gita: ತೆಗಳುವವರಿಗೆ ಶ್ರೀಕೃಷ್ಣನ ದೇವ ಸ್ವಭಾವ ತಿಳಿಯದು; ಗೀತೆಯ ಅರ್ಥ ತಿಳಿಯಿರಿ

Bhagavad Gita: ತೆಗಳುವವರಿಗೆ ಶ್ರೀಕೃಷ್ಣನ ದೇವ ಸ್ವಭಾವ ತಿಳಿಯದು ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 51ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 51

ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ |

ಇದಾನೀಮಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಂ ಗತಃ ||51||

ಅನುವಾದ: ಹೀಗೆ ಕೃಷ್ಣನನ್ನು ಅವನ ಮೂಲ ರೂಪದಲ್ಲಿ ಕಂಡಾಗ ಅರ್ಜುನನು ಹೀಗೆಂದನು - ಓ ಜನಾರ್ದನ, ಇಷ್ಟೊಂದು ಸುಂದರವಾದ ಮಾನವಸದೃಶ ರೂಪವನ್ನು ಕಂಡು ನನ್ನ ಮನಸ್ಸು ಸಮಾಧಾನವಾಗಿದೆ. ನನ್ನ ಸಹಜ ಸ್ವಭಾವವು ಹಿಂದಿರುಗಿದೆ.

ಭಾವಾರ್ಥ: ಇಲ್ಲಿ ಮಾನುಷಂ ರೂಪಮ್ ಎನ್ನುವ ಮಾತುಗಳು ದೇವೋತ್ತಮ ಪರಮ ಪುರುಷನಿಗೆ ಮೂಲ ರೂಪದಲ್ಲಿ ಎರಡು ಕೈಗಳಿದ್ದವು ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಕೃಷ್ಣನು ಸಾಮಾನ್ಯ ಮನುಷ್ಯ ಎನ್ನುವಂತೆ ತೆಗಳುವವರಿಗೆ ಕೃಷ್ಣನ ದೇವಸ್ವಭಾವವು ತಿಳಿಯದು ಎಂದು ಇಲ್ಲಿ ತೋರಿಸಿಕೊಟ್ಟಿದೆ. ಕೃಷ್ಣನು ಸಾಮಾನ್ಯ ಮನುಷ್ಯನಂತಿದ್ದರೆ ಆತನಿಗೆ ವಿಶ್ವರೂಪವನ್ನಾಗಲಿ ಚತುರ್ಭುಜನಾದ ನಾರಾಯಣ ರೂಪವನ್ನಾಗಲಿ ತೋರಲು ಹೇಗೆ ಸಾಧ್ಯ?

ಕೃಷ್ಣನು ಸಾಮಾನ್ಯ ಮನುಷ್ಯ ಎಂದು ಯೋಚಿಸಿ ಮಾತನಾಡುತ್ತಿರುವುದು, ಕೃಷ್ಣನ ಒಲಗಿರುವ ನಿರಾಕಾರ ಬ್ರಹ್ಮನ್ ಎಂದು ಹೇಳಿ ಓದುಗನನ್ನು ತಪ್ಪು ದಾರಿಗಳೆಯುವವನು, ಅತ್ಯಂತ ದೊಡ್ಡ ಅನ್ಯಾಯವನ್ನು ಮಾಡುತ್ತಿದ್ದಾನೆ ಎಂದು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಕೃಷ್ಣನು ತನ್ನ ವಿಶ್ವರೂಪವನ್ನೂ, ಚತುರ್ಭುಜನಾದ ವಿಷ್ಣುರೂಪವನ್ನೂ ವಾಸ್ತವವಾಗಿ ತೋರಿಸಿದ್ದಾನೆ. ಆತನು ಸಾಮಾನ್ಯ ಮನುಷ್ಯನಾಗಿರಲು ಹೇಗೆ ಸಾಧ್ಯ? ಭಗವದ್ಗೀತೆಯ ವ್ಯಾಖ್ಯಾನಕಾರರಲ್ಲಿ ತಪ್ಪು ದಾರಿ ಹಿಡಿದವರು ಪರಿಶುದ್ಧ ಭಕ್ತನನ್ನು ಗೊಂದಲಕ್ಕೆ ಸಿಕ್ಕಿಸಲಾರರು. ಏಕೆಂದರೆ ಭಕ್ತನಿಗೆ ಪ್ರತಿಯೊಂದರ ನಿಜಾಂಶವು ತಿಳಿದಿರುತ್ತದೆ. ಭಗವದ್ಗೀತೆಯ ಮೂಲ ಶ್ಲೋಕಗಳು ಸೂರ್ಯನಷ್ಟು ಸ್ಪಷ್ಟವಾಗಿವೆ. ಮೂರ್ಖ ವ್ಯಾಖ್ಯಾನಕಾರರ ಮಂಕು ಬೆಳಕು ಅವಕ್ಕೆ ಅಗತ್ಯವಿಲ್ಲ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.