ಭಗವದ್ಗೀತೆ: ತೃಪ್ತಿಗಾಗಿ ಕೆಲಸ ಮಾಡುವವರು ಒಳ್ಳೆಯ ಫಲವನ್ನೇ ಪಡೆಯುತ್ತಾರೆ; ಗೀತೆಯಲ್ಲಿನ ಅರ್ಥ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ತೃಪ್ತಿಗಾಗಿ ಕೆಲಸ ಮಾಡುವವರು ಒಳ್ಳೆಯ ಫಲವನ್ನೇ ಪಡೆಯುತ್ತಾರೆ ಎಂಬುದರ ಅರ್ಥ ಹೀಗಿದೆ.
ಅವಾಚ್ಯವಾದಾಂಶ್ಚ ಬಹೂನ್ ವದಿಷ್ಯನ್ತಿ ತವಾಹಿತಾಃ |
ನಿನ್ದತಸ್ತವ ಸಾಮರ್ಥ್ಯಂ ತತೋ ದುಃಖತರಂ ನು ಕಿಮ್ ||36||
ನಿನ್ನ ಶತ್ರುಗಳು ನಿನ್ನ ವಿಷಯವಾಗಿ ಅವಾಚ್ಯ ಶಬ್ದಗಳನ್ನಾಡುವವರು. ನಿನ್ನ ಸಾಮರ್ಥ್ಯವನ್ನು ನಿಂದಿಸುವವರು. ನಿನಗೆ ಇದಕ್ಕಿಂತ ಹೆಚ್ಚು ದುಃಖಕರವಾದದು ಏನುಂಟು?
ಪ್ರಾರಂಭದಲ್ಲಿ ಅರ್ಜುನನು ಅನಗತ್ಯವಾಗಿ ಅನುಕಂಪದ ಮಾತುಗಳನ್ನು ಆಡಿದುದರಿಂದ ಶ್ರೀಕೃಷ್ಣನಿಗೆ ತುಂಬ ಅಚ್ಚರಿಯಾಯಿತು. ಈಗ ಶ್ರೀಕೃಷ್ಣನು ಅರ್ಜುನನ ಹುಸಿ ಅನುಕಂಪದ ವಿರುದ್ಧ ತನ್ನ ಮಾತುಗಳು ಸರಿ ಎಂದು ಸ್ಪಷ್ಟವಾದ ಮಾತುಗಳಲ್ಲಿ ತೋರಿಸಿಕೊಡುತ್ತಾನೆ.
ಪ್ರಾರಂಭದಲ್ಲಿ ಅರ್ಜುನನು ಅನಗತ್ಯವಾಗಿ ಅನುಕಂಪದ ಮಾತುಗಳನ್ನು ಆಡಿದುದರಿಂದ ಶ್ರೀಕೃಷ್ಣನಿಗೆ ತುಂಬ ಅಚ್ಚರಿಯಾಯಿತು. ಈಗ ಶ್ರೀಕೃಷ್ಣನು ಅರ್ಜುನನ ಹುಸಿ ಅನುಕಂಪದ ವಿರುದ್ಧ ತನ್ನ ಮಾತುಗಳು ಸರಿ ಎಂದು ಸ್ಪಷ್ಟವಾದ ಮಾತುಗಳಲ್ಲಿ ತೋರಿಸಿಕೊಡುತ್ತಾನೆ.
ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀದ್ |
ತಸ್ಮಾದುತ್ತಿಷ್ಠ ಕೌನ್ತೇಯ ಯುದ್ಧಾಯ ಕೃತನಿಶ್ಚಯಃ ||37||
ಕುಂತಿಯ ಮಗನಾದ ಅರ್ಜುನನೇ, ನೀನು ಯುದ್ಧದಲ್ಲಿ ಮಡಿದು ಸ್ವರ್ಗವನ್ನು ಸೇರುತ್ತೀಯೆ ಅಥವಾ ಗೆದ್ದು ಭೂಮಿಯ ಮೇಲೆ ರಾಜ್ಯವನ್ನು ಅನುಭವಿಸುತ್ತೀಯೆ. ಆದ್ದರಿಂದ ದೃಢನಿಶ್ಚಯಮಾಡಿ ಎದ್ದೇಳು, ಯುದ್ಧಮಾಡು.
ಅರ್ಜುನನ ಪಕ್ಷಕ್ಕೆ ವಿಜಯ ದೊರಕುವುದೆಂಬುದು ನಿಶ್ಚಯವಲ್ಲದಿದ್ದರೂ ಅವನು ಯುದ್ಧಮಾಡಲೇಬೇಕು. ಏಕೆಂದರೆ ಅವನು ಅಲ್ಲಿ ಮಡಿದರೆ ಸ್ವರ್ಗಕ್ಕೆ ಏರುವನು.
ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ |
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ ||38||
ಸುಖದುಃಖಗಳನ್ನೂ, ಲಾಭನಷ್ಟಗಳನ್ನೂ, ಜಯಾಪಜಯಗಳನ್ನೂ ಪರಿಗಣಿಸದೆ, ಯುದ್ಧಮಾಡಲೆಂದೇ ಯುದ್ಧಮಾಡು. ಹೀಗೆ ಮಾಡಿದರೆ ನಿನಗೆ ಪಾಪದ ಲೇಪವಿಲ್ಲ.
ಶ್ರೀಕೃಷ್ಣನಿಗೆ ಯುದ್ಧವಾಗಬೇಕೆಂದೇ ಅಪೇಕ್ಷೆ. ಆದುದರಿಂದ ಈಗ ಅವನು ಅರ್ಜುನನು ಯುದ್ಧಮಾಡುವುದಕ್ಕಾಗಿಯೇ ಹೋರಾಡಬೇಕೆಂದು ನೇರವಾಗಿ ಹೇಳುತ್ತಾನೆ. ಕೃಷ್ಣಪ್ರಜ್ಞೆಯ ಕಾರ್ಯಗಳಲ್ಲಿ ಸುಖದುಃಖ, ಲಾಭನಷ್ಟ, ಜಯ ಅಪಜಯಗಳ ಪರಿಗಣನೆಯೇ ಇಲ್ಲ. ಕೃಷ್ಣನಿಗಾಗಿ ಮಾತ್ರವೇ ಎಲ್ಲವನ್ನೂ ಮಾಡಬೇಕು ಎನ್ನುವುದೇ ಅಲೌಕಿಕ ಪ್ರಜ್ಞೆ. ಆದುದರಿಂದ ಐಹಿಕ ಕರ್ಮಗಳಿಗೆ ಫಲವು ಇರುವುದಿಲ್ಲ. ಸಾತ್ವಿಕ ಗುಣದಿಂದಾಗಲಿ ರಜೋಗುಣದಿಂದಾಗಲಿ ತನ್ನ ಇಂದ್ರಿಯ ತೃಪ್ತಿಗಾಗಿ ಕರ್ಮ ಮಾಡುವವನ ಒಳ್ಳೆಯ ಅಥವಾ ಕೆಟ್ಟ ಫಲಕ್ಕೆ ಒಳಗಾಗುತ್ತಾನೆ. ಆದರೆ ಕೃಷ್ಣಪ್ರಜ್ಞೆಯ ಕರ್ಮಗಳಿಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡವನಿಗೆ ಯಾವ ಹಂಗೂ ಇಲ್ಲ, ಯಾವ ಋಣವೂ ಇಲ್ಲ. ಇವೆಲ್ಲ ಸಾಮಾನ್ಯ ಕರ್ಮಗಳಲ್ಲಿ ತೊಡಗಿದಾಗ ಮಾತ್ರ ಘಟಿಸುತ್ತವೆ. ಹೀಗೆ ಹೇಳಿದೆ -
ದೇವರ್ಷಿ ಭೂತಾಪ್ತ ನೃಣಾಂ ಪಿತೃಣಾಂ
ನ ನಕ್ಕಿರೋ ನಾಯಮ್ ಋಣೀ ಚ ರಾಜನ್ |
ಸರ್ವಾತ್ಮನಾ ಯಃ ಶರಣಂ ಶರಣ್ಯಮ್
ಗತೋ ಮುಕುನ್ದಂ ಪರಿಹೃತ್ಯ ಕರ್ತಮ್ ||
ಉಳಿದೆಲ್ಲಾ ಕರ್ತವ್ಯಗಳನ್ನೂ ಬಿಟ್ಚು ಕೃಷ್ಣನಿಗೆ, ಮುಕುಂದನಿಗೆ ಶರಣಾದವನಿಗೆ ಯಾರ ಋಣವೂ ಇಲ್ಲ, ಯಾರ ಹಂಗೂ ಇಲ್ಲ. ದೇವತೆಗಳು, ಋಷಿಗಳು, ಒಟ್ಟಿನಲ್ಲಿ ಜನತೆ, ಬಂಧುಗಳು, ಮಾನವಕುಲ, ಪಿತೃಗಳು ಯಾರ ಹಂಗೂ ಇಲ್ಲ, ಋಣವೂ ಇಲ್ಲ (ಭಾಗವತ 11.5.41). ಈ ಶ್ಲೋಕದಲ್ಲಿ ಕೃಷ್ಣನು ಅರ್ಜುನನಿಗೆ ಇದರ ಸೂಚನೆಯನ್ನು ಕೊಡುತ್ತಿದ್ದಾನೆ. ಮುಂದಿನ ಶ್ಲೋಕಗಳಲ್ಲಿ ಇದನ್ನು ಇನ್ನೂ ಸ್ಪಷ್ಟವಾಗಿ ನಿರೂಪಿಸಲಾಗಿದೆ.