Bhagavad Gita: ಭಕ್ತಿಸೇವೆಯಲ್ಲಿ ನಿರತನಾದವನು ಅತ್ಯಂತ ಶ್ರೇಷ್ಠನಾದವನು; ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಕ್ತಿಸೇವೆಯಲ್ಲಿ ನಿರತನಾದವನು ಅತ್ಯಂತ ಶ್ರೇಷ್ಠನಾದವನು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಕ್ತಿಸೇವೆಯಲ್ಲಿ ನಿರತನಾದವನು ಅತ್ಯಂತ ಶ್ರೇಷ್ಠನಾದವನು; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಭಕ್ತಿಸೇವೆಯಲ್ಲಿ ನಿರತನಾದವನು ಅತ್ಯಂತ ಶ್ರೇಷ್ಠನಾದವನು ಎಂದು ಭಗವಂತನು ಎಂದು ಹೇಳುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 7ನೇ ಅಧ್ಯಾಯದ 17ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 17

ತೇಷಾಂ ಜ್ಞಾನೀ ನಿತ್ಯಯುಕ್ತ ಏಕಭಕ್ತಿರ್ವಿಶಿಷ್ಯತೇ |

ಪ್ರಯೋ ಹಿ ಜ್ಞಾನಿನೋತ್ಯರ್ಥಮಹಂ ಸ ಚ ಮಮ ಪ್ರಿಯಃ ||17||

ಅನುವಾದ: ಇವರಲ್ಲಿ ಪೂರ್ಣಜ್ಞಾನವಿರುವವನು ಮತ್ತು ಸದಾ ಶುದ್ಧ ಭಕ್ತಿಸೇವೆಯಲ್ಲಿ ನಿರತನಾಗಿರುವವನು ಶ್ರೇಷ್ಠನು. ಅವನಿಗೆ ನಾನು ಬಹಳ ಪ್ರಿಯನಾದವನು ಮತ್ತು ನನಗೆ ಅವನು ಪ್ರಿಯನಾದವನು.

ಭಾವಾರ್ಥ: ದುಃಖದಲ್ಲಿರುವವರು, ಕುತೂಹಲಿಗಳು, ಹಣವಿಲ್ಲದವರು ಮತ್ತು ಪರಮ ಜ್ಞಾನವನ್ನು ಅನ್ವೇಷಿಸುವವರು (Bhagavad Gita Updesh in Kannada) ಎಲ್ಲರೂ ಐಹಿಕ ಅಪೇಕ್ಷೆಗಳ ಎಲ್ಲ ಕಶ್ಮಲದಿಂದ ದೂರವಾಗಿ ಪರಿಶುದ್ಧ ಭಕ್ತರಾಗಲು ಸಾಧ್ಯ. ಆದರೆ ಅವರಲ್ಲಿ ಪರಮೋನ್ನತ ಸತ್ಯದ ಜ್ಞಾನವುಳ್ಳವನು ಮತ್ತು ಎಲ್ಲ ಐಹಿಕ ಅಪೇಕ್ಷಿಗಳಿಂದ ಮುಕ್ತನಾದವನು ನಿಜವಾಗಿಯೂ ಭಗವಂತನ ಪರಿಶುದ್ಧ ಭಕ್ತನಾಗುತ್ತಾನೆ. ಈ ನಾಲ್ಕು ವರ್ಗಗಳಲ್ಲಿ ಸಂಪೂರ್ಣ ಜ್ಞಾನವುಳ್ಳುವನನ್ನು ಮತ್ತು ಅದೇ ಕಾಲದಲ್ಲಿ ಭಕ್ತಿಸೇವೆಯಲ್ಲಿ ನಿರತನಾದವನು ಅತ್ಯಂತ ಶ್ರೇಷ್ಠನಾದವನು ಎಂದು ಭಗವಂತನು ಎಂದು ಹೇಳುತ್ತಾನೆ.

ಜ್ಞಾನನ್ವೇಷಣೆಯಲ್ಲಿ ಮನುಷ್ಯನಿಗೆ ತಾನು ತನ್ನ ಐಹಿಕ ದೇಹದಿಂದ ಬೇರೆ ಎನ್ನುವುದು ಅರ್ಥವಾಗುತ್ತದೆ. ಇನ್ನೂ ಮುಂದಕ್ಕೆ ಸಾಗಿದಾಗ ಅವನಿಗೆ ನಿರಾಕಾ ಬ್ರಹ್ಮನ ಮತ್ತು ಪರಮಾತ್ಮನ ಅರಿವುಂಟಾಗುತ್ತದೆ. ಸಂಪೂರ್ಣವಾಗಿ ಪರಿಶುದ್ಧನಾದಾಗ ಭಗವಂತನ ನಿರಂತರ ಸೇವಕನಾಗಿರುವುದೇ ತನ್ನ ಸಹಜ ಸ್ವರೂಪ ಎನ್ನುವ ಜ್ಞಾನವನ್ನು ಅವನು ಪಡೆಯುತ್ತಾನೆ. ಹೀಗೆ ಪರಿಶುದ್ಧ ಭಕ್ತರ ಸಹಯೋಗದಿಂದ ಕುತೂಹಲಿಯಾದವನು, ದುಃಖಿಯಾದವನು.

ಪ್ರಾಪಂಚಿಕ ಏಳಿಕೆಯನ್ನು ಅರಸುವವನು ಮತ್ತು ಜ್ಞಾನಿ ಎಲ್ಲರೂ ತಾವೇ ಪರಿಶುದ್ಧರಾಗುತ್ತಾರೆ. ಆದರೆ ಸಿದ್ಧತೆಯ ಹಂತದಲ್ಲಿ ಭಗವಂತನ ಸಂಪೂರ್ಣ ಜ್ಞಾನವನ್ನು ಪಡೆದು ಅದೇ ಕಾಲದಲ್ಲಿ ಪರಮ ಪ್ರಭುವಿನ ಭಕ್ತಿಸೇವೆಯನ್ನು ಮಾಡುವವನು ಪ್ರಭುವಿಗೆ ಅತ್ಯಂತ ಪ್ರಿಯನಾಗುತ್ತಾನೆ. ದೇವೋತ್ತಮ ಪರಮ ಪುರುಷನ ಅಲೌಕಿಕತೆಯ ಪರಿಶುದ್ಧ ಭಕ್ತಿಸೇವೆಯಲ್ಲಿ ನೆಲೆಸಿರುವವನನ್ನು ಅವನ ಭಕ್ತಿಸೇವೆಯು ಎಷ್ಟರಮಟ್ಟಿಗೆ ರಕ್ಷಿಸುತ್ತದೆ ಎಂದರೆ ಐಹಿಕ ಕಲ್ಮಷವು ಅವನನ್ನು ಮುಟ್ಟಲಾರದು.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 18

ಉದಾರಾಃ ಸರ್ವ ಏವೈತೇ ಜ್ಞಾನೀ ತ್ವಾತ್ಮೈವ ಮೇ ಮತಮ್ |

ಆಸ್ಥಿತಃ ಸ ಹಿ ಯುಕ್ತಾತ್ಮಾ ಮಾಮೇವಾನುತ್ತಮಾಂ ಗತಿಮ್ ||18||

ಅನುವಾದ: ಈ ಎಲ್ಲ ಭಕ್ತರು ನಿಸ್ಸಂದೇಹವಾಗಿ ಉದಾರ ಆತ್ಮಗಳೇ ನಿಜ. ಆದರೆ ನನ್ನ ಅರಿವಿನಲ್ಲಿ ನೆಲೆಸಿರುವವನನ್ನು ನನ್ನಂತೆಯೇ ಎಂದು ಭಾವಿಸುತ್ತೇನೆ. ನನ್ನ ಅಲೌಕಿಕ ಸೇವೆಯಲ್ಲಿ ನಿರತನಾಗಿದ್ದು ಅವನು ಅತ್ಯುನ್ನತ ಮತ್ತು ಅತ್ಯಂತ ಪರಿಪೂರ್ಣ ಗುರಿಯಾದ ನನ್ನನ್ನೇ ಸೇರುತ್ತಾನೆ.

ಭಾವಾರ್ಥ: ಅಷ್ಟೊಂದು ಪರಿಪೂರ್ಣ ಅರಿವಿಲ್ಲದವರು ಭಗವಂತನಿಗೆ ಪ್ರಿಯರಲ್ಲ ಎಂದಲ್ಲ. ಪ್ರಭುವು ಅವರೆಲ್ಲರೂ ಉದಾರರು ಎಂದು ಹೇಳುತ್ತಾನೆ. ಏಕೆಂದರೆ ಯಾವುದೇ ಉದ್ದೇಶದಿಂದಲಾದರೂ ಪ್ರಭುವಿನ ಬಲಿಗೆ ಬರುವವನನ್ನು ಮಹಾತ್ಮ ಎಂದು ಕರೆಯುತ್ತಾರೆ. ಭಕ್ತಿಸೇವೆಯಿಂದ ಏನಾದರೂ ಪ್ರಯೋಜನ ಪಡೆಯಲು ಬರುವ ಭಕ್ತರನ್ನು ಪ್ರಭುವು ಸ್ವೀಕರಿಸುತ್ತಾನೆ. ಏಕೆಂದರೆ ಇಲ್ಲಿ ಪ್ರೀತಿಯ ವಿನಿಮಯವಿದೆ.

ಪ್ರಭುವನ್ನು ಪ್ರೀತಿಸುವುದರಿಂದ ಅವರು ಪ್ರಭುವನ್ನು ಯಾವುದಾದರೂ ಐಹಿಕ ಲಾಭಕ್ಕಾಗಿ ಬೇಡುತ್ತಾರೆ ಮತ್ತು ಅದನ್ನು ಪಡೆದಾಗ ಅವರಿಗೆ ಎಷ್ಟು ತೃಪ್ತಿಯಾಗುತ್ತದೆಂದರೆ ಅವರೂ ಭಕ್ತಿಸೇವೆಯಲ್ಲಿ ಮುನ್ನಡೆಯುತ್ತಾರೆ. ಆದರೆ ಪರಿಪೂರ್ಣ ಜ್ಞಾನದಲ್ಲಿರುವ ಭಕ್ತನು ಭಗವಂತನಿಗೆ ಬಹಳ ಪ್ರಿಯನಾದವನು. ಏಕೆಂದರೆ ಪರಮ ಪ್ರಭುವನ್ನು ಪ್ರೀತಿ ಮತ್ತು ಭಕ್ತಿಗಳಿಂದ ಸೇವಿಸುವುದೊಂದೇ ಅವನ ಉದ್ದೇಶ. ಇಂತಹ ಭಕ್ತನು ಪರಮ ಪ್ರಭುವಿನೊಡನೆ ಸಂಪರ್ಕವನ್ನು ಪಡೆಯದೆ ಅಥವಾ ಅವನನ್ನು ಸೇವಿಸದೆ ಒಂದು ಕ್ಷಣವೂ ಬದುಕಿರಲಾರ. ಇದೇ ರೀತಿಯಲ್ಲಿ ಪರಮ ಪ್ರಭುವಿಗೂ ಭಕ್ತನಲ್ಲಿ ಅತಿಶಯವಾದ ಪ್ರೀತಿ. ಭಗವಂತನು ಅಂತಹ ಭಕ್ತರನ್ನು ಬಿಟ್ಟಿರಲಾರ.

ಶ್ರೀಮದ್ಭಾಗವತದಲ್ಲಿ (9.4.68) ಭಗವಂತನು ಹೀಗೆ ಹೇಳುತ್ತಾನೆ -

ಸಾಧವೋ ಹೃದಯಂ ಮಹ್ಯಂ ಸಾಧೂನಾಂ ಹೃದಯಂ ತ್ವಹಮ್ |

ಮದನ್ಯತ್ ತೇ ನ ಜಾನನ್ತಿ ನಾಹಂ ತೇಭ್ಯೋ ಮನಾಗಪಿ ||

ಇದನ್ನೂ ಓದಿ: ಭಗವಂತನನ್ನು ನಂಬುವ ಪ್ರತಿಯೊಬ್ಬ ಮನುಷ್ಯನಿಗೆ ಆತನ ಕೃಪೆ ಇದ್ದೇ ಇರುತ್ತೆ; ಗೀತೆಯ ಸಾರಾಂಶ ಹೀಗಿದೆ

ಭಕ್ತರು ಸದಾ ನನ್ನ ಹೃದಯದಲ್ಲಿರುತ್ತಾರೆ ಮತ್ತು ನಾನು ಯಾವಾಗಲೂ ಭಕ್ತರ ಹೃದಯಗಳಲ್ಲಿ ಇರುತ್ತೇನೆ. ಭಕ್ತನಿಗೆ ನನ್ನ ಆಚೆ ಏನೂ ತಿಳಿಯದು. ನಾನು ಭಕ್ತನನ್ನು ಮರೆಯಲಾರೆ. ನನ್ನ ಮತ್ತು ಪರಿಶುದ್ಧಭಕ್ತನ ನಡುವೆ ಒಂದು ಆತ್ಮೀಯ ಬಾಂಧವ್ಯವಿದೆ. ಪೂರ್ಣ ಜ್ಞಾನದಲ್ಲಿರುವ ಪರಿಶುದ್ಧ ಭಕ್ತರಿಗೆ ಎಂದೂ ಅಧ್ಯಾತ್ಮಿಕ ಸ್ಪರ್ಶವು ತಪ್ಪುವುದಿಲ್ಲ. ಆದುದರಿಂದ ಅವರು ನನಗೆ ಬಹಳ ಪ್ರಿಯರಾದವರು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.