ಕನ್ನಡ ಸುದ್ದಿ  /  Astrology  /  Spiritual News Bhagavad Gita Updesh Lord Krishna Helps At The Right Time Bhagavad Gita Quotes In Kannada Rmy

Bhagavad Gita: ಭಗವಂತನಿಗೆ ಪ್ರತಿಯೊಬ್ಬರ ಸುಖ, ದುಃಖದ ಅರವಿದ್ದು ಸೂಕ್ತ ಸಮಯದಲ್ಲಿ ನೆರವಾಗುತ್ತಾನೆ; ಗೀತೆಯ ಅರ್ಥ ಹೀಗಿದೆ

Bhagavad Gita Updesh: ಭಗವಂತನಿಗೆ ಪ್ರತಿಯೊಬ್ಬರ ಸುಖ, ದುಃಖದ ಅರವಿದ್ದು ಸೂಕ್ತ ಸಮಯದಲ್ಲಿ ನೆರವಾಗುತ್ತಾನೆ ಎಂಬುದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಇದರ ಅರ್ಥವನ್ನು ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 6: ಧ್ಯಾನ ಯೋಗ - ಶ್ಲೋಕ 32

ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿ ಯೋರ್ಜುನ |

ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ ||32||

ಅನುವಾದ: Bhagavad Gita Updesh in Kannada: ಅರ್ಜುನ, ಎಲ್ಲ ಜೀವಿಗಳನ್ನೂ ತನ್ನೊಡನೆ ಹೋಲಿಸಿಕೊಂಡು ಅವರ ಸುಖ-ದುಃಖಗಳಲ್ಲಿ ನಿಜವಾಗಿ ಯಾರು ಸಮತ್ವವನ್ನು ಕಾಣುವನೋ ಅವನೇ ಪರಿಪೂರ್ಣ ಯೋಗಿ.

ಭಾವಾರ್ಥ: ಕೃಷ್ಣಪ್ರಜ್ಞೆಯಲ್ಲಿ ಇರುವವನು ಪರಿಪೂರ್ಣ ಯೋಗಿ. ತನ್ನ ವೈಯಕ್ತಿಕ ಅನುಭವದಿಂದಾಗಿ ಅವನಿಗೆ ಪ್ರತಿಯೊಬ್ಬರ ಸುಖ ಮತ್ತು ದುಃಖದ ಅರಿವಿದೆ. ಜೀವಿಯ ಯಾತನೆಯ ಕಾರಣವೆಂದರೆ ಭಗವಂತನೊಡನೆ ತನ್ನ ಬಾಂಧವ್ಯವನ್ನು ಮರೆತಿರುವುದು. ಸುಖದ ಕಾರಣವೆಂದರೆ, ಕೃಷ್ಣನೇ ಮನುಷ್ಯನ ಎಲ್ಲ ಚಟುವಟಿಕೆಗಳ ಪರಮ ಭೋಕ್ತಾರನು, ಎಲ್ಲ ಲೋಕಗಳ ಮತ್ತು ಗ್ರಹಗಳ ಒಡಯನು, ಎಲ್ಲ ಜೀವಿಗಳ ಅತ್ಯಂತ ಪ್ರಮಾಣಿಕ ಮಿತ್ರನು ಎನ್ನುವ ಅರಿವು ಇರುವುದು. ಐಹಿಕ ಪ್ರಕೃತಿಯ ತ್ರಿಗುಣಗಳಿಂದ ಬದ್ಧನಾದ ಜೀವಿಯು ಕೃಷ್ಣನೊಡನೆ ತನ್ನ ಬಾಂಧವ್ಯವನ್ನು ಮರೆಯುತ್ತಾನೆ. ಇದರಿಂದ ತ್ರಿವಿಧ ಐಹಿಕ ದುಃಖಗಳಿಗೆ ಗುರಿಯಾಗುತ್ತಾನೆ. ಈ ಸಂಗತಿಯನ್ನು ಪರಿಪೂರ್ಣ ಯೋಗಿಯು ತಿಳಿದಿರುತ್ತಾನೆ. ಕೃಷ್ಣಪ್ರಜ್ಞೆಯಲ್ಲಿರುವವನು ಸುಖವಾಗಿರುತ್ತಾನೆ. ಆದುದರಿಂದ ಕೃಷ್ಣಪ್ರಜ್ಞಾನವನ್ನು ಎಲ್ಲರಿಗೆ ಹಂಚಲು ಪ್ರಯತ್ನಿಸುತ್ತಾನೆ.

ಕೃಷ್ಣಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರ ಮಹತ್ವವನ್ನು ಪ್ರಸಾರಮಾಡಲು ಸಂಪೂರ್ಣಯೋಗಿಯು ಪ್ರಯತ್ನಿಸುವುದರಿಂದ ಜಗತ್ತಿನಲ್ಲಿ ಅವನೇ ಅತ್ಯಂತ ಶ್ರೇಷ್ಠ ಪರೋಪಕಾರಿ, ಅವನೇ ಭಗವಂತನಿಗೆ ಅತ್ಯಂತ ಪ್ರೀತಿ ಪಾತ್ರನಾದ ಸೇವ. ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ತಮಃ (ಗೀತಾ 18.69) ಎಂದರೆ ಭಗವಂತನ ಭಕ್ತನು ಸದಾ ಎಲ್ಲ ಜೀವಿಗಳ ಕಲ್ಯಾಣಕ್ಕೆ ಗಮನಕೊಡುತ್ತಾನೆ. ಈ ರೀತಿಯಲ್ಲಿ ಅವನು ನಿಜವಾಗಿ ಎಲ್ಲರ ಸ್ನೇಹಿತ. ಅವನು ಯೋಗದಲ್ಲಿ ಪರಿಪೂರ್ಣತೆಯನ್ನು ಬಯಸುವುದು ತನ್ನ ವೈಯಕ್ತಿಕ ಲಾಭಕ್ಕಾಗಿ ಅಲ್ಲ, ಇತರರಿಗೆ ನೆರವಾಗಲೂ ಪ್ರಯತ್ನಿಸುತ್ತಾನೆ. ಆದ್ದರಿಂದ ಅವನು ಶ್ರೇಷ್ಠ ಯೋಗಿ. ಆತನಿಗೆ ಸಹಜೀವಿಗಳಲ್ಲಿ ಅಸೂಯೆಯಿಲ್ಲ.

ಭಗವಂತನ ಪರಿಪೂರ್ಣ ಭಕ್ತನಿಗೂ ತನ್ನ ವೈಯಕ್ತಿಕ ಮೇಲ್ಮೈಯಲ್ಲಿ ಮಾತ್ರ ಆಸಕ್ತನಾದ ಯೋಗಿಗೂ ವ್ಯತ್ಯಾಸ ಇಲ್ಲಿದೆ. ಪರಿಪೂರ್ಣ ಧ್ಯಾನಕ್ಕಾಗಿ ಏಕಾಂತ ಸ್ಥಳಕ್ಕೆ ಹೊರಟುಹೋದ ಯೋಗಿಯು. ಪ್ರತಿಯೊಬ್ಬ ಮನುಷ್ಯನ ಮನಸ್ಸನ್ನು ಕೃಷ್ಣಪ್ರಜ್ಞೆಯತ್ತ ತಿರುಗಿಸಲು ತನ್ನಿಂದಾದಷ್ಟು ಶ್ರಮಿಸುವ ಭಕ್ತನಷ್ಟು ಪರಿಪೂರ್ಣನಾಗಿಲ್ಲದಿರಬಹುದು.