ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನ ಭಕ್ತಿಯನ್ನ ಬೆಳೆಸಿಕೊಳ್ಳುವುದೇ ಬದುಕಿನಲ್ಲಿ ಅತ್ಯುನ್ನತ ಪರಿಪೂರ್ಣತೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತನ ಭಕ್ತಿಯನ್ನ ಬೆಳೆಸಿಕೊಳ್ಳುವುದೇ ಬದುಕಿನಲ್ಲಿ ಅತ್ಯುನ್ನತ ಪರಿಪೂರ್ಣತೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತನ ಭಕ್ತಿಯನ್ನ ಬೆಳೆಸಿಕೊಳ್ಳುವುದೇ ಬದುಕಿನಲ್ಲಿ ಅತ್ಯುನ್ನತ ಪರಿಪೂರ್ಣತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ 26ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 26

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ |

ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ||26||

ಅನುವಾದ: ಯಾರಾದರೂ ನನಗೆ ಪ್ರೀತಿ ಮತ್ತು ಭಕ್ತಿಗಳಿಂದ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ಒಂದಿಷ್ಟು ನೀರನ್ನು ಅರ್ಪಿಸಿದರೆ ನಾನು ಅದನ್ನು ಸ್ವೀಕರಿಸುತ್ತೇನೆ.

ಭಾವಾರ್ಥ: ಬುದ್ಧಿವಂತನು, ನಿತ್ಯ ಸುಖಕ್ಕಾಗಿ ಒಂದು ಶಾಶ್ವತವಾದ ಆನಂದಮಯವಾದ ನಿವಾಸವನ್ನು ಪಡೆಯಲು ಕೃಷ್ಣಪ್ರಜ್ಞೆಯಲ್ಲಿ (Lord Krishna) ಅಥವಾ ಭಗವಂತನ ದಿವ್ಯ ಪ್ರೀತಿಯು ಸೇವೆಯಲ್ಲಿ ನಿರತನಾಗಿರುವುದು ಅತ್ಯಾವಶ್ಯಕ. ಇಂತಹ ಆಶ್ಚರ್ಯಕರವಾದ ಫಲಿತಾಂಶವನ್ನು ಸಾಧಿಸುವ ವಿಧಾನ ಬಹು ಸುಲಭವಾದದ್ದು. ಬಡವರಲ್ಲಿ ಬಡವರಾಗಿದ್ದು ಯಾವ ಅರ್ಹತೆಯೂ ಇಲ್ಲದವರೂ ಇದನ್ನು ಪ್ರಯತ್ನಿಸಬಹುದು. ಇದಕ್ಕೆ ಅಗತ್ಯವಾದ ಏಕೈಕ ಅರ್ಹತೆಯೆಂದರೆ ಶುದ್ಧ ಭಕ್ತನಾಗಿರುವುದು (Bhagavad Gita Updesh in Kannada).

ಮನುಷ್ಯನು ಏನಾಗಿದ್ದಾನೆ, ಅವನ ಸ್ಥಿತಿ ಏನು - ಯಾವುದೂ ಮುಖ್ಯವಲ್ಲ. ಈ ವಿಧಾನವು ಎಷ್ಟು ಸುಲಭ ಎಂದರೆ ನಿಜವಾದ ಪ್ರೀತಿಯಿಂದ ಪರಮ ಪ್ರಭುವಿಗೆ ಒಂದು ಎಲೆಯನ್ನಾಗಲಿ ಹಣ್ಣನ್ನಾಗಲಿ ಒಂದಿಷ್ಟು ನೀರನ್ನಾಗಲಿ ಅರ್ಪಿಸಬಹುದು. ಪ್ರಭುವು ಅದನ್ನು ಸಂತೋಷದಿಂದ ಸ್ವೀಕರಿಸುತ್ತಾನೆ. ಆದುದರಿಂದ ಕೃಷ್ಣಪ್ರಜ್ಞೆಯು ಬಹುಸುಲಭ. ಎಲ್ಲರಿಗೂ ಸಾಧ್ಯವಾದದ್ದು. ಯಾರನ್ನೂ ಅದರಿಂದ ದೂರವಿಡಲು ಸಾಧ್ಯವಿಲ್ಲ. ಈ ಸರಳವಾದ ವಿಧಾನದಿಂದ ಕೃಷ್ಣಪ್ರಜ್ಞೆಯನ್ನು ಸಾಧಿಸಿ ನಿತ್ಯಜ್ಞಾನಾನಂದದ ಅತ್ಯುನ್ನತ ಪರಿಪೂರ್ಣತೆಯ ಬದುಕನ್ನು ಪಡೆಯುವುದು ಬೇಡ ಎನ್ನುವ ಮೂರ್ಖನು ಯಾರು? ಕೃಷ್ಣನಿಗೆ ಪ್ರೇಮಪೂರ್ವಕ ಸೇವೆ ಮಾತ್ರವೇ ಬೇಕು. ಬೇರೇನೂ ಬೇಡ.

ತನ್ನ ಪರಿಶುದ್ಧ ಭಕ್ತರಿಂದ ಒಂದು ಸಣ್ಣ ಹೂವನ್ನು ಸಹ ಆತನು ಸ್ವೀಕರಿಸುತ್ತಾನೆ. ಭಕ್ತನಲ್ಲದವನಿಂದ ಆತನು ಏನನ್ನೂ ಬಯಸುವುದಿಲ್ಲ. ಆತನು ಸ್ವಯಂ ಪೂರ್ಣನು, ಆತನಿಗೆ ಯಾರಿಂದಲೂ ಏನೂ ಅಗತ್ಯವಿಲ್ಲ. ಆದರೂ ಆತನು ಪ್ರೀತಿವಿಶ್ವಾಸಗಳ ವಿನಿಮಯವೆಂದು ತನ್ನ ಭಕ್ತನ ಕಾಣಿಕೆಯನ್ನು ಸ್ವೀಕರಿಸುತ್ತಾನೆ. ಕೃಷ್ಣಪ್ರಜ್ಞೆಯನ್ನು ಬೆಳೆಸಿಕೊಳ್ಳುವುದೇ ಬದುಕಿನಲ್ಲಿ ಅತ್ಯುನ್ನತ ಪರಿಪೂರ್ಣತೆ. ಈ ಶ್ಲೋಕದಲ್ಲಿ ಭಕ್ತಿ ಎನ್ನುವುದನ್ನು ಎರಡು ಬಾರಿ ಬಳಿಸಿದೆ. ಕೃಷ್ಣನ ಬಳಿಗೆ ಹೋಗಲು ಭಕ್ತಿಸೇವೆಯೊಂದೇ ಮಾರ್ಗ ಎಂದು ಒತ್ತಿ ಹೇಳುವುದು ಇದರ ಉದ್ದೇಶ.

ಕಾಣಿಕೆಯಿಂದ ಪ್ರಭುವಿನ ಮನಸ್ಸನ್ನು ಒಲಿಸಲು ಸಾಧ್ಯವಿಲ್ಲ

ಬ್ರಾಹ್ಮಣನಾಗುವುದು, ವಿದ್ವಾಂಸನಾಗುವುದು, ಬಹು ಶ್ರೀಮಂತನೋ, ತತ್ವಶಾಸ್ತ್ರನೋ ಆಗುವುದು ಇಂತಹ ಯಾವುದೇ ಸಾಧನವು ಯಾವುದೇ ಕಾಣಿಕೆಯನ್ನು ಸ್ವೀಕರಿಸುವಂತೆ ಕೃಷ್ಣನ ಮನವನ್ನು ಒಲಿಸಲಾರದು. ಭಕ್ತಿಯ ಮೂಲತತ್ವವಿಲ್ಲದೆ ಯಾರಿಂದಲೇ ಆಗಲಿ ಯಾವ ಕಾಣಿಕೆಯನ್ನೇ ಆಗಲಿ ಸ್ವೀಕರಿಸುವಂತೆ ಪ್ರಭುವಿನ ಮನಸ್ಸನ್ನು ಒಲಿಸಲು ಸಾಧ್ಯವಿಲ್ಲ. ಭಕ್ತಿ ಯಾವಾಗಲೂ ಕಾರಣಾತ್ಮಕವಲ್ಲ. ಈ ಪ್ರಕ್ರಿಯೆ ನಿತ್ಯವಾದದ್ದು. ಪರಾತ್ಪರ ಪೂರ್ಣತೆಗೆ ಸೇವೆೆಯಲ್ಲಿ ಅರ್ಪಿಸುವ ನೇರ ಕ್ರಿಯೆ ಭಕ್ತಿ.

ತಾನೊಬ್ಬನೇ ಭೋಕ್ತಾರ, ಅನಾದಿಪ್ರಭು ಮತ್ತು ಎಲ್ಲ ಯಜ್ಞಗಳ ನಿಜವಾದ ಗುರಿ ಎಂದು ಶ್ರೀಕೃಷ್ಣನು ತೋರಿಸಿಕೊಟ್ಟಿದ್ದಾನೆ. ಅನಂತರ ಇಲ್ಲಿ ತಾನು ಎಂತಹ ಕಾಣಿಕೆಗಳನ್ನು ಬಯಸುತ್ತೇನೆ ಎಂದು ಹೇಳುತ್ತಾನೆ. ಪರಿಶುದ್ಧನಾಗಿ, ಬದುಕಿನ ಪರಮಗುರಿಯಾದ ಭಗವಂತನ ಪ್ರೇಮಪೂರ್ವಕ ದಿವ್ಯಸೇವೆಯನ್ನು ಸಾಧಿಸಲು ಪರಮ ಪ್ರಭುವಿನ ಭಕ್ತಿಸೇವೆಯಲ್ಲಿ ನಿರತನಾಗಲು ಯಸುವವನು ಪ್ರಭುವು ತನ್ನಿಂದ ಏನನ್ನು ಅಪೇಕ್ಷಿಸುತ್ತಾನೆ ಎಂದು ಕಂಡುಕೊಳ್ಳಬೇಕು.