Bhagavad Gita: ಭಗವಂತನ ಅನುಗ್ರಹದಲ್ಲಿರುವ ಭಕ್ತನೇ ಹೆಚ್ಚು ತೃಪ್ತಿಯಾಗಿರುತ್ತಾನೆ; ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನ ಅನುಗ್ರಹದಲ್ಲಿರುವ ಭಕ್ತನೇ ಹೆಚ್ಚು ತೃಪ್ತಿಯಾಗಿರುತ್ತಾನೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತನ ಅನುಗ್ರಹದಲ್ಲಿರುವ ಭಕ್ತನೇ ಹೆಚ್ಚು ತೃಪ್ತಿಯಾಗಿರುತ್ತಾನೆ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಭಗವಂತನ ಅನುಗ್ರಹದಲ್ಲಿರುವ ಭಕ್ತನೇ ಹೆಚ್ಚು ತೃಪ್ತಿಯಾಗಿರುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 20ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 20

ಕಾಮೈಸ್ತೈಸ್ತೈರ್ಹೃತಜ್ಞಾನಾಃ ಪ್ರಪದ್ಯನ್ತೇನ್ಯದೇವತಾಃ |

ತಂ ತಂ ನಿಮಯಮಮಾನಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ ||20||

ಅನುವಾದ: ಐಹಿಕ ಬಯಕೆಗಳು ಯಾರ ಬುದ್ಧಿಶಕ್ತಿಯನ್ನು ಕದ್ದಿವೆಯೋ ಅಂತಹವರು ದೇವತೆಗಳಿಗೆ ಶರಣಾಗುತ್ತಾರೆ ಮತ್ತು ತಮ್ಮ ಸ್ವಭಾವಗಳಿಗೆ ಅನುಗುಣವಾಗಿ ಪೂಜೆಯ ನಿರ್ದಿಷ್ಟ ನಿಯಮ ನಿಬಂಧನೆಗಳನ್ನು ಅನುಸರಿಸುತ್ತಾರೆ.

ಭಾವಾರ್ಥ: ಎಲ್ಲ ಐಹಿಕ ಕಶ್ಮಲಗಳಿಂದ ಬಿಡುಗಡೆಯಾದವರು ಪರಮ ಪ್ರಭುವಿಗೆ ಶರಣಾಗಿ ಅವನ ಭಕ್ತಿಸೇವೆಯಲ್ಲಿ ನಿರತರಾಗುತ್ತಾರೆ. ಐಹಿಕ ಕಶ್ಮಲವು ಸಂಪೂರ್ಣವಾಗಿ ತೊಳೆದು ಹೋಗುವವರೆಗೆ ಸ್ವಾಭಾವದಿಂದ ಅವರು ಭಕ್ತರಲ್ಲ. ಆದರೆ ಐಹಿಕ ಬಯಕೆಗಳಿದ್ದು ಪರಮ ಪ್ರಭುವಿನ ಬಳಿಸಾರುವವರೂ ಸಹ ಹೊರ ಪ್ರಕೃತಿಯಿಂದ ಅಷ್ಟಾಗಿ ಆಕರ್ಷಿತರಾಗುವುದಿಲ್ಲ. ಏಕೆಂದರೆ ಸರಿಯಾದ ಗುರಿಯನ್ನು ಸಮೀಪಿಸುತ್ತಲೇ ಶೀಘ್ರವಾಗಿ ಅವರು ಎಲ್ಲ ಐಹಿಕ ಕಾಮದಿಂದ ಬಿಡುಗಡೆ ಹೊಂದುತ್ತಾರೆ. ಮನುಷ್ಯನು ಪರಿಶುದ್ಧ ಭಕ್ತನಾಗಿದ್ದು ಎಲ್ಲ ಐಹಿಕ ಬಯಕೆಗಳಿಂದ ಮುಕ್ತನಾಗಿರಲಿ, ಅಥವಾ ಐಹಿಕ ಬಯಕೆಗಳು ಅವನಲ್ಲಿ ತುಂಬಿರಲಿ, ಇಲ್ಲವೇ ಐಹಿಕ ಕಶ್ಮಲದ ಸೋಂಕಿನಿಂದ ಬಿಡುಗಡೆಯನ್ನು ಬಯಸಲಿ - ಯಾವುದೇ ಸ್ಥಿತಿಯಲ್ಲಿದ್ದರೂ ಆತನು ವಾಸುದೇವನಿಗೆ ಶರಣಾಗಿ ಆತನನ್ನು ಪೂಜಿಸಬೇಕು ಎಂದು ಶ್ರೀಮದ್ಭಾಗವತದಲ್ಲಿ ಸಲಹೆಮಾಡಿದೆ. ಭಾಗವತದಲ್ಲಿ ಹೇಳಿದಂತೆ (2.3.13) -

ಅಕಾಮಃ ಸರ್ವಕಾಮೋ ವಾ ಮೋಕ್ಷಕಾಮ ಉದಾರಿಧೀಃ |

ತೀವ್ರೇಣ ಭಕ್ತಿಯೋಗೇನ ಯಚೇತ ಪುರುಷಂ ಪರಮ್ ||

ತಮ್ಮ ಅಧ್ಯಾತ್ಮಿಕ ಅರಿವನ್ನು ಕಳೆದುಕೊಂಡ ಅಷ್ಟು ಬುದ್ಧಿಶಾಲಿಗಳಲ್ಲದವರು ಐಹಿಕ ಬಯಕೆಗಳ ಶೀಘ್ರ ಪೂರೈಕೆಗಾಗಿ ದೇವತೆಗಳ ಆಶ್ರಯ ಪಡೆಯುತ್ತಾರೆ. ಸಾಮಾನ್ಯವಾಗಿ ಇಂತಹವರು ದೇವೋತ್ತಮ ಪರಮ ಪುರುಷನ ಬಳಿಗೆ ಹೋಗುವುದಿಲ್ಲ. ಏಕೆಂದರೆ ಅವರು ಕೆಳಮಟ್ಟದ ಪ್ರಕೃತಿ ಗುಣಗಳಲ್ಲಿದ್ದಾರೆ (ರಜಸ್ಸು ಮತ್ತು ತಮಸ್ಸು). ಈ ಕಾರಣದಿಂದ ಅವರು ವಿವಿಧ ದೇವತೆಗಳನ್ನು ಪೂಜಿಸುತ್ತಾರೆ. ಆ ಪೂಜೆಯ ಹಲವು ನಿಯಮ ನಿಬಂಧನೆಗಳನ್ನು ಅನುಸರಿಸಿ ತೃಪ್ತರಾಗುತ್ತಾರೆ. ದೇವತೆಗಳನ್ನು ಪೂಜಿಸುತ್ತಾರೆ. ಆ ಪೂಜೆಯ ಹಲವು ನಿಯಮ ನಿಬಂಧನೆಗಳನ್ನು ಅನುಸರಿಸಿ ತೃಪ್ತರಾಗುತ್ತಾರೆ.

ದೇವತೆಗಳನ್ನು ಪೂಜಿಸುವವರು ಸಣ್ಣಪುಟ್ಟ ಅಪೇಕ್ಷೆಗಳಿಂದ ಪ್ರೇರಿತರಾಗಿರುತ್ತಾರೆ. ಪರಮ ಗುರಿಯನ್ನು ಮುಟ್ಟುವುದು ಹೇಗೆ ಎಂದು ಅವರಿಗೆ ತಿಳಿಯದು. ಆದರೆ ಪರಮ ಪ್ರಭುವಿನ ಭಕ್ತನು ದಾರಿ ತಪ್ಪುವುದಿಲ್ಲ. ವೈದಿಕ ಸಾಹಿತ್ಯದಲ್ಲಿ ಬೇರೆ ಬೇರೆ ಉದ್ದೇಶಗಳಿಗೆ ಬೇರೆ ಬೇರೆ ದೇವತೆಗಳನ್ನು ಪೂಜಿಸಬೇಕೆಂದು ಸೂಚಿಸಿದೆ. (ಉದಾಹರಣೆಗೆ, ರೋಗಿಯು ಸೂರ್ಯನನ್ನು ಪೂಜಿಸಬೇಕೆಂದು ಸೂಚಿಸಿದೆ). ಈ ಕಾರಣದಿಂದ ಭಗವಂತನ ಭಕ್ತರಲ್ಲದವರು ಕೆಲವು ಉದ್ದೇಶಗಳ ಸಾಧನೆಗೆ ಪರಮ ಪ್ರಭುವಿಗಿಂತ ದೇವತೆಗಳೇ ಉತ್ತಮ ಎಂದು ಭಾವಿಸುತ್ತಾರೆ. ಆದರೆ ಪರಿಶುದ್ಧ ಭಕ್ತನಿಗೆ ಪರಮ ಪ್ರಭು ಕೃಷ್ಣನೇ ಎಲ್ಲರ ಪ್ರಭು ಎಂದು ಗೊತ್ತು.

ಚೈತನ್ಯ ಚರಿತಾಮೃತದಲ್ಲಿ (ಆದಿ 5.142) ಹೀಗೆ ಹೇಳಿದೆ - ಏಕಲೇ ಈಶ್ವರ ಕೃಷ್ಣ ಆರ ಸಬ ಭೃತ್ಯ. ದೇವೋತ್ತಮ ಪರಮ ಪುರುಷನಾದ ಕೃಷ್ಣನು ಮಾತ್ರ ಪ್ರಭು, ಉಳಿದೆಲ್ಲರೂ ಸೇವಕರು. ಆದುದರಿಂದ ಪರಿಶುದ್ಧ ಭಕ್ತನು ತನ್ನ ಐಹಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ದೇವತೆಗಳ ಬಳಿಕೆ ಹೋಗುವುದೇ ಇಲ್ಲ. ಪರಿಶುದ್ಧ ಭಕ್ತನು ಭಗವಂತನು ಅನುಗ್ರಹಿಸಿದುದರಲ್ಲಿಯೇ ತೃಪ್ತಿಪಡುತ್ತಾನೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.