ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಜಗತ್ತಿನ ಎಲ್ಲ ಸೃಷ್ಟಿಗಳಿಗೆ ಭಗವಂತನೇ ಆದಿ ಮತ್ತು ಅಂತ್ಯ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಜಗತ್ತಿನ ಎಲ್ಲ ಸೃಷ್ಟಿಗಳಿಗೆ ಭಗವಂತನೇ ಆದಿ ಮತ್ತು ಅಂತ್ಯ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಜಗತ್ತಿನ ಎಲ್ಲ ಸೃಷ್ಟಿಗಳಿಗೆ ನಾನೇ ಆದಿ, ಅಂತ್ಯ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 30 ರಿಂದ 32ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 30

ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಮ್ |

ಮೃಗಾಣಾಂ ಚ ಮೃಗೇನ್ದ್ರೋಹಂ ವೈನತೇಯಶ್ಚ ಪಕ್ಷಿಣಾಮ್ ||30||

ಅನುವಾದ: ದೈತ್ಯರಲ್ಲಿ ನಾನು ಭಕ್ತಪ್ರಹ್ಲಾದ, ಕ್ಷಯವನ್ನುಂಟುಮಾಡುವವರಲ್ಲಿ ನಾನು ಕಾಲ. ಪ್ರಾಣಿಗಳಲ್ಲಿ ನಾನು ಸಿಂಹ ಮತ್ತು ಪಕ್ಷಿಗಳಲ್ಲಿ ನಾನು ಗರುಡ.

ಭಾವಾರ್ಥ: ದಿತಿ ಮತ್ತು ಅದಿತಿ ಸೋದರಿಯವರು. ಅದಿತಿಯ ಗಂಡುಮಕ್ಕಳಿಗೆ ಆದಿತ್ಯರೆಂದೂ ದಿತಿಯ ಗಂಡುಮಕ್ಕಳಿಗೆ ದೈತ್ಯರೆಂದೂ ಹೆಸರು. ಆದಿತ್ಯರೆಲ್ಲ ಭಗವಂತನ ಭಕ್ತರು. ದೈತ್ಯರೆಲ್ಲ ನಾಸ್ತಿಕರು. ಪ್ರಹ್ಲಾದನು ದೈತ್ಯ ಕುಟುಂಬದಲ್ಲಿ ಹುಟ್ಟಿದರೂ ಬಾಲ್ಯದಿಂದ ಅವನು ಮಹಾಭಕ್ತ. ಅವನ ಭಕ್ತಿಸೇವೆಯಿಂದಾಗಿ ಮತ್ತು ಧರ್ಮಿಷ್ಟ ಸ್ವಭಾವದಿಂದಾಗಿ ಅವನನ್ನು ಕೃಷ್ಣನ ಪ್ರತಿನಿಧಿ ಎಂದು ಪರಿಗಣಿಸಿದೆ (Bhagavad Gita Updesh in Kannada).

ಕ್ಷಯವನ್ನುಂಟುಮಾಡುವ ಅನೇಕ ತತ್ವಗಳಿವೆ, ಆದರೆ ಕಾಲವು ಐಹಿಕ ವಿಶ್ವದಲ್ಲಿ ಎಲ್ಲ ವಸ್ತುಗಳನ್ನು ಸವೆಸುತ್ತದೆ. ಆದುದರಿಂದ ಅದು ಕೃಷ್ಣನ ಪ್ರತಿನಿಧಿ. ಅನೇಕ ಪ್ರಾಣಿಗಳಲ್ಲಿ ಸಿಂಹವು ಅತ್ಯಂತ ಬಲಶಾಲಿಯಾದದ್ದು ಮತ್ತು ಭಯಂಕರವಾದದ್ದು. ಲಕ್ಷಾಂತರ ಬಗೆಯ ಪಕ್ಷಿಗಳಲ್ಲಿ ವಿಷ್ಣುವಿನ ವಾಹನವಾದ ಗರುಡನು ಅತ್ಯಂತ ಶ್ರೇಷ್ಠನು.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 31

ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಮ್ |

ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ ||31||

ಅನುವಾದ: ಪರಿಶುದ್ಧಗೊಳಿಸುವವರಲ್ಲಿ ನಾನು ವಾಯು, ಶಸ್ತ್ರಧಾರಿಗಳಲ್ಲಿ ರಾಮ, ಮೀನುಗಳಲ್ಲಿ ನಾನು ಮಕರ ಮತ್ತು ಹರಿಯುವ ನದಿಗಳಲ್ಲಿ ಗಂಗಾನದಿ.

ಭಾವಾರ್ಥ: ಜಲವಾಸಿಗಳಲ್ಲಿ ಅತ್ಯಂತ ದೊಡ್ಡಪ್ರಾಣಿಗಳಲ್ಲಿ ತಿಮಿಂಗಿಲವು ಒಂದು. ನಿಶ್ಚಯವಾಗಿಯೂ ಅದು ಮನುಷ್ಯನಿಗೆ ಅತ್ಯಂತ ಅಪಾಯಕಾರಿ. ಅದು ಕೃಷ್ಣನ ಪ್ರತಿನಿಧಿ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 32

ಸರ್ಗಾಣಾಮಾದಿರನ್ತಶ್ಚ ಮಧ್ಯಂ ಚೈವಾಹಮರ್ಜನ |

ಅಧ್ಯಾತ್ಮವಿದ್ಯಾ ವಿದ್ಯಾನಾಂ ವಾದಃ ಪ್ರವದತಾಮಹಮ್ ||32||

ಅನುವಾದ: ಅರ್ಜುನ, ಎಲ್ಲ ಸೃಷ್ಟಿಗಳಿಗೆ ನಾನೇ ಆದಿ, ಅಂತ್ಯ ಮತ್ತು ಮಧ್ಯ, ಎಲ್ಲ ವಿದ್ಯೆಗಳಲ್ಲಿ ನಾನು ಅಧ್ಯಾತ್ಮವಿದ್ಯೆಯು, ಎಲ್ಲ ತಾರ್ಕಿಕರಲ್ಲಿ ನಾನೇ ನಿರ್ಣಾಯಕ ಸತ್ಯ.

ಭಾವಾರ್ಥ: ಸೃಷ್ಟಿಯಾದ ಅಭಿವ್ಯಕ್ತಿಗಳಲ್ಲಿ ಮೊದಲನೆಯದು ಸಂಪೂರ್ಣ ಐಹಿಕ ಮೂಲಾಂಶಗಳದು. ಮೊದಲೇ ಹೇಳಿದಂತೆ, ವಿಶ್ವ ಅಭಿವ್ಯಕ್ತಿಯನ್ನು ಮಹಾವಿಷ್ಣು, ಗರ್ಭೋದಕಶಾಯಿ ವಿಷ್ಣು ಮತ್ತು ಕ್ಷೀರೋದಕಶಾಯಿ ವಿಷ್ಣು ಸೃಷ್ಟಿಮಾಡುತ್ತಾರೆ ಮತ್ತು ನಿರ್ವಹಿಸುತ್ತಾರೆ. ಅನಂತರ ಇದನ್ನು ಶಿವನು ನಾಶಮಾಡುತ್ತಾನೆ. ಬ್ರಹ್ಮನು ಗೌಣ ಸೃಷ್ಟಿಕರ್ತ. ಸೃಷ್ಟಿ, ಸ್ಥಿತಿ, ಲಯಗಳ ಈ ಶಕ್ತಿಗಳು ಪರಮ ಪ್ರಭುವಿನ ಐಹಿಕ ಗುಣಗಳ ಮೂರ್ತಿಗಳು. ಆದುದರಿಂದ ಅವನೇ ಎಲ್ಲ ಸೃಷ್ಟಿಯ ಆದಿ. ಅವನೇ ಮಧ್ಯ, ಅವನೇ ಅಂತ್ಯ.

ಪ್ರೌಢವಿದ್ಯೆಗೆ ಅರಿವನ್ನು ನೀಡುವ ಹಲವು ಗ್ರಂಥಗಳಿವೆ. ಉದಾಹರಣೆಗೆ ನಾಲ್ಕು ವೇದಗಳು. ಅವುಗಳ ಆರು ಪೂರಕ ಗ್ರಂಥಗಳು, ವೇದಾಂತ ಸೂತ್ರ, ತರ್ಕದ ಪುಸ್ತಕಗಳು, ನ್ಯಾಯಶಾಸ್ತ್ರ ಗ್ರಂಥಗಳು ಮತ್ತು ಪುರಾಣಗಳು. ಹೀಗೆ ಒಟ್ಟು ಶಿಕ್ಷಣದ ಹದಿನಾಲ್ಕು ಗ್ರಂಥಗಳಿವೆ. ಇವುಗಳಲ್ಲಿ ಅಧ್ಯಾತ್ಮಿವಿದ್ಯೆಯನ್ನು ನೀಡುವ ವೇದಾಂತ ಸೂತ್ರವು ಕೃಷ್ಣನ ಪ್ರತಿನಿಧಿ.

ತರ್ಕದಲ್ಲಿ ವಿವಿಧ ಬಗೆಯ ವಾದಗಳುಂಟು. ವಿರೋಧವಾದವನ್ನೂ ಸಮರ್ಥಿಸುವ ಸಾಕ್ಷ್ಯಾಧಾರಗಳಿಂದ ತನ್ನ ವಾದವನ್ನು ಸಮರ್ಥಿಸುವುದಕ್ಕೆ ಜಲ್ಪ ಎಂದು ಹೆಸರು. ಪ್ರತಿವಾದಿಯನ್ನು ಸೋಲಿಸಲೆಂದು ಮಾತ್ರ ಪ್ರಯತ್ನಿಸುವುದಕ್ಕೆ ವಿತಂಡ ಎಂದು ಹೆಸರು. ವಾಸ್ತವ ನಿರ್ಣಯಕ್ಕೆ ವಾದ ಎಂದು ಹೆಸರು. ಈ ನಿರ್ಣಾಯಕ ಸತ್ಯವು ಕೃಷ್ಣನ ಪ್ರತಿನಿಧಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.