Bhagavad Gita: ಶತ್ರುವಿನ ವಿಷಯದಲ್ಲೂ ಭಗವಂತ ದಯೆಯಿಂದ ನಡೆದುಕೊಳ್ಳುತ್ತಾನೆ; ಗೀತೆಯ ಅರ್ಥ ಹೀಗಿದೆ-spiritual news bhagavad gita updesh lord krishna is kind even to enemy bhagavad gita quotes in kannada ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಶತ್ರುವಿನ ವಿಷಯದಲ್ಲೂ ಭಗವಂತ ದಯೆಯಿಂದ ನಡೆದುಕೊಳ್ಳುತ್ತಾನೆ; ಗೀತೆಯ ಅರ್ಥ ಹೀಗಿದೆ

Bhagavad Gita: ಶತ್ರುವಿನ ವಿಷಯದಲ್ಲೂ ಭಗವಂತ ದಯೆಯಿಂದ ನಡೆದುಕೊಳ್ಳುತ್ತಾನೆ; ಗೀತೆಯ ಅರ್ಥ ಹೀಗಿದೆ

Bhagavad Gita Updesh: ಶತ್ರುವಿನ ವಿಷಯದಲ್ಲೂ ಭಗವಂತ ದಯೆಯಿಂದ ನಡೆದುಕೊಳ್ಳುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 12 ನೇ ಅಧ್ಯಾಯದ 13 ಮತ್ತು 14 ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 13-14

ಅದ್ವೇಷಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ |

ನಿರ್ಮಮೋ ನಿರಹನ್ಕಾರಃ ಸಮದುಃಖಸುಖಃ ಕ್ಷಮೀ ||13||

ಸನ್ತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ |

ಮಯ್ಯರ್ಪಿತಮನೋಬುದ್ಧಿರ್ಯೋಮದ್ಭಕ್ತಃ ಸ ಮೇ ಪ್ರಿಯಃ ||14||

ಅನುವಾದ: ಯಾರಿಗೆ ಅಸೂಯೆ ಇಲ್ಲವೋ, ಯಾರು ಎಲ್ಲ ಜೀವಿಗಳಿಗೆ ಸ್ನೇಹಿತನೋ, ತಾನು ಒಡೆಯನೆಂಬ ಭಾವನೆ ಇಲ್ಲದೆ ನಿರಹಂಕಾರನೋ, ಸುಖ ದುಃಖಗಳಲ್ಲಿ ಸಮಚಿತ್ತನೋ, ಕ್ಷಮಾಶೀಲನೋ, ಸದಾತೃಪ್ತನೋ, ಸಂತುಷ್ಟನೋ, ಆತ್ಮಸಂಶಯಮಿಯೋ, ದೃಢಚಿತ್ತದಿಂದ ಭಕ್ತಿಸೇವೆಯಲ್ಲಿ ನಿರತನೋ, ತನ್ನ ಮನಸ್ಸನ್ನೂ ಬುದ್ಧಿಯನ್ನೂ ನನ್ನಲ್ಲಿ ನಿಲ್ಲಿಸಿರುವನೋ ಅಂತಹ ಭಕ್ತನು ನನಗೆ ಬಹಳ ಪ್ರಿಯನಾದವನು.

ಭಾವಾರ್ಥ: ಶುದ್ಧ ಭಕ್ತಿಸೇವೆಯ ವಿಷಯಕ್ಕೆ ಮತ್ತೆ ಬಂದು ಪ್ರಭುವು ಈ ಎರಡು ಶ್ಲೋಕಗಳಲ್ಲಿ ಪರಿಶುದ್ಧ ಭಕ್ತನ ಅಧ್ಯಾತ್ಮಿಕ ಅರ್ಹತೆಗಳನ್ನು ವರ್ಣಿಸುತ್ತಿದ್ದಾನೆ. ಪರಿಶುದ್ಧ ಭಕ್ತನು ಯಾವುದೇ ಸನ್ನಿವೇಶದಲ್ಲಿ ಪ್ರಕ್ಷುಬ್ಧನಾಗುವುದಿಲ್ಲ. ಅವನಿಗೆ ಯಾರ ವಿಷಯದಲ್ಲಿಯೂ ಅಸೂಯೆ ಇಲ್ಲ. ಅವನು ತನ್ನ ಶತ್ರುವಿನ ಶತ್ರುವೂ ಅಲ್ಲ. ನನ್ನ ಹಿಂದಿನ ಪಾಪಗಳಿಂದಲೇ ಈ ಮನುಷ್ಯನು ನನ್ನು ಶತ್ರುವಾಗಿ ನಡೆದುಕೊಳ್ಳುತ್ತಾನೆ. ಆದುದರಿಂದ ಪ್ರತಿಭಟಿಸುವುದಕ್ಕಿಂತ ಅನುಭವಿಸುವುದೇ ಉತ್ತಮ ಎಂದು ಯೋಚಿಸುತ್ತಾನೆ (Bhagavad Gita Updesh in Kannada).

ಶ್ರೀಮದ್ಭಾಗವತದಲ್ಲಿ (10.14.8) ಹೀಗೆ ಹೇಳಿದೆ - ತತ್ ತೇನುಕಂಪಾಂ ಸುಸಮೀಕ್ಷಮಾಣೋ ಭುಂಜಾನ ಏವಾತ್ಮಕೃತಂ ವಿಪಾಕಮ್ - ಭಕ್ತನು ಸಂಕಟದಲ್ಲಿ ಅಥವಾ ಕಷ್ಟದಲ್ಲಿ ಇರುವಾಗಲೆಲ್ಲ ಅದು ತನ್ನ ಮೇಲೆ ಭಗವಂತನ ಕರುಣೆ ಎಂದು ಭಾವಿಸುತ್ತಾನೆ. ನಾನು ಹಿಂದೆ ಮಾಡಿದ ಪಾಪಕರ್ಮಗಳ ದೆಸೆಯಿಂದ ಈಗ ಅನುಭವಿಸುತ್ತಿರುವುದಕ್ಕಿಂತ ಇನ್ನೂ ಬಹುವಾಗಿ ನಾನು ಸಂಕಟಪಡಬೇಕು. ನನಗೆ ಆಗಬೇಕಾದ ಶಿಕ್ಷೆ ಎಲ್ಲ ಆಗದಿರುವುದಕ್ಕೆ ಪರಮ ಪ್ರಭವಿನ ಕರುಣೆಯೇ ಕಾರಣ.

ದೇವೋತ್ತಮ ಪರಮ ಪುರುಷನ ದಯೆಯಿಂದ ನನಗೆ ಸ್ವಲ್ಪ ಮಾತ್ರ ಶಿಕ್ಷೆಯಾಗಿದೆ - ಎಂದು ಯೋಚಿಸುತ್ತಾನೆ. ಆದುದರಿಂದ ಎಷ್ಟೇ ಸಂಕಟಮಯ ಸನ್ನಿವೇಶದಲ್ಲಿಯೂ ಅವನು ಶಾಂತನಾಗಿ, ನಿಶ್ಚಿಂತನಾಗಿ, ತಾಳ್ಮೆಯಿಂದ ಇರುತ್ತಾನೆ. ಭಕ್ತನು ಎಲ್ಲರ ವಿಷಯದಲ್ಲಿಯೂ - ಶತ್ರುವಿನ ವಿಷಯದಲ್ಲಿ ಸಹ ದಯೆಯಿಂದ ನಡೆದುಕೊಳ್ಳುತ್ತಾನೆ. ನಿರ್ಮಮ ಎಂದರೆ ಭಕ್ತನು ದೇಹಕ್ಕೆ ಸಂಬಂಧಿಸಿದ ನೋವು ಮತ್ತು ಕಷ್ಟಗಳಿಗೆ ಹೆಚ್ಚು ಗಮನವನ್ನು ಕೊಡುವುದಿಲ್ಲ. ಇದಕ್ಕೆ ತಾನು ದೇಹವಲ್ಲ ಎಂದು ಅವನಿಗೆ ಸಂಪೂರ್ಣವಾಗಿ ತಿಳಿದಿದೆ ಎಂದರ್ಥ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.