ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತ ಪಕ್ಷಪಾತ ಮಾಡುವುದಿಲ್ಲ, ಎಲ್ಲರ ವಿಷಯದಲ್ಲಿ ಸಮನಾಗಿ ಇರುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಗವಂತ ಪಕ್ಷಪಾತ ಮಾಡುವುದಿಲ್ಲ, ಎಲ್ಲರ ವಿಷಯದಲ್ಲಿ ಸಮನಾಗಿ ಇರುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಭಗವಂತ ಪಕ್ಷಪಾತ ಮಾಡುವುದಿಲ್ಲ, ಎಲ್ಲರ ವಿಷಯದಲ್ಲಿ ಸಮನಾಗಿ ಇರುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಯನದ 29ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 29

ಸಮೋಹಂ ಸಂರ್ವಭೂತೇಷು ನ ಮೇ ದ್ವೇಷ್ಯೋಸ್ತಿ ನ ಪ್ರಿಯಃ |

ಯೇ ಭಜನ್ತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ ||29||

ಅನುವಾದ: ನನಗೆ ಯಾರ ವಿಷಯದಲ್ಲಿಯೂ ಅಸೂಯೆಯಿಲ್ಲ. ನಾನು ಯಾರ ಪರವಾಗಿಯೂ ಪಕ್ಷಪಾತ ಮಾಡುವುದಿಲ್ಲ. ನಾನು ಎಲ್ಲರ ವಿಷಯದಲ್ಲಿಯೂ ಸಮನಾಗಿ ಇರುತ್ತೇನೆ. ಆದರೆ ಯಾವಾತನು ನನ್ನ ಭಕ್ತಿಸೇವೆಯನ್ನು ಮಾಡುವನೋ ಆತನು ನನ್ನ ಸ್ನೇಹಿತನು, ನನ್ನಲ್ಲಿದ್ದಾನೆ ಮತ್ತು ನಾನು ಅವನಿಗೆ ಸ್ನೇಹಿತ.

ಭಾವಾರ್ಥ: ಕೃಷ್ಣನು ಎಲ್ಲರ ವಿಷಯದಲ್ಲಿಯೂ ಸಮನಾಗಿದ್ದರೆ ಮತ್ತು ಯಾರೂ ಅವನ ವಿಶೇಷ ಸ್ನೇಹಿತರಲ್ಲದಿದ್ದರೆ ಸದಾ ಅವನ ದಿವ್ಯ ಸೇವೆಯಲ್ಲಿ ನಿರತರಾಗಿರುವ ಭಕ್ತರಲ್ಲಿ ಅವನು ವಿಶೇಷ ಆಸಕ್ತಿಯನ್ನು ಏಕೆ ವಹಿಸುತ್ತಾನೆ ಎಂದು ಇಲ್ಲಿ ಪ್ರಶ್ನೆಮಾಡಬಹುದು. ಆದರೆ ಇದು ಪಕ್ಷಪಾವತಲ್ಲ. ಇದು ಸಹಜವಾದದ್ದು. ಈ ಐಹಿಕ ಪ್ರಪಂಚದಲ್ಲಿ ಯಾವುದೇ ಮನುಷ್ಯನು ಬಹು ಉದಾರನಾಗಿರಬಹುದು, ಆದರೂ ಆತನಿಗೆ ತನ್ನ ಮಕ್ಕಳಲ್ಲಿ ವಿಶೇಷ ಆಸಕ್ತಿಯಿರುತ್ತದೆ. ಯಾವುದೇ ರೂಪದಲ್ಲಿರುವ ಜೀವಿಯನ್ನು ತನ್ನ ಮಗ ಎಂದು ಪರಮ ಪ್ರಭುವು ಹೇಳುತ್ತಾನೆ. ಆದುದರಿಂದ ಆತನು ಬದುಕಿನ ಅಗತ್ಯಗಳನ್ನು ಪ್ರತಿಯೊಬ್ಬರಿಗೂ ಉದಾರವಾಗಿ ನೀಡುತ್ತಾನೆ.

ಮಳೆಯು ಬಂಡೆಯ ಮೇಲೆ ಬೀಳಲಿ, ಭೂಮಿಯ ಮೇಲೆ ಬೀಳಲಿ ಅಥವಾ ನೀರಿನ ಮೇಲೆ ಬೀಳಲಿ, ಎಲ್ಲೆಲ್ಲೂ ಮಳೆಯನ್ನು ಸುರಿಸುವ ಮೋಡದಂತೆ ಭಗವಂತ. ಆದರೆ ಆತನು ತನ್ನ ಬಕ್ತರಿಗೆ ವಿಶಿಷ್ಟ ಗಮನವನ್ನು ಕೊಡುತ್ತಾನೆ. ಇಂತಹ ಭಕ್ತರನ್ನು ಇಲ್ಲಿ ಪ್ರಸ್ತಾಪಿಸಿದೆ. ಅವರು ಸದಾ ಕೃಷ್ಣಪ್ರಜ್ಞೆಯಲ್ಲಿರುತ್ತಾರೆ. ಆದುದರಿಂದ ಸದಾ ಅಧ್ಯಾತ್ಮಿಕವಾಗಿ ಕೃಷ್ಣನಲ್ಲಿ ನೆಲೆಸಿರುತ್ತಾರೆ. ಕೃಷ್ಣಪ್ರಜ್ಞೆ ಎನ್ನುವ ಮಾತೇ ಇಂತಹ ಪ್ರಜ್ಞೆಯಲ್ಲಿರುವವರು ಭಗವಂತನಲ್ಲಿ ನೆಲೆಸಿರುವ ಜೀವಂತ ಅಧ್ಯಾತ್ಮಿವಾದಿಗಳು ಎನ್ನುವುದನ್ನು ಹೇಳುತ್ತದೆ. ಭಗವಂತನು ಇಲ್ಲಿ ಮಯಿ ತೇ, ಅವರು ನನ್ನಲ್ಲಿದ್ದಾರೆ. ಇದು ಪರಸ್ಪರವಾದದ್ದು. ಇದು ಈ ಮಾತುಗಳನ್ನು ವಿವರಿಸುತ್ತದೆ.

ಯೇ ಯಥಾ ಮಾಂ ಪ್ರಪದ್ಯನ್ತೇ ತಾನ್ಸ್ತಥೈವ ಭಜಾಮಿ ಅಹಮ್ - ಯಾರೇ ಆಗಲಿ ನನಗೆ ಎಷ್ಟರ ಮಟ್ಟಿಗೆ ಶರಣಾಗತನಾದರೆ ಅಷ್ಟರ ಮಟ್ಟಿಗೆ ನಾನು ಅವನನ್ನು ಪಾಲಿಸುತೇತನೆ. ಪ್ರಭವೂ ಮತ್ತು ಭಕ್ತನೂ ಪ್ರಜ್ಞೆ ಉಳ್ಳವರಾದ್ದರಿಂದ ಈ ಅಧ್ಯಾತ್ಮಿಕ ಪರಸ್ಪರ ವಿನಿಮಯವು ಇರುತ್ತದೆ. ರತ್ನವನ್ನು ಬಂಗಾರದ ಉಂಗುರದಲ್ಲಿಟ್ಟಾಗ ಅದು ತುಂಬ ಸೊಗಸಾಗಿ ಕಾಣುತ್ತದೆ. ಚಿನ್ನಕ್ಕೂ ವೈಭವ ಬರುತ್ತದೆ. ಅದೇ ಸಮಯದಲ್ಲಿ ರತ್ನಕ್ಕೂ ವೈಭವ ಬರುತ್ತದೆ. ಪ್ರಭುವೂ ಜೀವಿಯೂ ಹೊಳೆಯುತ್ತಾರೆ. ಜೀವಿಗೆ ಪರಮ ಪ್ರಭುವಿನ ಸೇವೆಯಲ್ಲಿ ಒಲವು ಬಂದಾಗ ಚಿನ್ನದಂತೆ ಕಾಣುತ್ತಾನೆ. ಪ್ರಭುವು ವಜ್ರ. ಆದುದರಿಂದ ಈ ಜೊತೆಯು ತುಂಬ ಸೊಗಸಾದದ್ದು. ಪರಿಶುದ್ಧ ಸ್ಥಿತಿಯಲ್ಲಿರುವ ಜೀವಿಗಳಿಗೆ ಭಕ್ತರೆಂದು ಹೆಸರು. ಪರಮ ಪ್ರಭುವು ತನ್ನ ಭಕ್ತರ ಭಕ್ತನಾಗುತ್ತಾನೆ. ಭಕ್ತ ಮತ್ತು ಪ್ರಭುವಿನ ನಡುವೆ ಪರಸ್ಪರ ವಿನಿಮಯದ ಸಂಬಂಧ ಇಲ್ಲವಾದರೆ ಸಾಕಾರ ಸಿದ್ಧಾಂತವೇ ಇರುವುದಿಲ್ಲ. ನಿರಾಕಾರ ಸಿದ್ಧಾಂತದಲ್ಲಿ ಪರಮೋನ್ನತನಿಗೂ ಜೀವಿಗೂ ಪರಸ್ಪರ ವಿನಿಮಯ ಸಂಬಂಧವಿಲ್ಲ. ಸಾಕಾರ ಸಿದ್ಧಾಂತದಲ್ಲಿ ಉಂಟು.

ಪ್ರಭುವು ಕಲ್ಪವೃಕ್ಷದಂತೆ ಎಂಬ ನಿದರ್ಶನವನ್ನು ಹಲವೊಮ್ಮೆ ಕೊಡುತ್ತಾರೆ. ಈ ಕಲ್ಪವೃಕ್ಷದಿಂದ ಬಯಸಿದುದನ್ನೆಲ್ಲ ಪ್ರಭುವು ಕೊಡುತ್ತಾನೆ. ಆದರೆ ಇಲ್ಲಿ ವಿವರಣೆಯು ಇನ್ನೂ ಪೂರ್ಣವಾಗಿದೆ. ಪ್ರಭುವು ಭಕ್ತರ ವಿಷಯದಲ್ಲಿ ಪಕ್ಷಪಾತಿ ಎಂದು ಇಲ್ಲಿ ಹೇಳಿದೆ. ಇದು ಭಕ್ತರ ವಿಷಯದಲ್ಲಿ ಭಗವಂತನ ವಿಶೇಷ ಕೃಪೆಯ ಅಭಿವ್ಯಕ್ತಿ. ಭಗವಂತನ ವಿನಿಮಯವು ಕರ್ಮದ ನಿಯಮಕ್ಕನುಗುಣವಾಗಿದೆ ಎಂದು ಭಾವಿಸಬಾರದು. ಇದು ಭಗವಂತನೂ ಅವನ ಭಕ್ತರೂ ಕಾರ್ಯನಿರ್ವಣೆ ಮಾಡುವ ಅಧ್ಯಾತ್ಮಿಕ ಸನ್ನಿವೇಶಕ್ಕೆ ಸೇರಿದ್ದು. ಪರಮ ಪ್ರಭುವಿನ ಭಕ್ತಿಸೇವೆಯು ಈ ಐಹಿಕ ಜಗತ್ತಿನ ಒಂದು ಚಟುವಟಿಕೆಯಲ್ಲ. ಅದು ನಿತ್ಯಜ್ಞಾನಾನಂದವು ಪ್ರಧಾನವಾಗಿರುವ ಅಧ್ಯಾತ್ಮಿಕ ಜಗತ್ತಿನ ಭಾಗ.