ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಈ ಕ್ಷಣದ ಗುರುವಾಗಿರುವ ಯಾರೇ ಆಗಲಿ ಭಗವಂತನ ಗುರು ಶಿಷ್ಯ ಪರಂಪರೆಯಲ್ಲಿ ಬಂದವರು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಈ ಕ್ಷಣದ ಗುರುವಾಗಿರುವ ಯಾರೇ ಆಗಲಿ ಭಗವಂತನ ಗುರು ಶಿಷ್ಯ ಪರಂಪರೆಯಲ್ಲಿ ಬಂದವರು; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಈ ಕ್ಷಣದ ನಿಜವಾದ ಗುರುವಾಗಿರುವ ಯಾರೇ ಆಗಲಿ ಭಗವಂತನ ಗುರು ಶಿಷ್ಯ ಪರಂಪರೆಯಲ್ಲಿ ಬಂದವರು ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 40 ಮತ್ತು 43ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 40

ನಮಃ ಪುರಸ್ತಾದಥ ಪೃಷ್ಠತಸ್ತೇ

ನಮೋಸ್ತು ತೇ ಸರ್ವತ ಏವ ಸರ್ವ |

ಅನನ್ತವೀರ್ಯಾಮಿತವಿಕ್ರಮಸ್ತ್ವಂ

ಸರ್ವಂ ಸಮಾಪ್ನೋಷಿ ತತೋಸಿ ಸರ್ವಃ ||40||

ಅನುವಾದ: ನಿನಗೆ ಮುಂದಿನಿಂದ, ಹಿಂದಿನಿಂದ, ಎಲ್ಲ ಕಡೆಗಳಿಂದ ಪ್ರಣಾಮಗಳು. ಅನಂತವೀರ್ಯನೆ, ನೀನು ಅನಂತ ಪರಾಕ್ರಮದ ಪ್ರಭು. ನೀನು ಸರ್ವವ್ಯಾಪಿ. ಆದುದರಿಂದ ಎಲ್ಲವೂ ನೀನೇ (Bhagavad Gita Updesh in Kannada).

ಭಾವಾರ್ಥ: ತನ್ನ ಗೆಳೆಯನಾದ ಕೃಷ್ಣನ ವಿಷಯದಲ್ಲಿ ಪ್ರೀತಿಯ ಹರ್ಷೋನ್ಮಾದದಲ್ಲಿ ಅರ್ಜುನನು ಕೃಷ್ಣನಿಗೆ ಎಲ್ಲ ಕಡೆಗಳಿಂದ ನಮಸ್ಕಾರವನ್ನು ಅರ್ಪಿಸುತ್ತಾನೆ. ಎಲ್ಲ ಶಕ್ತಿ ಸಾಮರ್ಥ್ಯಗಳ ಪ್ರಭು ಅವನು. ರಣರಂಗದಲ್ಲಿ ನೆರೆದಿರುವ ಎಲ್ಲ ಯೋಧರಿಗಿಂತ ಶ್ರೇಷ್ಠನಾದವನು ಎನ್ನುವುದನ್ನು ಅವನು ಒಪ್ಪುತ್ತಾನೆ. ವಿಷ್ಣು ಪುರಾಣದಲ್ಲಿ ಹೀಗೆ ಹೇಳಿದೆ (1.9.69)

ಯೋಯಂ ತವಾಗತೋ ದೇವ ಸಮೀಪಂ ದೇವತಾಗಣಃ

ಸ ತ್ವಂ ಏವ ಜಗತ್ ಸ್ರಷ್ಟಾ ಯತಃ ಸರ್ವ ಗತೋ ಭವಾನ್ |

ದೇವೋತ್ತಮ ಪರಮ ಪುರುಷನೆ, ನಿನ್ನ ಮುಂದೆ ಯಾರೇ ಬರಲಿ, ಅವರು ದೇವತೆಗಳೇ ಆಗಿದ್ದರೂ, ಅವರನ್ನು ಸೃಷ್ಟಿಸಿದವನು ನೀನೇ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 43

ಪಿತಾಸಿ ಲೋಕಸ್ಯ ಚರಾಚರಸ್ಯ

ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ |

ನ ತ್ವತ್ಸಮೋಸ್ತ್ಯಭ್ಯಧಿಕಃ ಕುತೋನ್ಯೋ

ಲೋಕತ್ರಯೇಪ್ಯಪ್ರತಿಮಪ್ರಭಾವ ||43||

ಅನುವಾದ: ಈ ಸಮಸ್ತ ವಿಶ್ವಕ್ಕೆ, ಚರಾಚರವಾದುದೆಲ್ಲಕ್ಕೆ ನೀನೇ ತಂದೆ. ನೀನು ಪೂಜ್ಯನು, ಪರಮ ಗುರುವು. ನಿನಗೆ ಸಮಾನರಾದವರು ಯಾರೂ ಇಲ್ಲ, ಯಾರೂ ನಿನ್ನೊಡನೆ ಒಂದಾಗಿರುವುದಿಲ್ಲ. ಆದುದರಿಂದ, ಅಪರಿಮಿತ ಪ್ರಭಾವದ ಪ್ರಭುವೆ, ಮೂರು ಲೋಕಗಳಲ್ಲಿ ನಿನಗಿಂತ ಶ್ರೇಷ್ಠರಾದವರು ಯಾರಿದ್ದಾರೆ?

ಭಾವಾರ್ಥ: ದೇವೋತ್ತಮ ಪರಮ ಪುರುಷನಾದ ಕೃಷ್ಣನು ಮಗನಿಗೆ ತಂದೆಯ ಪೂಜ್ಯನಾದಂತೆ ಪೂಜ್ಯನು. ಮೂಲತಃ ಬ್ರಹ್ಮನಿಗೆ ವೇದಗಳನ್ನು ಬೋಧಿಸಿದವನು ಮತ್ತು ಈ ಭಗವದ್ಗೀತೆಯನ್ನು ಅರ್ಜುನನಿಗೆ ಬೋಧಿಸುತ್ತಿರುವವನು ಆತನೇ. ಆದುದರಿಂದಲೇ ಆತನು ಆದಿ ಗುರು. ಈ ಕ್ಷಣದಲ್ಲಿ ನಿಜವಾದ ಗುರುವಾಗಿರುವ ಯಾರೇ ಆಗಲಿ ಕೃಷ್ಣನಿಂದ ಪ್ರಾರಂಭವಾದ ಗುರು ಶಿಷ್ಯ ಪರಂಪರೆಯಲ್ಲಿ ಬಂದವರು. ಕೃಷ್ಣನ ಪ್ರತಿನಿಧಿಯಾಗದೆ ಯಾರೂ ಅಲೌಕಿಕ ವಿಷಯದಲ್ಲಿ ಗುರುವಾಗಲು ಸಾಧ್ಯವಿಲ್ಲ.

ಭಗವಂತನಿಗೆ ಎಲ್ಲ ರೀತಿಗಳಲ್ಲಿ ಪ್ರಣಾಮಗಳನ್ನು ಅರ್ಪಿಸಲಾಗುತ್ತಿದೆ. ಆತನ ಮಹಿಮೆಯು ಅಪರಿಮಿತವಾದದ್ದು. ಅಲೌಕಿಕವಾದ ಅಥವಾ ಐಹಿಕವಾದ ಯಾವುದೇ ಅಭಿವ್ಯಕ್ತಿಯಲ್ಲಿ ಕೃಷ್ಣನಿಗೆ ಸಮನಾದವರು ಅಥವಾ ಅವನಿಗಿಂತ ಶ್ರೇಷ್ಠರಾದವರು ಯಾರೂ ಇಲ್ಲ. ಆದುದರಿಂದ ದೇವೋತ್ತಮ ಪರಮ ಪುರುಷನಾದ ಕೃಷ್ಣನಿಗಿಂತ ಮೇಲಿನವರು ಯಾರೂ ಇಲ್ಲ. ಎಲ್ಲರೂ ಅವನಿಗಿಂತ ಕೆಳಗಿನ ಸ್ಥಾನದಲ್ಲಿರುವವರು. ಅವನನ್ನು ಮೀರಬಲ್ಲವರು ಯಾರೂ ಇಲ್ಲ. ಇದನ್ನು ಶ್ವೇತಾಶ್ವತರ ಉಪನಿಷತ್ತಿನಲ್ಲಿ ಹೇಳಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.