Bhagavad Gita: ಈ ಗುಣ ಹೊಂದಿರುವ ಭಕ್ತನು ಭವಂತನಿಗೆ ತುಂಬಾ ಪ್ರಿಯವಾಗಿರುತ್ತಾನೆ; ಗೀತೆಯ ಅರ್ಥ ಹೀಗಿದೆ-spiritual news bhagavad gita updesh lord krishna likes this quality of man bhagavad gita quotes in kannada ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಈ ಗುಣ ಹೊಂದಿರುವ ಭಕ್ತನು ಭವಂತನಿಗೆ ತುಂಬಾ ಪ್ರಿಯವಾಗಿರುತ್ತಾನೆ; ಗೀತೆಯ ಅರ್ಥ ಹೀಗಿದೆ

Bhagavad Gita: ಈ ಗುಣ ಹೊಂದಿರುವ ಭಕ್ತನು ಭವಂತನಿಗೆ ತುಂಬಾ ಪ್ರಿಯವಾಗಿರುತ್ತಾನೆ; ಗೀತೆಯ ಅರ್ಥ ಹೀಗಿದೆ

Bhagavad Gita: ಈ ಗುಣವನ್ನು ಹೊಂದಿರುವ ಭಕ್ತನು ಭವಂತನಿಗೆ ತುಂಬಾ ಪ್ರಿಯವಾಗಿರುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 12 ನೇ ಅಧ್ಯಾಯದ 16 ಮತ್ತು 17 ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 16

ಅನಪೇಕ್ಷಃ ಶುಚಿರ್ದಕ್ಷ ಉದಾಸೀನೋ ಗತವ್ಯರ್ಥಃ |

ಸರ್ವಾರಮ್ಭಪರಿತ್ಯಾಗೀ ಯೋ ಮದ್ಭಕ್ತಃ ಸ ಮೇ ಪ್ರಿಯಃ ||16|

ಅನುವಾದ: ಚಟುವಟಿಕೆಗಳ ಸಾಮಾನ್ಯ ನಡೆಯನ್ನು ಅವಲಂಬಿಸದಿರುವ, ಪರಿಶುದ್ಧನಾದ, ದಕ್ಷನಾದ, ಚಿಂತೆ ಇಲ್ಲದ, ಎಲ್ಲ ನೋವುಗಳಿಂದ ಮುಕ್ತನಾದ, ಯಾವ ಫಲಕ್ಕಾಗಿಯೂ ಶ್ರಮಪಡದ ಭಕ್ತನು ನನಗೆ ಬಹು ಪ್ರಿಯನಾದವನು.

ಭಾವಾರ್ಥ: ಭಕ್ತನಿಗೆ ಹಣವನ್ನು ನೀಡಲು ಯಾರಾದರೂ ಮುಂದೆ ಬರಬಹುದು. ಆದರೆ ಅವನು ಹಣಸಂಪಾದನೆಗಾಗಿ ಪ್ರಯತ್ನಪಡಬಾರದು. ಪರಮೋತ್ತಮನ ಕೃಪೆಯಿಂದ ತನಾಗಿಯೇ ಹಣವು ಒದಗಿ ಬಂದರೆ ಅವನ ಮನಸ್ಸು ಕದಡುವುದಿಲ್ಲ. ಸಹಜವಾಗಿ ಭಕ್ತನು ದಿನಕ್ಕೆ ಎರಡು ಬಾರಿ ಸ್ನಾನ ಮಾಡುತ್ತಾನೆ ಮತ್ತು ಭಕ್ತಿಸೇವೆಗಾಗಿ ಬೆಳಗ್ಗೆ ಬೇಗನೆ ಏಳುತ್ತಾನೆ. ಹೀಗೆ ಅವನು ಸಹಜವಾಗಿ ಅಂತರಂಗದಲ್ಲಿಯೂ ಬಹಿರಂಗದಲ್ಲೂ ಶುಚಿಯಾಗಿರುತ್ತಾನೆ.

ಭಕ್ತನು ಯಾವಾಗಲೂ ದಕ್ಷ. ಏಕೆಂದರೆ ಅವನಿಗೆ ಬದುಕಿನ ಎಲ್ಲ ಕಾರ್ಯಗಳ ತಿರುಳು ತಿಳಿದಿರುತ್ತದೆ ಮತ್ತು ಪ್ರಮಾಣ ಶಾಸ್ತ್ರ ಗ್ರಂಥಗಳಲ್ಲಿ ಪೂರ್ಣ ನಂಬಿಕೆ ಇರುತ್ತದೆ. ಭಕ್ತನು ಯಾರ ಪಕ್ಷವನ್ನೂ ವಹಿಸುವುದಿಲ್ಲ. ಆದುದರಿಂದ ಆತ ನಿರಾತಂಕವಾಗಿರುತ್ತಾನೆ ಅವನಿಗೆ ನೋವೆಂಬುದಿಲ್ಲ. ಏಕೆಂದರೆ ಅವನು ಎಲ್ಲ ಉಪಾಧಿಗಳಿಂದ ಮುಕ್ತ. ದೇಹ ಬರಿಯ ಉಪಾಧಿಯಷ್ಟೇ ಎಂದು ಅವನಿಗೆ ಗೋತ್ತು. ಆದುದರಿಂದ ದೇಹಕ್ಕೆ ನೋವಾದರೂ ಅವನು ಮುಕ್ತ.

ಪರಿಶುದ್ಧ ಭಕ್ತನು ಭಕ್ತಿಸೇವೆಯ ತತ್ವಗಳಿಗೆ ವಿರುದ್ಧವಾದುದೇನನ್ನೂ ಮಾಡಲು ಪ್ರಯತ್ನಿಸುವುದಿಲ್ಲ. ಉದಾಹರಣೆಗೆ, ಒಂದು ದೊಡ್ಡ ಕಟ್ಟಡದ ನಿರ್ಮಾಣಕ್ಕೆ ಹೆಚ್ಚಿನ ಶಕ್ತಿ ಅಗತ್ಯ. ಹೀಗೆ ಕಟ್ಟಡವನ್ನು ನಿರ್ಮಿಸುವುದು ತನ್ನ ಭಕ್ತಿಸೇವೆಯ ಮುನ್ನಡೆಗೆ ನೆರವಾಗಿ ತನಗೆ ಪ್ರಯೋಜನ ಆಗದಿದ್ದರೆ ಅವನು ಇಂತಹ ಕೆಲಸಕ್ಕೆ ಕೈಹಾಕುವುದಿಲ್ಲ. ಪ್ರಭುವಿಗಾಗಿ ಅವನು ಒಂದು ದೇವಸ್ಥಾನವನ್ನು ಕಟ್ಟಬಹುದು. ಅದಕ್ಕಾಗಿ ಎಲ್ಲ ಬಗೆಯ ಆತಂಕವನ್ನು ಪಡಬಹುದು. ಆದರೆ ತನ್ನ ನೆಂಟರಿಗಾಗಿ ಅವನು ದೊಡ್ಡ ಮನೆಯನ್ನು ಕಟ್ಟುವುದಿಲ್ಲ.

ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 17

ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ಕಾನ್ಕ್ಕ್ಷತಿ |

ಶುಭಾಶುಭಪರಿತ್ಯಾಗೀ ಭಕ್ತಿಮಾನ್ ಯಃ ಸ ಮೇ ಪ್ರಿಯಃ ||17|

ಅನುವಾದ: ಹರ್ಷಪಡುವುದಿಲ್ಲವೋ ದುಃಖಪಡುವುದಿಲ್ಲವೋ, ಯಾರು ಶೋಕಿಸುವುದಿಲ್ಲವೋ ಬಯಸುವುದಿಲ್ಲವೋ, ಯಾರು ಶುಭಾಶುಭಗಳನ್ನು ಪರಿತ್ಯಾಗ ಮಾಡುತ್ತಾರೆಯೋ ಅಂತಹ ಭಕ್ತನು ನನಗೆ ಬಹು ಪ್ರಿಯನಾದವನು.

ಭಾವಾರ್ಥ: ಭಕ್ತನಾದವನಿಗೆ ಪ್ರಾಪಂಚಿಕ ಲಾಭದಿಂದ ಹರ್ಷವಿಲ್ಲ. ನಷ್ಟದಿಂದ ದುಃಖವಿಲ್ಲ. ಮಗನನ್ನೋ ಶಿಷ್ಯನನ್ನೋ ಪಡಯಬೇಕೆಂಬ ಬಲವಾದ ಆಕಾಂಕ್ಷೆ ಇಲ್ಲ. ಅವರನ್ನು ಪಡೆಯದಿದ್ದರೆ ದುಃಖವಿಲ್ಲ. ತನಗೆ ಪ್ರಿಯವಾದುದನ್ನು ಕಳೆದುಕೊಂಡರೆ ಆತನು ಶೋಕಿಸುವುದಿಲ್ಲ. ಹಾಗೆಯೇ ತಾನು ಬಯಸಿದನ್ನು ಪಡೆಯದಿದ್ದರೆ ಅವನಿಗೆ ಸಂಕಷ್ಟವಿಲ್ಲ. ಎಲ್ಲ ಬಗೆಯ ಶುಭಾಶುಭಗಳು, ಪಾಪಕಾರ್ಯಗಳು ಎದುರಾದಾಗ ಅವನು ಅವನ್ನು ಮೀರುತ್ತಾನೆ. ಪರಮ ಪ್ರಭುವಿನ ತೃಪ್ತಿಗಾಗಿ ಅವನು ಎಲ್ಲ ಬಗೆಯ ಅಪಾಯಗಳನ್ನು ಸ್ವೀಕರಿಸಲು ಸಿದ್ಧನಾಗಿರುತ್ತಾನೆ. ಅವನ ಭಕ್ತಿಸೇವೆಗೆ ಅಡ್ಡಿ ಎನ್ನುವುದೇ ಇಲ್ಲ. ಇಂತಹ ಭಕ್ತನು ಕೃಷ್ಣನಿಗೆ ಬಹು ಪ್ರಿಯನಾದವನು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.