ಭಗವದ್ಗೀತೆ: ಮನುಷ್ಯ ಎಲ್ಲ ಬಗೆಯ ತಪಸ್ಸುಗಳನ್ನು ಮಾಡಿದಾಗ ಅತಿ ಶ್ರೇಷ್ಠನಾಗುತ್ತಾನೆ; ಗೀತೆಯಲ್ಲಿನ ಅರ್ಥ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಮನುಷ್ಯ ಎಲ್ಲ ಬಗೆಯ ತಪಸ್ಸುಗಳನ್ನು ಮಾಡಿದಾಗ ಅತಿ ಶ್ರೇಷ್ಠನಾಗುತ್ತಾನೆ; ಗೀತೆಯಲ್ಲಿನ ಅರ್ಥ ಹೀಗಿದೆ

ಭಗವದ್ಗೀತೆ: ಮನುಷ್ಯ ಎಲ್ಲ ಬಗೆಯ ತಪಸ್ಸುಗಳನ್ನು ಮಾಡಿದಾಗ ಅತಿ ಶ್ರೇಷ್ಠನಾಗುತ್ತಾನೆ; ಗೀತೆಯಲ್ಲಿನ ಅರ್ಥ ಹೀಗಿದೆ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆ. ಮನುಷ್ಯ ಎಲ್ಲ ಬಗೆಯ ತಪಸ್ಸುಗಳನ್ನ ಮಾಡಿದಾಗ ಅತಿ ಶ್ರೇಷ್ಠನಾಗುತ್ತಾನೆ ಎಂಬುದರ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಯಾವಾನರ್ಥ ಉದಪಾನೇ ಸರ್ವತಃ ಸಮ್ಪ್ಲು ತೋದಕೇ |

ತವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ ||46||

ಒಂದು ಸಣ್ಣ ಬಾವಿ ಮಾಡುವ ಕೆಲಸವನ್ನೆಲ್ಲಾ ದೊಡ್ಡ ಜಲಾಶಯವು ಮಾಡಬಲ್ಲದು. ಹಾಗೆಯೇ ವೇದಗಳ ಹಿಂದಿರುವ ಉದ್ದೇಶಗಳನ್ನು ತಿಳಿದವನಿಗೆ ವೇದಗಳ ಎಲ್ಲಾ ಪ್ರಯೋಜನವೂ ಆಗುತ್ತದೆ.

ವೇದಿಕ ಸಾಹಿತ್ಯ ಕರ್ಮಕಾಂಡದ ಭಾಗದಲ್ಲಿ ಪ್ರಸ್ತಾಪಿಸಿರುವ ಎಲ್ಲ ವಿಧಿಗಳ ಮತ್ತು ಯಾಗಗಳ ಉದ್ದೇಶವು ಕ್ರಮೇಣ ಆತ್ಮ ಸಾಕ್ಷಾತ್ಕಾರವನ್ನು ಗಳಿಸುವಂತೆ ಪ್ರೋತ್ಸಾಹಿಸುವುದಾಗಿದೆ. ಆತ್ಮ ಸಾಕ್ಷಾತ್ಕಾರದ ಉದ್ದೇಶವನ್ನು ಭಗವದ್ಗೀತೆಯ ಹದಿನೈದನೆಯ ಅಧ್ಯಾಯದಲ್ಲಿ (15.15) ಸ್ಪಷ್ಟವಾಗಿ ಹೇಳಿದೆ. ವೇದಗಳ ಅಧ್ಯಯನದ ಗುರಿ ಎಲ್ಲ ವ್ಯಕ್ತಿಗಳ ಮೂಲಕಾರಣನಾದ ಶ್ರೀಕೃಷ್ಣನನ್ನು ಅರಿತುಕೊಳ್ಳುವುದು.

ಆದುದರಿಂದ ಆತ್ಮ ಸಾಕ್ಷಾತ್ಕಾರದ ಅರ್ಥ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವನೊಡನೆ ಅನಂತವಾದ ಸಂಬಂಧವನ್ನು ಪಡೆಯುವುದು. ಕೃಷ್ಣನೊಡನೆ ಜೀವಿಗಳ ಸಂಬಂಧವನ್ನೂ ಭಗವದ್ಗೀತೆಯಯ ಹದಿನೈದನೆಯ ಅಧ್ಯಾಯದಲ್ಲಿ (15.7) ಪ್ರಸ್ತಾಪಿಸಿದೆ. ಜೀವಿಗಳು ಶ್ರೀಕೃಷ್ಣನ ವಿಭಿನ್ನಾಂಂಶಗಳು. ಆದುದರಿಂದ ಪ್ರತ್ಯೇಕನಾದ ಜೀವಾತ್ಮನಲ್ಲಿ ಕೃಷ್ಣಪ್ರಜ್ಞೆಯ ಪುರುದಯವೇ ವೈದಿಕಜ್ಞಾನದ ಅತ್ಯುನ್ನತ ಪರಿಪೂರ್ಣ ಸ್ಥಿತಿ. ಶ್ರೀಮದ್ಭಾಗವತವು (3.33.7) ಇದನ್ನು ಈ ಮಾತುಗಳಲ್ಲಿ ದೃಢಪಡಿಸತ್ತದೆ.

ಅಹೋ ಬತ ಶ್ವಪಚೋತೋ ಗರೀಯಾನ್

ಯಜ್ಜಿಹ್ವಾಗ್ರೇ ವರ್ತತೇ ನಾಮ ತುಭ್ಯಮ್ |

ತೇಪುಸ್ತಪಸ್ತೇ ಜುಹುವುಃ ಸುಸ್ನುರಾರ್ಯಾ

ಬ್ರಹ್ಮಾನೂಚುರ್ನಾಮ ಗೃಣನ್ತಿ ಯೇ ತೇ ||

ಭಗವಂತನೇ, ನಿನ್ನ ಪವಿತ್ರವಾದ ಹೆಸರನ್ನು ಸಂಕೀರ್ತನ ಮಾಡುವವನು ಚಂಡಾಲ ಸಂಸಾರದಂತಹ ಹೀನ ಸಂಸಾರದಲ್ಲಿ ಹುಟ್ಟಿದ್ದರೂ ಆತ್ಮಸಾಕ್ಷಾತ್ಕಾರದ ಅತ್ಯುನ್ನತ ಸ್ಥಿತಿಯಲ್ಲಿರುತ್ತಾನೆ. ಇಂತಹ ಮನುಷ್ಯನು ಎಲ್ಲ ಬಗೆಯ ತಪಸ್ಸುಗಳನ್ನು ಮಾಡಿರಬೇಕು. ಎಲ್ಲ ಪವಿತ್ರ ಯಾತ್ರಾಕ್ಷೇತ್ರಗಳಲ್ಲಿ ಸ್ನಾನಮಾಡಿ ವೈದಿಕ ಸಾಹಿತ್ಯವನ್ನು ಮತ್ತೆ ಮತ್ತೆ ಅಧ್ಯಯನ ಮಾಡಿರಬೇಕು. ಇಂತಹ ಮನುಷ್ಯನನ್ನು ಆರ್ಯಕುಲದಲ್ಲಿ ಅತಿಶ್ರೇಷ್ಠನೆಂದು ಪರಿಗಣಿಸಲಾಗುತ್ತದೆ.

ಆದುದರಿಂದ ಯಾರೇ ಆಗಲಿ ವಿಧಿಗಳಿಗೇ ಅಂಟಿಕೊಳ್ಳದೆ ದೇವಗಳ ಗುರಿಯನ್ನು ಅರ್ಥಮಾಡಿಕೊಳ್ಳುವಷ್ಟು ಬುದ್ಧಿವಂತರಾಗಿರಬೇಕು. ಇನ್ನೂ ಉತ್ತಮ ಗುಣದ ಇಂದ್ರಿಯ ಭೋಗಕ್ಕಾಗಿಯೇ ಸ್ವರ್ಗಲೋಕಗಳಿಗೆ ಏರುವ ಬಯಕೆಯನ್ನ ಇಟ್ಟುಕೊಳ್ಳಬಾರದು. ಈಗಿನ ಕಾಲದಲ್ಲಿ ಸಾಮಾನ್ಯ ಮನುಷ್ಯನಾದವನಿಗೆ ವೇದಗಳಲ್ಲಿ ಹೇಳಿರುವ ಎಲ್ಲ ವಿಧಿಗಳನ್ನೂ ನಿಯಮಗಳನ್ನೂ ಪಾಲಿಸಲಲು ಸಾಧ್ಯವಿಲ್ಲ. ಎಲ್ಲ ವೇದಾಂತವನ್ನೂ ಉಪನಿಷತ್ತುಗಳನ್ನೂ ಸಮಗ್ರವಾಗಿ ಅಧ್ಯಯನ ಮಾಡುವುದು ಸಾಧ್ಯವಿಲ್ಲ.

ವೇದಗಳ ಉದ್ದೇಶಗಳನ್ನ ಕಾರ್ಯಗತ ಮಾಡಲು ವಿಶೇಷ ಸಮಯ, ಚೈತನ್ಯ, ಜ್ಞಾನ ಮತ್ತು ಸಂಪನ್ಮೂಲಗಳು ಅವಶ್ಯಕವಾಗುತ್ತವೆ. ಈ ಯುಗದಲ್ಲಿ ಇವು ದೊರಕುವುದಿಲ್ಲ. ಎಲ್ಲ ಪತಿತ ಆತ್ಮಗಳ ಉದ್ಧಾರಕರು ಚೈತನ್ಯಮಹಾಪ್ರಭುಗಳು. ಅವರು ಹೇಳಿರುವಂತೆ, ಭಗವಂತನ ಪವಿತ್ರ ಹೆಸರನ್ನು ಸಂಕೀರ್ತನೆ ಮಾಡುವುದರಿಂದ ವೈದಿಕ ಸಂಸ್ಕೃತಿಯ ಅತ್ಯುತ್ತಮ ಗುರಿಯನ್ನು ಸಾಧಿಸಬಹುದು. ಒಬ್ಬ ಹಿರಿಯ ವೈದಿಕ ವಿದ್ವಾಂಸರಾದ ಪ್ರಕಾಶಾನಂದ ಸರಸ್ವತಿಯವರು, ಸ್ವಯಂ ಭಗವಂತನಾದ ಚೈತನ್ಯ ಮಹಾಪ್ರಭುಗಳು ವೇದಾಂತ ತತ್ವಜ್ಞಾನವನ್ನು ಅಭ್ಯಾಸ ಮಾಡುವುದನ್ನು ಬಿಟ್ಟು ಅತಿಭಾವುಕರಂತೆ ಪವಿತ್ರ ಹೆಸರಿನ ಸಂಕೀರ್ತನೆಯ ಮಾಡುವುದೇಕೆ ಎಂದು ಕೇಳಿದರು.

ತಮ್ಮ ಗುರುಗಳು ತಾವು (ಚೈತನ್ಯ ಮಹಾಪ್ರಭುಗಳು) ದೊಡ್ಡಮೂರ್ಖನೆಂದು ತಿಳಿದು ಶ್ರೀಕೃಷ್ಣನ ನಾಮಸಂಕೀರ್ತನೆ ಮಾಡುವಂತೆ ಹೇಳಿದರು ಎಂದು ಚೈತನ್ಯಮಹಾಪ್ರಭುಗಳು ಉತ್ತರಿಸಿದರು. ತಾವು ಹಾಗೆ ಮಾಡಿದುದಾಗಿಯೂ, ಹುಚ್ಚನಂತೆ ಆನಂದೋನ್ಮಾದದಲ್ಲಿ ಮುಳುಗಿದುದಾಗಿಯೂ ಹೇಳಿದರು. ಈ ಕಲಿಯುಗದಲ್ಲಿ ಜನತೆಯಲ್ಲಿ ಬಹುಮದಿ ಮೂರ್ಖರು. ಅವರಿಗೆ ವೇದಾಂತ ದರ್ಶವನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ವಿದ್ಯೆಯೂ ಇಲ್ಲ. ಅಪರಾಧವೆಸಗದೆ ಭಗವಂತನ ಪವಿತ್ರ ನಾಮ ಸಂಕೀರ್ತನೆ ಮಾಡುವುದರಿಂದ ವೇದಾಂತದ ಅತಿಶ್ರೇಷ್ಠ ಗರಿಯನ್ನು ಸಾಧಿಸಿದಂತಾಗುತ್ತದೆ. ವೇದಾತಂವು ವೈದಿಕ ಜ್ಞಾನದ ಶಿಖರ. ವೇದಾಂತದ ಕರ್ತೃ ಮತ್ತು ಜ್ಞಾನಿ ಶ್ರೀಕೃಷ್ಣ. ಭಗವಂತನ ಪವಿತ್ರ ನಾಮಸಂಕೀರ್ತನೆಯಲ್ಲಿ ಆನಂದವನ್ನು ಅನುಭವಿಸುವ ಮಹಾತ್ಮನು ಅತ್ಯುತ್ತಮ ವೇದಾಂತಿ. ವೈದಿಕ ಅನುಭಾವದ ಪರಮಗುರಿ ಇದೇ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.