Bhagavad Gita: ವಿಷ್ಣುವಿನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಮನುಷ್ಯ ಈ ಸುಖವನ್ನ ತೊರೆಯಬೇಕು; ಗೀತೆಯ ಅರ್ಥ ತಿಳಿಯಿರಿ
Bhagavad Gita Updesh: ವಿಷ್ಣುಮೂರ್ತಿಯ ಸಾಕ್ಷಾತ್ಕಾರವನ್ನು ಸಾಧಿಸಲು ಮನುಷ್ಯನು ಸಂಪೂರ್ಣವಾಗಿ ಲೈಂಗಿಕ ಜೀವನದಿಂದ ಮುಕ್ತನಾಗಿರಬೇಕು ಎಂಬುದರ ಅರ್ಥವನ್ನು ಭಗವಗ್ದೀತೆಯಲ್ಲಿ ತಿಳಿಯಿರಿ.
ಅಧ್ಯಾಯ 6- ಧ್ಯಾನ ಯೋಗ: ಶ್ಲೋಕ - 13-14
ಸಮಂ ಕಾಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ |
ಸಮ್ಟ್ರೇಕ್ಷ್ಯ ನಾಸಿಕಾಗ್ರಂ ಸ್ವಂ ದಿಶಶ್ವಾನವಲೋಕಯನ್ ||13||
ಪ್ರಶಾನ್ತಾತ್ಮಾ ವಿಗತಭೀರ್ಬ್ರಹ್ಮಚಾರಿವ್ರತೇ ಸ್ಥಿತಿಃ |
ಮನಃ ಸಂಯಮ್ಯ ಮಚ್ಚಿತ್ತೋ ಯುಕ್ತ ಆಸೀತ ಮತ್ಪರಃ ||14||
ದೇಹ, ಕುತ್ತಿಗೆ ಮತ್ತು ಶಿರಸ್ಸುಗಳನ್ನು ಒಂದು ಪಂಕ್ತಿಯಲ್ಲಿ ಸ್ಥಿರವಾಗಿರಿಸಿಕೊಂಡು ಮೂಗಿನ ತುದಿಯನ್ನು ಒಂದೇ ಸಮನೆ ದೃಷ್ಟಿಬೇಕು. ಪ್ರಶಾಂತಾತ್ಮನಾಗಿ, ನಿರ್ಭಯವಾಗಿ, ಬ್ರಹ್ಮಚಾರಿಯಾಗಿ ಹೃದಯದಲ್ಲಿ ನನ್ನ್ನೇ ಧ್ಯಾನ ಮಾಡಬೇಕು ಮತ್ತು ನನ್ನನ್ನೇ ಜೀವನದ ಅಂತಿಮ ಗುರಿಯಾಗಿ ಮಾಡಿಕೊಳ್ಳಬೇಕು.
ಕೃಷ್ಣನನ್ನು ತಿಳಿದುಕೊಳ್ಳುವುದೇ ಬದುಕಿನ ಗುರಿ. ಆತನು ಪರಮಾತ್ಮನಾಗಿ, ಚತುರ್ಭಜನಾದ ವಿಷ್ಣುವಿನ ರೂಪದಲ್ಲಿ ಪ್ರತಿಯೊಂದು ಜೀವಿಯ ಹೃದಯದಲ್ಲಿಯೂ ನೆಲೆಸಿದ್ದಾನೆ. ಯೋಗ ಪ್ರಕ್ರಿಯೆಯನ್ನು ಅಭ್ಯಾಸ ಮಾಡುವುದರ ಉದ್ದೇಶವು ಹೃದಯಸ್ಥನಾದ ಈ ವಿಷ್ಣುವಿನ ಅಂತರ್ಯಾಮಿ ರೂಪವನ್ನು ಕಂಡುಕೊಂಡು ನೋಡುವುದು, ಮತ್ತೇನೂ ಅಲ್ಲ. ಈ ವಿಷ್ಣುಮೂರ್ತಿಯು ಮನುಷ್ಯನ ಹೃದಯದಲ್ಲಿರುವ ಕೃಷ್ಣನ ಸ್ವಾಂಶ ಪ್ರತಿನಿಧಿ.
ಈ ವಿಷ್ಣಮೂರ್ತಿಯ ಸಾಕ್ಷಾತ್ಕಾರದ ಉದ್ದೇಶವಿಲ್ಲದವನು ಅಣಕು ಯೋಗಾಭ್ಯಾಸದಲ್ಲಿ ತೊಡಗಿರುತ್ತಾನೆ, ನಿಶ್ಚಯವಾಗಿಯೂ ಕಾಲವನ್ನು ವ್ಯರ್ಥಮಾಡುತ್ತಿದ್ದಾನೆ. ಕೃಷ್ಣನೇ ಬದುಕಿನ ಕಟ್ಟಕಡೆಯ ಗುರಿ. ಹೃದಯದಲ್ಲಿಲ ನೆಲೆಸಿರುವ ವಿಷ್ಣುಮೂರ್ತಿಯು ಯೋಗಾಭ್ಯಾಸದ ಗುರಿ. ಹೃದಯದೊಳಗಿರುವ ಈ ವಿಷ್ಣುಮೂರ್ತಿಯ ಸಾಕ್ಷಾತ್ಕಾರವನ್ನು ಸಾಧಿಸಲು ಮನುಷ್ಯನು ಸಂಪೂರ್ಣವಾಗಿ ಲೈಂಗಿಕ ಜೀವನದಿಂದ ಮುಕ್ತನಾಗಿರಬೇಕು. ಆದುದರಿಂದ ಮನುಷ್ಯನು ತನ್ನ ಮನೆಯನ್ನು ಬಿಟ್ಟು ಒಬ್ಬನೇ ಏಕಾಂತ ಸ್ಥಳದಲ್ಲಿ ವಾಸಿಸಬೇಕು.
ಮೇಲೆ ಹೇಳಿರುವಂತೆ ಕುಳಿತುಕೊಳ್ಳಬೇಕು. ಮನುಷ್ಯನು ಮನೆಯಲ್ಲಿ ಅಥವಾ ಬೇರೆಲ್ಲಿಯಾದರೂ ಕಾಮಸುಖವನ್ನು ಪಡೆದುಕೊಂಡು ಯೋಗ ತರಗತಿ ಎಂದು ಕರೆಸಿಕೊಳ್ಳುವ ತರತಿಗೆ ಹಾಜರಾಗಿ ಯೋಗಿಯಾಗುವುದು ಸಾಧ್ಯವಿಲ್ಲ. ಮನುಷ್ಯನು ಮನಸ್ಸಿನಿಂದ ನಿಯಂತ್ರಣವನ್ನು ಮತ್ತು ಎಲ್ಲ ಬಗೆಯ ಇಂದ್ರಿಯತೃಪ್ತಿಯನ್ನು-ಇದರಲ್ಲಿ ಕಾಮ ಜೀವನವೇ ಮುಖ್ಯವಾದದ್ದು-ತಪ್ಪಿಸುವುದನ್ನು ಅಭ್ಯಾಸಮಾಡಬೇಕು. ಮಹರ್ಷಿ ಯಾಜ್ಞವಲ್ಕ್ಯ ಬರೆದ ಬ್ರಹ್ಮಚರ್ಯದ ನಿಯಮಗಳಲ್ಲಿ ಹೀಗೆ ಹೇಳಿದೆ.
ಕರ್ಮಣಾ ಮನಸಾ ವಾಚಾ ಸರ್ವಾವಸ್ಥಾಸು ಸರ್ವದಾ |
ಸರ್ವತ್ರ ಮೈಥುನತ್ಯಾಗೋ ಬ್ರಹ್ಮಚರ್ಯಂ ಪ್ರಚಕ್ಷತೇ ||
ಮನುಷ್ಯನು ಎಲ್ಲ ಕಾಲಗಳಲ್ಲಿಯೂ, ಎಲ್ಲ ಸನ್ನಿವೇಶಗಳಲ್ಲಿಯೂ, ಎಲ್ಲ ಸ್ಥಳಗಳಲ್ಲಿಯೂ ಕಾಯಾ ವಾಚಾ ಮನಸಾ ಕಾಮಭೋಗವನ್ನು ಸಂಪೂರ್ಣವಾಗಿ ವರ್ಜಿಸಲು ನೆರವಾಗುವುದು ಬ್ರಹ್ಮಚರ್ಯ ವ್ರತದ ಉದ್ದೇಶ. ಕಾಮಲಂಪಟತೆಯ ಮೂಲಕ ಯಾರೂ ಸರಿಯಾಗಿ ಯೋಗಾಭ್ಯಾಸ ಮಾಡಲು ಸಾಧ್ಯವಿಲ್ಲ. ಆದ್ದರಿಂದಲೇ, ಕಾಮ ಜೀವನದ ಅರಿವೇ ಇಲ್ಲದ ಬಾಲ್ಯದಿಂದಲೂ ಬ್ರಹ್ಮಚರ್ಯವನ್ನು ಬೋಧಿಸಲಾಗುತ್ತದೆ. ಐದು ವರ್ಷದ ಮಕ್ಕಳನ್ನು ಗುರುಕುಲಕ್ಕೆ ಕಳುಹಿಸಿಕೊಡುತ್ತಾರೆ. ಗುರುವು ಪುಟ್ಟ ಬಾಲಕರಿಗೆ ಬ್ರಹ್ಮಚರ್ಯದ ಕಟ್ಟುನಿಟ್ಟಿನ ಶಸ್ತುನ್ನು ಕಲಿಸುತ್ತಾನೆ.
ಇಂತಹ ಅಭ್ಯಾಸವಿಲ್ಲದೆ ಧ್ಯಾನ, ಜ್ಞಾನ ಅಥವಾ ಭಕ್ತಿ - ಯಾವುದೇ ಯೋಗದಲ್ಲಿ ಪ್ರಗತಿ ಸಾಧ್ಯವಿಲ್ಲ. ಆದರೆ ವಿವಾಹಿತ ಜೀವನದ ನಿಯಮ ನಿಬಂಧನೆಗನ್ನು ಅನುಸರಿಸುತ್ತ ತನ್ನ ಹೆಂಡತಿಯೊಡನೆ ಮಾತ್ರ (ಅದೂ ನಿಯಮಕ್ಕನುಗುಣವಾಗಿ) ಲೈಂಗಿಕ ಜೀವನವನ್ನು ಹೊಂದಿರುವವನ್ನು ಬ್ರಹ್ಮಚಾರಿ ಎಂದೇ ಕರೆಯುತ್ತಾರೆ. ಇಂತಹ ಸಂಯಮಯುತ ಗೃಹಸ್ಥ ಬ್ರಹ್ಮಚಾರಿಯನ್ನು ಭಕ್ತಿಪಂಥದಲ್ಲಿ ಒಪ್ಪಿಕೊಳ್ಳಬಹುದು. ಆದರೆ ಜ್ಞಾನ ಮತ್ತು ಧ್ಯಾನಪಂಥಗಳು ಗೃಹಸ್ಥ ಬ್ರಹ್ಮಚಾರಿಗಳನ್ನು ಸೇರಿಸಿಕೊಳ್ಳುವುದಿಲ್ಲ. ಅವು ಸ್ವಲ್ಪವೂ ರಾಜಿಯಿಲ್ಲದೆ ಸಂಪೂರ್ಣ ಮರ್ಜನೆಯನ್ನು ಬಯಸುತ್ತವೆ. ಭಕ್ತಿಪಂಥದಲ್ಲಿ ಗೃಹಸ್ಥ ಬ್ರಹ್ಮಚಾರಿಗೆ ನಿಯಂತ್ರಿತ ಕಾಮಜೀವನಕ್ಕೆ ಅವಕಾಶವುಂಟು. ಏಕೆಂದರೆ ಭಕ್ತಿಯೋಗವು ಎಷ್ಟು ಶಕ್ತಿಶಾಲಿಯೆಂದರೆ ಮನುಷ್ಯನು ಶ್ರೇಷ್ಠನಾದ ಪರಮಾತ್ಮನ ಸೇವೆಯಲ್ಲಿ ತೊಡಗಿರುವುದರಿಂದ ತಂತಾನೇ ಕಾಮದ ಆಕರ್ಷಣೆಯನ್ನು ಕೆಳೆದುಕೊಳ್ಳುತ್ತಾನೆ. ಭಗವದ್ಗೀತೆಯಲ್ಲಿ (2.59) ಹೀಗೆ ಹೇಳಿದೆ -
ವಿಷಯಾ ವಿನಿವರ್ತನ್ತೇ ನಿರಾಹಾರಸ್ಯ ದೇಹಿನಃ |
ರಸವರ್ಜಂ ರಸೋಪ್ಯಸ್ಯ ಪರಂ ದೃಷ್ಟ್ವಾ ನಿವರ್ತೇ ||
ಇತರರು ಕಷ್ಟಪಟ್ಟು ಇಂದ್ರಿಯಭೋಗವನ್ನು ತಡೆಹಿಡಿಯಬೇಕಾಗಿರುತ್ತದೆ. ಪರಮಾತ್ಮನ ಭಕ್ತನು ತನ್ನ ಶ್ರೇಷ್ಠ ಅಭಿರುಚಿಯಿಂದ ನಿರಾಯಾಸವಾಗಿ ಅದನ್ನು ದೂರವಿಡುತ್ತಾನೆ. ಭಕ್ತನಲ್ಲದೆ ಬೇರಾರಿಗೂ ಆ ಶ್ರೇಷ್ಠ ಸಮಿಯ ತಿಳುವಟಿಕೆ ಒಂದಿಷ್ಟೂ ಇರುವುದಿಲ್ಲ. ವಿಗತಭೀಃ ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯಲ್ಲಿ ಇಲ್ಲದಿರುವ ಮನುಷ್ಯನು ನಿರ್ಭಯನಾಗಿರಲು ಸಾಧ್ಯವಿಲ್ಲ. ತನ್ನ ವಕ್ರ ಸ್ಮರಣೆಯಿಂದಾಗಿ, ಕೃಷ್ಣನೊಡನೆ ತನ್ನ ನಿರಂತರ ಸಂಬಂಧವನ್ನು ಮರೆತಿದ್ದರಿಂದಾಗಿ ಬದ್ಧ ಆತ್ಮವು ಭಯದಿಂದ ತುಂಬಿರುತ್ತದೆ.
ಭಾಗವತವು (11.2.37) ಭಯಂ ದ್ವಿತೀಯಾಭಿನಿವೇಶತಃ ಸ್ಯಾದೀಶಾದ್ ಅಪೇತಸ್ಯ ವಿಪರ್ಯಯೋಸ್ಮೃತಿಃ ಎಂದು ಹೇಳುತ್ತದೆ. ನಿರ್ಭೀತಿಗೆ ಕೃಷ್ಣಪ್ರಜ್ಞೆಯೊಂದೇ ಆಧಾರ. ಆದುದರಿಂದ ಕೃಷ್ಣಪ್ರಜ್ಞೆ ಇರುವವನಿಗೆ ಪರಿಪೂರ್ಣ ಅಭ್ಯಾಸವು ಸಾಧ್ಯ. ಯೋಗಾಭ್ಯಾಸದ ಅಂತಿಮಗುರಿಯು ಒಳಗಿರುವ ಭಗವಂತನನ್ನು ಕಾಣುವುದಾದ್ದರಿಂದ ಕೃಷ್ಣಪ್ರಜ್ಞೆಯಿರುವವನು ಆಗಲೇ ಯೋಗಿಶ್ರೇಷ್ಠನಾಗಿದ್ದಾನೆ. ಇಲ್ಲಿ ಹೇಳಿರುವ ಯೋಗ ಪದ್ಧತಿಯ ತತ್ವಗಳು ಯೋಗ ಸಂಘಗಳೆಂದು ಕರೆಸಿಕೊಳ್ಳುವ ಸಂಸ್ಥೆಗಳ ತತ್ವಗಳಿಂದ ಭಿನ್ನವಾಗಿವೆ. (This copy first appeared in Hindustan Times Kannada website. To read more like this please logon to kannada.hindustantimes.com)