Bhagavad Gita: ಪಾಪವನ್ನು ಮಾಡಿದ ವ್ಯಕ್ತಿ ಒಂದಲ್ಲಾ ಒಂದು ದಿನ ಅದನ್ನು ಅನುಭವಿಸುತ್ತಾನೆ; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಪಾಪವನ್ನು ಮಾಡಿದ ವ್ಯಕ್ತಿ ಒಂದಲ್ಲಾ ಒಂದು ದಿನ ಅದನ್ನು ಅನುಭವಿಸುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಪಾಪವನ್ನು ಮಾಡಿದ ವ್ಯಕ್ತಿ ಒಂದಲ್ಲಾ ಒಂದು ದಿನ ಅದನ್ನು ಅನುಭವಿಸುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಪಾಪವನ್ನು ಮಾಡಿದ ವ್ಯಕ್ತಿ ಒಂದಲ್ಲಾ ಒಂದು ದಿನ ಅದನ್ನು ಅನುಭವಿಸುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ 2ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 2

ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ|

ಜ್ಞಾನಂ ವಿಜ್ಞಾನಸಹಿತಂ ಯಜ್ಞ್‌ಜ್ಞಾತ್ವಾ ಮೋಕ್ಷ್ಯಸೇಶುಭಾತ್||2||

ರಹಸ್ಯತಮ ಜ್ಞಾನ - ಶ್ಲೋಕ - 2ರ ಮುಂದುವರಿದ ಭಾಗದಲ್ಲಿ ವೈದಿಕ ಸಾಹಿತ್ಯದಲ್ಲಿ ವಿವರಿಸಿರುವಂತೆ, ಈ ವಿದ್ಯೆಯು ಎಲ್ಲಾ ಚಟುವಟಿಕೆಗಳ ಅತ್ಯಂತ ಪರಿಶುದ್ಧ ರೂಪ. ಪದ್ಮಪುರಾಣದಲ್ಲಿ ಮನುಷ್ಯನ ಪಾಪಕರ್ಮಗಳನ್ನು ವಿಶ್ಲೇಷಿಸಿ ಒಂದು ಪಾಪದ ಅನಂತರ ಮತ್ತೊಂದು ಪಾಪ ಮಾಡುತ್ತ ಹೋಗುವುದರ ಪರಿಣಾಮ ಇದು ಎಂದು ತೋರಿಸಿಕೊಟ್ಟಿದೆ. ಫಲಾಪೇಕ್ಷಿತ ಕರ್ಮಗಳಲ್ಲಿ ತೊಡಗಿರುವವರು ಪಾಪದ ಪ್ರತಿಕ್ರಿಯೆಗಳ ವಿವಿಧ ಹಂತಗಳಲ್ಲಿ ಮತ್ತು ರೂಪಗಳಲ್ಲಿ ಸಿಲುಕಿಕೊಂಡಿರುತ್ತಾರೆ. ಉದಾಹರಣೆಗೆ, ಒಂದು ವಿಶಿಷ್ಟ ಮರದ ಬೀಜವನ್ನು ಬಿತ್ತಿದಾಗ ಮರವು ಬೆಳೆಯುವುದು ಕೂಡಲೇ ಕಾಣುವುದಿಲ್ಲ. ಅದು ಬೆಲೆಯಲು ಒಂದಿಷ್ಟು ಕಾಲವನ್ನು ತೆಗೆದುಕೊಳ್ಳುತ್ತದೆ.

ಮೊದಲು ಅದು ಸಣ್ಣ ಸರಿ. ಅನಂತರ ಮರದ ರೂಪವನ್ನು ಪಡೆಯುತ್ತದೆ. ಅನಂತರ ಹೂವು ಹಣ್ಣುಗಳನ್ನು ಪಡೆಯುತ್ತದೆ. ಅದು ಸಂಪೂರ್ಣವಾಗಿ ಬೆಳೆದಾಗ, ಬೀಜವನ್ನು ಬಿತ್ತಿದವರು ಹೂವು ಹಣ್ಣುಗಳನ್ನು ಸವಿಯುತ್ತಾರೆ. ಹಾಗೆಯೇ ಮನುಷ್ಯನು ಪಾಪಕೆಲಸವನ್ನು ಮಾಡುತ್ತಾನೆ. ಬೀಜದಂತೆಯೇ ಅದೂ ಫಲವನ್ನು ನೀಡಲು ಕಾಲವನ್ನು ತೆಗೆದುಕೊಳ್ಳುತ್ತದೆ. ಬೇರೆ ಬೇರೆ ಹಂತಗಳಿವೆ. ಪಾಪಕರ್ಮವು ಮನುಷ್ಯನೊಳಗಡೆ ಆಗಲೇ ನಿಂತುಹೋಗಿರಬಹುದು. ಆದರೆ ಆ ಪಾಪಕರ್ಮದ ಫಲವನ್ನು ಇನ್ನೂ ಅನುಭವಿಸಬೇಕಾಗಿದೆ. ಇನ್ನೂ ಬೀಜರೂಪದಲ್ಲಿರುವ ಪಾಪಗಳಿರುತ್ತವೆ. ಆಗಲೇ ಫಲಿತವಾಗಿರುವ ಇತರ ಪಾಪಕರ್ಮಗಳಿವೆ. ಇವುಗಳನ್ನು ನಾವು ಸಂಕಟ ಮತ್ತು ನೋವುಗಳ ರೂಪದಲ್ಲಿ ಅನುಭವಿಸುತ್ತೇವೆ.

ಏಳನೆಯ ಅಧ್ಯಾಯದ ಇತ್ತೆಂಟನೆಯ ಶ್ಲೋಕದಲ್ಲಿ ವಿವರಿಸಿದಂತೆ ಎಲ್ಲ ಪಾಪಕರ್ಮಗಳ ಪ್ರತಿಕ್ರಿಯೆಗಳನ್ನು ಕೊನೆಗಾಣಿಸಿ ಪುಣ್ಯಕಾರ್ಯಗಳಲ್ಲಿ ಸಂಪೂರ್ಣವಾಗಿ ನಿರತನಾಗಿರುವವನು ಈ ಐಹಿಕ ಜಗತ್ತಿನ ದ್ವಂದ್ವದಿಂದ ಬಿಡುಗಡೆ ಹೊಂದುತ್ತಾನೆ. ದೇವೋತ್ತಮ ಪರಮ ಪುರುಷನಾದ ಕೃಷ್ಣನ ಭಕ್ತಿಸೇವೆಯಲ್ಲಿ ತೊಡಗುತ್ತಾನೆ. ಬೇರೆ ಮಾತುಗಳಲ್ಲಿ ಹೇಳವುದಾದರೆ ಪರಮ ಪ್ರಭುವಿನ ಭಕ್ತಿಸೇವೆಯಲ್ಲಿ ವಾಸ್ತವವಾಗಿ ನಿರತರಾಗಿರುವವರು ಆಗಲೇ ಎಲ್ಲ ಪ್ರತಿಕ್ರಿಯೆಗಳಿಂದ ಬಿಡುಗಡೆ ಹೊಂದಿರುತ್ತಾರೆ. ಈ ಮಾತನ್ನು ಪದ್ಮಪುರಣಾವು ದೃಢಪಡಿಸುತ್ತದೆ.

ಅಪ್ರಾರಬ್ಧಫಲಂ ಪಾಪಂ ಕೂಟಂ ಜೀಜಂ ಫಲೋನ್ಮುಖಮ್ |

ಕ್ರಮೇಣೈವ ಪ್ರಲೀಯೇತ ವಿಷ್ಣುಭಕ್ತಿರತಾತ್ಮನಾಮ್ ||

ಇದನ್ನೂ ಓದಿ: ಮನುಷ್ಯ ಸದಾ ಭಗವಂತನನ್ನು ಸ್ಮರಿಸಿದರೆ ಪ್ರತಿ ಕಾರ್ಯದಲ್ಲೂ ಒಳ್ಳೆ ಫಲತಾಂಶ ಪಡೆಯುತ್ತಾನೆ; ಗೀತೆಯ ಸಾರಾಂಶ ಹೀಗಿದೆ

ದೇವೋತ್ತಮ ಪರಮ ಪುರುಷನ ಭಕ್ತಿಸೇವೆಯಲ್ಲಿ ನಿರತರಾದವರ ಮಟ್ಟಿಗೆ, ಎಲ್ಲ ಪಾಪಗಳ ಪ್ರತಿಕ್ರಿಯೆಗಳು, ಅವು ಫಲ ನೀಡುತ್ತಿರಲಿ, ಸಂಗ್ರಹದಲ್ಲಿರಲಿ ಅಥವಾ ಬೀಜರೂಪದಲ್ಲಿರಲಿ ಕ್ರಮೇಣ ಅದೃಶ್ಯವಾಗುತ್ತದೆ. ಆದುದರಿಂದ ಭಕ್ತಿಸೇವೆಯ ಪರಿಶುದ್ಧಗೊಳಿಸುವ ಶಕ್ತಿಯು ಬಲವತ್ತರವಾದದ್ದು, ಅದಕ್ಕೆ ಪವಿತ್ರಮ್ ಉತ್ತಮಮ್, ಅತ್ಯಂತ ಪರಿಶುದ್ಧವಾದದ್ದು, ಎಂದು ಹೆಸರು. ಉತ್ತಮ ಎಂದರೆ ಅಧ್ಯಾತ್ಮಿಕ. ತಮಸ್ ಎಂದರೆ ಈ ಐಹಿಕ ಜಗತ್ತು ಮತ್ತು ಕತ್ತಲೆ. ಉತ್ತಮ ಎಂದರೆ ಐಹಿಕ ಚಟುವಟಿಕೆಗಳನ್ನು ಮೀರಿದ್ದು. ಕೆಲವೊಮ್ಮೆ ಭಕ್ತನು ಸಾಮಾನ್ಯ ಮನುಷ್ಯರಂತೆಯೇ ಕೆಲಸದಲ್ಲಿ ಕೊಡಗಿದ್ದಾನೆ ಎಂದು ಕಂಡರೂ ಭಕ್ತಿಸೇವೆಯನ್ನು ಐಹಿಕ ಎಂದು ಪರಿಗಣಿಸಲೇಬಾರದು. ಭಕ್ತಿಸೇವೆಯನ್ನು ಕಂಡು ಅದರ ಪರಿಚಯವನ್ನು ಹೊಂದಿರುವವನು ಅವು ಐಹಿಕ ಚಟುವಟಿಕೆಗಳಲ್ಲ ಎಂದು ತಿಳಿಯುತ್ತಾನೆ. ಅವೆಲ್ಲ ಭಕ್ತಿಪೂರ್ವಕ ಮತ್ತು ಅಧ್ಯಾತ್ಮಿಕ. ಅವಕ್ಕೆ ಐಹಿಕ ಪ್ರಕೃತಿಯ ಗುಣಗಳ ಕಲ್ಮಷದ ಸೋಂಕಿಲ್ಲ.

ಭಕ್ತಿಸೇವೆಯ ನಿರ್ವಹಣೆಯು ಎಷ್ಟು ಪರಿಪೂರ್ಣವೆಂದರೆ ಅದರ ಪರಿಣಾಮಗಳನ್ನು ನೇರವಾಗಿ ಕಾಣಬಹುದು. ನೇರ ಪರಿಣಾಮವನ್ನು ವಾಸ್ತವವಾಗಿ ಕಾಣುತ್ತೇವೆೆ. ಯಾವ ಮನುಷ್ಯನೇ ಆಗಲಿ ಕೃಷ್ಣನ ಪವಿತ್ರನಾಮಗಳನ್ನು (ಹರೇಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ/ಹರೇ ರಾಮ, ರಹೇ ರಾಮ, ರಾಮ ರಾಮ ಹರೇ ಹರೇ) ಸಂಕೀರ್ತನೆ ಮಾಡುವಾಗ ಯಾವುದೋ ದಿವ್ಯಾನಂದವನ್ನು ಅನುಭವಿಸುತ್ತಾನೆ ಮತ್ತು ಬಹು ಶೀಘ್ರವಾಗಿ ಎಲ್ಲ ಐಹಿಕ ಸೋಂಕಿನಿಂದ ಪರಿಶುದ್ಧನಾಗುತ್ತಾನೆ ಎನ್ನುವುದು ನಮ್ಮ ವಾಸ್ತವ ಅನುಭವ. ಇದನ್ನು ವಾಸ್ತವವಾಗಿ ನೋಡುತ್ತೇವೆ, ಇಷ್ಟೇ ಅಲ್ಲದೆ ಶ್ರವಣದಲ್ಲಿ ತೊಡಗುವುದು ಮಾತ್ರವಲ್ಲದೆ ಭಕ್ತಿ ಚಟುವಟಿಕೆಗಳ ಸಂದೇಶವನ್ನು ಪ್ರಸಾರ ಮಾಡಲು ಪ್ರಯತ್ನಿಸಿದರೆ ಅಥವಾ ಕೃಷ್ಣಪ್ರಜ್ಞೆಯ ಪ್ರಸಾರದ ಚಟುವಟಿಕೆಗಳಿಗೆ ನೆರವಾಗುವುದರಲ್ಲಿ ತೊಡಗಿದರೆ ಅಂತಹ ಮನುಷ್ಯನಿಗೆ ಕ್ರಮೇಣ ತಾನು ಅಧ್ಯಾತ್ಮಿಕವಾಗಿ ಮುನ್ನಡೆಯುತ್ತಿದ್ದೇನೆ ಎನ್ನುವ ಭಾವವು ಬರುತ್ತದೆ. ಅಧ್ಯಾತ್ಮಿಕ ಬದುಕಿನಲ್ಲಿ ಈ ಮುನ್ನಡೆಯು ಯಾವುದೇ ಬಗೆಯ ಹಿಂದಿನ ಶಿಕ್ಷಣವನ್ನಾಗಲಿ, ಅರ್ಹತೆಯನ್ನಾಗಲಿ ಅವಲಂಬಿಸುವುದಿಲ್ಲ. ಈ ವಿಧಾನ ಎಷ್ಟು ಪರಿಶುದ್ಧ ಎಂದರೆ ಅದರಲ್ಲಿ ತೊಡಗುವುದರಿಂದಲೇ ಮನುಷ್ಯನು ಪರಿಶುದ್ಧನಾಗುತ್ತಾನೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.