Bhagavad Gita: ಮನುಷ್ಯನು ಆತ್ಮ ಸಾಕ್ಷಾತ್ಕಾರದ ಈ ಕಷ್ಟದ ಮಾರ್ಗವನ್ನು ಹಿಡಿಯಬಾರದು; ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನುಷ್ಯನು ಆತ್ಮ ಸಾಕ್ಷಾತ್ಕಾರದ ಈ ಕಷ್ಟದ ಮಾರ್ಗವನ್ನು ಹಿಡಿಯಬಾರದು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಮನುಷ್ಯನು ಆತ್ಮ ಸಾಕ್ಷಾತ್ಕಾರದ ಈ ಕಷ್ಟದ ಮಾರ್ಗವನ್ನು ಹಿಡಿಯಬಾರದು; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಮನುಷ್ಯನು ಆತ್ಮ ಸಾಕ್ಷಾತ್ಕಾರದ ಈ ಕಷ್ಟದ ಮಾರ್ಗವನ್ನು ಹಿಡಿಯಬಾರದು ಎಂಬುದರ ಅರ್ಥವನ್ನು ಭಗವದ್ಗೀತೆಯ 12 ನೇ ಅಧ್ಯಾಯದ 5ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 5

ಕ್ಲೇಶೋಧಿಕತರಸ್ತೇಷಾಮವ್ಯಕ್ತಾಸಕ್ತಚೇತಸಾಮ್ |

ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ ||5||

ಅನುವಾದ: ಪರಮ ಪ್ರಭುವಿನ ಅವ್ಯಕ್ತವಾದ ಮತ್ತು ನಿರಾಕಾರವಾದ ರೂಪವನ್ನು ಪ್ರೀತಿಸುವ ಮನಸ್ಸಿನವರಿಗೆ ಪ್ರಗತಿಯು ತುಂಬಾ ಕ್ಲೇಶಕರವಾದದ್ದು. ಈ ಶಿಸ್ತಿನಲ್ಲಿ ಮುಂದುವರಿಯುವುದು ದೇಹಧಾರಿಗಳಿಗೆ ಬಹು ಕಷ್ಟ.

ಭಗವದ್ಗೀತೆಯ 12ನೇ ಅಧ್ಯಾಯ ಭಕ್ತಿ ಸೇವೆಯ 5ನೇ ಶ ಪರಮವನ್ನು ಕೂಡಲೇ ಮತ್ತು ನೇರವಾಗಿ ಬಳಿ ಸಾರಲು ಭಕ್ತರಿಗೆ ಯಾವ ಕಷ್ಟವೂ ಇಲ್ಲ. ಆದರೆ ಅಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ನಿರಾಕಾರ ಮಾರ್ಗವನ್ನು ಅನುಸರಿಸುವವರಿಗೆ ಕಷ್ಟವಾಗುತ್ತದೆ. ಉಪನಿಷತ್ತುಗಳಂತಹ ವೇದ ಸಾಹಿತ್ಯದ ಮೂಲಕ ಅವರು ಪರಮ ಪ್ರಭುವಿನ ಅವ್ಯಕ್ತ ಲಕ್ಷಣವನ್ನು ಅರ್ಥಮಾಡಿಕೊಳ್ಳಬೇಕು. ಅವರು ಭಾಷೆಯನ್ನೂ ಕಲ್ಪನೆಗೆ ನಿಲುಕದ ಭಾವಗಳನ್ನೂ ಅರ್ಥಮಾಡಿಕೊಳ್ಳಬೇಕು ಮತ್ತು ಎಲ್ಲ ಪ್ರಕ್ರಿಯೆಗಳನ್ನೂ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಸಾಮಾನ್ಯ ಮನುಷ್ಯನಿಗೆ ಇದು ಸುಲಭವಲ್ಲ (Bhagavad Gita Updesh in Kannada).

ಭಕ್ತಿಸೇವೆಯಲ್ಲಿ ನಿರತನಾಗಿರುವ ಕೃಷ್ಣಪ್ರಜ್ಞೆಯಯಲ್ಲಿರುವ ಮನುಷ್ಯನು ಯೋಗ್ಯ ಗುರುವಿನ ಮಾರ್ಗದರ್ಶನ ಮಾತ್ರದಿಂದಲೇ, ವಿಗ್ರಹಕ್ಕೆ ವಿಧಿಪೂರ್ವಕ ಪ್ರಾಣಾಮಗಳನ್ನು ಅರ್ಪಿಸುವ ಮಾತ್ರದಿಂದಲೇ, ಪ್ರಭುವಿನ ಮಹಿಳೆಯನ್ನು ಕೇಳುವುದರಿಂದಲೇ ಮತ್ತು ಪ್ರಭುವಿನ ಪ್ರಸಾದದ ಶೇಷಭಾಗವನ್ನು ತಿನ್ನುವುದರಿಂದಲೇ ಬಹು ಸುಲಭವಾಗಿ ದೇವೋತ್ತಮ ಪರಮ ಪುರುಷನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಕಡೆಯಲ್ಲಿ ಪರಮ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳದೆ ಹೋಗುವ ಅಪಾಯವೂ ಇರುವ ಬಹುಕಷ್ಟಕರವಾದ ಮಾರ್ಗವನ್ನು ನಿರಾಕಾರವಾದಿಗಳು ಅನಗತ್ಯವಾಗಿ ಅನುಸರಿಸುತ್ತಿದ್ದಾರೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಸಾಕಾರವಾದಿಯು ಯಾವುದೇ ಅಪಾಯ, ತೊಂದರೆ ಅಥವಾ ಕಷ್ಟವಿಲ್ಲದೆ ನೇರವಾಗಿ ಪರಮ ಪುರುಷನ ಬಳಿ ಸಾರುತ್ತಾನೆ. ಇಂತಹದೇ ಒಂದು ಭಾಗವು ಶ್ರೀಮದ್ಭಾಗತವದಲ್ಲಿ ಕಾಣುತ್ತದೆ.

ಕಟ್ಟಕಡೆಗೆ ದೇವೋತ್ತಮ ಪರಮ ಪುರುಷನಿಗೆ ಮನುಷ್ಯನು ಶರಣಾಗತನಾಗಬೇಕು (ಈ ಶರಣಾಗತಿಗೆ ಭಕ್ತಿ ಎಂದು ಹೆಸರು). ಅದರ ಬದಲು ಆತನು ಯಾವುದು ಬ್ರಹ್ಮನ್ ಮತ್ತು ಯಾವುದು ಬ್ರಹ್ಮನ್ ಅಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಲು ತೊಂದರೆ ತೆಗೆದುಕೊಂಡು ತನ್ನ ಇಡೀ ಜೀವಮಾನವನ್ನು ಅದರಲ್ಲಿ ಕಳೆದರೆ ಪರಿಣಾಮವು ಬರೀ ಕ್ಲೇಶವಷ್ಟೇ ಎಂದು ಭಾಗವತದಲ್ಲಿ ಹೇಳಿದೆ. ಆದುದರಿಂದ ಮನುಷ್ಯನು ಆತ್ಮ ಸಾಕ್ಷಾತ್ಕಾರದ ಈ ಕಷ್ಟದ ಮಾರ್ಗವನ್ನು ಹಿಡಿಯಬಾರದು. ಏಕೆಂದರೆ ಕಡೆಗೆ ಪರಿಣಾಮವು ಅನಿಶ್ಚಯ ಎಂದು ಇಲ್ಲಿ ಹೇಳಿದೆ.

ಜೀವಿಯು ನಿರಂತರವಾಗಿ ಒಂದು ವ್ಯಕ್ತಿಗತ ಆತ್ಮ. ಅಧ್ಯಾತ್ಮಿಕ ಸಮಗ್ರತೆಯೊಡನೆ ಒಂದಾಗಲು ಬಯಸಿದರೆ ಆತನು ತನ್ನ ನಿಜಸ್ವರೂಪದ, ನಿತ್ಯವಾದ ಮತ್ತು ಗ್ರಹಿಸಬಹುದಾದ ಅಂಶಗಳ ಸಾಕ್ಷಾತ್ಕಾರವನ್ನು ಸಾಧಿಸಬಹುದು. ಆದರೆ ಆನಂದ ಭಾಗದ ಸಾಕ್ಷಾತ್ಕಾರ ಆಗುವುದಿಲ್ಲ. ಜ್ಞಾನಯೋಗದಲ್ಲಿ ಪ್ರಗಲ್ಭ ಪಾಂಡಿತ್ಯವನ್ನು ಪಡೆದ ಅಂತಹ ಅಧ್ಯಾತ್ಮವಾದಿಯು ಭಕ್ತನೊಬ್ಬನ ಕೃಪೆಯಿಂದ ಭಕ್ತಿಯೋಗದ ಬಿಂದುವನ್ನು ಮುಟ್ಟಬಹುದು. ಅಂತಹ ಕಾಲದಲ್ಲಿ ನಿರಾಕಾರತ್ವದ ದೀರ್ಘಸಾಧನೆಯು ತೊಂದರೆಗೆ ಒಂದು ಕಾರಣವಾಗಬಹುದು. ಏಕೆಂದರೆ ಆತ್ಮನು ಆ ವಿಚಾರವನ್ನು ಬಿಡಲಾರ. ಆದುದರಿಂದ ದೇಹಧಾರಿಯಾದ ಆತ್ಮನು ಸಾಧನೆಯ ಕಾಲದಲ್ಲಿಯೂ, ಸಾಕ್ಷಾತ್ಕಾರದ ಕಾಲದಲ್ಲಿಯೂ ಅವ್ಯಕ್ತದ ವಿಷಯದಲ್ಲಿ ಯಾವಾಗಲೂ ಕಷ್ಟದಲ್ಲಿರುತ್ತಾನೆ.

ಪ್ರತಿಯೊಬ್ಬ ಜೀವಾತ್ಮನೂ ಭಾಗಶಃ ಸ್ವತಂತ್ರನು. ಈ ಅವ್ಯಕ್ತ ಸಾಕ್ಷಾತ್ಕಾರವು ಜೀವಾತ್ಮದ ಅಧ್ಯಾತ್ಮಿಕ ಆನಂದಕ್ಕೆ ವಿರುದ್ಧವಾದದ್ದು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಈ ಪ್ರಕ್ರಿಯೆಯನ್ನು ಆರಿಸಿಕೊಳ್ಳಬಾರದು. ಕೃಷ್ಣಪ್ರಜ್ಞೆಯ ಪ್ರಕ್ರಿಯೆಯೆಂದರೆ ಭಕ್ತಿಸೇವೆಯಲ್ಲಿ ಸಂಪೂರ್ಣವಾಗಿ ತೊಡಗುವುದು. ಪ್ರತಿಯೊಂದು ವ್ಯಕ್ತಿಗತ ಜೀವಾತ್ಮಕ್ಕೂ ಇದೇ ಅತ್ಯುತ್ತಮ ಮಾರ್ಗ. ಈ ಭಕ್ತಿಸೇವೆಯನ್ನು ಅಲಕ್ಷಿಸಲು ಬಯಸಿದರೆ ಮನುಷ್ಯನು ನಾಸ್ತಿಕತೆಗೆ ವಾಲುವ ಅಪಾಯವುಂಟು. ಈ ಶ್ಲೋಕದಲ್ಲಿ ಆಗಲೇ ಹೇಳಿರುವಂತೆ ಅವ್ಯಕ್ತವಾದದ್ದನ್ನು, ಅನ್ಯೂಹ್ಯವಾದದ್ದನ್ನು ಇಂದ್ರಿಯಗಳು ಬಳಿಸಾರಲಾರವು. ಆದುದರಿಂದ ಅವ್ಯಕ್ತವೂ, ಅನ್ಯೂಹ್ಯವೂ ಆದದ್ದರಲ್ಲಿ ಗಮನವನ್ನು ಕೇಂದ್ರೀಕರಿಸುವ ಪ್ರಕ್ರಿಯೆಯನ್ನು ಯಾವಾಗಲೂ ಪ್ರೋತ್ಸಾಹಿಸಬಾರದು. ಈ ಯುಗದಲ್ಲಂತೂ ಪ್ರೋತ್ಸಾಹಿಸಲೇ ಬಾರದು. ಹೀಗೆ ಮಾಡಬೇಕೆಂದು ಕೃಷ್ಣನು ಹೇಳುವುದಿಲ್ಲ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.