ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನುಷ್ಯ ಸದಾ ಭಗವಂತನನ್ನು ಸ್ಮರಿಸಿದರೆ ಪ್ರತಿ ಕಾರ್ಯದಲ್ಲೂ ಒಳ್ಳೆ ಫಲತಾಂಶ ಪಡೆಯುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಮನುಷ್ಯ ಸದಾ ಭಗವಂತನನ್ನು ಸ್ಮರಿಸಿದರೆ ಪ್ರತಿ ಕಾರ್ಯದಲ್ಲೂ ಒಳ್ಳೆ ಫಲತಾಂಶ ಪಡೆಯುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಮನುಷ್ಯ ಸದಾ ಭಗವಂತನನ್ನು ಸ್ಮರಿಸಿದರೆ ಪ್ರತಿ ಕೆಲಸದಲ್ಲೂ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಾಯದ ಶ್ಲೋಕ 8 ರಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 8

ಅಭ್ಯಾಸಯೋಗಯುಕ್ತೇನ ಚೇತಸಾ ನಾನ್ಯಗಾಮಿನಾ |

ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನುಚಿನ್ತಯನ್ ||8||

ಅನುವಾದ: ಪಾರ್ಥನೇ, ದೇವೋತ್ತಮ ಪರಮ ಪುರುಷನಂತೆ ನನ್ನನ್ನು ಯಾರು ಧ್ಯಾನಿಸುತ್ತಾರೋ, ಬೇರೆ ಯಾವ ಕಡೆಗೂ ಮನಸ್ಸು ಚಲಿಸದಂತೆ ಯಾರ ಮನಸ್ಸು ಸದಾ ನನ್ನಲ್ಲಿ ತನ್ಮಯವಾಗಿರುವುದೋ ಅವನು ಖಂಡಿತವಾಗಿಯೂ ನನ್ನ ಬಳಿಗೆ ಬರುವನು.

ಭಾವಾರ್ಥ: ಈ ಶ್ಲೋಕದಲ್ಲಿ ಕೃಷ್ಣನು ಆತನ ಸ್ಮರಣೆಯ ಮಹತ್ವವನ್ನು ಒತ್ತಿ ಹೇಳುತ್ತಾನೆ. ಮನುಷ್ಯನ ಕೃಷ್ಣಸ್ಮರಣೆಯು (Bhagavad Gita Updesh in Kannada) ಹರೇ ಕೃಷ್ಣ ಮಹಾಮಂತ್ರದ ಸಂಕೀರ್ತನೆಯಿಂದ ಪುನಶ್ಚೇತನ ಪಡೆಯುತ್ತದೆ. ಈ ಅಭ್ಯಾಸದಿಂದ ಸಂಕೀರ್ತನೆ ಮಾಡುವ ಮತ್ತು ಪರಮ ಪ್ರಭುವಿನ ಶಬ್ದಸ್ಪಂದನವನ್ನು ಆಲಿಸುವ ಸಾಧನೆಯಿಂದ ಮನುಷ್ಯನ ಕಿವಿ, ನಾಲಿಗೆ ಮತ್ತು ಮನಸ್ಸು ಕಾರ್ಯನಿರತವಾಗಿರುತ್ತವೆ. ಈ ಅನುಭಾವಧ್ಯಾನವನ್ನು ಅಭ್ಯಾಸ ಮಾಡುವುದು ಬಹು ಸುಲಭ.

ಪರಮ ಪ್ರಭುವನ್ನು ಮುಟ್ಟಲು ಇದು ನೆರವಾಗುತ್ತದೆ. ಪುರುಷಮ್ ಎಂದರೆ ಭೋಗಿಸುವವನು. ಜೀವಿಗಳು ಪರಮ ಪ್ರಭುವಿನ ಶಕ್ತಿಯ ಅಲ್ಪಾಂಶಕ್ಕೆ ಸೇರಿದ್ದರೂ ಅವರಿಗೆ ಐಹಿಕ ಕಲ್ಮಷದ ಸೋಂಕಿದೆ. ಭೋಕ್ತಾರರು ತಾವೇ ಎಂದು ಅವರು ಭಾವಿಸುತ್ತಾರೆ. ಆದರೆ ಪರಮ ಭೋಕ್ತಾರರು ಅವರಲ್ಲ. ನಾರಾಯಣ, ವಾಸುದೇವ ಮುಂತಾಗಿ ದೇವೋತ್ತಮ ಪರಮ ಪುರುಷನ ಬೇರೆ ಬೇರೆ ಅಭಿವ್ಯಕ್ತಿಗಳಲ್ಲಿ ಮತ್ತು ಸ್ವಾಂಶ ವಿಸ್ತರಣೆಗಳಲ್ಲಿ ಕಟ್ಟಕಡೆಯ ಭೋಕ್ತಾರನು ದೇವೋತ್ತಮ ಪರಮ ಪುರುಷನೇ ಎಂದು ಈ ಶ್ಲೋಕವು ಸ್ಪಷ್ಟವಾಗಿ ಹೇಳುತ್ತದೆ.

ತನ್ನ ಆರಾಧನೆಯ ವಸ್ತುವಾದ ಪರಮ ಪ್ರಭುವನ್ನು ಭಕ್ತನು ಹರೇ ಕೃಷ್ಣ ಸಂಕೀರ್ತನೆಯ ಮೂಲಕ ನಾರಾಯಣ, ಕೃಷ್ಣ, ರಾಮ ಮೊದಲಾದ ಯಾವುದೇ ಸ್ವರೂಪದಲ್ಲಿ ಸದಾ ಯೋಚಿಸಬಹುದು. ಈ ಸಾಧನೆಯು ಅವನನ್ನು ಪರಿಶುದ್ಧನನ್ನಾಗಿ ಮಾಡುತ್ತದೆ. ಅವನ ನಿರಂತರ ಸಂಕೀರ್ತನೆಯಿಂದಾಗಿ ತನ್ನ ಜೀವನದ ಅಂತ್ಯದಲ್ಲಿ ಅವನು ದೇವರ ಲೋಕಕ್ಕೆ ಸಾಗಿಹೋಗುತ್ತಾನೆ. ಒಳಗಿರುವ ಪರಮಾತ್ಮನ ಧ್ಯಾನವೇ ಯೋಗಸಾಧನೆ. ಇದೇ ರೀತಿಯಲ್ಲಿ ಹರೇ ಕೃಷ್ಣ ಸಂಕೀರ್ತನೆಯಿಂದ ಮನುಷ್ಯನು ತನ್ನ ಮನಸ್ಸನ್ನು ಸದಾ ಪರಮ ಪ್ರಭುವಿನಲ್ಲಿ ನಿಲ್ಲಿಸುತ್ತಾನೆ.

ಮನಸ್ಸು ಚಂಚಲವಾದದ್ದು. ಆದುದರಿಂದ ಬಲತ್ಕಾರವಾಗಿ ಮನಸ್ಸನ್ನು ಕೃಷ್ಣನ ಯೋಚನೆಯಲ್ಲಿ ತೊಡಿಸುವುದು ಅಗತ್ಯ. ಮತ್ತೆ ಮತ್ತೆ ಕೊಡುವ ಒಂದು ಉದಾಹರಣೆಯೆಂದರೆ ಕಂಬಳಿಹುಳುವಿನದು. ಅದು ಚಿಟ್ಟೆಯಾಗಬೇಕೆಂದು ಚಿಂತಿಸುತ್ತದೆ ಮತ್ತು ಅದೇ ಜನ್ಮದಲ್ಲಿಯೇ ಚಿಟ್ಟೆಯಾಗಿ ಮಾರ್ಪಡುತ್ತದೆ. ಇದೇ ರೀತಿಯಲ್ಲಿ, ನಾವು ಸದಾ ಕೃಷ್ಣನನ್ನು ಕುರಿತು ಚಿಂತಿಸಿದರೆ ನಮ್ಮ ಜೀವನದ ಕೊನೆಯಲ್ಲಿ ಖಂಡಿತವಾಗಿಯೂ ಕೃಷ್ಣ ದೇಹರಚನೆಯಂತಹ ದೇಹರಚನೆಯನ್ನೇ ಪಡೆಯುತ್ತೇವೆ.