ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನಲ್ಲಿ ಪ್ರೀತಿಯಿಲ್ಲದ ಮನುಷ್ಯ ಕೃಷ್ಣನ ಕುರಿತು ಯೋಚಿಸಲಾರ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಗವಂತನಲ್ಲಿ ಪ್ರೀತಿಯಿಲ್ಲದ ಮನುಷ್ಯ ಕೃಷ್ಣನ ಕುರಿತು ಯೋಚಿಸಲಾರ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಭಗವಂತನಲ್ಲಿ ಪ್ರೀತಿಯಿಲ್ಲದ ಮನುಷ್ಯ ಕೃಷ್ಣನ ಕುರಿತು ಯೋಚಿಸಲಾರ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 17ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 17

ಕಥಂ ವಿದ್ಯಾಮಹಂ ಯೋಗಿಂಸ್ತ್ವಾಂ ಸದಾ ಪರಿಚಿನ್ತಯನ್ |

ಕೇಷು ಕೇಷ ಚ ಭಾವೇಷು ಚಿನ್ತ್ಯೋಸಿ ಭಗವನ್ಮಯಾ ||17||

ಅನುವಾದ: ಕೃಷ್ಣನೇ, ಪರಮ ಯೋಗಿಯೇ, ನಾನು ಸದಾ ನಿನ್ನನ್ನು ಧ್ಯಾನಮಾಡುವುದು ಹೇಗೆ? ಓ ದೇವೋತ್ತಮ ಪರಮ ಪುರುಷನೆ, ಯಾವ ಯಾವ ರೂಪಗಳಲ್ಲಿ ನಿನ್ನನ್ನು ಸ್ಮರಿಸಬೇಕು?

ಭಾವಾರ್ಥ: ಹಿಂದಿನ ಅಧ್ಯಾಯದಲ್ಲಿ ಹೇಳಿರುವಂತೆ, ದೇವೋತ್ತಮ ಪರಮ ಪುರುಷನನ್ನು ಅವನ ಯೋಗಮಾಯೆಯು ಮುಚ್ಚಿರುತ್ತದೆ. ಶರಣಾಗತರಾದ ಆತ್ಮರು ಮತ್ತು ಭಕ್ತರು ಮಾತ್ರ ಅವನನ್ನು ಕಾಣಬಲ್ಲರು. ಈಗ ಅರ್ಜುನನಿಗೆ ತನ್ನ ಸ್ನೇಹಿತ ಕೃಷ್ಣನು ದೇವೋತ್ತಮ ಪರಮ ಪುರುಷ ಎಂದು ದೃಢಪಟ್ಟಿದೆ. ಆದರರೆ ಸಾಮಾನ್ಯ ಮನುಷ್ಯರು ಯಾವ ಪ್ರಕ್ರಿಯೆಯಿಂದ ಸರ್ವವ್ಯಾಪಿಯಾದ ಪ್ರಭುವನ್ನು ಅರ್ಥಮಾಡಿಕೊಳ್ಳಬಹುದು ಎಂದು ತಿಳಿಯಲು ಅಪೇಕ್ಷಿಸುತ್ತಾನೆ. ದಾನವರು ಮತ್ತು ನಾಸ್ತಿಕರು ಸೇರಿದಂತೆ ಸಾಮಾನ್ಯ ಮನುಷ್ಯರು ಕೃಷ್ಣನನ್ನು ತಿಳಿಯಲಾರರು. ಏಕೆಂದರೆ ಅವನ ಯೋಗಮಾಯೆಯ ಶಕ್ತಿಯು ಅವನನ್ನು ಆವರಿಸಿರುತ್ತದೆ (Bhagavad Gita Updesh in Kannada).

ಅರ್ಜುನನು ಇಂತಹವರ ಪ್ರಯೋಜನಕ್ಕಾಗಿ ಈ ಪ್ರಶ್ನೆಗಳನ್ನು ಕೇಳುತ್ತಾನೆ. ಶ್ರೇಷ್ಠ ಭಕ್ತನಿಗೆ ತನ್ನ ತಿಳಿವಳಿಕೆಯ ಬಗೆಗೆ ಮಾತ್ರವಲ್ಲ, ಎಲ್ಲ ಮಾನವಕುಲದ ತಿಳಿವಳಿಕೆಯ ಬಗೆಗೆ ಕಾಳಜಿ. ಅರ್ಜುನನು ಒಬ್ಬ ವೈಷ್ಣವ ಭಕ್ತ. ಅವನು ದಯೆಯಿಂದ ಸಾಮಾನ್ಯ ಮನುಷ್ಯನಿಗೆ ಭಗವಂತನ ಸರ್ವವ್ಯಾಪಕತ್ವವನ್ನು ಅರ್ಥಮಾಡಿಕೊಳ್ಳಲು ದಾರಿಯನ್ನು ತೆರೆಯುತ್ತಿದ್ದಾನೆ. ಅವನು ಕೃಷ್ಣನನ್ನು ನಿರ್ದಿಷ್ಟವಾಗಿ ಯೋಗಿನ್ ಎಂದು ಸಂಬೋಧಿಸುತ್ತಿದ್ದಾನೆ. ಏಕೆಂದರೆ ಸಮಾನ್ಯ ಮನುಷ್ಯನಿಗೆ ಅವನನ್ನು ಮರೆಮಾಡುವ ಅಥವಾ ತೆರೆಯುವ ಯೋಗಮಾಯಾಶಕ್ತಿಯ ಪ್ರಭು ಕೃಷ್ಣನೇ. ಕೃಷ್ಣನಲ್ಲಿ ಪ್ರೀತಿ ಇಲ್ಲದ ಸಾಮಾನ್ಯ ಮನುಷ್ಯನು ಸದಾ ಕೃಷ್ಣನನ್ನು ಕುರಿತು ಯೋಚಿಸಲಾರ. ಆದುದರಿಂದ ಅವನು ಐಹಿಕವಾಗಿ ಯೋಚಿಸಬೇಕಾಗುತ್ತದೆ.

ಅರ್ಜುನನು ಈ ಜಗತ್ತಿನ ಪ್ರಾಪಂಚಿಕ ಮನೋಧರ್ಮದ ಜನರ ಯೋಚಿಸಬೇಕಾಗುತ್ತದೆ. ಅರ್ಜುನನು ಈ ಜಗತ್ತಿನ ಪ್ರಾಪಂಚಿಕ ಮಮನೋಧರ್ಮದ ಜನರ ಯೋಚನಾರೀತಿಯನ್ನು ಪರಿಶೀಲಿಸುತ್ತಿದ್ದಾನೆ. ಕೇಷು ಕೇಷು ಚ ಭಾವೇಷು ಎನ್ನುವ ಮಾತುಗಳು ಐಹಿಕ ಪ್ರಕೃತಿಗೆ ಸಂಬಂಧಿದವು. (ಭಾವ ಎನ್ನುವ ಪದಕ್ಕೆ ಭೌತಿಕ ವಸ್ತುಗಳು ಎಂದರ್ಥ). ಐಹಿಕ ಮನೋಧರ್ಮದವರು ಅಧ್ಯಾತ್ಮಿಕವಾಗಿ ಅರ್ಥ ಮಾಡಿಕೊಳ್ಳಲಾರರು. ಆದುದರಿಂದ ಅವರು ಭೌತಿಕ ವಸ್ತುಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಿ ಕೃಷ್ಣನು ಭೌತಿಕ ನಿರೂಪಣೆಗಳಲ್ಲಿ ಹೇಗೆ ಪ್ರಕಣಗೊಳ್ಳುತ್ತಾನೆ ಎಂದು ಕಾಣಲು ಪ್ರಯತ್ನಿಸುವಂತೆ ಹೇಳಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)