Bhagavad Gita: ಭಗವಂತನ ಕೃಪೆಯಲ್ಲಿರುವ ವ್ಯಕ್ತಿ ಸ್ವಾರ್ಥವಿಲ್ಲದೆ ತೃಪ್ತಿಗಾಗಿ ಕೆಲಸ ಮಾಡುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನ ಕೃಪೆಯಲ್ಲಿರುವ ವ್ಯಕ್ತಿ ಸ್ವಾರ್ಥವಿಲ್ಲದೆ ತೃಪ್ತಿಗಾಗಿ ಕೆಲಸ ಮಾಡುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita: ಭಗವಂತನ ಕೃಪೆಯಲ್ಲಿರುವ ವ್ಯಕ್ತಿ ಸ್ವಾರ್ಥವಿಲ್ಲದೆ ತೃಪ್ತಿಗಾಗಿ ಕೆಲಸ ಮಾಡುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita Updesh: ಭಗವಂತನ ಕೃಪೆಯಲ್ಲಿರುವ ವ್ಯಕ್ತಿ ಸ್ವಾರ್ಥವಿಲ್ಲದೆ ತೃಪ್ತಿಗಾಗಿ ಕೆಲಸ ಮಾಡುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ಹೀಗೆ ಬರೆಯಲಾಗಿದೆ.

ಭಗವದ್ಗೀತೆಯ 6 ಅಧ್ಯಾಯದ 1 ಶ್ಲೋಕದಲ್ಲಿ ಭಗವಂತನ ಕೃಪೆಯಲ್ಲಿರುವ ವ್ಯಕ್ತಿ ಸ್ವಾರ್ಥವಿಲ್ಲದೆ ತೃಪ್ತಿಗಾಗಿ ಕೆಲಸ ಮಾಡುತ್ತಾನೆ ಎಂಬುದರ ಬಗ್ಗೆ ಬರೆಯಲಾಗಿದೆ.
ಭಗವದ್ಗೀತೆಯ 6 ಅಧ್ಯಾಯದ 1 ಶ್ಲೋಕದಲ್ಲಿ ಭಗವಂತನ ಕೃಪೆಯಲ್ಲಿರುವ ವ್ಯಕ್ತಿ ಸ್ವಾರ್ಥವಿಲ್ಲದೆ ತೃಪ್ತಿಗಾಗಿ ಕೆಲಸ ಮಾಡುತ್ತಾನೆ ಎಂಬುದರ ಬಗ್ಗೆ ಬರೆಯಲಾಗಿದೆ.

ಅಧ್ಯಾಯ - 6 ಧ್ಯಾನ ಯೋಗ

ಶ್ಲೋಕ-1

ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ |

ಸ ಸನ್ನ್ಯಾಸೀ ಚ ಯೋಗಿ ಚ ನ ನಿರಗ್ನಿರ್ನ ಚಾಕ್ರಿಯಃ ||1||

Bhagavad Gita Updesh in Kannada: ದೇವೋತ್ತಮ ಪರಮ ಪುರುಷನು ಹೇಳಿದನು-ಕರ್ಮಫಲಕ್ಕೆ ಅಂಟಿಕೊಳ್ಳದೆ ತಾನು ಮಾಡಬೇಕಾದ ಕರ್ಮವನ್ನು ಮಾಡುವವನೇ ಸನ್ಯಾಸಿ. ಅವನೇ ನಿಜವಾದ ಅನುಭಾವಿ. ಅಗ್ನಿಯನ್ನು ಹೊತ್ತಿಸದೆ ಕರ್ತವ್ಯವನ್ನು ಮಾಡದಿರುವವನು ಸನ್ಯಾಸಿಯಲ್ಲ, ಯೋಗಿಯಲ್ಲ.

ಈ ಅಧ್ಯಾಯದಲ್ಲಿ, ಅಷ್ಟಾಂಗಯೋಗ ಪದ್ಧತಿಯು ಮನಸ್ಸನ್ನೂ ಇಂದ್ರಿಯಗಳನ್ನೂ ನಿಯಂತ್ರಿಸಲು ಒಂದು ಸಾಧನ ಎಂದು ಭಗವಂತನು ವಿವರಿಸುತ್ತಾನೆ. ಆದರೆ ಸಾಮಾನ್ಯವಾಗಿ ಜನರಿಗೆ, ಅದರಲ್ಲಿಯೂ ಕಲಿಯುಗದಲ್ಲಿ ಇದನ್ನು ಅನುಷ್ಠಾನ ಮಾಡುವುದು ಬಹಳ ಕಷ್ಟ. ಅಷ್ಟಾಂಗ ಯೋಗ ಪದ್ಧತಿಯನ್ನು ಆಶ್ರಯಿಸಬೇಕೆಂದು ಈ ಅಧ್ಯಾಯದಲ್ಲಿ ಹೇಳಿದ್ದರೂ ಕರ್ಮಯೋಗವು ಅಥವಾ ಕೃಷ್ಣಪ್ರಜ್ಞೆಯಲ್ಲಿ ಕರ್ಮಮಾಡುವುದು ಉತ್ತಮ ಎಂದು ಭಗವಂತನು ಒತ್ತಿ ಹೇಳುತ್ತಾನೆ.

ಈ ಜಗತ್ತಿನಲ್ಲಿ ಪ್ರತಿಯೊಬ್ಬನೂ ತನ್ನ ಸಂಸಾರ, ಅದರ ಸಾಮಾನು ಸಂರಜಾಮು ಇವನ್ನು ಪೋಷಿಸಿಕೊಂಡು ಬರಲು ಕೆಲಸ ಮಾಡುತ್ತಾನೆ. ಕೇಂದ್ರೀಕೃತವಾದ ಅಥವಾ ವಿಸ್ತೃತವಾದ ಸ್ವಾರ್ಥ ಮತ್ತು ವೈಯಕ್ತಿಕ ಭೋಗ ಇಲ್ಲದೆ ಯಾರೂ ಕೆಲಸ ಮಾಡುವುದಿಲ್ಲ. ಫಲಾಪೇಕ್ಷಿಯಿಂದ ಕರ್ಮ ಮಾಡದೆ ಕೇವಲ ಕೃಷ್ಣಪ್ರಜ್ಞೆಯಿಂದ ಕರ್ಮನಿರತನಾಗುವುದೇ ಪರಿಪೂರ್ಣತೆಯ ಅಳತೆಗೋಲು.

ಎಲ್ಲರೂ ಸಹಜಸ್ಥಿತಿಯಲ್ಲಿ ಪರಮ ಪ್ರಭುವಿನ ವಿಭಿನ್ನಾಂಶಗಳು. ಆದುದರಿಂದ ಕೃಷ್ಣಪ್ರಜ್ಞೆಯಲ್ಲಿ ಕರ್ಮಮಾಡುವುದು ಪ್ರತಿಯೊಬ್ಬ ಜೀವಿಯ ಕರ್ತವ್ಯ. ದೇಹದ ಭಾಗಗಳು ಇಡೀ ದೇಹದ ಕೆಲಸಮಾಡುತ್ತವೆ. ದೇಹದ ಅಂಗಾಂಗಗಳು ಸ್ವಂತ ತೃಪ್ತಿಗಾಗಿ ಕೆಲಸ ಮಾಡುವುದಿಲ್ಲ. ಇಡೀ ದೇಹದ ತೃಪ್ತಿಗಾಗಿ ಕೆಲಸಮಾಡುತ್ತವೆ. ಹಾಗೆಯೇ ವೈಯಕ್ತಿಕ ತೃಪ್ತಿಗಾಗಿ ಅಲ್ಲದೆ ಪರಮ ಪುರುಷನಿಗಾಗಿ ದುರಿಯುವ ಜೀವಿಯೇ ಪರಿಪೂರ್ಣ ಸನ್ಯಾಸಿ, ಪರಿಪೂರ್ಣ ಯೋಗಿ.

ಕೆಲವೊಮ್ಮೆ ಸನ್ಯಾಸಿಗಳು ತಾವು ಎಲ್ಲ ಐಹಿಕ ಕರ್ತವ್ಯಗಳಿಂದಲೂ ಬಿಡುಗಡೆಯಾಗಿದ್ದೇವೆ ಎಂದು ಕೃತಕವಾಗಿ ಭಾವಿಸುತ್ತಾರೆ. ಅಗ್ನಿಹೋತ್ರವನ್ನು ಬಿಟ್ಟುಬಿಡುತ್ತಾರೆ. ಆದರೆ ವಾಸ್ತವವಾಗಿ ಅವರು ಸ್ವಾರ್ಥಿಗಳು. ಏಕೆಂದರೆ ಅವರ ಗುರಿಯು ನಿರಾಕಾರ ಬ್ರಹ್ಮನೊಂದಿಗೆ ಒಂದಾಗುವುದು. ಇಂತಹ ಬಯಕೆಯು ಯಾವುದೇ ಐಹಿಕ ಬಯಕೆಗಿಂತ ಹಿರಿಯದು. ಆದರೂ ಇದರಲ್ಲಿ ಸ್ವಾರ್ಥವಿಲ್ಲದೆ ಇಲ್ಲ. ಇದೇ ರೀತಿಯಲ್ಲಿ ಎಲ್ಲ ಐಹಿಕ ಕಾರ್ಯಗಳಲ್ಲಿ ನಿಲ್ಲಿಸಿ ಕಣ್ಣುಗಳನ್ನು ಅರೆತೆರೆದು ಯೋಗಾಭ್ಯಾಸ ಮಾಡುವ ಹಠಯೋಗಿಯು ವ್ಯಕ್ತಿಗತವಾಗಿ ತೃಪ್ತಿಯನ್ನು ಬಯಸುತ್ತಾನೆ. ಆದರೆ ಕೃಷ್ಣಪ್ರಜ್ಞೆಯಲ್ಲಿ ಕರ್ಮ ಮಾಡುವವನು ಸ್ವಾರ್ಥವಿಲ್ಲದೆ ಪರಮ ಪುರುಷನ ತೃಪ್ತಿಗಾಗಿ ಕೆಲಸ ಮಾಡುತ್ತಾನೆ.

ಕೃಷ್ಣಪ್ರಜ್ಞೆಯಲ್ಲಿ ಕರ್ಮ ಮಾಡುವವನು ಸ್ವಾರ್ಥವಿಲ್ಲದೆ ಪರಮ ಪುರುಷನ ತೃಪ್ತಿಗಾಗಿ ಕೆಲಸ ಮಾಡುತ್ತಾನೆ. ಕೃಷ್ಣಪ್ರಜ್ಞೆಯ ಮನುಷ್ಯನಿಗೆ ತನ್ನ ತೃಪ್ತಿಯ ಬಯಕೆಯೇ ಇಲ್ಲ. ಯಶಸ್ಸನ್ನು ತೀರ್ಮಾನಿಸಲು ಅವನ ಒರೆಗಲ್ಲು ಕೃಷ್ಣನ ತೃಪ್ತಿ. ಈ ರೀತಿಯಲ್ಲಿ ಆತನು ಪರಿಪೂರ್ಣ ಸನ್ಯಾಸಿ ಅಥವಾ ಪರಿಪೂರ್ಣಯೋಗಿ. ಅತ್ಯುನ್ನತ ಪರಿಪೂರ್ಣ ಸನ್ಯಾಸಿಗಳಾದ ಚೈತನ್ಯ ಮಹಾಪ್ರಭುಗಳು ಈ ರೀತಿಯಲ್ಲಿ ಪ್ರಾರ್ಥನೆ ಮಾಡುತ್ತಾರೆ-

ನ ಧನಂ ನ ಜನಂ ನ ಸುಂದರೀಂ

ಕವಿತಾಂ ವಾ ಜಗದೀಶ ಕಾಮಯೇ |

ಮಮ ಜನ್ಮನಿ ಜನ್ಮನೀಶ್ವರೇ

ಭವತಾದ್ಭಕ್ತಿರಹೈತುಕೀ ತ್ವಯಿ||

ಸರ್ವಶಕ್ತನಾದ ಭಗವಂತನೇ, ನನಗೆ ಧನ ಸಂಚಯದ ಆಸೆಯಿಲ್ಲ ಅಥವಾ ಸುಂದರಿಯರೊಡನೆ ಸುಖಿಸುವ ಆಸೆಯಿಲ್ಲ. ನನಗೆ ಬಹುಮಂದಿ ಅನುಯಾಯಿಗಳು ಬೇಡ. ಜನ್ಮ ಜನ್ಮಾಂತರಗಳಲ್ಲಿಯೂ ನನ್ನ ಜೀವನದಲ್ಲಿ ನಿನ್ನ ಭಕ್ತಿಸೇವೆಯ ಕಾರಣರಹಿತ ಕೃಪೆಯೊಂದೇ ನನಗೆ ಬೇಕಾದದ್ದು. (This copy first appeared in Hindustan Times Kannada website. To read more like this please logon to kannada.hindustantime.com).

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.