Bhagavad Gita: ಜ್ಞಾನಕ್ಕಿಂತ ಧ್ಯಾನ ಉತ್ತಮ, ಧ್ಯಾನಕ್ಕಿಂತ ಕರ್ಮಫಲದ ತ್ಯಾಗ ಉತ್ತಮ; ಗೀತೆಯ ಸಾರಾಂಶ ತಿಳಿಯಿರಿ-spiritual news bhagavad gita updesh lord krishna meditation is better than knowledge bhagavad gita quotes in kannada ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಜ್ಞಾನಕ್ಕಿಂತ ಧ್ಯಾನ ಉತ್ತಮ, ಧ್ಯಾನಕ್ಕಿಂತ ಕರ್ಮಫಲದ ತ್ಯಾಗ ಉತ್ತಮ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita: ಜ್ಞಾನಕ್ಕಿಂತ ಧ್ಯಾನ ಉತ್ತಮ, ಧ್ಯಾನಕ್ಕಿಂತ ಕರ್ಮಫಲದ ತ್ಯಾಗ ಉತ್ತಮ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita Updesh: ಜ್ಞಾನಕ್ಕಿಂತ ಧ್ಯಾನ ಉತ್ತಮ, ಧ್ಯಾನಕ್ಕಿಂತ ಕರ್ಮಫಲ ತ್ಯಾಗವು ಉತ್ತಮ ಎಂಬುದರ ಅರ್ಥವನ್ನು ಭಗವದ್ಗೀತೆಯ 12 ನೇ ಅಧ್ಯಾಯದ 12 ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 12

ಶ್ರೇಯೋ ಹಿ ಜ್ಞಾನಮಭ್ಯಾಸಾಜ್‌ಜ್ಞಾನಧ್ಧ್ಯಾನಂ ವಿಶಿಷ್ಯತೇ |

ಧ್ಯಾನಾತ್ಕರ್ಮಫಲತ್ಯಾಗಸ್ತ್ಯಾಗಾಚ್ಛಾಂತಿರನನ್ತರಮ್ ||12||

ಅನುವಾದ: ಈ ಅಭ್ಯಾಸವು ನಿನಗೆ ಸಾಧ್ಯವಾಗದೆ ಹೋದರೆ ಜ್ಞಾನಸಾಧನೆಯಲ್ಲಿ ತೊಡಗು. ಆದರೆ ಜ್ಞಾನಕ್ಕಿಂತ ಧ್ಯಾನವು ಉತ್ತಮ, ಧ್ಯಾನಕ್ಕಿಂತ ಕರ್ಮಫಲತ್ಯಾಗವು ಉತ್ತಮ. ಏಕೆಂದರೆ ಇಂತಹ ತ್ಯಾಗದಿಂದ ಮನಶ್ಶಾಂತಿಯನ್ನು ಪಡೆಯಬಹುದು.

ಭಾವಾರ್ಥ: ಹಿಂದಿನ ಶ್ಲೋಕಗಳಲ್ಲಿ ಹೇಳಿದಂತೆ ಭಕ್ತಿಸೇವೆಯಲ್ಲಿ ಎರಡು ವಿಧ. ನಿಯಂತ್ರಕ ತತ್ವಗಳ ರೀತಿ ಒಂದು. ಭಗವತ್ಪ್ರೇಮದಲ್ಲಿ ಪೂರ್ಣ ಆಸಕ್ತಿಯ ಮಾರ್ಗ ಮತ್ತೊಂದು. ಕೃಷ್ಣಪ್ರಜ್ಞೆಯ ತತ್ವಗಳನ್ನು ಅನುಸರಿಸಲು ಸಾಧ್ಯವಾಗದೆ ಹೋದವರು ಜ್ಞಾನವನ್ನು ಬೆಳೆಸಿಕೊಳ್ಳುವುದು ಉತ್ತಮ. ಏಕೆಂದರೆ ಜ್ಞಾನದಿಂದ ಮನುಷ್ಯನು ತನ್ನ ನಿಜವಾದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲ. ಕ್ರಮೇಣ ದೇವೋತ್ತಮ ಪರಮ ಪುರುಷನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಮನುಷ್ಯನು ತಾನೇ ಪರಮನು ಎಂಬ ಅರಿವನ್ನು ತಂದುಕೊಡುವ ಪ್ರಕ್ರಿಯೆಗಳಿವೆ. ಭಕ್ತಿಸೇವೆಯಲ್ಲಿ ನಿರತನಾಗಲು ಸಾಧ್ಯವಾಗದೇ ಹೋದವನಿಗೆ ಇಂತಹ ಧ್ಯಾನವೇ ಉತ್ತಮ (Bhagavad Gita Updesh in Kannada).

ಈ ರೀತಿ ಧ್ಯಾನಮಾಡಲಾರದವನಿಗೆ, ವೇದಸಾಹಿತ್ಯದಲ್ಲಿ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರಿಗೆ ನಿಗದಿಯಾದ ಕರ್ತವ್ಯಗಳನ್ನು ವಿಧಿಸಲಾಗಿದೆ. ಇವನ್ನು ಭಗವದ್ಗೀತೆಯ ಕಡೆಯ ಅಧ್ಯಾಯದಲ್ಲಿ ನಾವು ಕಾಣುತ್ತೇವೆ. ಏನೇ ಆಗಲಿ, ಮನುಷ್ಯನು ಕರ್ಮಫಲವನ್ನು ತ್ಯಾಗಮಾಡಬೇಕು. ಹೀಗೆಂದರೆ ಕರ್ಮಫಲವನ್ನು ಒಂದು ಒಳ್ಳೆಯ ಕರ್ಮಕ್ಕಾಗಿ ಬಳಸುವುದು ಎಂದು ಅರ್ಥ.

ಸಾರಾಂಶವೆಂದರೆ, ಅತ್ಯುನ್ನತ ಗುರಿಯಾದ ದೇವೋತ್ತಮ ಪರಮ ಪುರುಷನನ್ನು ಸೇರಲು ಎರಡು ಪ್ರಕ್ರಿಯೆಗಳಿವೆ. ಒಂದು ಪ್ರಕ್ರಿಯೆ, ಕ್ರಮಕ್ರಮವಾದ ಬೆಳವಣಿಗೆ, ಮತ್ತೊಂದು ನೇರವಾದದ್ದು. ಕೃಷ್ಣಪ್ರಜ್ಞೆಯಲ್ಲಿ ಭಕ್ತಿಸೇವೆಯನ್ನು ಮಾಡುವುದು ನೇರ ಮಾರ್ಗ. ಇನ್ನೊಂದು, ತನ್ನ ಕರ್ಮಗಳ ಫಲವನ್ನು ತ್ಯಜಿಸುವುದು. ಆಗ ಮನುಷ್ಯನು ಜ್ಞಾನದ ಹಂತಕ್ಕೆ, ಅನಂತರ ಧ್ಯಾನದ ಹಂತಕ್ಕೆ, ಅನಂತರ ಪರಮಾತ್ಮನ ಅರಿವಿನ ಹಂತಕ್ಕೆ, ಅನಂತರ ದೇವೋತ್ತಮ ಪರಮ ಪುರುಷನ ಹಂತಕ್ಕೆ ಬರಬಹುದು. ಮೆಟ್ಟಲು ಮೆಟ್ಟಲಾಗಿ ಏರುವ ಪ್ರಕ್ರಿಯೆಯನ್ನಾಗಲಿ ನೇರವಾದ ಮಾರ್ಗವನ್ನಾಗಿ ಮನುಷ್ಯ ಆರಿಸಿಕೊಳ್ಳಬಹುದು. ಪ್ರತಿಯೊಬ್ಬರಿಗೂ ನೇರವಾದ ಪ್ರಕ್ರಿಯೆ ಸಾಧ್ಯವಿಲ್ಲ. ಆದುದರಿಂದ ಪರೋಕ್ಷ ಪ್ರಕ್ರಿಯೆಯೂ ಒಳ್ಳೆಯದೇ. ಆದರೆ ಇದನ್ನು ಅರ್ಥಮಾಡಿಕೊಳ್ಳಬೇಕು.

ಅರ್ಜುನನು ಆಗಲೇ ಪರಮ ಪ್ರಭುವಿನ ಭಕ್ತಿಸೇವೆಯ ಹಂತದಲ್ಲಿದ್ದಾನೆ. ಆದುದರಿಂದ ಪರೋಕ್ಷ ಪ್ರಕ್ರಿಯೆಯನ್ನು ಅವನಿಗೆ ಸಲಹೆ ಮಾಡುತ್ತಿಲ್ಲ. ಈ ಹಂತದಲ್ಲಿ ಇಲ್ಲದವರಿಗೆ ಪರೋಕ್ಷ ಪ್ರಕ್ರಿಯೆ. ಅವರು ವೈರಾಗ್ಯ, ಜ್ಞಾನ, ಧ್ಯಾನ ಮತ್ತು ಸಾಕ್ಷಾತ್ಕಾರದ ಕ್ರಮಕ್ರಮವಾದ ಪ್ರಕ್ರಿಯೆಯನ್ನು ಅನುಸರಿಸಬೇಕು. ಭಗವದ್ಗೀತೆಗೆ ಸಂಬಂಧಿಸಿದಂತೆ ನೇರಮಾರ್ಗಕ್ಕೆ ಮಹತ್ವವನ್ನು ನೀಡಲಾಗಿದೆ. ನೇರವಾದ ರೀತಿಯನ್ನು ಅನುಸರಿಸಿ ದೇವೋತ್ತಮ ಪರಮ ಪುರುಷನಾದ ಕೃಷ್ಣನಿಗೆ ಶರಣಾಗತರಾಗುವಂತೆ ಪ್ರತಿಯೊಬ್ಬರಿಗೂ ಉಪದೇಶ ಮಾಡಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.