ಭಗವದ್ಗೀತೆ: ಶ್ರಮದಿಂದ ಸಂಪಾದಿಸಿದ ಆಸ್ತಿಯನ್ನ ಹೇಗೆ ಬಳಸಬೇಕೆಂದು ಜಿಪುಣರಿಗೆ ಗೊತ್ತಿರುವುದಿಲ್ಲ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಶ್ರಮದಿಂದ ಸಂಪಾದಿಸಿದ ಆಸ್ತಿಯನ್ನ ಹೇಗೆ ಬಳಸಬೇಕೆಂದು ಜಿಪುಣರಿಗೆ ಗೊತ್ತಿರುವುದಿಲ್ಲ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ

ಭಗವದ್ಗೀತೆ: ಶ್ರಮದಿಂದ ಸಂಪಾದಿಸಿದ ಆಸ್ತಿಯನ್ನ ಹೇಗೆ ಬಳಸಬೇಕೆಂದು ಜಿಪುಣರಿಗೆ ಗೊತ್ತಿರುವುದಿಲ್ಲ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಶ್ರಮದಿಂದ ಸಂಪಾದಿಸಿದ ಆಸ್ತಿಯನ್ನ ಹೇಗೆ ಬಳಸಬೇಕೆಂದು ಜಿಪುಣರಿಗೆ ಗೊತ್ತಿರುವುದಿಲ್ಲ ಅನ್ನೋದರ ಅರ್ಥ ಹೀಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ತ್ರೈಗುಣ್ಯವಿಷಯಾ ವೇದಾ ನಿಸ್ತ್ರೈಗುಣ್ಯೋ ಭವಾರ್ಜುನ |

ನಿರ್ದ್ವನ್ದ್ವೋ ನಿತ್ಯಸತ್ತ್ವಸ್ಥೋ ನಿರ್ಯೋಗಕ್ಷೇಮ ಆತ್ಮವಾನ್ ||45||

ವೇದಗಳು ಬಹುಮಟ್ಟಿಗೆ ತ್ರೈಗುಣ್ಯದ ವಿಷಯವನ್ನು ಹೇಳುತ್ತವೆ. ಅರ್ಜುನ, ನೀವು ತ್ರೈಗುಣಗಳನ್ನು ಮೀರಿದವನಾಗು. ಎಲ್ಲ ದ್ವಂದ್ವಗಳಿಂದ ಮುಕ್ತನಾಗಿರು. ಲಾಭ ಮತ್ತು ಯೋಗಕ್ಷೇಮಗಳನ್ನು ಕುರಿತು ಚಿಂತೆಯಿಲ್ಲದವನಾಗು. ಆತ್ಮದಲ್ಲಿ ನಿಷ್ಠನಾಗು.

ಎಲ್ಲ ಪ್ರಾಪಂಚಿಕ ಚಟುವಟಿಕೆಗಳಲ್ಲಿ ತ್ರಿಗುಣಗಳ ಕ್ರಿಯೆಗಳೂ ಮತ್ತು ಪ್ರತಿಕ್ರಿಯೆಗಳೂ ಸೇರಿವೆ. ಇವು ಫಲವನ್ನು ಭೋಗಿಸುವ ಉದ್ದೇಶದಿಂದ ಮಾಡಲಾಗುತ್ತದೆ. ಇವು ಐಹಿಕ ಪ್ರಪಂಚದಲ್ಲಿ ಬಂಧನಗಳನ್ನುಂಟುಮಾಡುತ್ತವೆ. ವೇದಗಳು ಬಹುಮಟ್ಟಿಗೆ ಫಲಾಕಾಂಕ್ಷಿ ಕರ್ಮಗಳನ್ನು ಕುರಿತು ಹೇಳುತ್ತವೆ. ಇದರ ಉದ್ದೇಶವು ಜನಸಾಮಾನ್ಯರನ್ನು ಇಂದ್ರಿಯ ಕ್ಷೇತ್ರದಿಂದ ಕ್ರಮಕ್ರಮವಾಗಿ ಅಧ್ಯಾತ್ಮಿಕ ಮಟ್ಟಕ್ಕೆ ಕೊಂಡೊಯ್ಯುವುದು.

ಶ್ರೀಕೃಷ್ಣನ ಶಿಷ್ಯನೂ, ಸ್ನೇಹಿತನೂ ಆದ ಅರ್ಜುನನಿಗೆ ವೇದಾಂತದ ಆಧ್ಯಾತ್ಮಿಕ ಸ್ಥಿತಿಗೆ ಏರುವಂತೆ ಉಪದೇಶಿಸಲಾಗುತ್ತಿದೆ. ಈ ಸಿದ್ಧಾಂತದ ಪ್ರಾರಂಭದಲ್ಲಿ ಬ್ರಹ್ಮಜಿಜ್ಞಾಸೆ ಅಥವಾ ಪರಮ ಅಲೌಕಿಕತೆಯನ್ನು ಕುರಿತು ಪ್ರಶ್ನೆಗಳಿವೆ. ಐಹಿಕ ಜಗತ್ತಿನ ಎಲ್ಲ ಜೀವಿಗಳೂ ಅಸ್ತಿತ್ವಕ್ಕಾಗಿ ಬಹಳ ಶ್ರಮ ಪಡುತ್ತವೆ. ಐಹಿಕ ಜಗತ್ತನ್ನು ಸೃಷ್ಟಿಸಿದ ಮೇಲೆ ಭಗವಂತನು ಜೀವಿಗಳಿಗೆ, ಐಹಿಕ ಬಂಧನದಿಂದ ಬಿಡಿಸಿಕೊಳ್ಳುವುದು ಹೇಗೆ ಎಂದು ಮಾರ್ಗದರ್ಶನ ಮಾಡುವ ವೈದಿಕ ಜ್ಞಾನವನ್ನು ನೀಡಿದ. ಕರ್ಮಕಾಂಡ ಅಧ್ಯಾಯವು, ಎಂದರೆ ಇಂದ್ರಿಯತೃಪ್ತಿಯ ಚಟುವಟಿಕೆಗಳು ಮುಗಿದಾಗ ಉಪನಿಷತ್ತುಗಳ ರೂಪದಲ್ಲಿ ಆತ್ಮಸಾಕ್ಷಾತ್ಕಾರಕ್ಕೆ ಅವಕಾಶವನ್ನು ಕಲ್ಪಿಸಿದೆ. ಭಗವದ್ಗೀತೆಯು ಐದನೆಯ ವೇದವಾದ ಮಹಾಭಾರತದ ಭಾಗವಾದಂತೆ, ಉಪನಿಷತ್ತುಗಳು ಬೇರೆ ವೇದಗಳ ಭಾಗಗಳು. ಉಪನಿಷತ್ತುಗಳು ಅಲೌಕಿಕ ಬದುಕಿನ ಪ್ರಾರಂಭವನ್ನು ಸೂಚಿಸುತ್ತವೆ.

ಐಹಿಕ ದೇಹವು ಇರುಷ್ಟು ಕಾಲವೂ ಐಹಿಕ ಗುಣಗಳ ಕ್ರಿಯೆಗಳೂ ಪ್ರತಿಕ್ರಿಯೆಗಳೂ ಇದ್ದೇ ಇರುತ್ತವೆ. ಸುಖ-ದುಃಖ, ತಂಪು-ಉಣ್ಣ ಇಂತಹ ದ್ವಂದ್ವಗಳು ಎದುರಾದಾಗ ಮನುಷ್ಯನು ಸಹನೆಯನ್ನು ಕಲಿತುಕೊಳ್ಳಬೇಕು. ಇಂತಹ ದ್ವಂದ್ವಗಳನ್ನು ಸಹಿಸಿಕೊಂಡು ಲಾಭನಷ್ಟಗಳ ವಿಷಯದಲ್ಲಿ ಆತಂಕದಿಂದ ಮುಕ್ತನಾಗಬೇಕು. ಕೃಷ್ಣನ ಕೃಪೆಯೊಂದನ್ನೇ ಅವಲಂಬಿಸಿದ ಸಂಪೂರ್ಣ ಕೃಷ್ಣಪ್ರಜ್ಞೆಯಲ್ಲಿ ಅಲೌಕಿಕ ಸ್ಥಿತಿಯು ಲಭ್ಯವಾಗುತ್ತದೆ.

ದೂರೇಣ ಹ್ಯವರಂ ಕರ್ಮ ಬುದ್ಧಿಯೋಗಾದ್ಧನಞ್ಜಯ |

ಬುದ್ದೌ ಶರಣಮನ್ವಿಚ್ಛ ಕೃಪಣಾಃ ಫಲಹೇತವಃ ||49||

ಧನಂಜಯ, ಭಕ್ತಿಪೂರ್ವಕ ಸೇವೆಯಿಂದ ಎಲ್ಲ ಹೇಯ ಕಾರ್ಯಗಳನ್ನೂ ದೂರಮಾಡು. ಇಂತಹ ಪ್ರಜ್ಞೆಯಲ್ಲಿ ಭಗವಂತನಿಗೆ ಶರಣಾಗತನಾಗು. ತಮ್ಮ ಕರ್ಮಗಳ ಫಲಕ್ಕಾಗಿ ಆಸೆ ಪಡುವವರು ಕೃಪಣರು.

ಭಗವಂತನ ನಿರಂತ ಸೇವಕನಾಗಿ ತನ್ನ ಸಹಜಸ್ವರೂಪವನ್ನು ವಾಸ್ತವವಾಗಿ ಅರ್ಥಮಾಡಿಕೊಂಡವನು ಕೃಷ್ಣಪ್ರಜ್ಞೆಯಲ್ಲಿ ಕರ್ಮನಿರತನಾಗುವುದಲ್ಲದೆ ಬೇರೆಲ್ಲ ಕೆಲಸಗಳನ್ನೂ ಬಿಟ್ಟುಬಿಡುತ್ತಾನೆ. ಆಗಲೇ ವಿವರಿಸಿರುವಂತೆ, ಬುದ್ದಿಯೋಗವೆಂದರೆ ಭಗವಂತನ ದಿವ್ಯಪ್ರೇಮಪೂರ್ವಕ ಸೇವೆ. ಜೀವನಿಗೆ ಇಂತಹ ಭಕ್ತಿಸೇವೆಯೇ ಯೋಗ್ಯವಾದ ಕರ್ಮ. ಜಿಪುಣರು ಮಾತ್ರ ತಮ್ಮ ಕರ್ಮದ ಫಲವನ್ನು ಸವಿಯಲು ಬಯಸುತ್ತಾರೆ. ಇದರಿಂದ ಇನ್ನಷ್ಟು ಐಹಿಕ ಬಂಧನದಲ್ಲಿ ಸಿಲುಕುತ್ತಾರೆ.

ಕೃಷ್ಣಪ್ರಜ್ಞೆಯಲ್ಲಿ ಮಾಡುವ ಕರ್ಮವಲ್ಲದೆ ಬೇರೆಲ್ಲ ಕರ್ಮವೂ ಹೇಯವಾದದ್ದು. ಏಕೆಂದರೆ ಅದು ಕರ್ಮಾಡುವವನನ್ನು ನಿರಂತರವಾಗಿ ಹುಟ್ಟು-ಸಾವುಗಳ ಚಕ್ರಕ್ಕೆ ಬಂಧಿಸುತ್ತದೆ. ಆದುದರಿಂದ ಕರ್ಮದ ಕಾರಣವಾಗಲು ಮನುಷ್ಯನು ಎಂದೂ ಬಯಸಬಾರದು. ಎಲ್ಲವನ್ನೂ ಕೃಷ್ಣಪ್ರಜ್ಞೆಯಲ್ಲಿ ಕೃಷ್ಣನಿಗೆ ಪ್ರೀತಿಯಾಗಲೆಂದು ಮಾಡಬೇಕು. ಒಳ್ಳೆಯ ಅದೃಷ್ಟದಿಂದಲೋ ತಮ್ಮ ಶ್ರಮದಿಂದಲೋ ಸಂಪಾದಿಸಿದ ಸಿರಿಸ್ವತ್ತುಗಳನ್ನು ಹೇಗೆ ಬಳಸಬೇಕೆಂದು ಜಿಪುಣರಿಗೆ ತಿಳಿಯುವುದಿಲ್ಲ. ಮನುಷ್ಯನು ತನ್ನ ಶಕ್ತಿಗಳನ್ನೆಲ್ಲ ಕೃಷ್ಣಪ್ರಜ್ಞೆಯಲ್ಲಿ ಕೆಲಸ ಮಾಡಲು ಬಳಸಬೇಕು. ಆಗ ಅವನ ಬದುಕು ಸಾರ್ಥಕವಾಗುತ್ತದೆ. ಜಿಪುಣರಂತೆಯೇ ದುರದೃಷ್ಟವಂತರು ತಮ್ಮ ಮನುಷ್ಯಶಕ್ತಿಯನ್ನು ಭಗವಂತನ ಸೇವೆಯಲ್ಲಿ ಬಳಸುವುದಿಲ್ಲ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.