ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಪರಿಶುದ್ಧ ಭಕ್ತನು ವಾಸ್ತವದಲ್ಲಿ ಪತನಗೊಳ್ಳಲು ಅವಕಾಶವೇ ಇಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಪರಿಶುದ್ಧ ಭಕ್ತನು ವಾಸ್ತವದಲ್ಲಿ ಪತನಗೊಳ್ಳಲು ಅವಕಾಶವೇ ಇಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಪರಿಶುದ್ಧ ಭಕ್ತನು ವಾಸ್ತವದಲ್ಲಿ ಪತನಗೊಳ್ಳಲು ಅವಕಾಶವೇ ಇಲ್ಲ ಎಂಬುದರ ಅರ್ಥವನ್ನು ಭಗವಗ್ದೀತೆಯ 9ನೇ ಅಧ್ಯಾಯದ ಕೊನೆಯ ಹಾಗೂ 34ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 34

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ಮನಸ್ಕುರು

ಮಾಮೇವೈಷ್ಯಸಿ ಯುಕ್ತ್ವೆಮಮಾತ್ಮಾನಂ ಮತ್ಪರಾಯಣಃ

ಅನುವಾದ: ಸದಾ ನನ್ನನ್ನು ಚಿಂತಿಸುವುದರಲ್ಲಿ ಮನಸ್ಸನ್ನು ತೊಡಗಿಸು, ನನ್ನ ಭಕ್ತನಾಗು, ನನಗೆ ನಮಸ್ಕಾರ ಮಾಡು ಮತ್ತು ನನ್ನನ್ನು ಪೂಜಿಸು. ಆಗ ನನ್ನಲ್ಲಿ ಸಂಪೂರ್ಣವಾಗಿ ಮಗ್ನನಾಗಿ ನಿಶ್ಚಯವಾಗಿಯೂ ನೀನು ನನ್ನಲ್ಲಿಗೆ ಬರುವೆ.

ಭಾವಾರ್ಥ: ಕಲ್ಮಷಯುಕ್ತವಾದ ಈ ಐಹಿಕ ಜಗತ್ತಿನ ಕಪಿಮುಷ್ಟಿಯಿಂದ ಪಾರಾಗಬೇಕಾದರೆ ಕೃಷ್ಣಪ್ರಜ್ಞೆಯೊಂದೇ ಮಾರ್ಗ ಎಂದು ಈ ಶ್ಲೋಕದಲ್ಲಿ ಸ್ಪಷ್ಟವಾಗಿ ಹೇಳಿದೆ. ಕೆಲವೊಮ್ಮೆ ನೈತಿಕ ಅಳುಕಿಲ್ಲದ ವ್ಯಾಖ್ಯಾನಕಾರರು ಇಲ್ಲಿ ಸ್ಪಷ್ಟವಾಗಿ ಹೇಳಿರುವ ಮಾಹಿತಿ ಅರ್ಥವನ್ನು ಎಂದರೆ ಎಲ್ಲ ಭಕ್ತಿಸೇವೆಯನ್ನೂ ದೇವೋತ್ತಮ ಪರಮ ಪುರುಷನಾದ ಕೃಷ್ಣನಿಗೆ ಅರ್ಪಿಸಬೇಕೆಂಬ ಮಾತಿನ ಅರ್ಥವನ್ನು ತಿರುಚುತ್ತಾರೆ. ದುರದೃಷ್ಟದಿಂದ ನೈತಿಕ ಅಳುಕಿಲ್ಲದ ವ್ಯಾಖ್ಯಾನಕಾರರು ಕಾರ್ಯಸಾಧ್ಯವಲ್ಲದುದರ ಕಡೆಗೆ ಓದುಗನ ಮನಸ್ಸನ್ನು ಎಳೆಯುತ್ತಾರೆ.

ಕೃಷ್ಣನ ಮನಸ್ಸಿಗೂ ಕೃಷ್ಣನಿಗೂ ವ್ಯಾತ್ಯಾಸವಿಲ್ಲ ಎನ್ನುವುದು ಇಂತಹ ವ್ಯಾಖ್ಯಾನಕಾರರಿಗೆ ತಿಳಿಯದು. ಕೃಷ್ಣನು ಸಾಮಾನ್ಯ ಮನುಷ್ಯನಲ್ಲ. ಆತನು ಪರಿಪೂರ್ಣ ಸತ್ಯ. ಅವನ ದೇಹ, ಮನಸ್ಸು ಮತ್ತು ಸ್ವಯಂ ಆತ್ಮ ಅಭಿನ್ನ ಮತ್ತು ಪರಾತ್ಪರ. ಚೈತನ್ಯಚರಿತಾಮೃತವನ್ನು ಕುರಿತ ಭಕ್ತಿಸಿದ್ಧಾಂತ ಸರಸ್ವತೀ ಗೋಸ್ವಾಮಿಗಳ ಅನುಭಾಷ್ಯ (ಐದನೆಯ ಅಧ್ಯಾಯ, ಆದಿಲೀಲಾ, ಶ್ಲೋಕಗಳು 41-48) ವ್ಯಾಖ್ಯಾನದಲ್ಲಿ ಉದ್ಧರಿಸಿರುವಂತೆ, ಕೂರ್ಮ ಪುರಾಣದಲ್ಲಿ ಹೀಗೆ ಹೇಳಿದೆ - ದೇಹದೇಹಿ ವಿಭೇದೋಯಂ ನೇಶ್ವರೇ ವಿದ್ಯತೇ ಕ್ವಚಿತ್. ಹೀಗೆಂದರೆ ಪರಮ ಪ್ರಭು ಕೃಷ್ಣನಿಗೂ ಅವನ ದೇಹಕ್ಕೂ ವ್ಯತ್ಯಾಸವಿಲ್ಲ ಎಂದು ಅರ್ಥ.

ಆದರೆ ವ್ಯಾಖ್ಯಾನಕಾರರಿಗೆ ಕೃಷ್ಣವಿಜ್ಞಾನವು ತಿಳಿಯದಿರುವುದರಿಂದ ಅವರು ಕೃಷ್ಣನನ್ನು ಬಚ್ಚಿಟ್ಟು, ಅವನ ವ್ಯಕ್ತಿತ್ವವನ್ನು ಆತನ ಮನಸ್ಸಿನಿಂದ ಅಥವಾ ದೇಹದಿಂದ ಪ್ರತ್ಯೇಕಿಸುತ್ತಾರೆ. ಇದು ಕೃಷ್ಣನನ್ನು ಬಚ್ಚಿಟ್ಟು, ಅವನ ವ್ಯಕ್ತಿತ್ವವನ್ನು ಆತನ ಮನಸ್ಸಿನಿಂದ ಅಥವಾ ದೇಹದಿಂದ ಪ್ರತ್ಯೇಕಿಸುತ್ತಾರೆ. ಇದು ಕೃಷ್ಣವಿಜ್ಞಾನದ ಸಂಪೂರ್ಣ ಅಜ್ಞಾನ. ಆದರೂ ಕೆಲವರು ಜನರ ದಾರಿ ತಪ್ಪಿಸಿಯೇ ಲಾಭ ಮಾಡಿಕೊಳ್ಳುತ್ತಾರೆ.

ಕೆಲವರು ರಾಕ್ಷಸೀ ಸ್ವಭಾದವರಿದ್ದಾರೆ. ಅವರೂ ಕೃಷ್ಣನನ್ನೂ ಕುರಿತು ಚಿಂತಿಸುತ್ತಾರೆ. ಆದರೆ ಕೃಷ್ಣನ ಸೋದರಮಾವ ಕಂಸನಂತೆ, ಅಸೂಯೆಯಿಂದ ಚಿಂತಿಸುತ್ತಾರೆ. ಕಂಸನೂ ಸದಾ ಕೃಷ್ಣನ ವಿಷಯವನ್ನೇ ಯೋಚಿಸುತ್ತಿದ್ದ. ಕೃಷ್ಣನು ತನ್ನ ಶತ್ರು ಎಂದೇ ಯೋಚಿಸುತ್ತಿದ್ದ. ತನ್ನನ್ನು ಕೊಲ್ಲಲು ಕೃಷ್ಣನು ಬರುವನೇ ಎಂದು ಯೋಚಿಸುತ್ತ ಸದಾ ಆತಂಕದಲ್ಲಿಯೇ ಇರುತ್ತಿದ್ದ. ಇಂತಹ ಯೋಚನೆಯಿಂದ ನಮಗೆ ಸಹಾಯವಾಗುವುದಿಲ್ಲ. ಕೃಷ್ಣನ ವಿಷಯವಾಗಿ ಭಕ್ತಿಪೂರ್ವಕ ಪ್ರೀತಿಯಿಂದ ಯೋಚಿಸುತ್ತಿರಬೇಕು. ಅದೇ ಭಕ್ತಿ.

ಕೃಷ್ಣಪ್ರಜ್ಞೆಯನ್ನು ಸದಾ ಬೆಳೆಸಿಕೊಳ್ಳುತ್ತಿರಬೇಕು. ಆ ಅನುಕೂಲಕರ ಬೆಳವಣಿಗೆಯ ಮಾರ್ಗವೇನು? ಅದನ್ನು ಒಬ್ಬ ಅರ್ಹ ಗುರುವಿನಿಂದ ಕಲಿಯಬೇಕು. ಕೃಷ್ಣನು ದೇವೋತ್ತಮ ಪರಮ ಪುರುಷನು. ಆತನ ದೇಹವು ಜಡವಸ್ತುವಿನಿಂದ ಆದದ್ದಲ್ಲ. ಅದು ನಿತ್ಯ ಜ್ಞಾನಾನಂದ ಎಂದು ಹಲವು ಬಾರಿ ವಿವರಿಸಿದ್ದೇವೆ. ಕೃಷ್ಣನನ್ನು ಕುರಿತ ಇಂತಹ ಮಾತು ಮನುಷ್ಯನು ಭಕ್ತನಾಗಲು ನೆರವಾಗುತ್ತದೆ. ತಪ್ಪುಮೂಲದಿಂದ ಕೃಷ್ಣನನ್ನು ಬೇರೆ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದು ವ್ಯರ್ಥ.

ನೈತಿಕ ಅಳುಕಿಲ್ಲದೆ ವ್ಯಾಖ್ಯಾನಕಾರರು ದಾರಿತಪ್ಪಿಸಲು ಅವಕಾಶ ನೀಡಬಾರದು

ಆದುದರಿಂದ ಯಾರೇ ಆದರೂ ಕೃಷ್ಣನ ನಿತ್ಯರೂಪದಲ್ಲಿ, ಮೂಲರೂಪದಲ್ಲಿ, ತನ್ನ ಮನಸ್ಸನ್ನೇ ನಿಲ್ಲಿಸಬೇಕು. ಕೃಷ್ಣನೇ ಪರಮ ಪುರುಷನೆಂಬ ನಿಶ್ಚಲ ನಂಬಿಕೆಯಿಂದ ಅವನ ಪೂಜೆಯಲ್ಲಿ ತೊಡಗಬೇಕು. ಕೃಷ್ಣನ ಪೂಜೆ ಮಾಡಬೇಕೆಂದರೆ ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ಇವುಗಳಲ್ಲಿ ಭಕ್ತಿಸೇವೆಯು ನಡೆಯುತ್ತದೆ. ಇಂತಹ ಸೇವೆಯು ನಡೆಯುವಾಗ ಕೃಷ್ಣನಿಗೆ ಮನಸ್ಕಾರ ಮಾಡಬೇಕು. ವಿಗ್ರಹದ ಮುಂದೆ ತಲೆಬಾಗಿ ಕಾಯಾ ವಾಚಾ ಮನಸಾ ಎಲ್ಲವನ್ನೂ ನಿರತಗೊಳಿಸಬೇಕು. ಇದರಿಂದ ಮನುಷ್ಯನು ವಿಚಲಿತನಾಗದೆ ಕೃಷ್ಣನಲ್ಲಿ ತನ್ಮಯನಾಗುತ್ತಾನೆ. ಇದರಿಂದ ಅವನು ಕೃಷ್ಣಲೋಕಕ್ಕೆ ಹೋಗಲು ನೆರವಾಗುತ್ತದೆ. ನೈತಿಕ ಅಳುಕಿಲ್ಲದೆ ವ್ಯಾಖ್ಯಾನಕಾರರು ದಾರಿತಪ್ಪಿಸಲು ಅವಕಾಶ ನೀಡಬಾರದು. ಕೃಷ್ಣನ ವಿಷಯ ಶ್ರವಣ ಮತ್ತು ಸಂಕೀರ್ತನಗಳಿಂದ ಪ್ರಾರಂಭಿಸಿ ಭಕ್ತಿಸೇವೆಯ ಒಂಬತ್ತು ವಿಧಿಗಳಲ್ಲಿ ತೊಡಗಬೇಕು. ಪರಿಶುದ್ಧ ಭಕ್ತಿಸೇವೆಯು ಮಾನವ ಸಮಾಜದ ಅತ್ಯುನ್ನತ ಸಾಧನೆ.

ಭಗವದ್ಗೀತೆಯ ಏಳನೆಯ ಮತ್ತು ಎಂಟನೆಯ ಅಧ್ಯಾಯಗಳು ಊಹಾತ್ಮಕ ಚಿಂತನೆಯಿಂದ, ಹಠಯೋಗದಿಂದ ಮತ್ತ ಫಲಾಪೇಕ್ಷಿತ ಕರ್ಮಗಳಿಂದ ಮುಕ್ತನಾದ ಪರಿಶುದ್ಧ ಭಕ್ತಿಸೇವೆಯನ್ನು ವಿವರಿಸಿವೆ. ಪರಮ ಪ್ರಭುವಿನ ನಿರಾಕಾರ ಬ್ರಹ್ಮಜ್ಯೋತಿ ಮತ್ತು ಅಂತರ್ಯಾಮಿ ಪರಮಾತ್ಮ ಇಂತಹ ವಿವಿಧ ಲಕ್ಷಣಗಳು ಸಂಪೂರ್ಣವಾಗಿ ಪರಿಶುದ್ಧರಾಗದವರನ್ನು ಆಕರ್ಷಿಸಬಹುದು. ಆದರೆ ಪರಿಶುದ್ಧ ಭಕ್ತನು ಪರಮ ಪ್ರಭುವಿನ ಸೇವೆಯನ್ನು ನೇರವಾಗಿ ಆರಿಸಿಕೊಳ್ಳತ್ತಾನೆ.

ದೇವತೆಗಳ ಪೂಜೆಯಲ್ಲಿ ತೊಡಗಿದ ಮನುಷ್ಯನು ಅತ್ಯಂತ ಅವಿವೇಕಿ. ಆತನು ಕೃಷ್ಣನ ಪರಮ ವರವನ್ನು ಎಂದೂ ಪಡೆದುಕೊಳ್ಳಲಾರ ಎಂದು ಸ್ಪಷ್ಟವಾಗಿ ಹೇಳುವ ಒಂದು ಸುಂದರ ಕವನವಿದೆ. ಪ್ರಾರಂಭದಲ್ಲಿ ಕೆಲವೊಮ್ಮೆ ಭಕ್ತನು ಇರಬೇಕಾದ ಮಟ್ಟಕ್ಕೆ ಬರದೇ ಇರಬಹುದು. ಆದರೂ ಅವನು ಎಲ್ಲ ತತ್ವಶಾಸ್ತ್ರಜ್ಞರಿಗಿಂತ ಯೋಗಿಗಳಿಗಿಂತ ಶ್ರೇಷ್ಠ ಎಂದು ಭಾವಿಸಬೇಕು. ಸದಾ ಕೃಷ್ಣಪ್ರಜ್ಞೆಯಲ್ಲಿ ನಿರತನಾಗಿರುವವನ್ನು ಪರಿಪೂರ್ಣ ಸಾಧು ಎಂದು ತಿಳಿಯಬೇಕು.

ಭಗವಂತ ಪರಿಶುದ್ಧ ಭಕ್ತರ ಕ್ಷೇಮವನ್ನು ನೋಡಿಕೊಳ್ಳುತ್ತಾನೆ

ಆತನು ಆಕಸ್ಮಿಕವಾಗಿ ಕೈಗೊಳ್ಳುವ ಭಕ್ತರಹಿತ ಚಟುವಟಿಕೆಗಳು ಕಡಮೆಯಾಗುತ್ತವೆ. ಆತನು ಶೀಘ್ರವಾಗಿ ನಿಸ್ಸಂದೇಹವಾಗಿ ಸಂಪೂರ್ಣ ಪರಿಪೂರ್ಣತೆಯಲ್ಲಿ ನೆಲೆಸುತ್ತಾನೆ. ಪರಿಶುದ್ಧ ಭಕ್ತನು ವಾಸ್ತವವಾಗಿ ಪತನಗೊಳ್ಳಲು ಅವಕಾಶವೇ ಇಲ್ಲ. ಏಕೆಂದರೆ ಪರಮ ಪ್ರಭುವು ಅವನ (ಭಗವಂತನ) ಪರಿಶುದ್ಧ ಭಕ್ತರ ಕ್ಷೇಮವನ್ನು ನೋಡಿಕೊಳ್ಳುತ್ತಾನೆ. ಆದುದರಿಂದ ವಿವೇಕಿಯಾದವನು ನೇರವಾಗಿ ಕೃಷ್ಣಪ್ರಜ್ಞೆಯಲ್ಲಿ ತೊಡಗಬೇಕು. ಹೀಗೆ ಮಾಡಿ ಈ ಐಹಿಕ ಜಗತ್ತಿನಲ್ಲಿ ಸುಖವಾಗಿ ಬಾಳಬೇಕು. ಕಡೆಗೆ ಅವನು ಪರಮ ವರವಾದ ಕೃಷ್ಣನನ್ನು ಪಡೆಯುವನು. ಇಲ್ಲಿಗೆ ಶ್ರೀಮದ್ಭಗವದ್ಗೀತೆಯ ರಹಸ್ಯತಮ ಜ್ಞಾನ ಎಂಬ ಒಂಬತ್ತನೆಯ ಅಧ್ಯಾಯದ ಭಕ್ತಿವೇದಾಂತ ಭಾವಾರ್ಥವು ಮುಗಿಯಿತು.