ಭಗವದ್ಗೀತೆ: ಮನುಷ್ಯನ ಪ್ರಯೋಗಾಧಾರಿತ ತಿಳುವಳಿಕೆಯಿಂದ ಆತ್ಮವನ್ನ ಗ್ರಹಿಸಲು ಸಾಧ್ಯವೇ ಇಲ್ಲ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಮನುಷ್ಯನ ಪ್ರಯೋಗಾಧಾರಿತ ತಿಳುವಳಿಕೆಯಿಂದ ಆತ್ಮವನ್ನ ಗ್ರಹಿಸಲು ಸಾಧ್ಯವೇ ಇಲ್ಲ ಎಂಬ ಗೀತೆಯಲ್ಲಿ ಅರ್ಥ ಹೀಗಿದೆ.
ಅಚ್ಛೇದ್ಯೋಯಮದಾಹ್ಯೋಯಮಕ್ಲೇಮಕ್ಲೇದ್ಯೋಶೋಷ್ಯ ಏವ ಚ |
ನಿತ್ಯಃ ಸರ್ವಗತಃ ಸ್ಥಾಣುರಚಲೋಯಂ ಸನಾತನಃ ||24||
ಜೀವಾತ್ಮನನ್ನ ಮುರಿಯಲಾಗುವುದಿಲ್ಲ, ನೀರಿನಲ್ಲಿ ಕರಗಿಸಲು ಸಾಧ್ಯವಿಲ್ಲ. ಇದನ್ನು ಸುಡಲು ಸಾಧ್ಯವಿಲ್ಲ. ಒಣಗಿಸಲು ಸಾಧ್ಯವಿಲ್ಲ. ಇದನ್ನು ಸುಡಲು ಸಾಧ್ಯವಿಲ್ಲ. ಒಣಗಿಸಲು ಸಾಧ್ಯವಿಲ್ಲ. ಈತನು ನಿತ್ಯನು, ಎಲ್ಲೆಡೆ ಇರುವವನು. ಬದಲಾವಣೆಯಿಲ್ಲದವನು, ಅಚಲನಾದವನು ಮತ್ತು ಸನಾತನವಾಗಿಯೂ ಒಂದೇ ಆಗಿರುತ್ತಾನೆ.
ಜೀವಾತ್ಮನು ನಿರಂತರವಾಗಿ ಪೂರ್ಣ ಚೇತನದ ಅಣುವಾಗಿ ಉಳಿಯುತ್ತಾನೆ ಮತ್ತು ಸರ್ವಕಾಲಕ್ಕೂ ಸ್ಥಾಣುವಾಗಿ ಎಂದರೆ ಬದಲಾವಣೆಯಿಲ್ಲದೆ ಅದೇ ಆತ್ಮವಾಗಿ ಉಳಿಯುತ್ತಾನೆ ಎನ್ನುವುದನ್ನು ಜೀವಾತ್ಮನ ಈ ಎಲ್ಲ ಗುಣಗಳು ತೋರಿಸಿಕೊಡುತ್ತವೆ. ಈ ವಿಷಯಕ್ಕೆ ಅದ್ವೈತ ಸಿದ್ಧಾಂತವನ್ನು ಅನ್ವಯಿಸುವುದು ಬಹುಕಷ್ಟ. ಏಕೆಂದರೆ ಜೀವಾತ್ಮನು ಭಗವಂತನೊಡನೆ ಎಂದಿಗೂ ಗುರುತಿಲ್ಲದಂತೆ ಐಕ್ಯಹೊಂದಲಾರನು. ಜಡವಸ್ತುವಿನ ಕಲ್ಮಷದಿಂದ ಮುಕ್ತವಾದ ಅನಂತರ ಜೀವಾತ್ಮನು ದೇವೋತ್ತಮ ಪರಮ ಪುರುಷನ ಉಜ್ವಲ ಕಿರಣಗಳಲ್ಲಿ ಒಂದು ಆಧ್ಯಾತ್ಮಿಕ ಕಿಡಿಯಾಗಿ ಉಳಿಯಲು ಬಯಸಬಹುದು, ಆದರೆ ವಿವೇಕಿ ಆತ್ಮಗಳು ದೇವೋತ್ತಮನ ಸನ್ನಿಧಿಯಲ್ಲಿರಲು ಆಧ್ಯಾತ್ಮಿಕ ಗ್ರಹಗಳನ್ನು ಪ್ರವೇಶಿಸುತ್ತವೆ.
ಸರ್ವಗತ (ಎಲ್ಲೆಡೆ ಇರುವ) ಎನ್ನುವ ಶಬ್ದವು ಮಹತ್ವದ್ದು. ಏಕೆಂದರೆ ಜೀವಿಗಳು ಭಗವಂತನ ಸೃಷ್ಟಿಯಲ್ಲಿ ಎಲ್ಲೆಲ್ಲೂ ಇವೆ ಎನ್ನುವುದರಲ್ಲಿ ಸಂದೇಹವಿಲ್ಲ. ಅವು ಭೂಮಿಯ ಮೇಲೆ, ನೀರಿನಲ್ಲಿ, ವಾಯುವಿನಲ್ಲಿ, ಭೂಮಿಯ ಒಳಗಡೆ ಮತ್ತು ಅಗ್ನಿಯಲ್ಲಿ ಸಹ ವಾಸಿಸುತ್ತವೆ. ಅವು ಅಗ್ನಿಯಲ್ಲಿ ದಗ್ಧವಾಗುತ್ತವೆ ಎನ್ನುವ ನಂಬಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಬೆಂಕಿಯು ಆತ್ಮವನ್ನು ಸುಡಲಾರದು ಎಂದು ಇಲ್ಲಿ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಸೂರ್ಯಗ್ರಹದಲ್ಲಿ ಸಹ ಅಲ್ಲಿಗೆ ಹೊಂದುವ ದೇಹಗಳಲ್ಲಿ ಜೀವಿಗಳಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸೂರ್ಯಮಂಡಲದಲ್ಲಿ ಯಾರೂ ಇಲ್ಲದಿದ್ದರೆ ಸರ್ವಗತ ಎನ್ನುವ ಶಬ್ದಕ್ಕೆ ಅರ್ಥವೇ ಇಲ್ಲ.
ಅವ್ಯಕ್ತೋಯಮಚಿನ್ತ್ಯೋಯಮವಿಕಾರ್ಯೋಯಮುತ್ಯತೇ |
ತಸ್ಮಾದೇವಂ ವಿದಿತ್ವೈನಂ ನಾನುಶೋಚಿತುಮರ್ಹಸಿ ||25||
ಆತ್ಮನು ಕಣ್ಣಿಗೆ ಕಾಣುವುದಿಲ್ಲ. ಅದನ್ನು ಗ್ರಹಿಸಲು ಸಾಧ್ಯವಿಲ್ಲ. ಅದು ವಿಕಾರ ಹೊಂದುವುದಿಲ್ಲ ಎಂದು ಹೇಳಲಾಗಿದೆ. ಇದನ್ನು ತಿಳಿದೂ ನೀನು ದೇಹಕ್ಕಾಗಿ ದುಃಖಿಸಬಾರದು.
ಹಿಂದೆ ವರ್ಣಿಸಿರುವಂತೆ ನಮ್ಮ ಲೌಕಿಕ ಲೆಕ್ಕಾಚಾರಗಳಿಗೆ ಆತ್ಮನ ಗಾತ್ರಖ ಎಷ್ಟು ಸೂಕ್ಷ್ಮವೆಂದರೆ ಅತ್ಯಂತ ಶಕ್ತವಾದ ಸೂಕ್ಷ್ಮದರ್ಶಕ ಯಂತ್ರವು ಅವನನ್ನು ಕಾಣಲಾರದು. ಆದುದರಿಂದ ಅವನು ಅದೃಶ್ಯ. ಆತ್ಮನ ಅಸ್ತಿತ್ವವನ್ನು ಕುರಿತು ಹೇಳಬೇಕಾದರೆ ಅವನ ಅಸ್ತಿತ್ವವನ್ನು ಕುರಿತು ಶ್ರುತಿಯ ಅಥವಾ ವೇದ ಜ್ಞಾನದ ಪ್ರಮಾಣವನ್ನು ಮೀರಿ ಪ್ರಾಯೋಗಿಕವಾಗಿ ಯಾರೂ ಸಿದ್ಧಮಾಡಿ ತೋರಿಸಲಾರರು. ಈ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು. ಏಕೆಂದರೆ ಆತ್ಮನ ಅಸ್ತಿತ್ವವನ್ನು ನಾವು ಗ್ರಹಣ ಶಕ್ತಿಯಿಂದ ತಿಳಿಯಬಲ್ಲೆವು. ಇದನ್ನು ಅರ್ಥಮಾಡಿಕೊಳ್ಳಲು ನಮಗೆ ಬೇರೆ ಯಾವ ಆಧಾರವೂ ಇಲ್ಲ.
ಶ್ರೇಷ್ಠ ಪ್ರಮಾಣದ ಆಧಾರ ಮಾತ್ರದಿಂದಲೇ ನಾವು ಅನೇಕ ಸಂಗತಿಗಳನ್ನು ಒಪ್ಪಬೇಕಾಗುತ್ತದೆ. ಶ್ರೇಷ್ಠ ಪ್ರಮಾಣದ ಆಧಾರ ಮಾತ್ರದಿಂದಲೇ ನಾವು ಅನೇಕ ಸಂಗತಿಗಳನ್ನು ಒಪ್ಪಬೇಕಾಗುತ್ತದೆ. ತನ್ನ ತಾಯಿಯು ಅಧಿಕಾರಯುತವಾಗಿ ತಂದೆ ಯಾರು ಎಂದು ಹೇಳಿದುದನ್ನು ಯಾರೂ ತಿರಸ್ಕರಿಸಲು ಸಾಧ್ಯವಿಲ್ಲ. ತಂದೆಯು ಯಾರು ಎನ್ನುವುದನ್ನು ಅರ್ಥಮಾಡಿಕೊಳ್ಳಲು ವೇದಗಳ ಅಧ್ಯಯನವಲ್ಲದೆ ಬೇರೆ ಆಧಾರವಿಲ್ಲ. ಇದನ್ನೇ ಇತರ ಮಾತುಗಳಲ್ಲಿ ಹೇಳುವುದಾರೆ ಮನುಷ್ಯನ ಪ್ರಯೋಗಾಧಾರಿತ ತಿಳುವಳಿಕೆಯಿಂದ ಆತ್ಮನನ್ನು ಗ್ರಹಿಸುವುದು ಸಾಧ್ಯವೇ ಇಲ್ಲ. ಆತ್ಮನು ಪ್ರಜ್ಞೆ ಮತ್ತು ಪ್ರಜ್ಞಾಶೀಲ. ಇದು ವೇದಗಳ ಹೇಳಿಕೆ. ಇದನ್ನು ನಾವು ಒಪ್ಪಬೇಕು.
ದೇಹದಲ್ಲಿ ಬದಲಾವಣೆಗಳಾಗುತ್ತವೆ. ಆತ್ಮನಿಗೆ ಬದಲಾವಣೆಗಳಿಲ್ಲ. ಸರ್ವಕಾಲಕ್ಕೂ ಅವಿಕಾರವಾಗಿ ಉಳಿಯುವ ಆತ್ಮನನ್ನು ಅನಂತವಾದ ಪರಮಾತ್ಮನಿಗೆ ಹೋಲಿಸಿದರೆ ಆತ್ಮನು ಅಣುಗಾತ್ರದವನು. ಪರಮಾತ್ಮನು ಅನಂತನಾದವನು. ಅವನೊಡನೆ ಹೋಲಿಸಿದರೆ ಆತ್ಮನು ಅಣುಮಾತ್ರದವನು. ಆದ್ದರಿಂದ ಬದಲಾವಣೆಯಾಗಲಾರದ ಅಣುಜೀವಿಯು ಎಂದೆಂದಿಗೂ ಅನಂತವಾದ ಆತ್ಮನ ಅಥವಾ ದೇವೋತ್ತಮ ಪರಮ ಪುರುಷನ ಸಮಾನವಾಗಲಾರದು.
ಆತ್ಮನ ಗ್ರಹಿಕೆಯ ಸ್ಥಿರಸ್ವರೂಪವನ್ನು ದೃಢಪಡಿಸಲು ಈ ಪರಿಕಲ್ಪನೆಯನ್ನು ವೇದಗಳಲ್ಲಿ ಮತ್ತೆ ಮತ್ತೆ ವಿಭಿನ್ನ ರೀತಿಯಲ್ಲಿ ಹೇಳಲಾಗಿದೆ. ವಿಷಯವು ಸಂಪೂರ್ಣವಾಗಿ, ತಪ್ಪಿಗೆ ಅವಕಾಶವಿಲ್ಲದೆ ಅರ್ಥವಾಗಬೇಕಾದರೆ ಅದನ್ನು ಮತ್ತೆ ಮತ್ತೆ ಹೇಳಬೇಕಾಗುತ್ತದೆ.