Bhagavad Gita: ಭಗವಂತನಲ್ಲಿರುವ ವ್ಯಕ್ತಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ; ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಭಗವಂತ ಶ್ರೀಕೃಷ್ಣನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ವ್ಯಕ್ತಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದರ ಭಗವದ್ಗೀತೆಯ ಅರ್ಥವನ್ನು ಇಲ್ಲಿ ನೀಡಲಾಗಿದೆ.
ಅಧ್ಯಾಯ 6- ಧ್ಯಾನ ಯೋಗ: ಶ್ಲೋಕ - 19 ಮತ್ತು 24
ಯಥಾ ದೀಪೋ ನಿವಾತಸ್ಥೋ ನೇನ್ಗತೇ ಸೋಪಮಾ ಸ್ಮೃತಾ |
ಯೋಗಿನೋ ಯತಚಿತ್ತಸ್ಯ ಯಞ್ಜತೋ ಯೋಗಮಾತ್ಮನಃ ||19||
ಅನುವಾನ: Bhagavad Gita Updesh in Kannada: ಗಾಳಿ ಬೀಸದ ಸ್ಥಳದಲ್ಲಿ ದೀಪವು ಹೇಗೆ ನಿಶ್ಚಲವಾಗಿರುವುದೋ ಹಾಗೆಯೇ ಮನಸ್ಸನ್ನು ನಿಯಂತ್ರಿಸಿರುವ ಅಧ್ಯಾತ್ಮವಾದಿಯು ಆಧ್ಯಾತ್ಮಿಕ ಆತ್ಮದ ಧ್ಯಾನದಲ್ಲಿ ನಿಶ್ಚಲವಾಗಿರುತ್ತಾನೆ.
ಭಾವಾರ್ಥ: ಸದಾ ಅಧ್ಯಾತ್ಮಿಕತೆಯಲ್ಲಿ ಮಗ್ನನಾಗಿದ್ದು ತಾನು ಆರಾಧಿಸುವ ಭಗವಂತನ ನಿರಂತರ ನಿಶ್ಚಲ ಧ್ಯಾನದಲ್ಲಿ ನಿಜವಾಗಿ ಕೃಷ್ಣಪ್ರಜ್ಞೆಯಲ್ಲಿರುವವನು, ತನ್ಮಯನಾಗಿ ಗಾಳಿ ಬೀಸದ ಸ್ಥಳದಲ್ಲಿ ಅಲುಗದ ದೀಪದಂತಿರುತ್ತಾನೆ.
ಸ ನಿಶ್ಚಯೇನ ಯೋಕ್ತವ್ಯೋ ಯೋಗೋನಿರ್ವಿಣ್ಣ ಚೇತಸಾ |
ಸಂಕಲ್ಪಪ್ರಭವಾನ್ ಕಾಮಾಂಸ್ತ್ಯಕ್ತ್ವಾ ಸರ್ವಾನಶೇಷತಃ |
ಮನಸೈವೇನ್ದ್ರಿಯಗ್ರಾಮಂ ವಿನಿಮಯ್ಯ ಸಮನ್ತತಃ ||24||
ಇದನ್ನೂ ಓದಿ: ಭಗವಂತನಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಮನುಷ್ಯ ಈ 9 ಕಾರ್ಯ ಮಾಡಬೇಕು; ಗೀತೆಯ ಅರ್ಥ ತಿಳಿಯಿರಿ
ಅನುವಾನ: ಯೋಗಾಭ್ಯಾಸದಲ್ಲಿ ದೃಢಸಂಕಲ್ಪದಿಂದ ಮತ್ತು ಶ್ರದ್ಧೆಯಿಂದ ತೊಡಗಬೇಕು. ಆ ದಾರಿಯಿಂದ ಬೇರೆಡೆ ಹೋಗಬಾರದು. ಊಹಾತ್ಮಕ ಚಿಂಚನೆಯಿಂದ ಹುಟ್ಟಿದ ಬಯಕೆಗಳಲ್ಲಿ ಒಂದನ್ನೂ ಬಿಡದೆ ದೂರ ಮಾಡಬೇಕು. ಹೀಗೆ ಎಲ್ಲ ದಿಕ್ಕುಗಳಲ್ಲಿಯೂ ಇಂದ್ರಿಯಗಳನ್ನು ನಿಯಂತ್ರಣ ಮಾಡಬೇಕು.
ಭಾವಾರ್ಥ: ಯೋಗಾಭ್ಯಾಸಿಯು ದೃಢಸಂಕಲ್ಪಮಾಡಿರಬೇಕು ಮತ್ತು ವಿಚಲಿತನಾಗದೆ ತಾಳ್ಮೆಯಿಂದ ಅಭ್ಯಾಸವನ್ನು ಮುಂದುವರಿಸಬೇಕು. ಕಡೆಗೆ ಯಶಸ್ಸು ಸಿಕ್ಕುವುದೆಂಬ ದೃಢನಂಬಿಕೆ ಇರಬೇಕು. ಯಶಸ್ಸಿನ ಸಾಧನೆಯಲ್ಲಿ ವಿಳಂಬವಾದರೂ ಧೈರ್ಯಗೆಡದೆ ಇದೇ ದಾರಿಯಲ್ಲಿ ವಿಶೇಷ ಅಭ್ಯಾಸದಿಂದ ಮುಂದುವರಿಯಬೇಕು. ಕಡು ನಿಷ್ಠಾವಂತ ಅಭ್ಯಾಸಿಗೆ ಯಶಸ್ಸು ದೊರೆತೇ ದೊರಕುತ್ತದೆ. ಭಕ್ತಿಯೋಗವನ್ನು ಕುರಿತು ರೂಪ ಗೋಸ್ವಾಮಿಯವರು ಹೀಗೆ ಹೇಳಿದ್ದಾರೆ -
ಉತ್ಸಾಹಾನ್ ನಿಶ್ಚಯಾದ್ಧೈರ್ಯಾತ್ ತತ್‌ತತ್‌ಕರ್ಮಪ್ರವರ್ತನಾತ್
ಸನ್ಗತ್ಯಾಗಾತ್ ಸತೋ ವೃತ್ತೇಃ ಷಡ್ಭಿರ್ ಭಕ್ತಿಃ ಪ್ರಸಿದ್ಧ್ಯತಿ ||
ಇದನ್ನೂ ಓದಿ: ಜೀವನದಲ್ಲಿ ದುಃಖ ಕಡಿಮೆ ಮಾಡಲು ಈ 3 ಅಭ್ಯಾಸಗಳಲ್ಲಿ ಮಿತವಾಗಿರಬೇಕು; ಗೀತೆಯ ಸಾರಾಂಶ ತಿಳಿಯಿರಿ
ಭಕ್ತರ ಸಹವಾಸದಲ್ಲಿ ವಿಧಿತ ಕರ್ತವ್ಯಗಳನ್ನು ಮಾಡಬೇಕು ಮತ್ತು ಸಾತ್ವಿಕ ಕಾರ್ಯಗಳಲ್ಲಿಯೇ ಸಂಪೂರ್ಣವಾಗಿ ತೊಡಗಬೇಕು. ಹೀಗೆ ಮಾಡುವ ಮನುಷ್ಯನು ಭಕ್ತಿಯೋಗದ ಪ್ರಕ್ರಿಯೆಯನ್ನು ಯಶಸ್ವಿಯಾಗಿ, ಹೃದಯವನ್ನು ತುಂಬಿದ ಉತ್ಸಾಹ, ನಿರಂತರ ಪ್ರಯತ್ನ ಮತ್ತು ದೃಢಸಂಕಲ್ಪಗಳಿಂದ ಕಾರ್ಯಗತ ಮಾಡಬಹುದು (ಉಪದೇಶಾಮೃತ 3) ದೃಢಸಂಕಲ್ಪದ ವಿಷಯ ಹೇಳಬೇಕೆಂದರೆ ಸಮುದ್ರದ ಅಲೆಗಳಲ್ಲಿ ಮೊಟ್ಟೆಗಳನ್ನು ಕಳೆದುಕೊಂಡ ಗುಬ್ಬಚ್ಚಿಯ ಮೇಲ್ಪಂಕ್ತಿಯನ್ನು ಅನುಸರಿಸಬೇಕು. ಗುಬ್ಬಚ್ಚಿಯು ಸಮುದ್ರ ತೀರದಲ್ಲಿ ಮೊಟ್ಟೆಗಳನ್ನಿಟ್ಟಿತು. ದೊಡ್ಡ ಸಮುದ್ರವು ತನ್ನ ಅಲೆಗಳಲ್ಲಿ ಮೊಟ್ಟೆಗಳನ್ನು ಕೊಚ್ಚಿಕೊಂಡು ಹೋಯಿತು.
ಗುಬ್ಬಚ್ಚಿಯ ಮನಸ್ಸು ಕದಡಿಹೋಯಿತು. ತನ್ನ ಮೊಟ್ಟೆಗಳನ್ನು ಹಿಂದಿರುಗಿಸುವಂತೆ ಸಮುದ್ರವನ್ನು ಕೇಳಿತು. ಸಮುದ್ರವು ಈ ಮನವಿಗೆ ಕಿವಿ ಕೊಡಲೇ ಇಲ್ಲ. ಆದ್ದರಿಂದ ಗುಬ್ಬಚ್ಚಿಯು ಸಮುದ್ರವನ್ನು ಬತ್ತಿಸಿಬಿಡಲು ತೀರ್ಮಾನಿಸಿತು. ಅದು ತನ್ನ ಪುಟ್ಟಕೊಕ್ಕಿನಿಂದ ನೀರನ್ನು ತೆಗೆದುಹಾಕಲು ಪ್ರಾರಂಭಿಸಿತು. ಅಸಾಧ್ಯವಾದದನ್ನು ಸಾಧಿಸಬೇಕೆಂಬ ಈ ಸಂಕಲ್ಪವನ್ನು ಕಂಡು ಎಳಲ್ಲರೂ ನಕ್ಕರು. ಗುಬ್ಬಚ್ಚಿಯ ಕೆಲಸದ ಸುದ್ದಿ ಹಬ್ಬಿತು. ಕಡೆಗೆ ಶ್ರೀವಿಷ್ಣುವಿನ ಬೃಹದಾಕಾರದ ವಾಹನ ಗರುಡನಿಗೆ ಇದು ತಿಳಿಯಿತು. ಅವನಿಗೆ ತನ್ನ ಈ ಪುಟ್ಟಸೋದರಿ ಹಕ್ಕಿಯ ವಿಷಟಯದಲ್ಲಿ ಅನುಕಂಪವಾಯಿತು. ಅವನು ಗುಬ್ಬಚ್ಚಿಯನ್ನು ನೋಡಲು ಬಂದನು. ಪುಟ್ಟ ಗುಬ್ಬಚ್ಚಿಯ ಸಂಕಲ್ಪವನ್ನು ನೋಡಿ ಅವರಿಗೆ ತುಂಬ ಸಂತೋಷವಾಯಿತು. ಅದು ನೆರವಾಗುವೆನೆಂದು ಮಾತುಕೊಟ್ಟಿತು.
ಸಮುದ್ರವು ಗುಬ್ಬಚ್ಚಿಯ ಮೊಟ್ಟೆಗಳನ್ನು ಹಿಂದಿರಿಗಿಸದಿದ್ದರೆ ತಾನೇ ಗುಬ್ಬಚ್ಚಿಯ ಕೆಲಸವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟ. ಸಮುದ್ರವು ಹೆದರಿ ಮೊಟ್ಟೆಗಳನ್ನು ಹಿಂದಕ್ಕೆ ಕೊಟ್ಟಿತು ಹೀಗೆ ಗರುಡನ ಕೃಪೆಯಿಂದ ಗುಬ್ಬಚ್ಚಿಯು ಸುಖವಾಯಿತು. ಹೀಗೆಯೇ ಯೋಗಾಭ್ಯಾಸವು, ಅದರಲ್ಲಿಯೂ ಕೃಷ್ಣಪ್ರಜ್ಞೆಯಲ್ಲಿನ ಭಕ್ತಿಯೋಗವು, ತುಂಬಾ ಕಠಿಣವಾದ್ದು ಎಂದು ತೋರಬಹುದು. ಆದರೆ ಯಾರಾದೂರು ಗಟ್ಟಿಸಂಕಲ್ಪದಿಂದ ತತ್ವಗಳನ್ನು ಅನುಸರಿಸಿದರೆ ನಿಶ್ಚಯವಾಗಿಯೂ ಭಗವಂತನು ಸಹಾಯ ಮಾಡುತ್ತಾನೆ. ಏಕೆಂದರೆ ತಮಗೆ ತಾವೇ ನೆರವಾಗುವವರಿಗೆ ಭಗವಂತನ ನೆರವಾಗುತ್ತಾನೆ.
(This copy first appeared in Hindustan Times Kannada website. To read more like this please logon to kannada.hindustantimes.com )