Bhagavad Gita: ಹೀಗೆ ಮಾಡಿದರೆ ಮನುಷ್ಯ ಬದುಕಿನ ಅತ್ಯುನ್ನತ ಪರಿಪೂರ್ಣತೆಯನ್ನು ತಲಪಬಹುದು; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಹೀಗೆ ಮಾಡಿದರೆ ಮನುಷ್ಯ ಬದುಕಿನ ಅತ್ಯುನ್ನತ ಪರಿಪೂರ್ಣತೆಯನ್ನು ತಲಪಬಹುದು; ಗೀತೆಯ ಸಾರಾಂಶ ಹೀಗಿದೆ

Bhagavad Gita: ಹೀಗೆ ಮಾಡಿದರೆ ಮನುಷ್ಯ ಬದುಕಿನ ಅತ್ಯುನ್ನತ ಪರಿಪೂರ್ಣತೆಯನ್ನು ತಲಪಬಹುದು; ಗೀತೆಯ ಸಾರಾಂಶ ಹೀಗಿದೆ

Bhagavad Gita: ಮನುಷ್ಯ ಬದುಕಿನ ಅತ್ಯುನ್ನತ ಪರಿಪೂರ್ಣತೆಯನ್ನು ಹೇಗೆ ತಲಪಬಹುದು ಎಂಬುದರ ಸಂಪೂರ್ಣ ಅರ್ಥವನ್ನು ಭಗವದ್ಗೀತೆಯ 12ನೇ ಅಧ್ಯಾಯದ 6 ಮತ್ತು 7ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 6-7

ಯೇ ತು ಸರ್ವಾಣಿ ಕರ್ಮಾಣಿ ಮಯಿ ಸನ್ನ್ಯಸ್ಯ ಮತ್ಪರಾಃ |

ಅನನ್ನೇನೈವ ಯೋಗೇನ ಮಾಂ ಧ್ಯಾಯನ್ತ ಉಪಾಸತೇ ||6||

ತೇಷಾಮಹಂ ಸಮುದ್ಧರ್ತಾ ಮೃತ್ಯಸಂಸಾರಸಾಗರಾತ್ |

ಭವಾಮಿ ನ ಚಿರಾತ್ ಪಾರ್ಥ ಮಯ್ಯಾವೇಶಿತಚೇತಸಾಮ್ ||7||

ಅನುವಾದ - ಪಾರ್ಥ, ತಮ್ಮ ಎಲ್ಲ ಕರ್ಮಗಳನ್ನೂ ನನಗೆ ಅರ್ಪಿಸಿ, ನಿಶ್ಚಲವಾಗಿ ನನ್ನಲ್ಲಿ ಭಕ್ತಿ ಇಟ್ಟು, ಭಕ್ತಿಸೇವೆಯಲ್ಲಿ ನಿರತರಾಗಿ ಸದಾ ನನ್ನನ್ನೇ ಧ್ಯಾನಿಸುತ್ತ, ನನ್ನಲ್ಲೇ ಮನಸ್ಸನ್ನು ನಿಲ್ಲಿಸಿ ನನ್ನನ್ನು ಪೂಜಿಸುವವರನ್ನು, ನಾನು ಹುಟ್ಟು, ಸಾವುಗಳ ಸಂಸಾರ ಸಾಗರದಿಂದ ಶೀಘ್ರವಾಗಿ ಉದ್ಧಾರ ಮಾಡುತ್ತೇನೆ.

ವರಾಹ ಪುರಾಣದಲ್ಲಿ ಈ ಶ್ಲೋಕವಿದೆ -

ನಯಾಮಿ ಪರಮಂ ಸ್ಥಾನಮ್ ಅರ್ಚಿರಾದಿಗತಿಂ ವಿನಾ |

ಗರುಡ ಸ್ಕನ್ಧಮಾರೋಪ್ಯ ಯಥೇಚ್ಛಮನಿವಾರಿತಃ ||

ಈ ಶ್ಲೋಕದ ಭಾವಾರ್ಥವೆಂದರೆ ಭಕ್ತನು ತನ್ನ ಆತ್ಮವನ್ನು ಅಧ್ಯಾತ್ಮಿಕ ಲೋಕಗಳಿಗೆ ವರ್ಗಾಯಿಸಿಕೊಳ್ಳಲು ಅಷ್ಟಾಂಗಯೋಗವನ್ನು ಅಭ್ಯಾಸಮಾಡಿಕೊಳ್ಳಬೇಕಾಗಿಲ್ಲ ಎಂದು. ಪರಮ ಪ್ರಭುವೇ ಆ ಹೊಣೆಯನ್ನು ವಹಿಸಿಕೊಳ್ಳುತ್ತಾನೆ. ತಾನೇ ಉದ್ದಾರಕನಾಗುವೆನೆಂದು ಇಲ್ಲಿ ಅವನು ಸ್ಪಷ್ಟವಾಗಿ ಹೇಳುತ್ತಾನೆ. ತಂದೆ ತಾಯಿಯರು ಮಗುವನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ. ಆದ್ದರಿಂದ ಅವನ ಸ್ಥಾನ ಭದ್ರವಾದದ್ದು. ಹಾಗೆಯೇ ಭಕ್ತನು ತನ್ನನ್ನು ಇತರ ಲೋಕಗಳಿಗೆ ವರ್ಗಾಯಿಸಿಕೊಳ್ಳಲು ಶ್ರಮಪಡಬೇಕಾಗಿಲ್ಲ. ತನ್ನ ಅಸಾಧಾರಣ ದಯೆಯಿಂದ ಪರಮ ಪ್ರಭುವೇ ತನ್ನ ಪಕ್ಷಿವಾಹನ ಗರುಡನನ್ನೇರಿ ಬಂದು ಕೂಡಲೇ ಭಕ್ತನನ್ನು ಐಹಿಕ ಅಸ್ತಿತ್ವದಿಂದ ಬಿಡುಗಡೆ ಮಾಡುತ್ತಾನೆ.

ಸಮುದ್ರದಲ್ಲಿ ಬಿದ್ದವನು ಬಹು ಹೋರಾಡಬಹುದು, ನಿಪುಣ ಈಜುಗಾರನಾಗಿರಬಹುದು, ಆದರೂ ಉಳಿದುಕೊಳ್ಳಲಾರನು. ಆದರೆ ಯಾರಾದರೂ ಬಂದು ಅವನನ್ನು ನೀರಿನಿಂದ ಎತ್ತಿದರೆ ಅವನು ಸುಲಭವಾಗಿ ಪರಾಗುತ್ತಾನೆ. ಹೀಗೆಯೇ ಪ್ರಭುವು ಭಕ್ತನನ್ನು ಈ ಭೌತಿಕ ಅಸ್ತಿತ್ವದಿಂದ ಮೇಲೆತ್ತುತ್ತಾನೆ. ಅವನು ಕೃಷ್ಣಪ್ರಜ್ಞೆಯ ಸುಲಭವಾದ ಪ್ರಕ್ರಿಯೆಯನ್ನು ಅಭ್ಯಾಸ ಮಾಡಬೇಕು ಮತ್ತು ಭಕ್ತಿಸೇವೆಯಲ್ಲಿ ನಿರತನಾಗಬೇಕು, ಅಷ್ಟೇ. ವಿವೇಕವಿರುವ ಯಾರೇ ಆಗಲಿ, ಬೇರೆಲ್ಲ ಮಾರ್ಗಗಳನ್ನು ಬಿಟ್ಟು ಭಕ್ತಿಸೇವೆಯ ಪ್ರಕ್ರಿಯೆಯನ್ನೇ ಯಾವಾಗಲೂ ಆರಿಸಿಕೊಳ್ಳಬೇಕು. ನಾರಾಯಣೀಯದಲ್ಲಿ ಇದನ್ನು ಹೀಗೆ ದೃಢಪಡಿಸಿದೆ -

ಯಾವ ವೈ ಸಾಧನ ಸಂಪತ್ತಿಃ ಪುರುಷಾರ್ಥ ಚತುಷ್ಟಯೇ |

ತಯಾ ವಿನಾ ತದ್ ಆಪ್ನೋತಿ ನರೋ ನಾರಾಯಣಾಶ್ರಯಃ ||

ಮನುಷ್ಯನು ಕಾಮ್ಯ ಕರ್ಮದ ವಿವಿಧ ಪ್ರಕ್ರಿಯೆಗಳಲ್ಲಿ ಅಥವಾ ಊಹಾತ್ಮಕ ಚಿಂತನೆಯ ಪ್ರಕ್ರಿಯೆಯಿಂದ ಜ್ಞಾನವನ್ನು ಪಡೆಯುವುದರಲ್ಲಿ ತೊಡಗಬಾರದು ಎಂದು ಈ ಶ್ಲೋಕದ ಭಾವಾರ್ಥ. ಪರಮ ಪುರುಷನ ಭಕ್ತನಾದವನು ಇತರ ಯೋಗಪ್ರಕ್ರಿಯೆಗಳು, ಊಹಾಪೋಹ, ಧಾರ್ಮಿಕ ವಿಧಿಗಳು, ಯಜ್ಞಗಳು ದಾನಗಳು ಮೊದಲಾದುವುಗಳಿಂದ ಬರುವ ಎಳ್ಲ ಫಲಗಳನ್ನೂ ಪಡೆಯಬಲ್ಲ. ಭಕ್ತಿಸೇವೆಯ ಖಚಿತವಾದ ಅನುಗ್ರಹ ಇದೇ.

ಕೃಷ್ಣನ ಪಾವನ ನಾಮವನ್ನು ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ/ ಹರೇ ರಾಮ ಹರೇ ರಾಮ, ರಾಮ ರಾಮ, ಹರೇ ಹರೇ ಎಂದು ಸಂಕೀರ್ತನೆ ಮಾಡುವಷ್ಟರಿಂದಲೇ ಪ್ರಭುವಿನ ಭಕ್ತನು ಪರಮ ಗುರಿಯನ್ನು ಸುಲಭವಾಗಿ ಮತ್ತು ಸುಖವಾಗಿ ಸೇರಬಹುದು. ಆದರೆ ಬೇರೆ ಯಾವುದೇ ಧಾರ್ಮಿಕ ಪ್ರಕ್ರಿಯೆಯಿಂದ ಈ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ.

ಭಗವದ್ಗೀತೆಯ ನಿರ್ಣಯವನ್ನು ಹದಿನೆಂಟನೆಯ ಅಧ್ಯಾಯದಲ್ಲಿ ಹೇಳಿದೆ -

ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |

ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ||

ಆತ್ಮ ಸಾಕ್ಷಾತ್ಕಾರದ ಬೇರೆಲ್ಲ ಪ್ರಕ್ರಿಯೆಗಳನ್ನೂ ತ್ಯಜಿಸಿ ಕೃಷ್ಣಪ್ರಜ್ಞೆಯಲ್ಲಿ ಭಕ್ತಿಸೇವೆಯನ್ನು ಮಾಡಬೇಕು. ಇದರಿಂದ ಮನುಷ್ಯನು ಬದುಕಿನ ಅತ್ಯುನ್ನತ ಪರಿಪೂರ್ಣತೆಯನ್ನು ತಲಪಬಹುದು. ತನ್ನ ಹಿಂದಿನ ಬಾಳಿನ ಪಾಪಕರ್ಮಗಳನ್ನು ಕುರಿತು ಯೋಚಿಸುವ ಅಗತ್ಯವೇ ಅವನಿಗೆ ಇಲ್. ಏಕೆಂದರೆ ಪರಮ ಪ್ರಭವು ಭಕ್ತನ ಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತಾನೆ. ಆದುದರಿಂದ ಅಧ್ಯಾತ್ಮಿಕ ಸಾಕ್ಷಾತ್ಕಾರದ ಮೂಲಕ ತನ್ನನ್ನು ಬಿಡುಗಡೆ ಮಾಡಿಕೊಳ್ಳಲು ಮನುಷ್ಯನು ವ್ಯರ್ಥವಾಗಿ ಪ್ರಯತ್ನಿಸಬಾರದು. ಎಲ್ಲರೂ ಪರಮ ಸರ್ವಶಕ್ತ ದೇವನಾದ ಕೃಷ್ಣನಿಗೆ ಶರಣಾಗತರಾಗಬೇಕು. ಇದು ಬದುಕಿನ ಅತ್ಯುನ್ನತ ಪರಿಪೂರ್ಣತೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.